ಚತುರ್ಭುಜಗಳ ವೆನ್ ರೇಖಾಚಿತ್ರಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚತುರ್ಭುಜಗಳನ್ನು ಅವುಗಳ ಗುಣಲಕ್ಷಣಗಳ ಆಧಾರದ ಮೇಲೆ ವರ್ಗೀಕರಿಸುವುದು ಮತ್ತು ಸಂಬಂಧಿತ ಚತುರ್ಭುಜಗಳನ್ನು ವೆನ್-ರೇಖಾಚಿತ್ರದೊಂದಿಗೆ ಗುರುತಿಸುವುದು

ಉದ್ದೇಶಗಳು

  1. ವಿಭಿನ್ನ ಚತುರ್ಭುಜಗಳನ್ನು ಗುರುತಿಸಲು
  2. ಒಂದೇ ರೀತಿಯ ಗುಣಲಕ್ಷಣಗಳನ್ನು ಹೊಂದಿರುವ ಚತುರ್ಭುಜಗಳನ್ನು ಗುರುತಿಸಲು

ಅಂದಾಜು ಸಮಯ

40 ನಿಮಿಷಗಳು.

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್ ಅಲ್ಲದ: ಪೇಪರ್, ಪೆನ್ಸಿಲ್.

Digital:https://pantherfile.uwm.edu/ancel/www/MATH%20277%20FALL%202013/LESSONS/UNIT%203/277.16.pdf

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ

ವಿದ್ಯಾರ್ಥಿಗಳಿಗೆ ಚತುರ್ಭುಜ ಮತ್ತು ಅವುಗಳ ಗುಣಲಕ್ಷಣಗಳನ್ನು ಹಾಗೂ ವಿಧಗಳನ್ನು ಪರಿಚಯಿಸಿರಬೇಕು.

ಬಹುಮಾಧ್ಯಮ ಸಂಪನ್ಮೂಲಗಳು

https://karnatakaeducation.org.in/KOER/en/index.php/File:Types_of_quadrilaterals_activity.jpeg

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

  1. ಮೇಲಿನ ವೆನ್ ರೇಖಾಚಿತ್ರದಲ್ಲಿ 6 ಪ್ರದೇಶಗಳಿವೆ.
  2. ಶಿಕ್ಷಕರು ಚಟುವಟಿಕೆಯನ್ನು ಸರಾಗಗೊಳಿಸಲು ಆರಂಭಿಕ ಸುತ್ತಿನಲ್ಲಿ ಹಿಂದಿನ ತರಗತಿಗೆ ಸಂಬಂಧಿಸಿದಂತೆ ಉದಾ ಸಮಾಂತರ ಚತುರ್ಭುಜವು ಆಯತವಾಗಿರುತ್ತದೆ ಕೆಲವು ಲಕ್ಷಣಗಳು ಇದ್ದರೆ ಮಾತ್ರ ........ ಹೀಗೆ ಮೌಖಿಕ ಚರ್ಚೆಯನ್ನು ನಡೆಸಬಹುದು.
  3. ಪ್ರತಿ ಚತುರ್ಭುಜವು ಗಾಳಿಪಟವಾಗಿದ್ದರೆ .........
  4. ಆಯತಗಳು, ಚೌಕಗಳು ಮತ್ತು ವಜ್ರಾಕೃತಿ ಎಲ್ಲವೂ .........
  5. ಒಂದು ಚೌಕವು ಒಂದು ವಿಶೇಷ ವಿಧವಾಗಿದೆ ..............
  6. ವಿದ್ಯಾರ್ಥಿಗಳು ಸಾಕಷ್ಟು ಆರಾಮದಾಯಕವಾಗಿದ್ದಾಗ, ಗುಣಲಕ್ಷಣಗಳಿಗೆ ಅನುಗುಣವಾಗಿ ವೆನ್ ರೇಖಾಚಿತ್ರದ ಸೂಕ್ತ ಸ್ಥಳಗಳಲ್ಲಿ ವಿವಿಧ ರೀತಿಯ ಚತುರ್ಭುಜಗಳನ್ನು ಗುಂಪು ಮಾಡಲು ವಿದ್ಯಾರ್ಥಿಗಳನ್ನು ಶಿಕ್ಷಕರು ಕೇಳಬಹುದು .
  7. ಎಲ್ಲಾ ಗುಂಪುಗಳು ಚಟುವಟಿಕೆಯನ್ನು ಪೂರ್ಣಗೊಳಿಸಿದ ನಂತರ ಶಿಕ್ಷಕರು ಕಪ್ಪು ಹಲಗೆಯಲ್ಲಿ ಪ್ರಸ್ತುತಪಡಿಸಲು ಮತ್ತು ಸ್ಪಷ್ಟಪಡಿಸಲು ವಿದ್ಯಾರ್ಥಿಗಳನ್ನು ಕೇಳಬಹುದು.

ಅಭಿವೃದ್ಧಿ ಪ್ರಶ್ನೆಗಳು:

  • ಗುಂಪಿನಲ್ಲಿ ಗುಣಲಕ್ಷಣಗಳನ್ನು ಚರ್ಚಿಸಲು ಮತ್ತು ವೆನ್ ರೇಖಾಚಿತ್ರವನ್ನು ಮಾಡಲು ವಿದ್ಯಾರ್ಥಿಗಳನ್ನು ಕೇಳಿ.

ಮೌಲ್ಯ ನಿರ್ಣಯ ಪ್ರಶ್ನೆಗಳು

  • ಸಾರ್ವತ್ರಿಕ ಗಣವನ್ನು ಇಲ್ಲಿ ಹೆಸರಿಸಿ.
  • ಎಲ್ಲಾ ಉಪಗಣಗಳನ್ನು ಹೆಸರಿಸಿ.

ಪ್ರಶ್ನೆ ಕಾರ್ನರ್

  • ಚತುರ್ಭುಜಗಳ ವಿಧಗಳ ಪ್ಲೋ(flow) ಚಾರ್ಟ್ ರಚಿಸಿ.