ಮಾರ್ಗಸೂಚಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

File:Guidlines For STF Workshop's 2014-15...odt

DSERT November 2014.

ಎಸ್.ಟಿ.ಎಪ್ ಮತ್ತು ಹೆಚ್.ಟಿ.ಎಪ್ ಕಾರ್ಯಕ್ರಮದ ಮಾರ್ಗಸೂಚಿಗಳು

  1. 'ಎಸ್.ಟಿ.ಎಪ್' ಕಾರ್ಯಕ್ರಮ ತರಭೇತಿಗೆ ಪೂರಕವಾದ ಐ..ಸಿ.ಟಿ ಲ್ಯಾಬ್ ಗಳಲ್ಲಿ ಗಣಕಯಂತ್ರಗಳ ವ್ಯವಸ್ಥೆ, , ಪ್ರೊಜೆಕ್ಟರ್, ಮೌಸ್, ಕೀಬೋರ್ಡ್, ವಿದ್ಯುತ್ ಸಂಪರ್ಕ, ಯು.ಪಿ.ಎಸ್. ಬ್ಯಾಟರಿ ಮತ್ತು ಉತ್ತಮ ಇಂಟರ್ ನೆಟ್ (ಕನಿಷ್ಟ 4mbps) ಸಂಪರ್ಕದ ವ್ಯವಸ್ಥೆಗಳನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ ಆಯಾ ಜಿಲ್ಲೆಯ ಡಯಟ್ ನವರು ನಿರ್ವಹಿಸಬೇಕು.
  2. 14.04 ಉಬುಂಟು ತಂತ್ರಾಂಶ Install ಆಗಿರಬೇಕು.
  3. ಪ್ರತಿ ಬ್ಯಾಚ್ ನ ಗಾತ್ರವು ಗಣಕಯಂತ್ರಗಳ ಸಂಖ್ಯೆಯನ್ನು ಆಧರಿಸಿ ೨೦ -೨೫ ಒಳಗೊಂಡಿರಬೇಕು . ಶಿಕ್ಷಕರ ಸಂಖ್ಯೆಯ ತರಬೇತಿ ಮತ್ತು ಬ್ಯಾಚ್ ಗಳು ಸಂಖ್ಯೆ ಗೆ ಅನುಗುಣವಾಗಿ ಲಭ್ಯವಿರಬೇಕು.
  4. 'ಎಸ್.ಟಿ.ಎಪ್' ಕಾರ್ಯಗಾರಗಳಲ್ಲಿ ಶಿಕ್ಷಕರು ಮತ್ತು ಗಣಕಯಂತ್ರಗಳು 1:1 ಅನುಪಾತದಲ್ಲಿರುವುದು ಕಡ್ಡಾಯವಾಗಿರುತ್ತದೆ.
  5. ತರಬೇತಿ ಪ್ರಾರಂಬಿಸುವ ಮುಂಚೆ ಒಮ್ಮೆ ಸಂಪನ್ಮೂಲ ವ್ಯಕ್ತಿಗಳ ಸಭೆಯನ್ನು ಆಯೋಜಿಸಿ ಕಾರ್ಯಾಗಾರದಲ್ಲಿನ ಚಟುವಟಿಕೆಗಳ ಬಗ್ಗೆ ಕಾರ್ಯಯೋಜನೆ ತಯಾರಿಸಿಕೊಳ್ಳುವುದು.
  6. ಮೊದಲನೇ ತಂಡದ ಕಾರ್ಯಾಗಾರಕ್ಕೆ ಗಣಕಯಂತ್ರದಲ್ಲಿ ಈಗಾಗಲೇ ಸ್ವಲ್ಪ ಮಟ್ಟಿನ ಪರಿಣಿತಿ ಹೊಂದಿರುವ ಹಾಗು ಸಂಪನ್ಮೂಲ ವ್ಯಕ್ತಿಗಳಾಗಿ ಮುಂದಿನ ತಂಡಗಳಲ್ಲಿ ಭಾಗವಹಿಸಬಹುದಾದ ಶಿಕ್ಷಕರನ್ನು ಆಯ್ಕೇ ಮಾಡುವದು. ಏಕೆಂದರೆ ಮೊದಲ ಬ್ಯಾಚ್ ಮಾಡುವಾಗ ಶಿಕ್ಷಕರ ಆಸಕ್ತಿಯನ್ನು ಪರಿಗಣಿಸಿ ಮುಂದಿನ ಬ್ಯಾಚನಲ್ಲಿ ಅನುಕೂಲಕ್ಕೆ ತಕ್ಕಂತೆ ೨,೩ ನೇ ಬ್ಯಾಚಗಳಿಗೆ ಅವರನ್ನು ಸಹಾಯಕ ಸಂಪನ್ಮೂಲ ವ್ಯಕ್ತಿಯಾಗಿ ಅಯ್ಕೇ ಮಾಡಿಕೊಳ್ಳಬೇಕಾಗುತ್ತದೆ.
  7. ಹೆಚ್ಚು ಶಾಲೆಗಳನ್ನು ಹೊಂದಿರುವ ಜಿಲ್ಲೆಗಳು ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಲಭ್ಯವಿರುವ ಇಂಜಿನಿಯರಿಂಗ್ ಕಾಲೇಜು,ಡ್.ಎಡ್/ಬಿ.ಎಡ್. ಇತರೆ ಸಂಸ್ಥೆಗಳ ಲ್ಯಾಬ್ ಗಳನ್ನು , ಮುರಾರ್ಜಿ ಶಾಲೆಗಳನ್ನು ಬಳಸಿಕೊಳ್ಳಬಹುದು ಹಾಗೂ ಇಲ್ಲಿ ಸಹ 14.04 ಉಬುಂಟು ತಂತ್ರಾಂಶ Install ಮಾಡಬೇಕಾಗುತ್ತದೆ .
  8. ಶಿಕ್ಷಕರ ತರಭೇತಿಗೆ ಬರುವ ಮುಂಚೆ ಅವರಿಗೆ ಲ್ಯಾಪಟಾಪ್, ಪೆನ್ ಡ್ರೈವ್ ಮತ್ತು ಡಾಟಾ ಕಾರ್ಡ ತರುವಂತೆ ಸೂಚನೆ ನೀಡುವದು.
  9. ಮೊದಲನೇ ದಿನದ ತರಬೇತಿಯ ಸಮಯದಲ್ಲಿ DIET ನೋಡಲ್ ಅಧಿಕಾರಿಗಳು,ಭಾಗವಹಿಸಿದ ಶಿಕ್ಷಕರ ಮಾಹಿತಿಯನ್ನು ಕೋಯರ್ ಪುಟದಲ್ಲಿ ದಾಖಲಿಸುವದು.
  10. ಮೊದಲನೇ ದಿನ DIET ನೋಡಲ್ ಅಧಿಕಾರಿಗಳು - ಕಾರ್ಯಾಗಾರದ ಸ್ಥಳ , ದಿನಾಂಕ,ಗಣಕಯಂತ್ರಗಳ ವ್ಯವಸ್ಥೆ , ಇಂಟರ್ನೆಟ್ ಸಂಪರ್ಕ ಇತ್ಯಾದಿ ತರಬೇತಿಯ ಮಾಹಿತಿಯನ್ನು ಕೋಯರ್ ಪುಟದಲ್ಲಿ ದಾಖಲಿಸುವದು .
  11. ಪ್ರತಿ ದಿನದ ವರದಿಯನ್ನು ಹಾಗೂ ತರಬೇತಿಯ ಸಮಯದಲ್ಲಿ ತೆಗೆದಿರುವ ಶಿಕ್ಷಕರ ಭಾವಚಿತ್ರ(ಪಿಕಾಸ)ವನ್ನು ಕೋಯರ್ ಪುಟದಲ್ಲಿ ದಾಖಲಿಸುವದು. (MRPಗಳು ತಮ್ಮ ಯೂಸರ್ ಐಡಿ ಮೂಲಕ ಸೇರಿಸಬಹುದು) ಅಥವಾ ಗ್ರೂಪ್ ಗೆ ಮೇಲ್ ಸಹ ಮಾಡಬಹುದು .
  12. ೫ನೇ ದಿನ ಪ್ರತಿ ಶಿಕ್ಷಕರಿಂದ ಕೊಯರ್ ಗೆ ಸಂಪನ್ಮೂಲಗಳ ಕೊಡುಗೆ (Contribute/ನೆರವು ಬಟನ್ ಮೂಲಕ) ಸಲ್ಲಿಸುವದು ಕಡ್ಡಾಯವಾಗಿದೆ.
  13. ೫ನೇ ದಿನ ಭಾಗವಹಿಸಿದ ಶಿಕ್ಷಕರ ಅಭಿಪ್ರಾಯವನ್ನು ಕೊಯರ್ ಪುಟದಲ್ಲಿ ದಾಖಲಿಸುವದು ಮತ್ತು ಇ-ಮೇಲ್

