"ಕಿಶೋರಿ ಕ್ಲಬ್" ಆವೃತ್ತಿಗಳ ಮಧ್ಯದ ಬದಲಾವಣೆಗಳು
೧೦ ನೇ ಸಾಲು: | ೧೦ ನೇ ಸಾಲು: | ||
== ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ, == | == ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ, == | ||
− | * ರಾಜ್ಯದ | + | * ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ “ಕಿಶೋರಿ ಕ್ಲಬ್”ಗಳು ನಡೆಯಬಹುದು. 8ನೇ ತರಗತಿಯಿಂದ 10ನೇ ತರಗತಿಯ ಹೆಣ್ಣುಮಕ್ಕಳು ಇದರಲ್ಲಿ ಭಾಗವಹಿಸಿ ತಮ್ಮ ಸಶಕ್ತತೆಗೆ ಇಂಬು ಕೊಡುವ ವೇದಿಕೆಗಳಾಗಿ ಶಿಕ್ಷಕರ ಸಹಭಾಗಿತ್ವದಲ್ಲಿ ಭಾಗವಹಿಸುವುದು. |
− | * ಶಾಲೆಯಲ್ಲಿ ಕಿಶೋರಿಯರಿಗೆ ಪ್ರತಿದಿನವೂ ಲಭ್ಯವಿರುವ ಮಹಿಳಾ | + | * ಶಾಲೆಯಲ್ಲಿ ಕಿಶೋರಿಯರಿಗೆ ಪ್ರತಿದಿನವೂ ಲಭ್ಯವಿರುವ, ಅವರಿಗೆ ಚೆನ್ನಾಗಿ ಸ್ಪಂದಿಸುವ ಮಹಿಳಾ ಶಿಕ್ಷಕಿಯರೇ ಈ ಕ್ಲಬ್‌ಗಳ ನೇತೃತ್ವ ವಹಿಸಿ ನಡೆಸುವುದು. ಈ ನಿಟ್ಟಿನಲ್ಲಿ ಕಿಶೋರಾವಸ್ಥೆಯ ಅನೇಕ ಮಜಲುಗಳು ಮತ್ತು ಅದರೊಟ್ಟಿಗೆ ಬರುವ ಅನೇಕ ಸಂಕಷ್ಟಗಳ ಬಗ್ಗೆ ತಿಳಿಸುವ ಕಾರ್ಯಾಗಾರಗಳು ಶಿಕ್ಷಕಿಯರಿಗೆ ಬೆಂಬಲ ನೀಡುತ್ತವೆ. |
− | * ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್ ಸಭೆಗಳನ್ನು ನಡೆಸುವುದು. | + | * ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್ ಸಭೆಗಳನ್ನು ನಡೆಸುವುದು. ಶಿಕ್ಷಕಿಯರೇ ಈ ಸೆಶನ್‌ಗಳನ್ನು ನಡೆಸುವುದರಿಂದ ಪ್ರತೀ ಶಾಲೆಯೂ ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಕಿಶೋರಿ ಕ್ಲಬ್‌ಗಳಿಗೆ 40 ರಿಂದ 60 ನಿಮಿಷಗಳ ಅವಧಿಯನ್ನು ಯೋಜಿಸಬಹುದಾಗಿದೆ. |
− | * ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು | + | * ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ವಿವಿಧ ಜಿಲ್ಲೆಗಳ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಧರ್ಭಗಳಿಗೆ ಅನುಸಾರವಾಗಿ ಹಾಗು ಅಲ್ಲಿನ ಇತರ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಕಿಯರೊಟ್ಟಿಗೆ ಸೇರಿ ನಿರ್ಮಿಸಲಾಗಿದೆ. ಅವರು ಇಲ್ಲಿರುವ ಆಡಿಯೋ, ವೀಡಿಯೋ ಹಾಗು ಪಠ್ಯ ಸೇರಿದಂತೆ ವಿವಿಧ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು. |
− | * ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ | + | * ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬೇಕು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡಬೇಕು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸಬೇಕು. |
* ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ. | * ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ. | ||
− | * ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. | + | * ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. ಬೇಕಿರುವ ಮಾರ್ಗದರ್ಶನ ನೀಡುವುದು. |
== ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ == | == ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ == | ||
೬೯ ನೇ ಸಾಲು: | ೬೯ ನೇ ಸಾಲು: | ||
|} | |} | ||
− | == ಬೇಸ್‌ಲೈನ್ ಸಮೀಕ್ಷೆ | + | == ಬೇಸ್‌ಲೈನ್ ಸಮೀಕ್ಷೆ == |
ಕಿಶೋರಿ ಕ್ಲಬ್‌ನಲ್ಲಿ ಪಾಲ್ಗೊಳ್ಳುವ ಹದಿಹರೆಯದ ಹೆಣ್ಣುಮಕ್ಕಳ ಬಗ್ಗೆ ತಿಳಿದುಕೊಳ್ಳಲು ಹಾಗು ಅದರಿಂದ ಅವರಿಗೆ ಬೇಕಿರುವ ಹಾಗೆ ವಿಷಯಗಳ ಹಂಚಿಕೆಯ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೇಸ್‌ಲೈನ್ ಸಮೀಕ್ಷೆ ನಡೆಸುವುದು ಬಹುಮುಖ್ಯ ಚಟುವಟಿಕೆಯಾಗಿರುತ್ತದೆ. ಇದರಿಂದ ಒಂದು ವರ್ಷದಲ್ಲಿ ಕಿಶೋರಿಯರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕೂಲಂಕುಶವಾಗಿ ನೋಡಬಹುದಾಗಿದೆ. | ಕಿಶೋರಿ ಕ್ಲಬ್‌ನಲ್ಲಿ ಪಾಲ್ಗೊಳ್ಳುವ ಹದಿಹರೆಯದ ಹೆಣ್ಣುಮಕ್ಕಳ ಬಗ್ಗೆ ತಿಳಿದುಕೊಳ್ಳಲು ಹಾಗು ಅದರಿಂದ ಅವರಿಗೆ ಬೇಕಿರುವ ಹಾಗೆ ವಿಷಯಗಳ ಹಂಚಿಕೆಯ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೇಸ್‌ಲೈನ್ ಸಮೀಕ್ಷೆ ನಡೆಸುವುದು ಬಹುಮುಖ್ಯ ಚಟುವಟಿಕೆಯಾಗಿರುತ್ತದೆ. ಇದರಿಂದ ಒಂದು ವರ್ಷದಲ್ಲಿ ಕಿಶೋರಿಯರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕೂಲಂಕುಶವಾಗಿ ನೋಡಬಹುದಾಗಿದೆ. | ||
೧೭:೪೬, ೬ ಜುಲೈ ೨೦೨೪ ನಂತೆ ಪರಿಷ್ಕರಣೆ
ಕಿಶೋರಿ ಕ್ಲಬ್ - ಅರಿವಿಲ್ಲದ ಅನಾರೋಗ್ಯಕರ ವರ್ತನೆಯಿಂದ ಆರೋಗ್ಯಕರ ಪರಿವರ್ತನೆಯೆಡೆಗೆ
ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲ ಪರಿಸರದ ಹಾಗೂ ಸಮಾಜದ ಓರೆಕೋರೆಗಳ ಪರಿಚಯವಾದರೆ ಮುಂದೆ ಅವರು ತಂತಮ್ಮ ಜೀವನಗಳಲ್ಲಿ ತಮ್ಮ ಆಕಾಂಕ್ಷೆಯ ವಿಷಯಗಳಲ್ಲಿ ಸಾಧನೆ ಮಾಡಲು ಅನುವಾಗುತ್ತದೆ ಎಂಬುದು ನಮ್ಮ ನಂಬಿಕೆ.
ಇದೇ ನಂಬಿಕೆಯಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುವ “ಹೊಸ ಹೆಜ್ಜೆ ಹೊಸ ದಿಶೆ” ಯೋಜನೆಯನ್ನು ಐ.ಟಿ.ಫಾರ್ ಚೇಂಜ್ ಸಂಸ್ಥೆಯು ವಿನ್ಯಾಸಗೊಳಿಸಿ ಕಳೆದ ಐದು ವರ್ಷಗಳಿಂದ ಕಾರ್ಯಗತಗೊಳಿಸುತ್ತಿದೆ.
ಈ ಯೋಜನೆಯಡಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಿಶೋರಿ ಕ್ಲಬ್‌ಗಳನ್ನು ಹದಿಹರೆಯದ ಹೆಣ್ಣುಮಕ್ಕಳ ವೇದಿಕೆಗಳಾಗಿ ನಿರ್ಮಿಸಿ, ಅವುಗಳ ಮುಖಾಂತರ ಅವರ ಜೀವನಕ್ಕೆ ಪೂರಕವಾಗುವ ಅಂಶಗಳನ್ನು ಪರಿಚಯಿಸಿ, ಅವರ ಸಶಕ್ತ ಭವಿಷ್ಯವನ್ನು ರೂಪಿಸಿಕೊಳ್ಳುವೆಡೆಗೆ ಉಪಯುಕ್ತ ತರಬೇತಿಗಳನ್ನು ನೀಡುವ ಉದ್ದೇಶವಿದೆ.
ಹಲವು ವರ್ಷಗಳ ಹಿಂದೆ ಇದ್ದಂತಹ ಹದಿಹರೆಯದ ಹೆಣ್ಣುಮಕ್ಕಳಿಗಾಗಿಯೇ ಸಮಗ್ರ ಶಿಕ್ಷಣ ಕರ್ನಾಟಕ ಇವರು ರೂಪಿಸಿದ “ಕಿಶೋರಿ” ಕಾರ್ಯಕ್ರಮದ ರೀತಿಯಲ್ಲಿಯೇ ಈ ಕ್ಲಬ್‌ಗಳನ್ನು ರೂಪಿಸಲಾಗಿದೆ. ಈ ಕ್ಲಬ್‌ಗಳ ಭಾಗವಾಗಿ, ಜೀವನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ, ಆನ್‌ಲೈನ್ ಜಾಲತಾಣಗಳ ಜವಾಬ್ದಾರಿಯುತ ಬಳಕೆ, ಆರೋಗ್ಯ ಮತ್ತು ನೈರ್ಮಲ್ಯ, ಆಕಾಂಕ್ಷೆಗಳ ನಿರ್ಮಾಣ ಮತ್ತು ಅವರ ಲಿಂಗತ್ವದ ಗುರುತನ್ನು ಬಲಪಡಿಸುವುದು ಸೇರಿದಂತೆ ಹದಿಹರೆಯದವರಿಗೆ ಸಂಬಂಧಿಸಿದ ಹಲವು ಕಲಿಕಾ ಘಟಕಗಳನ್ನು ತರಗತಿಗಳಲ್ಲಿ ಬಳಸುವಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಒಳಗೊಂಡ ವೈವಿಧ್ಯಮಯವಾದ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ. ಇವುಗಳನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ತಮ್ಮ ಶಾಲೆಗಳಿಗೆ ಅನುಗುಣವಾಗುವಂತೆ ಮಹಿಳಾ ಶಿಕ್ಷಕಿಯರು ಬಳಸಬಹುದಾಗಿದೆ.
ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ,
- ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರೌಢಶಾಲೆಗಳಲ್ಲಿ “ಕಿಶೋರಿ ಕ್ಲಬ್”ಗಳು ನಡೆಯಬಹುದು. 8ನೇ ತರಗತಿಯಿಂದ 10ನೇ ತರಗತಿಯ ಹೆಣ್ಣುಮಕ್ಕಳು ಇದರಲ್ಲಿ ಭಾಗವಹಿಸಿ ತಮ್ಮ ಸಶಕ್ತತೆಗೆ ಇಂಬು ಕೊಡುವ ವೇದಿಕೆಗಳಾಗಿ ಶಿಕ್ಷಕರ ಸಹಭಾಗಿತ್ವದಲ್ಲಿ ಭಾಗವಹಿಸುವುದು.
- ಶಾಲೆಯಲ್ಲಿ ಕಿಶೋರಿಯರಿಗೆ ಪ್ರತಿದಿನವೂ ಲಭ್ಯವಿರುವ, ಅವರಿಗೆ ಚೆನ್ನಾಗಿ ಸ್ಪಂದಿಸುವ ಮಹಿಳಾ ಶಿಕ್ಷಕಿಯರೇ ಈ ಕ್ಲಬ್‌ಗಳ ನೇತೃತ್ವ ವಹಿಸಿ ನಡೆಸುವುದು. ಈ ನಿಟ್ಟಿನಲ್ಲಿ ಕಿಶೋರಾವಸ್ಥೆಯ ಅನೇಕ ಮಜಲುಗಳು ಮತ್ತು ಅದರೊಟ್ಟಿಗೆ ಬರುವ ಅನೇಕ ಸಂಕಷ್ಟಗಳ ಬಗ್ಗೆ ತಿಳಿಸುವ ಕಾರ್ಯಾಗಾರಗಳು ಶಿಕ್ಷಕಿಯರಿಗೆ ಬೆಂಬಲ ನೀಡುತ್ತವೆ.
- ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್ ಸಭೆಗಳನ್ನು ನಡೆಸುವುದು. ಶಿಕ್ಷಕಿಯರೇ ಈ ಸೆಶನ್‌ಗಳನ್ನು ನಡೆಸುವುದರಿಂದ ಪ್ರತೀ ಶಾಲೆಯೂ ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಕಿಶೋರಿ ಕ್ಲಬ್‌ಗಳಿಗೆ 40 ರಿಂದ 60 ನಿಮಿಷಗಳ ಅವಧಿಯನ್ನು ಯೋಜಿಸಬಹುದಾಗಿದೆ.
- ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ವಿವಿಧ ಜಿಲ್ಲೆಗಳ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಧರ್ಭಗಳಿಗೆ ಅನುಸಾರವಾಗಿ ಹಾಗು ಅಲ್ಲಿನ ಇತರ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಕಿಯರೊಟ್ಟಿಗೆ ಸೇರಿ ನಿರ್ಮಿಸಲಾಗಿದೆ. ಅವರು ಇಲ್ಲಿರುವ ಆಡಿಯೋ, ವೀಡಿಯೋ ಹಾಗು ಪಠ್ಯ ಸೇರಿದಂತೆ ವಿವಿಧ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು.
- ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸಬೇಕು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡಬೇಕು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸಬೇಕು.
- ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ.
- ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು. ಬೇಕಿರುವ ಮಾರ್ಗದರ್ಶನ ನೀಡುವುದು.
ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ
ಕ್ರ. ಸಂ. | ಕಲಿಕಾ ಘಟಕಗಳ ವಿಷಯ ಪಟ್ಟಿಕೆ |
1 | ಹದಿಹರೆಯ ಅಥವ ಕಿಶೋರಾವಸ್ಥೆ ಎಂದರೇನು - ಈ ಹಂತದಲ್ಲಿ ಆಗುವ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬದಲಾವಣೆಗಳ ಸ್ವರೂಪವೇನು ಎನ್ನುವುದರ ಬಗ್ಗೆ ಅರಿವು ಮೂಡಿಸುವುದು |
2 | ಋತುಚಕ್ರ - ಏಕೆ, ಹೇಗೆ ಮತ್ತು ಇದರ ಸವಾಲುಗಳನ್ನು ನಿಭಾಯಿಸುವ ಬಗೆ ಏನು |
3 | ಸಂತಾನೋತ್ಪತ್ತಿ ಪ್ರಕ್ರಿಯೆ - ಹೇಗಾಗುತ್ತದೆ |
4 | ಗುರುತು ಮತ್ತು ಅಸ್ಮಿತೆ ಹಾಗು ಹದಿಹರೆಯ |
5 | ಬಾಡಿ ಇಮೇಜ್ - ದೇಹದ ಚಿತ್ರಣ ಮತ್ತು ಹದಿಹರೆಯ |
6 | ಪುರುಷ ಪ್ರಧಾನತೆ ಮತ್ತು ಸಮಾಜದಲ್ಲಿರುವ ಅಸಮಾನತೆಯ ಹಿಂದೆ ಇದರ ಪಾತ್ರ |
7 | ಮಾಧ್ಯಮ ಮತ್ತು ಮಾರುಕಟ್ಟೆ - ಪುರುಷ ಪ್ರಧಾನತೆಯನ್ನು ಎತ್ತಿಹಿಡಿಯುವಲ್ಲಿ ಇದರ ಕೀಲಕ ಪಾತ್ರ |
8 | ಸಮತೋಲನ ಆಹಾರ ಮತ್ತು ಪೌಷ್ಟಿಕತೆ |
9 | ಅನೀಮಿಯ/ರಕ್ತ ಹೀನತೆ |
10 | ಜೀವನ ಕೌಶಲ್ಯಗಳೆಂದರೇನು ಹಾಗೂ ಯಶಸ್ವಿ/ಸಬಲ ಕಿಶೋರಿಯಾಗುವೆಡೆಗೆ ಇವುಗಳ ಪಾತ್ರವೇನು. ಜೀವನ ಕೌಶಲ್ಯಗಳನ್ನು ಸಬಲತೆಯ ಸಾಧನವಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವದನ್ನು ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಮುಖಾಂತರ ಅರ್ಥ ಮಾಡಿಕೊಳ್ಳುವುದು |
11 | POCSO - ಲೈಂಗಿಕ ಹಿಂಸೆ ಮತ್ತು ಕಿರುಕುಳದ ಸ್ವರೂಪ ಹಾಗು ಅದನ್ನು ಮೀರುವುದಕ್ಕಾಗಿ ಕಿಶೋರಿಯರಿಗಿರುವ ಬೆಂಬಲಗಳೇನು |
12 | ಸ್ವಾಯತ್ತತೆಯತ್ತ ನಡೆಯಲು ಶಿಕ್ಷಣದ ಪಾತ್ರ - ಇರುವ ಆಯ್ಕೆಗಳೇನು ಎನ್ನುವುದರ ಪರಿಚಯ |
13 | ಸ್ವಾಯತ್ತತೆ ಮತ್ತು ಉದ್ಯೋಗಾವಕಾಶಗಳು (career guidance) |
14 | ಅಂತರ್ಜಾಲ - ಋಣಾತ್ಮಕ ಮತ್ತು ಧನಾತ್ಮಕ ಅಂಶಗಳು. ಸಶಕ್ತತೆಯ ಸಾಧನವಾಗಿ ಅಂತರ್ಜಾಲವನ್ನು ಬಳಸಿಕೊಳ್ಳುವ ಬಗೆ ಏನು |
15 | Action plan - ಶಿಕ್ಷಣ, ಕೆಲಸ ಮತ್ತು ಭವಿಷ್ಯದ ಬಗ್ಗೆ ಕಟ್ಟಿದ ಕನಸು/ಯೋಜನೆಗಳ ದಾಖಲಾತಿ |
ಬೇಸ್‌ಲೈನ್ ಸಮೀಕ್ಷೆ
ಕಿಶೋರಿ ಕ್ಲಬ್‌ನಲ್ಲಿ ಪಾಲ್ಗೊಳ್ಳುವ ಹದಿಹರೆಯದ ಹೆಣ್ಣುಮಕ್ಕಳ ಬಗ್ಗೆ ತಿಳಿದುಕೊಳ್ಳಲು ಹಾಗು ಅದರಿಂದ ಅವರಿಗೆ ಬೇಕಿರುವ ಹಾಗೆ ವಿಷಯಗಳ ಹಂಚಿಕೆಯ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೇಸ್‌ಲೈನ್ ಸಮೀಕ್ಷೆ ನಡೆಸುವುದು ಬಹುಮುಖ್ಯ ಚಟುವಟಿಕೆಯಾಗಿರುತ್ತದೆ. ಇದರಿಂದ ಒಂದು ವರ್ಷದಲ್ಲಿ ಕಿಶೋರಿಯರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕೂಲಂಕುಶವಾಗಿ ನೋಡಬಹುದಾಗಿದೆ.
ಶಾಲೆಗಳಲ್ಲಿ ಬೇಸ್‌ಲೈನ್‌ಗಳನ್ನು ನಡೆಸಲು ಈ ಲಿಂಕುಗಳನ್ನು ಬಳಸಿ
ಕಲಬುರಗಿ - https://bit.ly/itfckcbl23
ಮೈಸೂರು - https://bit.ly/kcmysbl23
ಕಿಶೋರಿ ಕ್ಲಬ್ ಫೆಸಿಲಿಟೇಟರ್ ರಿಪೋರ್ಟ್ ಟೆಂಪ್ಲೇಟ್ (KCF template)
ಪ್ರತೀ ಸೆಶನ್ ಮುಗಿದ ಮೇಲೆ ತುಂಬಬೇಕಿರುವ ಕಿಶೋರಿ ಕ್ಲಬ್ ಫೆಸಿಲಿಟೇಟರ್ ಗೂಗಲ್ ಫಾರ್ಮನ್ನು ಇಲ್ಲಿ ನೋಡಬಹುದಾಗಿದೆ.
ಶಿಕ್ಷಕಿಯರಿಗಾಗಿ ಸಂಪನ್ಮೂಲಗಳು :
ಕಿಶೋರಿ ಕ್ಲಬ್ ನಡೆಸಲು ಬೇಕಿರುವ ಸಂಪನ್ಮೂಲಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ. ಪ್ರತೀ ಎರೆಡು ವಾರಗಳಿಗೊಮ್ಮೆ ಇಲ್ಲಿ ಸಂಪನ್ಮೂಲಗಳನ್ನು ಹಂಚಿಕೊಳ್ಳಲಾಗುವುದು.