ಶಿಕ್ಷಕರ ಕಲಿಕಾ ಸಮುದಾಯ (ಟಿಕಾಲ್) ಬೆಂಗಳೂರು ದಕ್ಷಿಣ ವಲಯ 3
ಶಿಕ್ಷಕರ ಕಲಿಕಾ ಸಮುದಾಯ (ಟಿಕಾಲ್)
ಶಿಕ್ಷಕರ ಕಲಿಕಾ ಸಮುದಾಯ (ಟಿಕಾಲ್) ಕಾರ್ಯಕ್ರಮವು ತಂತ್ರಜ್ಞಾನ ಹೇಗೆ ಶಾಲಾ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳಿಗೆ ಕಲಿಕಾ ಸಮುದಾಯ ದೃಷ್ಟಿಕೋನದ ಮೂಲಕ ನೆರವಾಗಬಲ್ಲದು ಎಂಬುವುದನ್ನು ಪ್ರದರ್ಶಿಸಲು ಪ್ರಯತ್ನಿಸುತ್ತದೆ.ಈ ಕಾರ್ಯಕ್ರಮ ವಿವಿಧ ಹಂತಗಳಲ್ಲಿ ಸಮುದಾಯಗಳನ್ನು ಕಟ್ಟಲು ಪ್ರಯತ್ನಿಸುತ್ತದೆ- ಶಾಲೆಗಳಲ್ಲಿ, ವಿವಿಧ ವಿಷಯ ಶಿಕ್ಷಕರ ಜೊತೆಗೆ ಹಾಗು ಬೆಂಗಳೂರು ದಕ್ಷಿಣ ವಲಯ 3ರ ಶಾಲೆಗಳಲ್ಲಿ.
ಇದು ಈ ಕಾರ್ಯಕ್ರಮದ ಮೂರನೇ ಹಂತವಾಗಿದ್ದು, ಬೆಂಗಳೂರು ದಕ್ಷಿಣ ವಲಯ 3ರ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ 2018 ರಿಂದ 2021ರ ವರೆಗೆ (ಮೂರು ಶೈಕ್ಷಣಿಕ ವರ್ಷಗಳು) ಕಾರ್ಯ ನಿರ್ವಹಿಸುತ್ತದೆ. ಈ ಕಾರ್ಯಕ್ರಮವು ಹಿಂದೆ 2014-17ನೆ ಸಾಲಿನಲ್ಲಿ ಸರ್ಕಾರಿ ಪ್ರೌಢಶಾಲೆಗಳಲ್ಲಿ ನಡೆದ ಎರಡನೇ ಹಂತದ ಕೆಲಸಗಳನ್ನು ಇನ್ನಷ್ಟು ಆಳವಾಗಿಸುತ್ತಾ ಹಾಗು ವೃದ್ಧಿಪಡಿಸುತ್ತಾ ಹೋಗಲಿದೆ.
ಕಾರ್ಯಕ್ರಮದ ಮೂರನೇ ಹಂತದ (2018-21) ಗುರಿಗಳು
- 'ಕಲಿಕಾ ಸಮುದಾಯ'ದಲ್ಲಿ ಶಿಕ್ಷಕರ ನಡುವೆ ಪರಸ್ಪರ ಮಾತುಕತೆಯ ಮೂಲಕ ಸಮಾಂತರ ಕಲಿಕೆ ಹಾಗು ಮಾರ್ಗದರ್ಶನಕ್ಕೆ ಪ್ರೋತ್ಸಾಹಿಸುವುದು.
- ಐಸಿಟಿಯನ್ನು ವಿವಿಧ ರೀತಿಗಳಲ್ಲಿ ಬಳಸಿಕೊಂಡು ಶಾಲೆಗಳು ಹಾಗು ಶಿಕ್ಷಕರು ಸ್ವಅಭಿವೃದ್ಧಿ ಮತ್ತು ಕಲಿಕಾ ಬೋಧನೆಯ ಕಾರ್ಯಗಳನ್ನು ಮಾಡುವುದರ ಬಗ್ಗೆ ಪ್ರೋತ್ಸಾಹಿಸುವುದು.
