ಸಾಂದ್ರತೆ :- ತೇಲುವ ಮೊಟ್ಟೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಚಟುವಟಿಕೆ - ಚಟುವಟಿಕೆಯ ಹೆಸರು

'ಸಾಂದ್ರತೆ :- ತೇಲುವ ಮೊಟ್ಟೆ'

ಅಂದಾಜು ಸಮಯ

30 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. 2 ಗಾಜಿನ ಪಾತ್ರೆ
  2. ನೀರು
  3. ಉಪ್ಪು
  4. 2 ಮೊಟ್ಟೆಗಳು (ತಾಜಾ)

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

density%2Btest%2Busing%2Begg.jpeg

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

2 ಗಾಜಿನ ಪಾತ್ರೆಯಲ್ಲಿ ಪೂರ್ತಿಯಾಗಿ ನೀರು ತುಂಬಿ ಒಂದು ನೀರು ತುಂಬಿರುವ ಪಾತ್ರೆಯಲ್ಲಿ ಮೊಟ್ಟೆಯನ್ನು ಹಾಕಿದಾಗ ಮೊಟ್ಟೆಯು ಮುಳುಗುವುದು. ಎರಡನೇ ಪಾತ್ರೆಯಲ್ಲಿ

ಉಪ್ಪು ಹಾಕಿ ಉಪ್ಪಿನ ದ್ರಾವಣವನ್ನು ಸಿದ್ಧಪಡಿಸಿ ಕೊಂಡು, ಈ ನೀರಿನಲ್ಲಿ (ಉಪ್ಪಿನ ದ್ರಾವಣದಲ್ಲಿ) ಮೊಟ್ಟೆಯನ್ನು ಹಾಕಿದಾಗ ಮೊಟ್ಟಯು ತೇಲುತ್ತದೆ.

ತೀರ್ಮಾನ:- 1. ಒಂದನೇ ಪಾತ್ರೆಯಲ್ಲಿ ಮೊಟ್ಟೆಮುಳುಗುತ್ತದೆ ಕಾರಣವೇನೆಂದರೆ ನೀರಿಗಿಂತ ಮೊಟ್ಟೆಯ ಸಾಂದ್ರತೆ ಹೆಚ್ಚಿರುವುದರಿಂದ ಮೊಟ್ಟೆ ಮುಳುಗುತ್ತದೆ. 2. ಎರಡನೇ ಪಾತ್ರೆಯಲ್ಲಿ (ಉಪ್ಪಿನ ದ್ರಾವಣ) ಮೊಟ್ಟೆ ತೆಲುತ್ತದೆ ಏಕೆಂದರೆ ಇಲ್ಲಿ ಉಪ್ಪಿನ ದ್ರಾವಣದ ಸಾಂದ್ರತೆಯು ಮೊಟ್ಟೆಯ ಸಾಂದ್ರತೆಗಿಂತ ಹೆಚ್ಚಾಗಿರುವುದರಿಂದ ಮೊಟ್ಟೆಯು ತೇಲುತ್ತದೆ.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದ್ರವ್ಯದ ಸ್ಥಿತಿಗತಿಗಳು