ಮಳೆರಾಯ - ಧ್ವನಿ ಕಥೆಯ ಚಟುವಟಿಕೆ ಪುಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.

ಪೀಠಿಕೆ:

ಮೋಡವನ್ನ ಪ್ರಾರ್ಥಿಸಿದ ಕೂಡಲೇ ಅದು ಮಳೆ ಸುರಿಸುವುದರೊಂದಿಗೆ ಹರುಷ ಹರಿಸಿದ್ದು ಹೇಗೆ ಎಂಬುದನ್ನ ತಿಳಿಯಿರಿ.

ಉದ್ದೇಶಗಳು :

ಈ ಕಥೆಯ ಮೂಲಕ ಮಕ್ಕಳಿಗೆ ಋತುಗಳು ಹಾಗು ಆ ಋತುಗಳ ಗುಣಲಕ್ಷಣಗಳನ್ನು ತಿಳಿಸಿಕೊಡುವುದು.

ಕಥಾ ವಸ್ತು :ಕಥೆಗಾಗಿ ಚಿತ್ರ,ವಿಜ್ಞಾನ,ಭಾವನೆಗಳು

ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭

ಧ್ವನಿ ಕಥೆ ಲಿಂಕ್:

https://idsp-dev.teacher-network.in/backend/sites/default/files/2024-07/Maleraya.mp3

ತರಗತಿ ಚಟುವಟಿಕೆ:

ಎಲ್ಲಾ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ಮಾಡಲು ಕೆಲವು ಅಂಕಗಳು
  1. ಮಕ್ಕಳೊಂದಿಗೆ ಕಾಲಗಳ ಕುರಿತು ಚರ್ಚಿಸಿ ಅವರಿಗೆ ಇಷ್ಟವಾದ ಕಾಲ ಯಾವುದು ಮತ್ತು ಯಾಕೆ ಎಂಬುದನ್ನ ತಿಳಿಸಲು ಹೇಳಬಹುದು.
  2. ಮಳೆಯಿಂದ ಆಗಬಹುದಾದ ಉಪಯೋಗಗಳ ಕುರಿತು ಚರ್ಚಿಸಬಹುದು.
  3. ಮಳೆ ಹೇಗೆ ಉಂಟಾಗುತ್ತದೆ ಎಂಬುದನ್ನ ಮಕ್ಕಳಿಗೆ ತಿಳಿಸಬಹುದು.
  4. ಮಳೆ ಬರುವ ಮುನ್ನ ಮತ್ತು ಮಳೆ ಬಂದ ನಂತರ ಪರಿಸರದಲ್ಲಿ ಆಗುವ ಬದಲಾವಣೆಗಳ ಬಗ್ಗೆ ಮಕ್ಕಳು ಗಮನಿಸಿರುವ ಅಂಶಗಳನ್ನು ಚರ್ಚಿಸುವುದು ?
  5. ಮಕ್ಕಳು ಗಮನಿಸಿರುವ ಋತಗಳು ಹಾಗೂ ಆ ಋತುಗಳ ಗುಣಲಕ್ಷಣಗಳ ಕುರಿತು ಚರ್ಚಿಸುವುದು.
  6. ಋತುಮಾನಗಳಿಗೆ ತಕ್ಕಂತೆ ಅನುಸರಿಸಬೇಕಾದ ಆರೋಗ್ಯ ಕ್ರಮಗಳನ್ನು ಗುಂಪಿನಲ್ಲಿ ಚರ್ಚಿಸುವಂತೆ ತಿಳಿಸುವುದು.