- ಕಲಿಕಾ ಬೋಧನೆಯಲ್ಲಿ ಐಸಿಟಿಯನ್ನು ಅನುಕಲನಗೊಳಿಸುವುದರ ಪ್ರದರ್ಶನ.
- ವ್ಯವಸ್ಥಿತ ಸುಧಾರಣೆಗಳಿಗೆ ಹಾಗು ಕಾರ್ಯನೀತಿಗಳಿಗಿರುವ ಸಾಧ್ಯತೆಗಳನ್ನು ಗುರುತಿಸುವುದು.
- ಮೇಲಿನವುಗಳನ್ನು ಶೈಕ್ಷಣಿಕ ವ್ಯವಸ್ಥೆಯ ಪಠ್ಯಕ್ರಮ ಹಾಗು ಬೋಧನಾ ವಿಧಾನಗಳಿಗೆ ಸಂಯೋಜನೆಗೊಳಿಸುವುದು.
ಈ ಯೋಜನೆಯ ಕೆಲಸಗಳು ಎರೆಡು ತಂತುಗಳನ್ನು ಒಳಗೊಂಡಿರುತ್ತದೆ:
- ಗಣಿತ ಹಾಗು ಕನ್ನಡ/ಇಂಗ್ಲೀಷ್ ವಿಷಯಗಳಿಗೆ ಸಂಬಂಧಿಸಿದಂತೆ ಐಸಿಟಿ ಸಂಯೋಜನೆಯೊಂದಿಗೆ ರಚನಾತ್ಮಕ ಅಭ್ಯಾಸಕ್ರಮಕ್ಕೆ ಶಿಕ್ಷಕ ತರಬೇತಿ ಕಾರ್ಯಗಾರಗಳು
- ಬೋಧನಾ ಕಲಿಕೆಯಲ್ಲಿ ಹಾಗು ಆಡಳಿತ ಕಾರ್ಯಗಳಲ್ಲಿ ಐಸಿಟಿ ಸಂಯೋಜನೆಯ ಬಗ್ಗೆ ಶಾಲಾ ಆಧಾರಿತ ತೀವ್ರವಾದ ಕೆಲಸದ ಪ್ರದರ್ಶನ.
ಕಾರ್ಯಕ್ರಮದ ತಂತ್ರಗಳು
- ಆಸಕ್ತ, ಗುರುತಿಸಿದ ಶಾಲೆಗಳಲ್ಲಿ ತಂತ್ರಜ್ಞಾನ ಸಂಯೋಜನೆಯೊಂದಿಗೆ ಕೆಲಸ ಮಾಡುವುದರ ಪ್ರದರ್ಶನ. ಇದು ಕೆಳಗಿನ ಅಂಶಗಳನ್ನು ಒಳಗೊಂಡಿರುತ್ತದೆ:
- ಗುರುತಿಸಿದ ವಿಷಯಗಳ ಜೊತೆಗೆ ತಂತ್ರಜ್ಞಾನ ಶಿಕ್ಷಣಶಾಸ್ತ್ರದ ಪ್ರದರ್ಶನ
- ಶಾಲಾ ನಿರ್ವಹಣೆ ಹಾಗು ಆಡಳಿತದಲ್ಲಿ ತಂತ್ರಜ್ಞಾನದ ಸಂಯೋಜನೆಯನ್ನು ಬೆಂಬಲಿಸುವುದು.
- NCERTಯ 'ರಾಷ್ಟ್ರೀಯ ಐ.ಸಿ.ಟಿ ಪಠ್ಯಕ್ರಮ-2013'ನಂತೆ ಡಿಜಿಟಲ್ ಸಾಕ್ಷರತಾ ತರಗತಿಗಳು
- ಐ.ಸಿ.ಟಿ ಪ್ರಯೋಗಾಲಯದ ಅಭಿವೃದ್ಧಿ ಹಾಗು ನಿರ್ವಹಣೆ
- IVRS ವ್ಯವಸ್ಥೆಯ ಮೂಲಕ ಪೋಷಕರ ಜೊತೆ ಸಂಪರ್ಕ.
