ಪ್ರವೇಶದ್ವಾರ:ವಿಜ್ಞಾನ/ಪೀಠಿಕೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ವಿಜ್ಞಾನ, ನಮಗೆ ಇಂದು ತಿಳಿದಿರುವ ಹಾಗೆ ಒಂದು ಜ್ಞಾನದ ಭಂಢಾರ, ಬಹಳ ನವೀನವಾದದ್ದು, ಕೇವಲ ಕೆಲವು ನೂರು ವರ್ಷ ಹಳೆಯದು. ನಮಗೆ ತಿಳಿದಿರುವ ವಿಜ್ಞಾನ, ನಮ್ಮ ದೈನಂದಿನ ಜೀವನದ ಸತ್ಯ ಮತ್ತು ವಿವರಣೆಗಳಿಗೆ ಸಂಬಂಧಿಸಿದೆ. ಯಾವ ವಿಧದಲ್ಲಿ ವಿಜ್ಞಾನ ಒಂದು ಪ್ರಕ್ರಿಯೆ ಆಗಿದೆ ಎಂದು ಪರಿಶೀಲಿಸಬೇಕಾಗಿದೆ. ವಿಜ್ಞಾನವು ವಿಭಿನ್ನವಾದ ಒಂದು ಪ್ರಯತ್ನ ಎನ್ನುವುದಕ್ಕೆ ವ್ಯಾಸಂಗ ಮತ್ತು ಅಭ್ಯಾಸದ ಆ ಅಂಶಗಳು ಯಾವುವು? ವಿಜ್ಞಾನದ ಅಭ್ಯಾಸದಲ್ಲಿ ಸಾಮಾಜಿಕ ಕ್ರಿಯಾ-ಶಾಸ್ತ್ರದ ಪರಿಣಾಮಗಳೇನು? ವಿಜ್ಞಾನದ ಮಿತಿಗಳೇನು? ಈ ಪ್ರಶ್ನೆಗಳನ್ನು ಒಬ್ಬ ವಿಜ್ಞಾನದ ವಿದ್ಯಾರ್ಥಿಯು ಪರಿಗಣಿಸಬೇಕಾಗುತ್ತದೆ. ಅನೇಕ ಬಾರಿ, ವಿಜ್ಞಾನವನ್ನು ಕಲಿಯುವುದೇ ಒಂದು ವಿಷಯ ಎಂದು ಅರ್ಥೈಸಿಕೊಳ್ಳಲಾಗುತ್ತದೆ ಮತ್ತು ಇದು ವಿಜ್ಞಾನದ ಕಲಿಕೆ ಮತ್ತು ಬೋಧನೆ, ಹಾಗೂ ವೈಜ್ಞಾನಿಕ ಚಿಂತನೆಯನ್ನು ಅಭಿವೃದ್ಧಿಪಡಿಸಲು ಮತ್ತು ವಿಜ್ಞಾನವನ್ನು ಮಾಡಲು ವಿದ್ಯಾರ್ಥಿಯನ್ನು ತಯಾರಿಸಲು ಅಳವಡಿಸಬೇಕಾದ ಶಿಕ್ಷಣಶಾಸ್ತ್ರವನ್ನು ಒಳಗೊಂಡಿರುತ್ತದೆ. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಈ ಎರಡು ಕ್ಷೇತ್ರಗಳಲ್ಲಿ ಸಂಪನ್ಮೂಲಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಹಂಚಿಕೊಳ್ಳಲು ಇದು ಒಂದು ಪ್ರವೇಶದ್ವಾರವಾಗಿದೆ .