ಚಿಗುರು-೮-ಹದಿಹರೆಯದ ವ್ಯಾಖ್ಯಾನ ಭಾಗ -೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಾರಾಂಶ

ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್‌ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಳ್ಳುತ್ತಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ.

ಊಹೆಗಳು

• ಅವರಲ್ಲಿ ತುಂಬಾ ಜನ (ಸುಮಾರು೨೦-೨೫) ಗೈರು ಹಾಜರಿಯಾಗಿರುತ್ತಾರೆ.

• ಹಿಂದು ಹಾಗು ಮುಸ್ಲಿಮ್ ಕಿಶೋರಿಯರ ಮಧ್ಯೆ ಗೋಡೆಯಿದೆ

• ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಕಿಶೋರಿಯರ ಮಧ್ಯೆ ಗೋಡೆಯಿದೆ

• ನಮ್ಮ ಕಟ್ಟುಪಾಡುಗಳನ್ನು ಇನ್ನೂ ಸರಿಯಾಗಿ ಪಾಲಿಸುತ್ತಿಲ್ಲ.

• ಬೇಸಿಕ್ ಲಿಟರಸಿ ಕಲಿಸುವ ಅಗತ್ಯವಿದೆ.  

• ಕೆಲವು ಕಿಶೋರಿಯರು ಒಟ್ಟು ಸೇರಿದಾಗ ಗಲಾಟೆ ಮಾಡುತ್ತಾರೆ ಅದರಿಂದ ನಮ್ಮ ಸೆಷನ್ ಗೆ ತೊಂದರೆಯಾಗುತ್ತದೆ. ಅವರನ್ನು ಬೇರೆ ಬೇರೆ ಕೂರಿಸಬಹುದೇನೊ.

• ಹಿಂದಿನ ಸೆಷನ್ನಲ್ಲಿ ಕಿಶೋರಿಯರು ಸಮಸ್ಯೆಗಳು ನಮ್ಮೊಬ್ಬರಿಗೇ ಅಲ್ಲ ಎಲ್ಲರಿಗೂ ಸಾಮಾನ್ಯವಾಗಿವೆ ಎಂದು ಹೇಳಿದ್ದಾರೆ.

• ಸಾಮಾನ್ಯವಾಗಿ ನಮಗೆ ಇಲ್ಲಿ ೫೦ ನಿಮಿಷಗಳು ಮಾತ್ರ ಸಿಗುತ್ತವೆ. ಸರಿಯಾದ ಸಮಯಕ್ಕೆ ಪ್ರಾರಂಭಿಸದಿದ್ದರೆ ನಮಗೆ ಇನ್ನೂ ಕಡಿಮೆ ಸಮಯ ಸಿಗುತ್ತದೆ.

ಉದ್ದೇಶ

ಕಿಶೋರಾವಸ್ಥೆಯ ಪರಿಚಯ ಮತ್ತು ವ್ಯಾಖ್ಯಾನವನ್ನು ಆರಂಭಿಸುವುದು

ಪ್ರಕ್ರಿಯೆ

ಕಿಶೋರಿಯರ ಕುಶಲೋಪರಿಯನ್ನು ವಿಚಾರಿಸುವ ಮೂಲಕ  ಮಾತುಕಥೆಯನ್ನು ಆರಂಭಿಸುವುದು.

ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುವುದು. (೧೦ ನಿಮಿಷ)

ಕಿಶೋರಿಯರಿಗಾಗಿ ತಯಾರಿಸಿದ ಆಡಿಯೋ ಕಥೆಗಳನ್ನು ಅವರಿಗೆ ಕೇಳಿಸುವುದು. ಆಡಿಯೋ ಕಥೆಯನ್ನು ಈ ಕೆಳಗಿನ ಲಿಂಕ್‌ಗಳಲ್ಲಿ ಆಲಿಸಬಹುದು. (೨೦ ನಿಮಿಷ)

ಆಡಿಯೋ ಕಥೆಗಳು

ಒಂದೊಂದು ಕಥೆಗಳನ್ನು ಕೇಳಿಸಿದ ನಂತರ, ಅವು ಹೇಗಿವೆ ಎಂದು ಕಿಶೋರಿಯರನ್ನು ಕೇಳುತ್ತೇವೆ. ಕಿಶೋರಿಯರ ಉತ್ತರಗಳನ್ನು ಬರೆದುಕೊಳ್ಳುತ್ತೇವೆ.

ಎಲ್ಲಾ ಕಥೆಗಳನ್ನು ಕೇಳಿದ ನಂತರ - ಯಾವುದು ನಿಮ್ಮ ನೆಚ್ಚಿನ ಕಥೆ? ಯಾವುದು ಇಷ್ಟ ಆಗಲಿಲ್ಲ? ಯಾಕೆ? ಇತ್ಯಾದಿಯಾಗಿ ಕಿಶೋರಿಯರನ್ನು ಕೇಳುತ್ತೇವೆ.   