- ಆಸಕ್ತ ಶಾಲೆಗಳ ಸಂಪರ್ಕಕ್ಕಾಗಿ ಅಂತರ್ಜಾಲ ಪುಟಗಳ ಅಭಿವೃದ್ಧಿಗೆ ಸಹಾಯ.
- ಮುಖ್ಯ ಶಿಕ್ಷಕರಿಗಾಗಿ, ವಿಷಯ ಶಿಕ್ಷಕರಿಗಾಗಿ ವಲಯ ಮಟ್ಟದ ಕಾರ್ಯಗಾರಗಳು. ಈ ಕಾರ್ಯಗಾರಗಳು ವಿಷಯ ಸಂಬಂಧಿತವಾಗಿರುತ್ತವೆ ಹಾಗು ತಿಂಗಳ ಗೊತ್ತುಪಡಿಸಿದ ದಿನದಂದು ನಡೆಸಲಾಗುವುದು. ಐ.ಸಿ.ಟಿ ಸಂಯೋಜಿತ ಶಾಲೆಗಳ ವಿಷಯ ಶಿಕ್ಷಕರು ಸಹ ಕಲಿಕೆಗೆ ತಮ್ಮ ಸ್ವಕೆಲಸಗಳನ್ನು ಈ ಕಾರ್ಯಗಾರಗಳಲ್ಲಿ ಮಂಡಿಸುತ್ತಾರೆ.
- ಕ್ನಡ ಹಾಘು ಆಂಗ್ಲ ಭಾಷೆಯಲ್ಲಿ ಡಿಜಿಟಲ್ ಸಂಪನ್ಮೂಲಗಳನ್ನು ಸೃಷ್ಟಿಸುವುದು ಹಾಗು ಅಪ್ಲೋಡ್ ಮಾಡುವುದು; ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ತಾಣದಲ್ಲಿ ಅವುಗಳನ್ನು ಎಲ್ಲಾ ಶಿಕ್ಷಕರ ಬಳಕೆಗಾಗಿ ಅಪ್ಲೋಡ್ ಮಾಡುವುದು
ವಲಯ ಕಾರ್ಯಗಾರಗಳ ದಿನಾಂಕಗಳು
ಕೆಳಗೆ ನೀಡಿರುವುದು 2018-19ರ ಮುಂದಿನ ಕಾರ್ಯಗಾರಗಳ ಅನುಸೂಚಿ. ವಿಸ್ತರಿಸಿದ ಕಾರ್ಯಸೂಚಿಗಳನ್ನು ಆಯಾ ಪುಟಗಳಲ್ಲಿ ಕಾಣಬಹುದುMathematics program, Kannada program and Head Masters' program.
ದಿನಾಂಕ | ವಿಷಯ |
---|---|
ಆಗಸ್ಟ್ 1-2, 2018 | ಗಣಿತ |
ಆಗಸ್ಟ್ 16-17, 2018 | ಭಾಷೆಗಳು |
ಆಗಸ್ಟ್ 22, 2018 | ಮುಖ್ಯ ಶಿಕ್ಷಕರು |
ಸೆಪ್ಟೆಂಬರ್ 6-7 2018 | ಗಣಿತ |
ಸೆಪ್ಟೆಂಬರ್ 19-20, 2018 | ಭಾಷೆಗಳು |
ಸೆಪ್ಟೆಂಬರ್ 28, 2018 | ಮುಖ್ಯ ಶಿಕ್ಷಕರು |
ಅಕ್ಟೋಬರ್ 4-5, 2018 | ಗಣಿತ |
ಅಕ್ಟೋಬರ್ 11-12, 2018 | ಭಾಷೆಗಳು |
ನವೆಂಬರ್ 16, 2018 | ಮುಖ್ಯ ಶಿಕ್ಷಕರು |
