"ವಿದ್ಯುತ್ಕಾಂತೀಯ ಪ್ರೇರಣೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು
೩೯ ನೇ ಸಾಲು: | ೩೯ ನೇ ಸಾಲು: | ||
=ಬೋಧನೆಯ ರೂಪುರೇಶಗಳು = | =ಬೋಧನೆಯ ರೂಪುರೇಶಗಳು = | ||
==ಪರಿಕಲ್ಪನೆ #1== | ==ಪರಿಕಲ್ಪನೆ #1== | ||
+ | ವಿದ್ಯುತ್ಕಾಂತೀಯ ಪ್ರೇರಣೆ ಅರ್ಥ – ವಿದ್ಯುಚ್ಚಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು – ಫಾರಡೆಯ ಪ್ರಯೋಗ | ||
===ಕಲಿಕೆಯ ಉದ್ದೇಶಗಳು=== | ===ಕಲಿಕೆಯ ಉದ್ದೇಶಗಳು=== | ||
+ | #ವಿದ್ಯುತ್ಕಾಂತೀಯ ಪ್ರೇರಣೆಯ ಅರ್ಥ ತಿಳಿಯುವುದು | ||
+ | #ವಿದ್ಯುಚ್ಛಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪ್ರಾಯೋಗಿಕವಾಗಿ ಕಂಡುಹಿಡಿಯುವುದು | ||
+ | #ಫಾರಡೆಯ ಪ್ರಯೋಗವನ್ನು ವಿವರಿಸುವುದು | ||
+ | #ಫಾರಡೆಯ ವಿದ್ಯುತ್ಕಾಂತೀಯ ಪ್ರೇರಣೆಯ ನಿಯಮಗಳನ್ನು ತಿಳಿಯುವರು | ||
+ | |||
===ಶಿಕ್ಷಕರಿಗೆ ಟಿಪ್ಪಣಿ=== | ===ಶಿಕ್ಷಕರಿಗೆ ಟಿಪ್ಪಣಿ=== | ||
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | ||
೬೮ ನೇ ಸಾಲು: | ೭೪ ನೇ ಸಾಲು: | ||
2) ಸುರುಳಿಗೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರ ಹೆಚ್ಚಿದಾಗ ಪ್ರೇರಿತ ವಿದ್ಯುಚ್ಚಾಲಕ ಬಲ ಹೆಚ್ಚುತ್ತದೆ. | 2) ಸುರುಳಿಗೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರ ಹೆಚ್ಚಿದಾಗ ಪ್ರೇರಿತ ವಿದ್ಯುಚ್ಚಾಲಕ ಬಲ ಹೆಚ್ಚುತ್ತದೆ. | ||
− | |||
− | |||
− | |||
− | |||
− | |||
− | |||
− | |||
===ಚಟುವಟಿಕೆಗಳು #=== | ===ಚಟುವಟಿಕೆಗಳು #=== |
೧೫:೪೩, ೨೪ ಆಗಸ್ಟ್ ೨೦೧೪ ನಂತೆ ಪರಿಷ್ಕರಣೆ
ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
ಉಪಯುಕ್ತ ವೆಬ್ ಸೈಟ್ ಗಳು
ಸಂಬಂಧ ಪುಸ್ತಕಗಳು
- 10ನೇ ತರಗತಿ ಪಠ್ಯಪುಸ್ತಕ -2011 ಮತ್ತು 2014
- CONCISE PHYSICS – ICSE BY R.P.Goyal, and S.P.Tripati
- XMEDIA – SCIENCE CLASS X – Published by V.K.Global Publication Pvt, Ltd, Newdelhi-02.
ಬೋಧನೆಯ ರೂಪುರೇಶಗಳು
ಪರಿಕಲ್ಪನೆ #1
ವಿದ್ಯುತ್ಕಾಂತೀಯ ಪ್ರೇರಣೆ ಅರ್ಥ – ವಿದ್ಯುಚ್ಚಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು – ಫಾರಡೆಯ ಪ್ರಯೋಗ
ಕಲಿಕೆಯ ಉದ್ದೇಶಗಳು
- ವಿದ್ಯುತ್ಕಾಂತೀಯ ಪ್ರೇರಣೆಯ ಅರ್ಥ ತಿಳಿಯುವುದು
- ವಿದ್ಯುಚ್ಛಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳನ್ನು ಪ್ರಾಯೋಗಿಕವಾಗಿ ಕಂಡುಹಿಡಿಯುವುದು
- ಫಾರಡೆಯ ಪ್ರಯೋಗವನ್ನು ವಿವರಿಸುವುದು
- ಫಾರಡೆಯ ವಿದ್ಯುತ್ಕಾಂತೀಯ ಪ್ರೇರಣೆಯ ನಿಯಮಗಳನ್ನು ತಿಳಿಯುವರು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ ವಿದ್ಯುತ್ ಕಾಂತೀಯ ಪ್ರೇರಣೆ : ಒಂದು ವಾಹಕದಲ್ಲಿ ವಿದ್ಯುತ್ ಪ್ರವಾಹವು ಉಂಟಾದಾಗ ವಾಹಕದ ಸುತ್ತ ಕಾಂತಕ್ಷೇತ್ರ ಏರ್ಪಡುತ್ತದೆ. ಒಂದು ವಾಹಕ ಸುರುಳಿಯಲ್ಲಿ ಕಾಂತಕ್ಷೇತ್ರವನ್ನು ಬದಲಾಯಿಸಿದಾಗ ಪ್ರೇರಿತ ವಿದ್ಯುತ್ ಚಾಲಕ ಬಲವು ಆ ವಾಹಕದ ತುದಿಗಳಲ್ಲಿ ಉಂಟಾಗುತ್ತದೆ.
