ಎರಡನೇ ದಿನದ ವರದಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
  1. ದಿನಾಂಕ ೧೭-೭-೨೦೧೪ ರಂದು ಶ್ರೀಮತಿ ರಾಧಾ , ಐಟಿ ಫಾರ್ change ಇವರು ಶಿಕ್ಷಕರನ್ನು ತರಬೇತಿಗೆ ಸ್ವಾಗತಿಸಿ ಪ್ರಾರಂಭಿಸಿದರು ೧೦ನೇ ತರಗತಿಯ ಸಮಾಜ ವಿಜ್ಞಾನದ ಪಠ್ಯ ಪುಸ್ತಕದಿಂದ ಆಯ್ದೆಕೊಂಡ ವಿಷಯಗಳಿಗೆ ಸಿದ್ಧಪಡಿಸಿಕೊಂಡ ಪರಿಕಲ್ಪನೆಗಳ ಮಂಡನೆ ಹಾಗೂ ಅವುಗಳ ಕುರಿತು ಚರ್ಚೆ ನಡೆಸಲಾಯಿತು. ನಂತರ ಶಿಕ್ಷಕರು ಅವರವರ ವಿಷಯಕ್ಕೆ ಅನುಗುಣವಾಗಿ ವೆಬ್ ಲಿಂಕ್ ಗಳನ್ನು ಹುಡುಕಿ ಸಂಪನ್ಮೂಲ ಗಳನ್ನು ಹಾಗೂ ಮೈಂಡ್ ಮ್ಯಾಪ್ ನ್ನು ರಚಿಸಿಕೊಂಡರು .
  2. ಮಧ್ಯಾಹ್ನದ ಅವಧಿಯನ್ನು ವೆಂಕಟೇಶ್, ಐ.ಟಿ ಫಾರ್ change ರವರು ಡಿಜಿಟಲ್ ಕಥೆ ಹೇಳುವುದರೊಂದಿಗೆ ಪ್ರಾರಂಭಿಸಿದರು ಹಾಗೂ ಯಾದಗಿರಿ ಜಿಲ್ಲೆಯ ಶಾಲೆಯೊಂದರಲ್ಲಿ ಮ್ಯಾಪಿಗ್ ಮಾಡಿರುವುದರ ಬಗ್ಗೆ ವೀಡಿಯೋ ತೋರಿಸಿ ಪ್ರಾತ್ಯಕ್ಷಿಕೆ ನೀಡಿದರು. ರಾಕೇಶ್ , ಐ.ಟಿ ಫಾರ್ change ಇವರು you tube ಬಳಕೆ ಮಾಡುವುದು ಹಾಗೂ open short vidio editing ಮಾಡುವುದನ್ನು ತೋರಿಸಿದರು , ಎಲ್ಲಾ ಶಿಕ್ಷಕರು ಪ್ರಾಯೋಗಿಕ ವಾಗಿ ಅಭ್ಯಾಸ ಮಾಡಿದರು . ಈ ಅವಧಿಯಲ್ಲಿ ಡಿ.ಎಸ್.ಆರ್.ಟಿಯ ಸಹ ನಿರ್ದೇಶಕರಾದ ಶ್ರೀಮತಿ ಚಂದ್ರಮ್ಮ ಮೇಡಂರವರು ತರಬೇತಿಗೆ ಆಗಮನಿಸಿ ತರಬೇತಿಯ ಬಗ್ಗೆ ಶಿಬಿರಾರ್ಥಿಗಳಿಂದ ಅಭಿಪ್ರಾಯಗಳನ್ನು ಪಡೆದುಕೊಂಡರು ನಂತರ ತಂತ್ರಜ್ಞಾನವನ್ನು ಶಾಲೆಯ ಕಲಿಕಾ ಪ್ರಕ್ರಿಯೆಯಲ್ಲಿ ಬಳಸಿಕೊಳ್ಳಬೇಕು ಇದು ಎಲ್ಲಾ ಶಿಕ್ಷಕರಿಗೂ ತಲುಪಬೇಕು, ಕೊಯರ್ ನಲ್ಲಿ ಸಿದ್ಧಪಡಿಸಲಾಗುತ್ತಿರುವ ಸಂಪನ್ಮೂಲವು ಎಲ್ಲಾ ರೀತಿಯಿಂದಲೂ ಶಿಕ್ಷಕರಿಗೆ ಹೆಚ್ಚಿನ ಜ್ಞಾನವನ್ನು ಕಲ್ಪಿಸಿಕೊಡುವಂತಿರಬೇಕು ಎಂದು ತಿಳಿಸಿದರು.

ನಂತರ ಶಿಬಿರಾರ್ಥಿಗಳು ತಮ್ಮ ಮೆಂಡ್ ಮ್ಯಾಪ್ ಗೆ ಸಂಬಂಧಿಸಿದಂತೆ ಸಂಪನ್ಮೂಲವನ್ನು ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದರು ನಂತರ ೬ ಗಂಟೆಗೆ ತರಬೇತಿಯನ್ನು ಮುಕ್ತಾಯಗೊಳಿಸಲಾಯಿತು.

ಜಯಶ್ರೀ ಹೆಗಡೆ, ಸಹ ಶಿಕ್ಷಕರು, ಸ.ಪ್ರೌ.ಶಾಲೆ, ಗುಂಜೂರು