ನವೆಂಬರ್ 21 - 22, 2018 | ಗಣಿತ |
ನವೆಂಬರ್ 28-29, 2018 | ಭಾಷೆಗಳು |
ಡಿಸೆಂಬರ್ 14, 2018 | ಮುಖ್ಯ ಶಿಕ್ಷಕರು |
ಜನವರಿ 3-4, 2019 | ಗಣಿತ |
ಜನವರಿ 10-11, 2019 | ಭಾಷೆಗಳು |
ಜನವರಿ 24, 2019 | ಮುಖ್ಯ ಶಿಕ್ಷಕರು |
ಶಾಲಾ ಮಟ್ಟದ ಕೆಲಸಗಳು
ತರಗತಿ ಹಾಗು ಶಾಲಾ ಹಂತದ ಕಲಿಕಾ ಬೋಧನೆಗೆ ಐ.ಸಿ.ಟಿ ಸಂಯೋಜನೆಗಾಗಿ ಹಾಗು ಶಾಲಾ ಅಭಿವೃದ್ಧಿಗಾಗಿ ಕೆಲವು ಶಾಲೆಗಳನ್ನು ಗುರುತಿಸಲಾಗುವುದು. BHS ಶಾಲೆಯಲ್ಲಿ ಈಗಾಗಲೆ ಗಣಿತ ಹಾಗು ಇಂಗ್ಲೀಷ್ ಕೆಲಸಗಳು ಪ್ರಾರಂಭವಾಗಿವೆ. 2018-19ನೇ ಸಾಲಿನಲ್ಲಿ ಗಣಿತ,ಕನ್ನಡ ಹಾಗು ಇಂಗ್ಲೀಷ್ ಕೆಲಸಗಳಿಗೆ ಇನ್ನೂ ಹಲವು ಶಾಲೆಗಳನ್ನು ಗುರುತಿಸಲಾಗುವುದು, ಮುಂದಿನ ವರ್ಷಗಳಲ್ಲಿ ಬೇರೆ ವಿಷಯಗಳಿಗೂ ಪ್ರಾರಂಭಿಸಲಾಗುವುದು.
ಆಭ್ಯಾಸಕ್ರಮದ ರಂಗಗಳು
- Mathematics
- ಕನ್ನಡ
- ಇಂಗ್ಲೀಷ್
- ಶಾಲಾ ನಾಯಕತ್ವ (ಮುಖ್ಯ ಶಿಕ್ಷಕರು)
- ಸಮಾಜ ವಿಜ್ಞಾನ
- ವಿಜ್ಞಾನ
ಉದ್ದೇಶಿತ ಗುರಿಗಳು
- ತಂತ್ರಜ್ಞಾನದ ಮೂಲಕ ಬೋಧನಾ ಕಲಿಕೆಗೆ ಪರಿಚಿತರಾದ ಶಿಕ್ಷಕರ ಗುಂಪೊಂದನ್ನು ಬೆಂಗಳೂರು ದಕ್ಷಿಣ ವಲಯ 3ರ ಸರ್ಕಾರಿ ಅನುದಾನಿತ ಪ್ರೌಢಶಾಲೆಗಳಲ್ಲಿ ಅಭಿವೃದ್ಧಿಪಡಿಸುವುದು.
- ಭಾಗವಹಿಸುವ ಶಾಲೆಗಳಲ್ಲಿ ಶೈಕ್ಷಣಿಕ ಸುಧಾರಣೆ (ವಲಯ ಹಾಗು ಶಾಲಾ ಮಟ್ಟದ ಕೆಲಸ)
- ಬೋಧನಾ ಕಲಿಕೆ, ಬೋಧಕರ ಕಲಿಕೆ ಹಾಗು ಶಾಲಾ ಅಭಿವೃದ್ಧಿಗಾಗಿ ತಂತ್ರಜ್ಞಾನ ಸಂಯೋಜಿತ ಮಾದರಿಗಳ ಪ್ರದರ್ಶನ.
- ಸಾಂಸ್ಥಿಕ ಗುರುತು ಹಾಗು ಸರ್ಕಾರಿ ಅನುದಾನಿತ ಶಾಲೆಗಳ ಅಭಿವೃದ್ಧಿ.
