ಜನಪದ ಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳು ಚಟುವಟಿಕೆ 1
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ ಹೆಸರು:ಜನಪದ ಗೀತೆಗಳಿಂದ ಚರಿತ್ರೆ ರಚನೆ
ಅಂದಾಜು ಸಮಯ
೨೦ ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
ಜನಪದ ಗೀತೆಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಜನಪದ ಗೀತೆಗಳನ್ನು ಹಾಡುವುದು ಮತ್ತು ಅರ್ಥಪೂರ್ಣವಾಗಿ ಓದುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಹೊಸ ಬಂಡಿಯ ಮೇಲೆ ಹಸುವಿನ ಗೊಬ್ಬರ ತಂದು
ಹಸಿದ ಭೂದೇವಿಗೆ ಹಾಕಿ | ಹಸಿದ
ಮಕ್ಕಳ ಕಾಯವ್ವ ನನ ತಂದೆಯೇ ||
ಕಸವ ಹೊಡೆಯುವ ಕೈ ಕಸ್ತೂರಿ ನಾತಾವ
ಬಸವಣ್ಣ ನಿನ್ನ ಸಗಣೀಯ ಬಳಿದ ಕೈ
ಎಸಳ ಯಾಲಕ್ಕಿ ಗೊನಿನಾತ
ಬಂಗಾರದ ಕೊಳಗ ಬಲಗೈಲಿ ತಕ್ಕೊಂಡು
ಬತ್ತ ಅಳೆದನೋ ಬಡವರಿಗೆ | ಅಣ್ಣಯ್ಯ
ರಾಶಿ ಅಳೆಯೋದು ಬೆಳಗಾದೊ
ಭೂಮಿ ಹುಟ್ಟಿದ ಮೊದಲು | ಭೂಮಿ ಕಟ್ಟಿದ ಮೊದಲು
ಭೂಪ ಹುಟ್ಟಿದ ಬಸವಯ್ಯ | ಮ್ಯಾಗಿನ
ಶಿವಗೇಳು ದಿನಕೆ ಹಿರಿಯನ
ಈ ಗೀತೆಗಳನ್ನು ಓದಿ ಅದರಲ್ಲಿ ಎಲ್ಲಾ ಗೀತೆಗಳಲ್ಲಿ ಯಾವ ವಿಷಯಕ್ಕೆ ಪ್ರಾಮುಖ್ಯತೆ ನೀಡಿದೆ?
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಈ ಜನಪದ ಗೀತೆಗಳು ಯಾವ ವಿಷಯ ಕುರಿತು ತಿಳಿಸುತ್ತವೆ?
- ಜನಪದ ಗೀತೆಗಳಲ್ಲಿ ಸೂಚಿಸಿರುವಂತೆ ರೈತನ ಕಾರ್ಯಗಳು ಯಾವುವು?
- ಜನಪದ ಗೀತೆಗಳಲ್ಲಿ ಕೃಷಿ ಮತ್ತು ರೈತನಿಗೆ ಪ್ರಾಮುಖ್ಯತೆ ನೀಡಲು ಕಾರಣವೇನು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಜನಪದ ಗೀತೆಗಳು ಜನಸಾಮಾನ್ಯರ ಚರಿತ್ರೆ ರಚನೆಯಲ್ಲಿ ಹೇಗೆ ಸಹಾಯಕವಾಗಿವೆ?
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಮೌಖಿಕ_ಚರಿತ್ರೆ