ಆಲಿಸುವಿಕೆಗಾಗಿ ಸಂಪೂರ್ಣ ದೈಹಿಕ ಪ್ರತಿಕ್ರಿಯೆ (TPR) ಚಟುವಟಿಕೆಗಳು.

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಂಪೂರ್ಣ ದೈಹಿಕ ಪ್ರತಿಕ್ರಿಯೆ (TPR) ಎಂದರೆ ಏನು?

1960ರ ದಶಕದಲ್ಲಿ ಡಾ. ಜೇಮ್ಸ್ ಆಸ್ಟರ್ ರಚಿಸಿದ ಭಾಷಾ ಬೋಧನಾ ವಿಧಾನವೇ ಸಂಪೂರ್ಣ ದೈಹಿಕ ಪ್ರತಿಕ್ರಿಯೆ (TPR). ಇದು ಭಾಷಾ ಕಲಿಕೆಯನ್ನು ದೈಹಿಕ ಚಲನೆಗಳೊಂದಿಗೆ ಸಂಯೋಜಿಸುತ್ತದೆ. TPR ನಲ್ಲಿ ಶಿಕ್ಷಕರು ತಾವು ಕಲಿಸುತ್ತಿರುವ ಭಾಷೆಯಲ್ಲಿ ಆಜ್ಞೆಗಳನ್ನು ನೀಡುತ್ತಾರೆ ಮತ್ತು ವಿದ್ಯಾರ್ಥಿಗಳು ಆ ಆಜ್ಞೆಗಳಿಗೆ ಅನುಗುಣವಾದ ದೈಹಿಕ ಚಲನೆಗಳೊಂದಿಗೆ ಪ್ರತಿಕ್ರಿಯಿಸುತ್ತಾರೆ. TPR ನ ಮುಖ್ಯ ಕಲ್ಪನೆಗಳೆಂದರೆ:

  1. ಹೆಚ್ಚು ನೀವು ಏನನ್ನಾದರೂ ಅಭ್ಯಾಸ ಮಾಡಿದಷ್ಟೂ, ಅದನ್ನು ನೀವು ಉತ್ತಮವಾಗಿ ನೆನಪಿಟ್ಟುಕೊಳ್ಳಬಹುದು.
  2. ದೈಹಿಕ ಕ್ರಮಗಳು ಭಾಷೆಯನ್ನು ಕಲಿಯಲು ಮೆದುಳನ್ನು ಸಿದ್ಧಪಡಿಸಲು ಸಹಾಯ ಮಾಡುತ್ತವೆ.
  3. ಆನಂದದಾಯಕ ಮತ್ತು ಆರಾಮದಾಯಕ ಕಲಿಕಾ ವಾತಾವರಣವು ವಿದ್ಯಾರ್ಥಿಗಳಿಗೆ ಉತ್ತಮ ಕಲಿಕೆಗೆ ಸಹಾಯ ಮಾಡುತ್ತದೆ.

TPR ತರಗತಿಯಲ್ಲಿ ಶಿಕ್ಷಕರು ಕಲಿಸಲು ನಿರ್ಧರಿಸಿದ ಭಾಷೆಯಲ್ಲಿ ಮಾತನಾಡುತ್ತಾರೆ ಮತ್ತು ವಿದ್ಯಾರ್ಥಿಗಳು ಕ್ರಿಯೆಗಳ ಮೂಲಕ ಪ್ರತಿಕ್ರಿಯಿಸುತ್ತಾರೆ. ಈ ವಿಧಾನವು ಹೊಸದಾಗಿ ಕಲಿಯುವವರಿಗೆ ಉಪಯುಕ್ತವಾಗಿದೆ ಏಕೆಂದರೆ ಇದು ಅವರ ಆಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು, ಸೂಚನೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಭಾಷೆಯನ್ನು ಮಾತನಾಡಲು ಪ್ರಾರಂಭಿಸುವ ಮೊದಲು ಅದಕ್ಕೆ ಪ್ರತಿಕ್ರಿಯಿಸಲು ಸಹಾಯ ಮಾಡುತ್ತದೆ.

