"ಚಿಗುರು ೧ - ಪರಿಚಯದ ಹೊಸ ಹೆಜ್ಜೆ - ಭಾಗ ೧" ಆವೃತ್ತಿಗಳ ಮಧ್ಯದ ಬದಲಾವಣೆಗಳು
Jump to navigation
Jump to search
(→ಊಹೆಗಳು) |
|||
೩೧ ನೇ ಸಾಲು: | ೩೧ ನೇ ಸಾಲು: | ||
#ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು. | #ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು. | ||
#ಅವರಿಗೆ ನಮ್ಮ ಬಗ್ಗೆ ಯಾವ ನಿರೀಕ್ಷೆಗಳಿವೆ ಎಂದು ಗೊತ್ತಿಲ್ಲ. | #ಅವರಿಗೆ ನಮ್ಮ ಬಗ್ಗೆ ಯಾವ ನಿರೀಕ್ಷೆಗಳಿವೆ ಎಂದು ಗೊತ್ತಿಲ್ಲ. | ||
+ | |||
+ | =ಉದ್ದೇಶಗಳು= | ||
+ | # ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು. | ||
+ | #ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು. |
೧೦:೪೧, ೪ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ
ಸಾರಾಂಶ
ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಗುಂಪು ಚಟುವಟಿಕೆಯಿಂದಾಗಿ ಬೇರೆ ಬೇರೆ ತರಗತಿಯ ಕಿಶೋರಿಯರ ನಡುವೆ ಹೆಚ್ಚಿನ ಹಂಚಿಕೆಯಾಗುತ್ತದೆ.
ಫೆಸಿಲಿಟೇಟರ್ - ಅಪರ್ಣ
ಕೊ-ಫೆಸಿಲಿಟೇಟರ್ಗಳು - ಅನುಷಾ, ಕಾರ್ತಿಕ್, ಶ್ರೇಯಸ್
ಊಹೆಗಳು
- ಇದು ಸರಕಾರಿ ಶಾಲೆ.
- ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ.
- ಈ ಶಾಲೆಯಲಗಲಿ ಕಂಪ್ಯೂಟರ್ ಲ್ಯಾಬ್ ಇದೆ. ಇಲ್ಲಿ ೧೦ ಕಂಪ್ಯೂಟರ್ ಇವೆ. ಅವುಗಳಲ್ಲಿ ಉಬುಂಟು ಇದೆ.
- ಶಾಲೆಯಲ್ಲಿ ಖಾಲಿ ಜಾಗಗಳಿವೆ. ಇಲ್ಲಿ ನಾವು ನಮ್ಮ ಚಟುವಟಿಕೆಗಳನ್ನು ನಡೆಸಬಹುದು.
- ಸರ್ಕಾರಿ ಶಾಲೆ ಆಗಿರುವುದರಿಂದ ದಾಖಲಾತಿ ಕಡಿಮೆ ಇದೆ.
- ಒಂದೇ ಆವರಣದಲ್ಲಿ ಪ್ರಥಮ ದರ್ಜೆ ಕಾಲೇಜು ಮತ್ತು ಪ್ರೌಢಶಾಲೆಗಳಿವೆ.
- ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು.
- ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು.
- ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು.
- ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು.
- ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು.
- ಎಲ್ಲರಿಗೂ ಕನ್ನಡ ಗೊತ್ತಿಲ್ಲ.
- ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.
- ಅವರಿಗೆ ನಾವು ಯಾರು ಎಂದು ಗೊತ್ತಿಲ್ಲ.
- ತರಗತಿ ಹೇಗಿದೆ ಎಂದು ಗೊತ್ತಿಲ್ಲ.
- ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)
- ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.
- ಪ್ರತಿ ವಾರ ೪ ಜನ ಹೋಗಲೇ ಬೇಕು.
- ಅತೀ ಸರಳವಾದ, ಅವರಿಗೆ ಹೇಳಲು ಸಾಧ್ಯವಾಗಿರುವಂತಹ ಚಟುವಟಿಕೆಗಳನ್ನು ಮಾಡಲಿದ್ದೇವೆ.
- ಮೊದಲು ನಮ್ಮ ಪರಿಚಯದಿಂದ ಪ್ರಾರಂಭಿಸುವುದು ಉತ್ತಮ.
- ಗೈರು ಹಾಜರಿ ಎಷ್ಟಿದೆ ಎಂದು ಗೊತ್ತಿಲ್ಲ.
- ಕಿಶೋರಿಯರ ಭಾಗವಹಿಸುವಿಕೆಯ ಬಗ್ಗೆ ನಮಗೆ ಇನ್ನೂ ಸರಿಯಾದ ಯೋಚನೆ ಇಲ್ಲ.
- ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.
- ಅವರಿಗೆ ನಮ್ಮ ಬಗ್ಗೆ ಯಾವ ನಿರೀಕ್ಷೆಗಳಿವೆ ಎಂದು ಗೊತ್ತಿಲ್ಲ.
ಉದ್ದೇಶಗಳು
- ನಮ್ಮ ಕಾರ್ಯಕ್ರಮದ ಬಗ್ಗೆ ಕಿಶೋರಿಯರಿಗೆ ಸ್ಥೂಲವಾಗಿ ಪರಿಚಯಿಸಿ, ಅವರಿಗೆ ಇದರ ಬಗ್ಗೆ ಉತ್ಸಾಹ ಮೂಡುವಂತೆ ಮಾಡುವುದು.
- ನಮ್ಮೊಡನೆ ಹೊಸ ದಿಶೆಯಲ್ಲಿ ಹೊಸ ಹೆಜ್ಜೆಯನ್ನು ಇಡಲು ಅವರನ್ನು ಸಿದ್ದಗೊಳಿಸುವುದು.