- ಸರ್ಕಾರಿ ಹಾಗು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ನಿರಂತರ ಕಲಿಕೆಯಲ್ಲಿ ತೊಡಗಿರುವ, ಸ್ಪಂದಿಸುವ ವೃತ್ತಿಪರ ಕಲಿಕಾ ಸಮುದಾಯದ ಹೊರಹೊಮ್ಮುವಿಕೆ
---------------------------------------------------------------------------------------------------------------------------------------------------------------------------------
ಸರ್ಕಾರಿ ಪ್ರೌಢ ಶಾಲೆಗಳ ಜೊತೆಗೆ ಎರಡನೇ ಹಂತದ ಕಾರ್ಯಕ್ರಮ (2014-17 ಮುಗಿದಿದೆ)
2014-17ನೇ ಶೈಕ್ಷಣಿಕ ವರ್ಷಗಳಲ್ಲಿ , ಬೆಂಗಳೂರು ದಕ್ಷಿಣ ವಲಯ 3ರ ೧೬ ಸರ್ಕಾರಿ ಪ್ರೌಢ ಶಾಲೆಗಳ ಜೊತೆಗೆ ಕೆಲಸ ಮಾಡಲಾಗಿದೆ. ಈ ಕಾರ್ಯಕ್ರಮದ ಎರೆಡು ಘಟಕಗಳು ವಲಯ ಮಟ್ಟದ ಸಮುದಾಯ ಕಟ್ಟುವ ಕಾರ್ಯಗಾರಗಳು ಹಾಗು ಶಾಲಾ ಮಟ್ಟದ ಶೈಕ್ಷಣಿಕ ಅಭಿವೃದ್ಧಿಯಾಗಿವೆ.
ಕಾರ್ಯಕ್ರಮದ ಕೇಂದ್ರ ಕ್ಷೇತ್ರಗಳು
ಟಿಕಾಲ್ನ ಎರಡನೇ ಹಂತದ ಕಾರ್ಯಕ್ರಮ ಕೆಳಗಿನವುಗಳ ಮೇಲೆ ಕೇಂದ್ರೀಕರಣಗೊಂಡಿತ್ತು:
- ಶಿಕ್ಷಕರಿಗೆ ಹೊಸ ಬೋಧನಾ ಕಲೆಗಳನ್ನು ಪರಿಚಯಿಸುವುದು
- ವಿದ್ಯಾರ್ಥಿಗಳಿಗೆ ಡಿಜಿಟಲ್ ಸಾಕ್ಷರತೆಯನ್ನು ಪರಿಚಯಿಸುವುದು
- ಹೊಸ ತರಗತಿಗಳ ಕಾರ್ಯಗಳನ್ನು ಪ್ರದರ್ಶನ
- ವಿಷಯ ಶಿಕ್ಷಕರು ಹಾಗು ಮುಖ್ಯ ಶಿಕ್ಷಕರ ಸಮುದಾಯವನ್ನು ಕಟ್ಟುವುದು
- ಸರ್ಕಾರಿ ಶಾಲೆಗಳ ಸಾಂಸ್ಥಿಕ ಗುರುತನ್ನು ಸಬಲಗೊಳಿಸುವುದು
ವಲಯ ಮಟ್ಟದ ಕಾರ್ಯಗಾರಗಳು
ವಲಯ ಮಟ್ಟದ ಕೆಲಸಗಳ ದಕ್ಷಿಣ ೩ರ ಶಿಕ್ಷಕರ ಹಾಗು ಮುಖ್ಯ ಶಿಕ್ಷಕರನ್ನು ಒಟ್ಟಿಗೆ ತರುವುದಕ್ಕೆ ಪ್ರಯತ್ನಿಸಲಾಯಿತುಲ್ಲಿ, ಕಾರ್ಯಗಾರ ಹಾಗು ಡಿಜಿಟಲ್ ಮೂಲಕ ಸಾಧ್ಯವಾಗುವ ಕ್ರಮಗಳ ಹಾದಿಯಲ್ಲಿ ಈ ಕೆಳಗಿನವುಗಳನ್ನು ಮಾಡಲಾಯಿತು:
- ಉತ್ತಮ ಬೋಧನೆ-ಕಲಿಕೆ ಅಭ್ಯಾಸಗಳು
- ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಸೂಕ್ತ, ಸುರಕ್ಷಿತ ಕಲಿಕೆ ಸ್ಥಳವನ್ನು ರಚಿಸುವುದು
- ಸಮುದಾಯದೊಂದಿಗೆ ಸಂಪರ್ಕ ಸಾಧಿಸುವುದು ಮತ್ತು ಉತ್ತಮ ಕಲಿಕೆಯ ಫಲಿತಾಂಶಗಳು, ಹದಿಹರೆಯದ ಸಮಸ್ಯೆಗಳು ಮತ್ತು ಶಾಲಾ ಮಕ್ಕಳಿಗೆ ಸುರಕ್ಷಿತ ಸ್ಥಳಾವಕಾಶd ಬಗ್ಗೆ ಕೇಂದ್ರೀಕರಿಸುವುದು.