ಆಲಿಸುವ ಕೌಶಲ್ಯಗಳನ್ನು ವೃದ್ದಿಸಲು TPR ಚಟುವಟಿಕೆಗಳನ್ನು ಏಕೆ ಬಳಸಬೇಕು?

  1. TPR ಚಟುವಟಿಕೆಗಳು ಆಲಿಸುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಹಲವಾರು ಪ್ರಯೋಜನಗಳನ್ನು ನೀಡಬಹುದು:
  2. TPR ಚಟುವಟಿಕೆಗಳು ವಿದ್ಯಾರ್ಥಿಗಳನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ ಅಲ್ಲದೇ ಕಲಿಕೆಯನ್ನು ವಿನೋದ ಮತ್ತು ಸ್ಮರಣೀಯವಾಗಿಸುತ್ತದೆ. ಇದು ದೊಡ್ಡ ತರಗತಿಗಳಲ್ಲಿ ಗಮನವನ್ನು ಇರಿಸಲು ಸಹಾಯ ಮಾಡುತ್ತದೆ.
  3. ವಿದ್ಯಾರ್ಥಿಗಳು ಪದಗಳ ಬದಲಿಗೆ ಕ್ರಿಯೆಗಳೊಂದಿಗೆ ಪ್ರತಿಕ್ರಿಯಿಸುತ್ತಾರೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೊಸ ಭಾಷೆಯನ್ನು ಕಲಿಯುವ ಬಗ್ಗೆ ಆತಂಕವನ್ನು ಕಡಿಮೆ ಮಾಡುತ್ತದೆ.
  4. TPR ಚಟುವಟಿಕೆಗಳು ಕೇಳಿಸಿಕೊಳ್ಳುವಿಕೆ, ನೋಡುವಿಕೆ ಮತ್ತು ಚಲಿಸುವಿಕೆಯನ್ನು ಬಳಸಿಕೊಳ್ಳುತ್ತದೆ. ವಿಭಿನ್ನ ಕಲಿಕಾ ಶೈಲಿಗಳನ್ನು ಒದಗಿಸುತ್ತದೆ ಮತ್ತು ವಿವಿಧ ಇಂದ್ರಿಯಗಳ ಮೂಲಕ ಭಾಷೆಯನ್ನು ಬಲಪಡಿಸುತ್ತವೆ.
  5. ವಿದ್ಯಾರ್ಥಿಗಳು ಅರ್ಥೈಸಿಕೊಂಡಿದ್ದಾರೆಯೇ ಎಂಬುದನ್ನ ವಿದ್ಯಾರ್ಥಿಗಳ ಕ್ರಿಯೆಗಳನ್ನು ವೀಕ್ಷಿಸುವ ಮೂಲಕ ಔಪಚಾರಿಕ ಪರೀಕ್ಷೆ ನೀಡದೆಯೇ ಶಿಕ್ಷಕರು ತ್ವರಿತ ಪ್ರತಿಕ್ರಿಯೆ ನೀಡಬಹುದು.
  6. TPR ಚಟುವಟಿಕೆಗಳಿಗೆ ಕನಿಷ್ಠ ಸಂಪನ್ಮೂಲಗಳು ಅಗತ್ಯವಿದ್ದು ಸೀಮಿತ ಸಾಮಗ್ರಿಗಳು ಅಥವಾ ತಂತ್ರಜ್ಞಾನದೊಂದಿಗೆ ಸುಲಭವಾಗಿ ನಡೆಸಬಹುದು.
  7. ಒಂದೇ ತರಗತಿಯಲ್ಲಿನ ವಿವಿಧ ಭಾಷೆಯ ಹಂತಗಳಲ್ಲಿ ವಿದ್ಯಾರ್ಥಿಗಳಿಗೆ TPR ಚಟುವಟಿಕೆಗಳನ್ನು ಹೊಂದಿಸಬಹುದು.
  8. ಪದಗಳನ್ನು ಕ್ರಿಯೆಗಳಿಗೆ ಹೊಂದಿಕೆ ಮಾಡುವ ಮೂಲಕ TPR ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ಶಬ್ದಕೋಶ ಮತ್ತು ವ್ಯಾಕರಣವನ್ನು ಉತ್ತಮವಾಗಿ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆಯಲ್ಲದೇ ದೀರ್ಘಾವಧಿಯಲ್ಲಿ ಭಾಷೆಯನ್ನು ಸ್ವಾಧೀನ ಪಡಿಸಿಕೊಳ್ಳಲು ಸಹಾಯ ಮಾಡುತ್ತದೆ.

ಆಲಿಸುವಿಕೆಗಾಗಿ TPR ಚಟುವಟಿಕೆಗಳ ಉದಾಹರಣೆಗಳು.

ಕೆಳಗಿನ ಚಟುವಟಿಕೆಗಳನ್ನು ವಿವಿಧ ಪ್ರಾವೀಣ್ಯತೆ ಮಟ್ಟಗಳು ಮತ್ತು ತರಗತಿಯ ಸಂದರ್ಭಗಳಿಗೆ ಸರಿಹೊಂದುವಂತೆ ಅಳವಡಿಸಿಕೊಳ್ಳಬಹುದು. TPR ವಿಧಾನದೊಂದಿಗೆ ವಿದ್ಯಾರ್ಥಿಗಳು ಹೆಚ್ಚು ಆರಾಮದಾಯಕವಾಗುವಂತೆ ಸರಳ ಆಜ್ಞೆಗಳೊಂದಿಗೆ ಪ್ರಾರಂಭಿಸಲು ಮತ್ತು ಕ್ರಮೇಣ ಸಂಕೀರ್ಣತೆಯನ್ನು ಹೆಚ್ಚಿಸಲು ಮರೆಯದಿರಿ.

ಕ್ರ.ಸಂ ಚಟುವಟಿಕೆಯ ಹೆಸರು ಚಟುವಟಿಕೆಯ ವಿವರಣೆ ಮಾದರಿ
1 ಸೈಮನ್/ಸಲ್ಮಾ ಹೇಳುತ್ತಾರೆ. "ಸೈಮನ್/ ಸಲ್ಮಾ ಹೇಳುತ್ತಾರೆ" ಎಂದು ಹೇಳಿದ ನಂತರ ನೀಡುವ ಸೂಚನೆಗಳನ್ನು ಮಾತ್ರ ವಿದ್ಯಾರ್ಥಿಗಳು ಅನುಸರಿಸುವ ಕ್ಲಾಸಿಕ್ TPR ಆಟ. ಉದಾ: "ಸಲ್ಮಾ ಹೇಳ್ತಾರೆ ನಿಮ್ಮ ಮೂಗು ಮುಟ್ಟಿ " "ಸಲ್ಮಾ ಹೇಳ್ತಾರೆ ಕೈ ಮೇಲೆತ್ತಿ" "ಒಂದು ಬಾರಿ ಚಪ್ಪಾಳೆ ತಟ್ಟಿ" (ವಿದ್ಯಾರ್ಥಿಗಳು ಇದಕ್ಕೆ ಪ್ರತಿಕ್ರಿಯಿಸಬಾರದು).
2 ಕ್ರಿಯಾತ್ಮಕ ಹಾಡು ಆಲಿಸುವಿಕೆಯೊಂದಿಗೆ ದೈಹಿಕ ಕ್ರಿಯೆಗಳನ್ನು ಒಳಗೊಂಡಿರುವ ಹಾಡನ್ನು ಬಳಸುವುದು. ಉದಾ: “ಹುಬ್ಬಳ್ಳಿಯ ನಿಂಗವ್ವ, ಕೊಪ್ಪಳಕ್ಕೆ ಬಂದಾಳ, ಕೈಗೆ ಬಳೆ ಹಾಕ್ಯಾಳ ಹೀಂಗ್ ಹೀಂಗ್ ತೋರ್ಸ್ಯಾಳೆ, ಹಿಂಗೂ ಹಿಂಗೂ ಹಿಂಗೂ ತೋರ್ಸ್ಯಾಳೆ”
3 ಕ್ರಿಯಾಧಾರಿತ ಕಥೆ ಸರಳವಾದ ಕಥೆಯನ್ನು ಹೇಳುವುದು ಕಥೆಯಲ್ಲಿ ಬರುವ ಕ್ರಿಯೆಗಳನ್ನು ವಿದ್ಯಾರ್ಥಿಗಳು ನಿರ್ವಹಿಸುವಂತೆ ಸೂಚಿಸುವುದು. ಉದಾ: "ಹುಡುಗನು ಉದ್ಯಾನವನಕ್ಕೆ ನಡೆದನು (ವಿದ್ಯಾರ್ಥಿಗಳು ಸ್ಥಳದಲ್ಲಿ ನಡೆಯುತ್ತಾರೆ). ಅವನು

