ಸುರುಳಿ ಕಾಂತ ಪ್ರಯೋಗ
ಬದಲಾವಣೆ ೧೭:೪೬, ೧೩ ಆಗಸ್ಟ್ ೨೦೧೫ ರಂತೆ Ashok (ಚರ್ಚೆ | ಕಾಣಿಕೆಗಳು) ಇವರಿಂದ (→ವಿಧಾನ: (ಚಟುವಟಿಕೆ ನಡೆಸುವುದು ಹೇಗೆ))
ಚಟುವಟಿಕೆ - ಚಟುವಟಿಕೆಯ ಹೆಸರು
ಸುರುಳಿ ಕಾಂತ ಪ್ರಯೋಗ
ಅಂದಾಜು ಸಮಯ
40 ನಿಮಿಷಗಳು
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
/home/ubuntu/Desktop/coil expt
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
ಬಹುಮಾಧ್ಯಮ ಸಂಪನ್ಮೂಲಗಳ
file:///opt/PhET/sims/htl/faradays-law/latest/faradays-law_en.html
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ದಂಡಕಾಂತವನ್ನು ತೆಗೆದುಕೊಂಡು ತಾಮ್ರದ ತಂತಿಯ ಸುರುಳಿಯ ಒಳಗೆ ತೂರಿಸಿದಾಗ ಏನಾಗುವುದು ಎಂಬುದನ್ನು ಗ್ಯಾಲವನೋಮೀಟರ್ & ಬಲ್ಬ್‌ನಲ್ಲಿ ವೀಕ್ಷಿಸುವುದು.
ದಂಡಕಾಂತವನ್ನು ಹೊರತೆಗೆದಾಗ ಗ್ಯಾಲ್ವನೋ ಮೀಟರ್‌ನ್ನು ವೀಕ್ಷಿಸುವುದು.
ಸತತವಾಗಿ ಅಯಸ್ಕಾಂತವನ್ನು ಒಳಕ್ಕೂ. ಹೊರಕ್ಕೂ ತೆಗೆದಾಗ ಏನಾಗುವುದು ಎಂಬುದನ್ನು ಸೂಕ್ಷ್ಮವಾಗಿ ಗ್ಯಾಲ್ವನೋ ಮೀಟರ್‌ನಲ್ಲಿ ವೀಕ್ಷಿಸುವುದು.
ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿ ಗ್ಯಾಲ್ವನೋ ಮೀಟರನ್ನು ಗಮನಿಸುವುದು.
ಅಯಸ್ಕಾಂತವನ್ನು ಸ್ಥಿರವಾಗಿರಿಸಿ ಗ್ಯಾಲವನೋಮೀಟರನ್ನು & ಬಲ್ಬ್‌ನ್ನು ವೀಕ್ಷಿಸುವುದು. ಪ್ರಯೋಗವನ್ನು ಪುನರಾವರ್ತಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಅಯಸ್ಕಾಂತ ಸುರುಳಿಯಲ್ಲಿ ಚಲಿಸಿದಾಗ ಗ್ಯಾಲ್ವನೋಮೀಟರ್‌ನ ಮುಳ್ಳು ದಿಕ್ಪಲ್ಲಟಗೊಳ್ಳಲು ಕಾರಣವೇನು?
- ಅಯಸ್ಕಾಂತವನ್ನು ಒಳಕ್ಕೂ-ಹೊರಕ್ಕೂ ತೆಗೆದಾಗ ಮುಳ್ಳು ಬೇರೆ-ಬೇರೆ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು?
- ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿದಾಗ ಗ್ಯಾಲ್ವನೋ ಮೀಟರ್‌ನ ಮುಳ್ಳು ಯಾವ ರೀತಿಯ ದಿಕ್ಪಲ್ಲಟವನ್ನು ತೋರಿಸಿತು?
- ಅಯಸ್ಕಾಂತ ವನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋಮೀಟರ್ ನ ಕಾಂತೀಯ ಸೂಜಿಯು ಯಾವ ರೀತಿಯ ದಿಕ್ಪಲ್ಲಟ ಹೊಂದಿತು?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಬ್ಯಾಟರಿ ಇಲ್ಲದೆ ವಿದ್ಯುತ್ ಪ್ರವಹಿಸಲು ಕಾರಣವೇನು?
- ಸುರುಳಿಯ ಸುತ್ತುಗಳ ಸಂಖ್ಯೆ ಹೆಚ್ಚು ಮಾಡಿದಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ಹೆಚ್ಚಿನ ದಿಕ್ಪಲ್ಲಟ ಹೊಂದಲು ಕಾರಣವೇನು?
- ಅಯಸ್ಕಾಂತ & ಸುರುಳಿಯನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ದಿಕ್ಪಲ್ಲಟ ಹೊಂದದಿರಲು ಕಾರಣವೇನು?
ಪ್ರಶ್ನೆಗಳು
- ಗ್ಯಾಲ್ವನೋಮೀಟರ್‌ನ ಕಾಂತೀಯ ಸೂಜಿಯು ವಿರುದ್ಧ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು?
- ಕಾಂತೀಯ ಸೂಜಿಯು ಕಡಿಮೆ ವೇಗದಿಂದ ಯಾವ ಸಂಧರ್ಭದಲ್ಲಿ ಚಲಿಸುತ್ತದೆ?
- ಮಂಡಲದಲ್ಲಿ ಉಂಟಾಗುವ ಪ್ರೇರಿತ ವಿದ್ಯುತ್ ಚಾಲಕ ಬಲವು ಯಾವ ಅಂಶಗಳನ್ನು ಅವಲಂಬಿಸಿರುತ್ತದೆ.
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್