- ತರಗತಿ ಮತ್ತು ಶಾಲಾ ಪ್ರಕ್ರಿಯೆಗಳಲ್ಲಿ ICT ಏಕೀಕರಣದಿಂದ ಸಕ್ರಿಯಗೊಳಿಸಲಾದ ಮಾದರಿ ವಲಯ ರಚನೆ
- ಶಾಲಾ ಅಭಿವೃದ್ಧಿ, ಪಠ್ಯಕ್ರಮದ ಬದಲಾವಣೆ ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳುವ ವಿಷಯಗಳ ಬಗ್ಗೆ ಸಾಮೂಹಿಕ ರೂಪವನ್ನು ಒಟ್ಟುಗೂಡಿಸುವುದು.
ವಲಯ ಮಟ್ಟದ ಕಲಸದ ಎರಡನೇ ಹಂತದ ಮಾಹಿತಿಗಳು
2014-15 ನೇ ಸಾಲಿನಲ್ಲಿ ವಲಯ ಮಟ್ಟದ ಕೆಲಸಗಳು
ಗಣಿತಶಾಸ್ತ್ರ, ವಿಜ್ಞಾನ, ಸಾಮಾಜಿಕ ವಿಜ್ಞಾನ ಮತ್ತು ಕನ್ನಡದಲ್ಲಿ ಕಾರ್ಯಾಗಾರಗಳನ್ನು ನಡೆಸಲಾಯಿತು. ಸಂಪನ್ಮೂಲಗಳು ಮತ್ತು ಆಲೋಚನೆಗಳನ್ನು ಹಂಚಿಕೊಳ್ಳಲು ಶಾಲೆಗಳ ಶಿಕ್ಷಕರ ಸಹ ರಾಜ್ಯ / ಜಿಲ್ಲಾ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದರು.
May 28, 2014 | Head Masters Orientation |
June 19, 2014 | Mathematics workshop - I |
June 23, 2014 | Social Science workshop - I |
June 26, 2014 | Science workshop - I |
August 1, 2014 | Mathematics workshop - II |
August 4-5, 2014 | Kannada workshop - I |
September 22, 2014 | Mathematics workshop - III |
December 22,29, 2014 | Head Teachers workshop - II |
2015-16 ನೇ ಸಾಲಿನಲ್ಲಿ ವಲಯ ಮಟ್ಟದ ಕೆಲಸಗಳು
ಮೇ 18, 2015 ರಂದು ಮುಖ್ಯ ಶಿಕ್ಷಕರ ಕಾರ್ಯಾಗಾರದೊಂದಿಗೆ ವರ್ಷ ಪ್ರಾರಂಭವಾಯಿತು. ಈ ಕಾರ್ಯಾಗಾರದ ಸಂದರ್ಭದಲ್ಲಿ, ಕಳೆದ ವರ್ಷದ ಕಾರ್ಯಕ್ರಮದ ವಿವರಗಳನ್ನು ಚರ್ಚಿಸಲಾಗಿದೆ ಮತ್ತು ಮುಖ್ಯ ಶಿಕ್ಷಕರು ವರ್ಷದ ಕೆಲಸಕ್ಕಾಗಿ ಅವರ ಆಲೋಚನೆಗಳನ್ನು ಹಂಚಿಕೊಂಡರು.
ಈ ವರ್ಷ, ಜುಲೈನಿಂದ ನವೆಂಬರ್, ಕೆಳಗಿನ ಕಾರ್ಯಾಗಾರಗಳು ಯೋಜಿಸಲಾಗಿದೆ ಮತ್ತು ವಿವರಗಳು ಕೆಳಗಿವೆ.
