ಭಾರತದ ಪ್ರಾಕೃತಿಕ ವಿಭಾಗಗಳು ಪ್ರಾಕೃತಿಕ ವಿಭಾಗಗಳ ಆರ್ಥಿಕ ಪ್ರಾಮುಖ್ಯತೆ ಚಟುವಟಿಕೆ ಸಂಖ್ಯೆ1
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಚಟುವಟಿಕೆ - ಚಟುವಟಿಕೆಯ ಹೆಸರು
"ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಾಕೃತಿಕ ವಿಭಾಗಗಳ ಪ್ರಾಮುಖ್ಯತೆ"-ಕುರಿತು ಗುಂಪುಚರ್ಚೆ
ಅಂದಾಜು ಸಮಯ
೪೦ ನಿಮಿಷ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಕೈಗಾರಿಕೆಗಳ ಚಿತ್ರಗಳು
- ಕೃಷಿ ಸಂಬಂಧಿತ ಚಿತ್ರಗಳು
- ಆಣೆಕಟ್ಟುಗಳ ಚಿತ್ರಗಳು
- ಆಧುನಿಕ ಸಾರಿಗೆ ಸಾಧನಗಳ ಚಿತ್ರ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಎಲ್ಲರೂ ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ಚಿತ್ರಗಳ ಸಹಾಯದಿಂದ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಪ್ರಾಕೃತಿಕ ಪರಿಸರದ ಪಾತ್ರದ ಕುರಿತು ಚರ್ಚೆ ಏರ್ಪಡಿಸುವುದು. ವಿದ್ಯಾರ್ಥಿಗಳ ವಿಷಯ ಮಂಡನೆ,ವಿಶ್ಲೇಷಣಾ ಸಾಮರ್ಥ್ಯಗಳನ್ನು ಗಮನಿಸುತ್ತಾ ಪರಿಕಲ್ಪನೆಯನ್ನು ಮೂಡಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಪ್ರಾಕೃತಿಕ ಪರಿಸರ ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸುತ್ತವೆಯೇ?ಈ ಕುರಿತು ನಿಮ್ಮ ಅಭಿಪ್ರಾಯವನ್ನು ಉದಾಹರಣೆಯೊಂದಿಗೆ ತಿಳಿಸಿ.
- ಭಾರತದ ಅಭಿವೃದ್ಧಿಯ ಮಟ್ಟ ಹೇಗಿದೆ?
- ಭಾರತದ ಅಭಿವೃದ್ಧಿಯಲ್ಲಿ ಯಾವ ಪ್ರಾಕೃತಿಕ ಅಂಶಗಳು ಪ್ರಮುಖ ಪಾತ್ರ ವಹಿಸಿವೆ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
- ದೇಶದ ಅಭಿವೃದ್ಧಿಗೆ ಪೂರಕವಾದ ಅಂಶಗಳಾವುವು?
- ಭಾರತದಲ್ಲಿ ಕಂಡುಬರುವ ಸಂಪನ್ಮೂಲಗಳನ್ನು ಹೆಸರಿಸಿ.
- ಯಾವ ಸಂಪನ್ಮೂಲಗಳು ದೇಶದ ಯಾವ ಅಭಿವೃದ್ಧಿ ಕಾರ್ಯಗಳಿಗೆ ಸಹಾಯಕ?
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಪ್ರಾಕೃತಿಕ_ವಿಭಾಗಗಳು