ವಿದ್ಯುತ್ ಕಾಂತೀಯ ಪ್ರೇರಣೆಯ ಪ್ರಯೋಗ : ಒಂದು ತಾಮ್ರದ ತಂತಿಯನ್ನು ಸಿಲಿಂಡರ್ ಆಕೃತಿಯ ಪೇಪರ್ ರೋಲ್, ಮರ ಅಥವಾ ಪ್ಲಾಸ್ಟಿಕ್ ಸಿಲಿಂಡರ್ ಸುತ್ತ ಸುರುಳಿಯನ್ನು ಸುತ್ತುವುದು. ಸುರುಳಿ ತಂತಿಯ ತುದಿಗಳನ್ನು ಗ್ಯಾಲ್ವನೋಮೀಟರ್ ಗೆ ಜೋಡಿಸುವುದು. ಸುರುಳಿಯ ಅಕ್ಷಕ್ಕೆ ಸ್ಪಲ್ಪದೂರದಲ್ಲಿ ಒಂದು ದಂಡಕಾಂತವನ್ನು ಚಿತ್ರದಲ್ಲಿರುವಂತೆ ಇಡಿ. ವೀಕ್ಷಣೆ : 1) ದಂಡಕಾಂತ ಸ್ಥಿರವಾಗಿದ್ದಾಗ ಗ್ಯಾಲ್ವನೋಮೀಟರ್ ನಲ್ಲಿ ಯಾವುದೇ ಡಿಪ್ಲೆಕ್ಷನ್ ತೋರಿಸುವುದಿಲ್ಲ. ಸೂಚಿಯು ಸೊನ್ನೆ ಆಗಿರುತ್ತದೆ. 2) ದಂಡಕಾಂತದ ಉತ್ತರದ್ರುವವನ್ನು ಸುರುಳಿಯ ಹತ್ತಿರ ವೇಗವಾಗಿ ತಂದಾಗ ಗ್ಯಾಲ್ವನೋಮೀಟರ್ ಸೂಚಕವು ಬಲಕ್ಕೆ ಡಿಪ್ಲೆಕ್ಷನ್ ಆಗುತ್ತದೆ. ಸುರುಳಿಯಲ್ಲಿ ಸ್ಪಲ್ಪ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿದೆ. 3) ದಂಡಕಾಂತದ ಚಲನೆಯನ್ನು ನಿಲ್ಲಿಸಿದಾಗ ಸೂಚಿಯು ಸೊನ್ನೆ ಆಗಿರುತ್ತದೆ. ಇದರಿಂದ ಸುರುಳಿಯಲ್ಲಿ ವಿದ್ಯುತ್ ಹರಿಯಲು ದಂಡಕಾಂತವನ್ನು ಚಲಿಸುತ್ತಿರಬೇಕು. 4) ದಂಡಕಾಂತದ ಉತ್ತರದ್ರುವವನ್ನು ಸುರುಳಿಯಿಂದ ದೂರಕ್ಕೆ ವೇಗವಾಗಿ ಹಿಂತೆಗೆದು ಕೊಂಡರೆ ಗ್ಯಾಲ್ವನೋಮೀಟರ್ ಸೂಚಕವು ಎಡಕ್ಕೆ ಡಿಪ್ಲೆಕ್ಷನ್ ಆಗುತ್ತದೆ. ಸುರುಳಿಯಲ್ಲಿ ಸ್ಪಲ್ಪ ಪ್ರಮಾಣದ ವಿದ್ಯುತ್ ಪ್ರವಾಹ ಉಂಟಾಗಿದೆ. 5) ದಂಡಕಾಂತದವನ್ನು ಸುರುಳಿಯ ಹತ್ತಿರ ಮತ್ತು ದೂರಕ್ಕೆ ಅಥವಾ ಸುರುಳಿಯ ಒಳಗೆ ವೇಗವಾಗಿ ಚಲಿಸುವಂತೆ ಮಾಡಿದಾಗ ಗ್ಯಾಲ್ವನೋಮೀಟರ್ ಸೂಚಕವು ಹೆಚ್ಚು ವಿದ್ಯುತ್ ಪ್ರವಾಹದ ಇರುವಿಕೆಯನ್ನು ತೋರಿಸುತ್ತದೆ. 