ಪಾರ್ಶ್ವ ಕೋನಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೧:೩೭, ೨೪ ಜೂನ್ ೨೦೨೨ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (→‎ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)

ಪಾರ್ಶ್ವ ಕೋನಗಳು ಸಾಮಾನ್ಯ ಶೃಂಗ ಮತ್ತು ಸಾಮಾನ್ಯ ಬಾಹುವನ್ನು ಹೊಂದಿರುವ ಎರಡು ಕೋನಗಳಾಗಿವೆ. ಕೋನದ ಶೃಂಗವು ಕೋನಗಳ ಬಾಹುಗಳನ್ನು ರೂಪಿಸುವ ಕಿರಣಗಳ ಅಂತ್ಯ ಬಿಂದುವಾಗಿದೆ.

ಉದ್ದೇಶಗಳು

ಮಕ್ಕಳನ್ನು ಪಾರ್ಶ್ವ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ

ಅಂದಾಜು ಸಮಯ

೨೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ

ಬೇಕಾಗುವ ಸಂಪನ್ಮೂಲಗಳು

  • ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

  • ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನದ ರೂಪವನ್ನು ಗಮನಿಸಿ).
  • ಕೋನಗಳ ಅಳತೆಯನ್ನು ಬದಲಾಯಿಸಿ - ಕೋನ 1 ಮತ್ತು ಕೋನ 2 ರ ಜಾರುಕವನ್ನು ಬಳಸಿ
  • ಎರಡು ಕೋನಗಳು ಒಂದಕ್ಕೊಂದು ಪಕ್ಕದಲ್ಲಿದ್ದರೆ, ಏನು ರೂಪುಗೊಳ್ಳುತ್ತದೆ
  • ಕೋನಗಳನ್ನು ಪರಸ್ಪರ ಪಕ್ಕದಲ್ಲಿ ಇರಿಸಲು ಜಾರುಕವನ್ನು ಬಳಸಿ
  • ಎರಡು ಕೋನಗಳಿಂದಾಗಿ ರೂಪುಗೊಳ್ಳುವ ಕೋನ ಯಾವುದು?
  • ಎರಡನ್ನು ಪರಸ್ಪರ ಇರಿಸಿದಾಗ ರೂಪುಗೊಂಡ ಕೋನದ ಅಳತೆ ಏನು?
  • ಎರಡು ಕೋನಗಳನ್ನು ಪಾರ್ಶ್ವವಾಗಿ ಮಾಡಲು ಬೇರೆ ಯಾವುದದರೊ ಮಾರ್ಗವಿದೆಯೇ?
  • ಎರಡು ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ಕಾರ್ಯಪ್ರತಿಯಲ್ಲಿ (ವರ್ಕ್‌ಶೀಟ್‌ನಲ್ಲಿ) ಪಟ್ಟಿ ಮಾಡಿ
ಕ್ರಮ

ಸಂಖ್ಯೆ

ಕೋನ ABC ಕೋನ DEF ಕೋನ ABC + ಕೋನ DEF ಕೋನ O ಕೋನ O ಗಿಂತ ಎರಡು ಕೋನಗಳ ಮೊತ್ತವು ದೊಡ್ಡದಾಗಿದೆಯೇ?

ಮೌಲ್ಯ ನಿರ್ಣಯ ಪ್ರಶ್ನೆಗಳು

ಪಾರ್ಶ್ವ ಕೋನಗಳೇಂದರೇನು?