![]() |
![]() |
ಕನ್ನಡ, ವಿಜ್ಞಾನ ಮತ್ತು ಗಣಿತಶಾಸ್ತ್ರಕ್ಕಾಗಿ ಕಾರ್ಯಗಾರಗಳನ್ನು ಯೋಜಿಸಿ ನಡೆಸಲಾಯಿತು. ಮುಖ್ಯ ಶಿಕ್ಷಕ ಸಹ ನಿಯತಕಾಲಿಕವಾಗಿ ಭೇಟಿಯಾದರು.
ಇದರ ಜೊತೆಯಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಲಯ ಮಟ್ಟದ ವಿಜ್ಞಾನ ಘಟನೆಗಳು ಜಿಎಚ್ಎಸ್ ಜಯನಗರ 9 ನೇ ವಲಯದಲ್ಲಿ ನಡೆಯಿತು.
2016-17 ನೇ ಸಾಲಿನಲ್ಲಿ ವಲಯ ಮಟ್ಟದ ಕೆಲಸಗಳು
ಜೂನ್ 2016 ರಲ್ಲಿ ಮುಖ್ಯ ಶಿಕ್ಷಕರ ಕಾರ್ಯಾಗಾರದೊಂದಿಗೆ ವರ್ಷ ಪ್ರಾರಂಭವಾಯಿತು. ಈ ಕಾರ್ಯಾಗಾರದಲ್ಲಿ, ಕಳೆದ ವರ್ಷದ ಕಾರ್ಯಕ್ರಮದ ವಿವರಗಳನ್ನು ಚರ್ಚಿಸಲಾಯಿತು ಮತ್ತು ಮುಖ್ಯಸ್ಥರು ಈ ವರ್ಷದ ಕೆಲಸಕ್ಕಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
ಈ ವರ್ಷ, ಜುಲೈನಿಂದ ನವೆಂಬರ್ವರೆಗೆ, ಕೆಳಗಿನ ಕಾರ್ಯಾಗಾರಗಳು ಯೋಜಿಸಲಾಯಿತು ಮತ್ತು ವಿವರಗಳು ಕೆಳಗಿವೆ.
ಕನ್ನಡ, ವಿಜ್ಞಾನ ಮತ್ತು ಗಣಿತಶಾಸ್ತ್ರಕ್ಕೆ ಕಾರ್ಯಾಗಾರಗಳನ್ನು ಯೋಜಿಸಲಾಗಿದೆ. ಮುಖ್ಯ ಶಿಕ್ಷಕರು ಸಹ ನಿಯತಕಾಲಿಕವಾಗಿ ಭೇಟಿ ನೀಡುತ್ತಾರೆ.
ಇದಲ್ಲದೆ ಕೆಳಗಿನ ವಲಯ ಮಟ್ಟದ ಕಾರ್ಯಾಗಾರಗಳು / ಘಟನೆಗಳು ಕೂಡ ಯೋಜಿಸಲ್ಪಡುತ್ತವೆ.