ಒಬ್ಬೊಬ್ಬರು ಒಂದೊಂದು ಕಥೆ ಬಗ್ಗೆ  ಹೇಳುತ್ತಾರೆ ಎಂದು ಅಂದುಕೊಳ್ಳಬಹುದು. ಎಲ್ಲಾ ವಿಷಯಗಳ ಬಗ್ಗೆ ಮಾತುಕತೆ ಆಗಿಲ್ಲ ಅಂದರೆ, ‘ಇನ್ನೇನು ಕಥೆಗಳಿದ್ದವು?’ ಎಂದು ಕೇಳುವುದು.

ಕಿಶೋರಿಯರು ಏನೂ ಮಾತನಾಡದೇ ಇದ್ದಲ್ಲಿ ಈ ಕೆಳಗಿನ ಉದಾಹರಣೆಗಳನ್ನು ಬಳಸಿಕೊಂಡು ಮಾತುಕಥೆಯನ್ನು ಮುಂದುವರಿಸಿಕೊಂಡು ಹೋಗಬಹುದು.

"ಚಿಕ್ಕ ಹುಡುಗಿ ಕಥೆಯಲ್ಲಿ ಏನಾಗುತ್ತೆ?” ಎಂದು ಕೇಳಿದರೆ ಕಿಶೋರಿಯರು ಕಥೆ ಬಗ್ಗೆ ಮಾತನಾಡಬಹುದು.

"ಕಿಶೋರಿಯರಿಬ್ಬರೂ ಒಂದೇ ಕ್ಲಾಸ್‌, ಒಂದೇ ವಯಸ್ಸಿನೋರು ಅಂತ ಅನ್ಸುತ್ತಲ್ವಾ?” ಎಂದು ಕೇಳಿದರೆ ಕಿಶೋರಿಯರು 'ಇರಬಹುದು' ಎಂದು ಹೇಳಬಹುದು.

"ಹಾಗಿದ್ದಾಗ ದೊಡ್ಡೋರು ಚಿಕ್ಕೋರು ಅಂತ ಯಾಕೆ ಮಾತಾಡ್ಕೋತಿದಾರೆ? ಮತ್ತೆ ಇದಕ್ಕೂ ಹೊಟ್ಟೆ ನೋವಿಗೂ ಏನು ಸಂಬಂಧ?”

ಇದಾದ ನಂತರ ಕಿಶೋರಿಯರಿಗೆ ಕಥೆಗಳಲ್ಲಿ ಬರುವ ಪಾತ್ರಗಳ ಜೊತೆ ಹೋಲಿಸಿಕೊಳ್ಳಲು ಹೇಳುವುದು.

"ಇದನ್ನೆಲ್ಲಾ ಕೇಳಿದಾಗ, ಯಾವ ಪಾತ್ರ ನೋಡಿದರೆ ನಿಮಗೂ ಈ ಥರ ಆಗಿದೆ ಅಂಥ ಅನಿಸುತ್ತೆ?” ಎಂದು ಕೇಳುವುದು. ಕಿಶೋರಿಯರು ಈ ಕೆಳಗಿನ ಅಂಶಗಳನ್ನು ಹೇಳಬಹುದು.

• ಚುಡಾಯಿಸುವುದು.

• ಬಸ್‌ ಕಂಡಕ್ಟರ್‌.

• ಮನೆಯಲ್ಲಿ ತಮ್ಮ / ಅಣ್ಣ ಕಾಟ ಕೊಡುತ್ತಾರೆ.

• ಹೊಟ್ಟೆ ನೋವು.

• ಗೆಳತಿಯರು ನಮ್ಮ ಬೆನ್ನ ಹಿಂದೆ ಮಾತನಾಡುತ್ತಾರೆ (೨೦ ನಿಮಿಷ)

ಅವರು ಹೇಳುವ ಅಂಶಗಳನ್ನು ಬರೆದುಕೊಂಡು , ಈ ವಾರದ ಮಾತುಕಥೆಯನ್ನು ಮುಗಿಸುವುದು.

ಬೇಕಾದ ಸಂಪನ್ಮೂಲಗಳು

◦ ಸ್ಪೀಕರ್‌

◦ ಪ್ರೊಜೆಕ್ಟರ್‌

◦ ಲ್ಯಾಪ್‌ಟಾಪ್‌

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩

ಒಬ್ಬ ಮುಖ್ಯ ಫೆಸಿಲಿಟೇಟರ್‌, ಒಬ್ಬರು ಕಂಪ್ಯೂಟರ್‌ ಬಳಸಲು, ಒಬ್ಬರು ಕಿಶೋರಿಯರು ಹೇಳಿದ ಅಂಶಗಳನ್ನು ಪಟ್ಟಿ ಮಾಡಿಕೊಳ್ಳಲು

ಒಟ್ಟು ಸಮಯ

೫೦  ನಿಮಿಷಗಳು

ಇನ್‌ಪುಟ್‌ಗಳು

• ಆಡಿಯೋ ಕಥೆಗಳು

ಔಟ್‌ಪುಟ್‌ಗಳು

ಕಿಶೋರಿಯರು ಹೇಳಿದ ಅಂಶಗಳ ಟಿಪ್ಪಣಿ.