ಚೌಕವನ್ನು ರಚಿಸುವುದು
Jump to navigation
Jump to search
ಉದ್ದೇಶಗಳು
- ಪರಿಪೂರ್ಣ ಚೌಕದ ರಚನೆ.
- ರಚನೆಯ ಶಿಷ್ಟಾಚಾರದಲ್ಲಿ ಚೌಕದ ಸಮವಾದ ಬಾಹುಗಳನ್ನು ಪಡೆಯಲು ಸಮ ತ್ರಿಜ್ಯ ಕಂಸಗಳನ್ನು ಬಳಸಿ.
- ಲಂಬ ರೇಖೆಗಳನ್ನು ಬಳಸಿ ಚೌಕದ ಬಾಹುಗಳನ್ನು ಎಳೆಯಿರಿ .
ಅಂದಾಜು ಸಮಯ
40 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಡಿಜಿಟಲ್ ಅಲ್ಲದ: ಪೇಪರ್, ಕೋನಮಾಪಕ, ಪೆನ್ಸಿಲ್ ಮತ್ತು ಅಳತೆಪಟ್ಟಿ
ಈ ಚಟುವಟಿಕೆಯನ್ನು ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ: http://jwilson.coe.uga.edu/EMT668/EMAT6680.2000/Mylod/Math7200/Project/Square.html
ವಿಧಾನ/ಬೆಳವಣಿಗೆಯ ಪ್ರಶ್ನೆಗಳು
- ನಿರ್ದಿಷ್ಟ ಉದ್ದದ ಚೌಕವನ್ನು ರಚಿಸಲು, ನಿರ್ದಿಷ್ಟ ಉದ್ದದ AB ರೇಖಾಖಂಡವನ್ನು ಎಳೆಯಿರಿ.
- A ಬಿಂದುವಿನಲ್ಲಿ AB ಲಂಬರೇಖೆಯನ್ನು ಎಳೆಯಿರಿ.
- AB ಯನ್ನು ತ್ರಿಜ್ಯವಾಗಿ ತೆಗೆದುಕೊಳ್ಳುವುದರಿಂದ A ಯನ್ನು ಕೇಂದ್ರವಾಗಿಟ್ಟುಕೊಂಡು ವೃತ್ತವನ್ನು ಎಳೆಯಿರಿ.
- ವೃತ್ತವು ಒಂದು ಬಿಂದುವಿನಲ್ಲಿ ಲಂಬರೇಖೆಯನ್ನು ಛೇದಿಸುತ್ತದೆ. ಛೇದಕ ಬಿಂದುವನ್ನು C ಎಂದು ಹೆಸರಿಸಿ.
- ಅದೇ ರೀತಿ C ಯಲ್ಲಿ AC ಲಂಬರೇಖೆಯನ್ನು ಎಳೆಯಿರಿ,ನೀವು ಚೌಕದ ಮೂರನೇ ಬಾಹುವನ್ನು ಪಡೆಯುತ್ತೀರಿ.
- ಚೌಕದ ನಾಲ್ಕನೇ ಬಾಹುವನ್ನು ಪಡೆಯಲು AB ಗೆ ಲಂಬವಾಗಿ B ಅಲ್ಲಿ ಎಳೆಯಿರಿ.
- ಛೇದಿಸುವ ಎರಡು ಲಂಬರೇಖೆಗಳನ್ನು D ಎಂದು ಹೆಸರಿಸಿ.
- ABCD ಅಗತ್ಯವಿರುವ ಚೌಕವಾಗಿದೆ.
ಅಭಿವೃದ್ಧಿ ಪ್ರಶ್ನೆಗಳು:
- ನೀವು ಯಾವ ಅಳತೆಗಾಗಿ ಚೌಕವನ್ನು ಎಳೆಯುತ್ತಿದ್ದೀರಿ?
- ಲಂಬ ರೇಖೆ ಎಂದರೇನು?
- ಚೌಕವನ್ನು ರಚಿಸಲು, ನಾವು ಲಂಬ ರೇಖೆಗಳನ್ನು ಏಕೆ ರಚಿಸುತ್ತಿದ್ದೇವೆ?
- ವೃತ್ತವನ್ನು ಎಳೆಯುವ ಉದ್ದೇಶವೇನು?
- ಚೌಕದ ನಾಲ್ಕನೆಯ ಶೃಂಗವನ್ನು ನಾವು ಹೇಗೆ ನಿರ್ಧರಿಸುತ್ತೇವೆ?
ಮೌಲ್ಯ ನಿರ್ಣಯ ಪ್ರಶ್ನೆಗಳು
- ಲಂಬ ರೇಖೆಗಳು ಯಾವುವು?
- ವೃತ್ತವನ್ನು ಏಕೆ ಎಳೆಯಲಾಗುತ್ತಿದೆ? ಇದು ಯಾವ ಉದ್ದೇಶವನ್ನು ಪರಿಹರಿಸುತ್ತದೆ?
ಪ್ರಶ್ನೆ ಕಾರ್ನರ್
- ಕೋನಮಾಪಕ ಬಳಸದೆ ಚೌಕವನ್ನು ನಿರ್ಮಿಸಬಹುದೇ?