ಐ.ಡಿ ಯನ್ನು ಗ್ರೂಪ್ ಗೆ ಸೇರಿಸುವದು (ಪ್ರತಿ ಜಿಲ್ಲೆಯಿಂದ ಒಬ್ಬರು MRPಗಳಿಗೆ ಮ್ಯಾನೇಜರ್ ಮಾಡಲಾಗಿದೆ. ).

  1. ೫ನೇ ದಿನ DIET ನೋಡಲ್ ಅಧಿಕಾರಿಗಳು DIET ಅಭಿಪ್ರಾಯವನ್ನು (Feedback) ನಮೂದಿಸಬೇಕು.
  2. ತರಬೇತಿ ಸಮಯದಲ್ಲಿ ಏನಾದರು ತಾಂತ್ರಿಕ ಸಮಸ್ಯೆ ಕಂಡುಬಂದರೆ ಐ.ಟಿ.ಫಾರ್ ಚೇಂಜ್ ನ ವ್ಯಕ್ತಿಗಳನ್ನು ಸಂಪರ್ಕಿಸಬಹುದು , ಮೇಲ್ ಐ.ಡಿ. koer@karnatakaeducation.org.in ಅಥವಾ ದೂರವಾಣಿ ಕರೆಯನ್ನು ಸಹ ಮಾಡಬಹುದು.

ಅಶೋಕ (ದೂರವಾಣಿ- 9972562108) ಮತ್ತು ಸೀಮಾ (ದೂರವಾಣಿ- 9900416630) .

  1. ಕಲ್ಪವೃಕ್ಷ DVD ಮತ್ತು ಕೋಯರ್ ಆಫ್ ಲೈನ್ DVDಬೇಕಾದರೆ ಮೇಲ್ಕಾಣಿಸಿದ ಐ.ಟಿ.ಫಾರ್ ಚೇಂಜ್ ನ ವ್ಯಕ್ತಿಗಳನ್ನು ಸಂಪರ್ಕಿಸಬಹುದು.