ನಾಯಿಯನ್ನು ನೋಡಿ ಗಾಬರಿಯಾದನು (ನಾಯಿಯನ್ನು ನೋಡಿ ಗಾಬರಿಯಾದಂತೆ ನಟಿಸುತ್ತಾರೆ). ನಾಯಿಯು ಜೋರಾಗಿ ಬೊಗಳಿತು (ಬೊಗಳುವ ಸನ್ನೆಗಳನ್ನು ಮಾಡುತ್ತಾರೆ)."

4 ಸೂಚನೆಗಳನ್ನು ಪಾಲಿಸುವುದು ವಿದ್ಯಾರ್ಥಿಗಳು ಅನುಸರಿಸಲು ಸೂಚನೆಗಳ ಸರಣಿಯನ್ನು ನೀಡುವುದು. ಉದಾ:"ಬಾಗಿಲ ಕಡೆಗೆ ನಡೆಯಿರಿ" "ಹಿಂದಕ್ಕೆ ತಿರುಗಿ" “ನಿಮ್ಮ ಬಲಕ್ಕೆ ತಿರುಗಿ" “ಪೂರ್ವ ದಿಕ್ಕಿಗೆ ಮುಖಮಾಡಿ" "ನಿಮ್ಮ ಆಸನಕ್ಕೆ ಹಿಂತಿರುಗಿ” “ಬಲಗೈ ಮೇಲೆ ಮಾಡಿ” “ಎಡಕ್ಕೆ ತಿರುಗಿ” “ಜಿಗಿಯಿರಿ”
5 TPR ಟೆಲಿಫೋನ್ ವಿದ್ಯಾರ್ಥಿಗಳು ಅನುಸರಿಸಲು ನಿರ್ದೇಶನಗಳನ್ನು

ನೀಡುವುದು.

ಉದಾ: ಎಲ್ಲರೂ ಒಂದು ಸಾಲಿನಲ್ಲಿ ಹಿಂತಿರುಗಿ ನಿಲ್ಲುತ್ತಾರೆ. ಮೊದಲವನಿಗೆ ಮಾತ್ರ ಕಾಣುವಂತೆ ಕ್ರಿಯೆಯನ್ನು ತೋರಿಸುವುದು. ನಂತರದವನಿಗೆ ಕ್ರಿಯೆಯನ್ನ ತೋರಿಸಿಸುವುದು ಆತ ಕ್ರಿಯೆಗಳನ್ನು ವೀಕ್ಷಿಸಿ ಪುನರಾವರ್ತಿಸುತ್ತಾನೆ. ಹೀಗೆ ಎಲ್ಲರೂ ಮಾಡಿ ಕೊನೆ ಕ್ರಿಯೆಯನ್ನುಹೋಲಿಕೆ ಮಾಡುವುದು.

ಸಂಬಂದಿತ ಪುಟಗಳು ಮತ್ತು ಚಟುವಟಿಕೆಗಳು.