ಸೋಡಿಯಂ ಲೋಹದ ಮೇಲೆ ನೀರಿನ ವರ್ತನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಸೋಡಿಯಂ ಲೋಹದ ಮೇಲೆ ನೀರಿನ ವರ್ತನೆ

ಅಂದಾಜು ಸಮಯ

40 Min

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಗಾಜಿನ ಟ್ರಫ್ ,
ಸೋಡಿಯಂ ಲೋಹ ,
ನೀರು ,
ಸ್ಪ್ಯಾಚುಲ ,
ವಾಚ್ ಗ್ಲಾಸ್ ,
ಗಾಜಿನ ಕಡ್ಡಿ ,
ಫಿನಾಪ್ತಲೀನ್ ದ್ರಾವಣ ,
ಚಿಮುಟ(forceps)

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಸೋಡಿಯಂ ಲೋಹದ ಚೂರುಗಳನ್ನು ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು .

ಬಹುಮಾಧ್ಯಮ ಸಂಪನ್ಮೂಲಗಳ

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  • ಮೊದಲಿಗೆ Na ಲೋಹವನ್ನು ವಾಚ್ ಗ್ಲಾಸಿಗೆ ತೆಗೆದುಕೊಳ್ಳಬೇಕು, Na ಲೋಹವು ಅತ್ಯಂತ ವರ್ತಿಸುವ ಲೊಹ ಆಗಿರುವುದರಿಂದ ಬಹಳ ಜಾಗ್ರುತಿಯಿಂದ ಅದನ್ನು ಮುಚ್ಚಿಡ ಬೇಕು .
  • ಚಿಮುಟದ ಸಹಾಯದಿಂದ Na ಲೋಹವನ್ನು ಹಿಡಿದುಕೊಂಡು ಒಂದು ಸಣ್ಣ ಚೂರನ್ನು ಸ್ಪ್ಯಾಚುಲವನ್ನು ಬಳಸಿಕೊಂಡು ಕತ್ತರಿಸಿಕೊಳ್ಳಬೇಕು .ಅತ್ಯಂತ ಸಣ್ಣ ಚೂರನ್ನು ತೆಗೆದುಕೊಳ್ಳಬೇಕು ಏಕೆಂದರೆ Na ಲೋಹ ಅತ್ಯಂತ ವೇಗವಾಗಿ ವರ್ತಿಸುವುಂತಹ ಒಂದು ಲೋಹವಾಗಿದೆ.ಉಳಿದಂತ ಹೆಚ್ಚುವರಿ Na ಲೋಹವನ್ನು ತಿರುಗಿ ಬಾಟಲಿನ ಒಳಗೆ ಹಾಕಿಕೊಳ್ಳಬೇಕು.
  • ಒಂದು ಗಾಜಿನ ಟ್ರಫ್ ನಲ್ಲಿ ಒಂದು ೫೦೦ m.l ಬೀಕರಿನ ಅಳತಯೆ ರಷ್ಟು ನೀರನ್ನು ತೆಗೆದುಕೊಳ್ಳಬೇಕು.

ಈಗ ತುಂಬ ಹೆಚ್ಚರೊಕೆಯಿಂದ ಅತ್ಯಂತ ಸಣ್ಣ ತುಣುಕನ್ನು ಸ್ಪ್ಯಾಚುಲದ ಸಹಾಯದಿಂದ ನೀರಿಗೆ ಹಾಕಬೇಕು. Na ಲೋಹವು ನೀರಿನೊಂದಿಗೆ ಹಿಸ್ ಎನ್ನುವ ಶಬ್ದದೊಂದಿಗೆ ವರ್ತಿಸುತ್ತದೆ, ಹಾಗು ಕೆಲವೊಂದು ಸಂದರ್ಭದಲ್ಲಿ ಬೆಂಕಿಯನ್ನು ಉತ್ಪತ್ತಿ ಮಾಡುತ್ತದೆ.

  • Na ಲೋಹವು ನೀರಿನೊಂದಿಗೆ ವರ್ತಿಸಿ NaOH ಉಂಟಾಗುತ್ತದೆ ಹಾಗು ಹೈಡ್ರೊಜನ್ ಅನಿಲ ಬಿಡುಗಡೆ ಯಾಗುತ್ತದೆ.
  • ಈಗ ಈ ಕ್ರಿಯೆಯಲ್ಲಿ NaOH ಬಿಡುಗಡೆ ಆಗಿದೆ ಎಂದು ದ್ರುಡಿಕರಿಸಲು ೨ ಹನಿ ಫಿನಾಪ್ತಲೀನ್ ದ್ರಾವಣವನ್ನು ಬೆರಸಬೇಕು. ಗಾಜಿನ ಕಡ್ಡಿಯಿಂದ ಇದನ್ನು ಚೆನ್ನಗಿ ಕಲಕಬೇಕು. ದ್ರಾವಣದ ಬಣ್ಣವು ಗುಲಾಬಿ ಬಣ್ಣವಾಗಿ ಬದಲಾಗುತ್ತದೆ ,ಫಿನಾಪ್ತಲೀನ್ ದ್ರಾವಣ ಕ್ಷಾತ್ರಿಯ ಮಾದ್ಯಮದದಲ್ಲಿ ದ್ರಾವಣದ ಬಣ್ಣವು ಗುಲಾಬಿ ಬಣ್ಣವಾಗಿ ಬದಲಾಗುತ್ತದೆ ,ಈ ಒಂದು ಪರೀಕ್ಷೆಯಿಂದ ನಮಗೆ NaOH ಬಿಡುಗಡೆ ಆಗಿದೆ ಎಂದು ದ್ರುಡಿಕರಿಸಿಕೊಳ್ಳಬಹುದು.

chemical formula
Na+OH--→NaOH +H2 (gas)

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

ಪ್ರಶ್ನೆಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್