ಮೂರನೇ ದಿನದ ವರದಿ
"ಬದಲಾವಣೆ ಮೊದಲು ನನ್ನಿಂದ ಪ್ರಾರಂಭವಾಗಲಿ"
ದಿನಾಂಕ : ೧೭.೭.೨೦೧೪ ಗುರುವಾರ
- ಸಂಪನ್ಮೂಲ ವ್ಯಕ್ತಿಗಳು : ಗುರು ಸರ್ , ರಾಧಾ ಮೇಡಮ್ , ಉಮಾ ಮೇಡಮ್
ಎಂದಿನಂತೆ ಮೂರನೇ ದಿನದ ಕಾರ್ಯಾಗಾರವು ಬೆಳಗ್ಗೆ ೯.೩೦ ಕ್ಕೆ ಪ್ರಾರಂಭವಾಯಿತು . ಎರಡನೇ ದಿನದ ಲ್ಲಿ ಪೂರ್ಣವಾಗದೇ ಇರುವ ಕಾರ್ಯವನ್ನು ಪೂರ್ಣ ಮಾಡಲು ಅವಕಾಶ ಮಾಡಿಕೊಡಲಾಯಿತು. ನಂತರ ಮೈಂಡ್ ಮೇಪ್ ಅಪ್ ಲೋಡ್ ಮಾಡುವುದನ್ನು ಹೇಳಿಕೊಟ್ಟರು . ಮೈಂಡ್ ಮೇಪ್ ಗೆ ಲಿಂಕ್ ಕೊಡುವುದನ್ನು ಹೇಳಿಕೊಟ್ಟರು. ನಂತರ ಪ್ರತಿಯೊಬ್ಬ ಶಿಕ್ಷಕರು ಅವರಿಗೆ ವಹಿಸಿದ ಕಾರ್ಯವನ್ನು ಪೂರ್ಣ ಮಾಡುವಂತೆ ತಿಳಿಸಲಾಯಿತು . ಕಾಫಿ ವಿರಾಮದ ನಂತರ ಉಪಯುಕ್ತ ವಿಡಿಯೋ ಲಿಂಕ್ ಕೊಡುವುದನ್ನು ಹೇಳಿಕೊಟ್ಟರು . ಶಿಕ್ಷಕರು ಪ್ರತಿಯೊಬ್ಬರು ಪ್ರಾಯೋಗಿಕವಾಗಿ ವಿಡಿಯೋ ಲಿಂಕ್ ಮಾಡುವುದನ್ನು ಕಲಿತು ಕೊಂಡರು . ಇಲಾಖೆಯಿಂದ ಸಹನಿರ್ದೇಶಕರು ಮತ್ತು ಶಿಬಿರದ ಅಧಿಕಾರಿಯಾಗಿರುವ ಮಂಜುನಾಥ್ ಸರ್ ರವರು ಕಾರ್ಯಾಗಾರಕ್ಕೆ ಭೇಟಿಕೊಟ್ಟರು . ಸಹನಿರ್ದೇಶಕರು ತರಬೇತಿಯ ಅವಧಿಯಲ್ಲಿ ಪಡೆದುಕೊಂಡಿರುವ ಮಾಹಿತಿಯನ್ನು ತರಗತಿ ಕೋಣೆಯಲ್ಲಿ ಉಪಯೋಗಿಸುವಂತೆ ಸಲಹೆ ನೀಡಿದರು . ಎಸ್ .ಟಿ. ಎಫ್ . ನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುವಂತೆ ಸಲಹೆ ಮಾಡಿದರು . ತರಗತಿ ಕೊಣೆಯಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಯಾಕೆ ಬಳಸಿಕೊಳ್ಳಬೇಕು ಎಂದು ತಿಳಿಸಿದರು. .
ಅಪರಾಹ್ನದ ಅವಧಿಯಲ್ಲಿ ಭೂಗೋಳ ಶಾಸ್ತ್ರ ಅನುಕೂಲಿಸುವ ಸಂದರ್ಬದಲ್ಲಿ ಮಾರ್ಬಲ್ ನ್ನು ಉಪಯೋಗಿಸುವುದನ್ನು ಹೇಳಿಕೊಟ್ಟರು . ಈ ಸಂದರ್ಬದಲ್ಲಿ ಕೆಲವು ಶಿಕ್ಷಕರು ತಮ್ಮ ಅನುಭವಗಳನ್ನು ಹಂಚಿಕೊಂಡರು . ಅಕ್ಷಾಂಶ ಮತ್ತು ರೇಖಾಂ ಶ ಉಪಯೋಗಿಸುವುದನ್ನು ಹೇಳಿಕೊಟ್ಟರು . ಕಾಫಿ ವಿರಾಮದ ನಂತರ ಹೊಸ ಟೆಂಪ್ಲೇ ಟ್ ಬಳಸುವುದನ್ನು ವಿವರವಾಗಿ ಸಂಪನ್ಮೂಲವ್ಯಕ್ತಿಗಳು ಹೇಳಿಕೊಟ್ಟರು . ಚಟುವಟಿಕೆಗಳಿಗೆ ಹೊಸ ಟೆಂಪ್ಲೆ ಟ್ ಕೊಡುವುದನ್ನು ಎಲ್ಲಾ ಶಿಕ್ಷಕರು ಪ್ರಾಯೋಗಿಕವಾಗಿ ಕಲಿತು ಕೊಂಡರು . ಸಂಪನ್ಮೂಲ ವ್ಯಕ್ತಿಗಳು ಶಿಕ್ಷಕರ ಹತ್ತಿರ ಕುಳಿತುಕೊಂಡು ಹೇಳಿ ಕೊಟ್ಟರು . ಸಂಜೆ ೫.೩೦ ಕ್ಕೆ ಮೂರನೇ ದಿನದ ಕಾರ್ಯಾಗಾರವು ಮುಕ್ತಾಯವಾಯಿತು .
ವರದಿ - ಹರಿಶ್ಚ ೦ದ್ರ ಸರಕಾರಿ ಪದವಿ ಪೂರ್ವ ಕಾಲೇಜು ಬೆಳ್ಳಾರೆ , ಸುಳ್ಯ ತಾಲೂಕು .ದಕ್ಷಿಣ ಕನ್ನಡ