- ಹದಿಹರೆಯದ ಸಮಸ್ಯೆಗಳ ಕುರಿತು ಕಾರ್ಯಾಗಾರ / ದೃಷ್ಟಿಕೋನ
- ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ವಲಯ-ಮಟ್ಟದ ಘಟನೆಗಳು
ಶಾಲಾ ಮಟ್ಟದ ಕೆಲಸ
ಜಿಎಚ್ಎಸ್ ಅಗರಾ, ಜಿಎಚ್ಎಸ್ ಬೇಗುರು, ಜಿಎಚ್ಎಸ್ ದೊಮ್ಮಲೂರು, ಜಿಎಚ್ಎಸ್ ಈಜಿಪುರಾ, ಜಿಹೆಚ್ಎಸ್ ಜಯನಗರ 9 ನೇ ಬ್ಲಾಕ್, ಜಿಹೆಚ್ಎಸ್ ಕೊನಪ್ಪನ ಅಗ್ರಹಾರ, ಜಿಎಚ್ಎಸ್ ಟ್ಯಾಂಕ್ ಗಾರ್ಡನ್ ಮತ್ತು ಜಿಎಚ್ಎಸ್ ಯಡಿಯೂರುಗಳಲ್ಲಿ ನಡೆಸಿದ ಶಾಲಾ ಆಧಾರಿತ ಕೆಲಸ. ಈ ಶಾಲೆಯ ಆಧಾರಿತ ಚಟುವಟಿಕೆಗಳ ಗಮನವು ಇಂತಿವೆ:
- ಗಣಿತ ಪ್ರದರ್ಶನ ತರಗತಿಗಳು
- ಕನ್ನಡ ಪ್ರದರ್ಶನ ತರಗತಿಗಳು
- ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಡಿಜಿಟಲ್ ಸಾಕ್ಷರತೆ
- ಡಿಜಿಟಲ್ ಕಥೆಗಳು ಮತ್ತು ಸ್ಥಳೀಯ ಮ್ಯಾಪಿಂಗ್ ಮೂಲಕ ಸಮುದಾಯದ ದಸ್ತಾವೇಜು
- ಪೋಷಕರೊಂದಿಗೆ ಸಂವಹನ ನಡೆಸಲು IVRS ವ್ಯವಸ್ಥೆಯನ್ನು ಅಳವಡಿಸುವುದು
- ವಿಜ್ಞಾನ ಮೇಳಗಳು ಮತ್ತು ಪ್ರದರ್ಶನಗಳು
- ಭಾಷಾ ಉತ್ಸವಗಳು
- ಪೋಷಕರನ್ನು ತಲುಪಲು ಶಾಲೆಗಳು ಆಡಿಯೋ ದೃಶ್ಯ ಸಂಪನ್ಮೂಲಗಳನ್ನು ಮಾಡಲು ಸಹಾಯ
ಗಮನಿಸಿದ ಫಲಿತಾಂಶಗಳು
- ಶಿಕ್ಷಕರು ಹೊಸ ವಿಧಾನಗಳನ್ನು ಕಲಿಯುತ್ತಾರೆ - ತರಗತಿ ಪ್ರಕ್ರಿಯೆಗಳನ್ನು ಬದಲಾಯಿಸುವುದು
- ಶಿಕ್ಷಕರು ಸಂಪನ್ಮೂಲಗಳನ್ನು ರಚಿಸುತ್ತಿದ್ದಾರೆ
- ಸುಧಾರಿತ ವಿದ್ಯಾರ್ಥಿ ಒಡನಾಟ
- ಶಾಲೆಗಳು, ಶಿಕ್ಷಕರು, ಮುಖ್ಯ ಶಿಕ್ಷಕರು ತಮ್ಮನ್ನು ಸಮುದಾಯವಾಗಿ ನೋಡಿದರು
- ಸಾಮಾನ್ಯ ತೊಂದರೆಗಳು
- ಹಂಚಿಕೊಳ್ಳಲಾದ ಪರಿಹಾರಗಳು
- ಉತ್ತಮ ಕೆಲಸವನ್ನು ಒಪ್ಪಿಕೊಳ್ಳುವುದು
- ಶಾಲೆಗಳಲ್ಲಿ ಐಸಿಟಿ ಕಲಿಯುವುದು ವಾಸ್ತವಿಕ ಸಾಧನೆಯಾಗಿದೆ
- ರಚನಾತ್ಮಕವಾದಿ ತರಗತಿ ಕೊಠಡಿಗಳಿಗೆ ಹತ್ತಿರ ಹೋಗುತ್ತದೆ
ಬೆಂಗಳೂರು ದಕ್ಷಿಣ 3 ಸರ್ಕಾರಿ ಪ್ರೌಢಶಾಲೆಗಳ ವೆಬ್ ಪುಟಗಳು
ಬೆಂಗಳೂರು ದಕ್ಷಿಣ 3 ಸರ್ಕಾರಿ ಪ್ರೌಢಶಾಲೆಗಳ ವೆಬ್ ಪುಟಗಳು
ದಕ್ಷಿಣ 3 ವಲಯ ಶಾಲೆಗಳಲ್ಲಿ ಕಂಪ್ಯೂಟರ್ ಪ್ರಯೋಗಾಲಯಗಳು