6) ದಂಡಕಾಂತವನ್ನು ಸ್ಥಿರವಾಗಿಟ್ಟು ಸುರುಳಿಯನ್ನು ಅದೇ ಅಕ್ಷದಲ್ಲಿ ಚಲಿಸುವಂತೆ ಮಾಡಿದಾಗಲೂ ಸುರುಳಿಯಲ್ಲಿ ವಿದ್ಯುತ್ ಪ್ರವಾಹ ಉಂಟಾಗಿ ಗ್ಯಾಲ್ವನೋಮೀಟರ್ ಡಿಪ್ಲೆಕ್ಷನ್ ತೋರಿಸುತ್ತದೆ. ತೀರ್ಮಾನ : ಮೇಲಿನ ಪ್ರಯೋಗದ ವೀಕ್ಷಣೆಯಿಂದ ಈ ಮೂರು ತೀರ್ಮಾನಗಳನ್ನು ಹೊಂದಬಹುದು. 1) ಸುರುಳಿಯಲ್ಲಿ ವಿದ್ಯುತ್ ಪ್ರವಾಹವು ಉಂಟಾಗಲು ಸುರುಳಿ ಮತ್ತು ದಂಡಕಾಂತಗಳ ನಡುವೆ ಸಾಪೇಕ್ಷ ಚಲನೆ ಇದ್ದಾಗ ಗ್ಯಾಲ್ವನೋಮೀಟರ್ ನಲ್ಲಿ ಡಿಪ್ಲೆಕ್ಷನ್ ಆಗುತ್ತದೆ. 2) ಗ್ಯಾಲ್ವನೋಮೀಟರ್ ನಲ್ಲಿ ಡಿಪ್ಲೆಕ್ಷನ್ನ ದಿಕ್ಕು ಕಾಂತವನ್ನು ಧ್ರುವವನ್ನು ಬದಲಾಯಿಸಿದಾಗ ವಿರುದ್ಧದಿಕ್ಕನ್ನು ಸೂಚಿಸುತ್ತದೆ. 3) ಸುರುಳಿ ಮತ್ತು ದಂಡಕಾಂತಗಳ ನಡುವೆ ಸಾಪೇಕ್ಷ ಚಲನೆಯ ವೇಗವನ್ನು ಹೆಚ್ಚು ಮಾಡಿದಾಗ, ಇನ್ನೂ ಹೆಚ್ಚಿನ ಪ್ರಬಲ ಕಾಂತವನ್ನು ಬಳಸಿದಾಗ ಮತ್ತು ಸುರುಳಿಗಳ ಸಂಖ್ಯೆಯನ್ನು ಹೆಚ್ಚಿಸಿದಾಗ ಗ್ಯಾಲ್ವನೋಮೀಟರ್ ನಲ್ಲಿ ಹೆಚ್ಚು ವಿದ್ಯುತ್ ಪ್ರವಾಹ ಉಂಟಾಗುವುದನ್ನು ಸೂಚಿಸುತ್ತದೆ.
ಮೈಕಲ್ ಫಾರಡೆಯ ಪ್ರಯೋಗ ಮತ್ತು ವಿವರಣೆ : ಫಾರಡೆಯು ರಟ್ಟಿನ ಒಂದು ಕೊಳವೆಯ ಮೇಲೆ ಉದ್ದವಾದ ತಾಮ್ರದ ತಂತಿಯನ್ನು ಸುತ್ತಿದ. ತಂತಿ ಸುರುಳಿಗಳ ನಡುವೆ ಟ್ವೈನ್ ದಾರವನ್ನು ಮತ್ತು ಸುರುಳಿಗಳ ಪದರಗಳ ನದುವೆ ಕ್ಯಾಲಿಕೋ ಬಟ್ಟೆಯನ್ನು ಇರಿಸಿದ. ತಂತಿಯ ತುದಿಗಳನ್ನು ಗ್ಯಾಲ್ವನೋ ಮೀಟರ್ ಗೆ ಜೋಡಿಸಿದ. ದಂಡ ಕಾಂತದ ಒಂದು ದ್ರುವವನ್ನು ಸುರುಳಿಯೊಳಕ್ಕೆ ವೇಗವಾಗಿ ನುಗ್ಗಿಸಿದ. ಗ್ಯಾಲ್ವನೋಮೀಟರ್ ವಿದ್ಯುತ್ ಪ್ರವಾಹ ಉಂಟಾದುದನ್ನು ಸೂಚಿಸಿತು. ಕಾಂತವನ್ನು ಸುರುಳಿಯಿಂದ ಹೊರಗೆಳೆದ. ಗ್ಯಾಲ್ವನೋಮೀಟರ್ ಸೂಚಿಯು ವಿರುದ್ಧದಿಕ್ಕಿನಲ್ಲಿ ವಿಚಲನೆಯನ್ನು ಹೊಂದಿತು. ಕಾಂತದ ವೇಗವನ್ನು ಹೆಚ್ಚಿಸಿದಂತೆಲ್ಲಾ ಸೂಚಿಯ ವಿಚಲನೆಯ ಪ್ರಮಾಣವು ಹೆಚ್ಚಾಯಿತು. ಕಾಂತವು