ಗಾಳಿಪಟದ ವಿಸ್ತೀರ್ಣಕ್ಕೆ ಸೂತ್ರವನ್ನು ಪಡೆಯುವುದು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೬:೧೦, ೨೧ ಫೆಬ್ರುವರಿ ೨೦೨೨ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (added Category:ಚತುರ್ಭುಜಗಳು using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಅಂದಾಜು ಸಮಯ

30 ನಿಮಿಷಗಳು.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಲ್ಯಾಪ್‌ಟಾಪ್, ಜಿಯೋಜಿಬ್ರಾ ಫೈಲ್, ಪ್ರೊಜೆಕ್ಟರ್ ಮತ್ತು ಪಾಯಿಂಟರ್.

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ತ್ರಿಭುಜ ಮತ್ತು ಗಾಳಿಪಟದ ಮೂಲ ಅಂಶಗಳನ್ನು ತಿಳಿದಿರಬೇಕು.

ಬಹುಮಾಧ್ಯಮ ಸಂಪನ್ಮೂಲಗಳು

ವೆಬ್‌ಸೈಟ್ ಸಂವಾದಾತ್ಮಕ / ಲಿಂಕ್‌ಗಳು / / ಜಿಯೋಜಿಬ್ರಾ ಕಡತಗಳು

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  1. ಶಿಕ್ಷಕರು ಗಾಳಿಪಟದ ಜಿಯೋಜಿಬ್ರಾ ಕಡತವನ್ನು ಪ್ರಕ್ಷೇಪಿಸಬಹುದು.
  2. ಗಾಳಿಪಟವನ್ನು ಎರಡು ಸಮದ್ವಿಬಾಹು ತ್ರಿಭುಜಗಳಿಂದ ಮಾಡಲಾಗಿದೆ ಎಂದು ಅವರಿಗೆ ತೋರಿಸಿ.
  3. ಈ ಎರಡು ತ್ರಿಭುಜಗಳ ವಿಸ್ತೀರ್ಣಗಳ ಮೊತ್ತವು ಗಾಳಿಪಟದ ವಿಸ್ತೀರ್ಣವಾಗಿರುತ್ತದೆ.

ಅಭಿವೃದ್ಧಿ ಪ್ರಶ್ನೆಗಳು

  1. ಗಾಳಿಪಟ ಎಂದರೇನು?
  2. ಗಾಳಿಪಟದ ಗುಣಲಕ್ಷಣಗಳು ಯಾವುವು.
  3. ಗಾಳಿಪಟದಲ್ಲಿ ನೀವು ಇತರ ಯಾವ ರೇಖಾಚಿತ್ರಗಳನ್ನು ನೋಡಬಹುದು?
  4. ಇವು ಯಾವ ರೀತಿಯ ತ್ರಿಭುಜಗಳು?
  5. ಎರಡು ಸಮದ್ವಿಬಾಹು ತ್ರಿಭುಜಗಳನ್ನು ಗುರುತಿಸಬಹುದೇ?
  6. ತ್ರಿಭುಜದ ವಿಸ್ತೀರ್ಣವನ್ನು ಕಂಡುಹಿಡಿಯಲು ಸೂತ್ರ ಯಾವುದು?

ಮೌಲ್ಯ ನಿರ್ಣಯ ಪ್ರಶ್ನೆಗಳು

ತ್ರಿಭುಜದ 8 ವಿಧಗಳಲ್ಲಿ ಯಾವ ಎರಡು ತ್ರಿಭುಜಗಳನ್ನು ಆರಿಸಿಕೊಂಡರೆ ಗಾಳಿಪಟದ ವಿಸ್ತೀರ್ಣವನ್ನು ನಿರ್ಣಯಿಸುವುದು ಸುಲಭ?

ಪ್ರಶ್ನೆ ಕಾರ್ನರ್:

ತ್ರಿಭುಜದ ಜ ವಿಸ್ತೀರ್ಣವನ್ನು ಕಂಡುಹಿಡಿಯಲು ನಿಮಗೆ ತಿಳಿದಿರುವ ಎರಡು ಸೂತ್ರಗಳನ್ನು ನೆನಪಿಸಿಕೊಳ್ಳಿ.