ಸುರುಳಿಯೊಳಗೆ ನಿಶ್ಚಲ ಸ್ಥಿತಿಯಲ್ಲಿದ್ದಾಗ ವಿದ್ಯುತ್ಪ್ರವಾಹವು ಇರುವುದಿಲ್ಲ ಎಂದು ಕಂಡುಕೊಂಡನು. ಕಾಂತವನ್ನು ಸ್ಥಿರವಾಗಿಟ್ಟು, ಸುರುಳಿಯು ಚಲಿಸುವಂತೆ ಮಾಡಿದ. ಫಲಿತಾಂಶ ಮೊದಲಿನಂತೆಯೇ ಇತ್ತು. ಕಾಂತಶಕ್ತಿಯು ಹೇಗೆ ವಿದ್ಯುತ್ತನ್ನು ಉತ್ಪಾದಿಸುತ್ತದೆ. ವಾಹಕ ಮತ್ತು ಕಾಂತಗಳ ನಡುವಿನ ಸಾಪೇಕ್ಷ ಚಲನೆಯಿಂದ ವಾಹಕದಲ್ಲಿ ವಿದ್ಯುತ್ ಉತ್ಪತ್ತಿಯಾಗುತ್ತದೆ ಎನ್ನುವ ಅಂಶವನ್ನು ಕಂಡುಕೊಂಡನು. ಫಾರಡೆಯ ನಿಯಮಗಳು : ಮೇಲಿನ ಪ್ರಯೋಗಗಳ ಆಧಾರದ ಮೇಲೆ ಫ್ಯಾರಡೆಯು ಕೆಳಕಂಡ ಎರಡು ನಿಯಮಗಳನ್ನು ಪ್ರತಿಪಾದಿಸಿನು. 1) ಒಂದು ವಾಹಕಕ್ಕೆ ಹೊಂದಿಕೊಂಡಿರುವ ಹಾಗೂ ಬದಲಾಗುತ್ತಿರುವ ಕಾಂತಕ್ಷೇತ್ರವು ವಾಹಕದಲ್ಲಿ ವಿದ್ಯುಚ್ಚಾಲಕ ಬಲವನ್ನು ಪ್ರೇರಣೆ ಮಾಡುತ್ತದೆ. 2) ಪ್ರೇರಿತ ವಿದ್ಯುಚ್ಛಾಲಕ ಬಲವು ವಾಹಕಕ್ಕೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ನೇರ ಅನುಪಾತದಲ್ಲಿರುತ್ತದೆ. ಪ್ರೇರಿತ ವಿದ್ಯುಚ್ಛಾಲಕ ಬಲದ ಮೇಲೆ ಪ್ರಭಾವ ಬೀರುವ ಅಂಶಗಳು : ಪ್ರೇರಿತ ವಿದ್ಯುಚ್ಛಾಲಕ ಬಲದ ಪರಿಮಾಣವು ಕಾಂತಕ್ಷೇತ್ರದ ಬದಲಾವಣೆಯ ದರಕ್ಕೆ ಸಮನಾಗಿರುತ್ತದೆ. ಪ್ರೇರಿತ ವಿದ್ಯುಚ್ಛಾಲಕ ಬಲ= (ಕಾಂತಕ್ಷೇತ್ರದ ಬದಲಾವಣೆ)/(ಬದಲಾವಣೆಯಾಗಲು ತೆಗೆದುಕೊಂಡ ಕಾಲ)
ಆದ್ದರಿಂದ 1) ಸುರುಳಿಗಳ ಸುತ್ತುಗಳ ಸಂಖ್ಯೆ ಹೆಚ್ಚಿದಾಗ ಮತ್ತು 2) ಸುರುಳಿಗೆ ಹೊಂದಿಕೊಂಡಿರುವ ಕಾಂತಕ್ಷೇತ್ರದ ಬದಲಾವಣೆಯ ದರ ಹೆಚ್ಚಿದಾಗ ಪ್ರೇರಿತ ವಿದ್ಯುಚ್ಚಾಲಕ ಬಲ ಹೆಚ್ಚುತ್ತದೆ.
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
- ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು