ಕರ್ನಾಟಕ ಪಬ್ಲಿಕ್ ಶಾಲೆ, ಬಸವನಗುಡಿ - ಮಾಡ್ಯೂಲ್ಗಳು
ಚಿಗುರು ೧ - ಪರಿಚಯದ ಹೊಸ ಹೆಜ್ಜೆ - ಭಾಗ ೧
ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಗುಂಪು ಚಟುವಟಿಕೆಯಿಂದಾಗಿ ಬೇರೆ ಬೇರೆ ತರಗತಿಯ ಕಿಶೋರಿಯರ ನಡುವೆ ಹೆಚ್ಚಿನ ಹಂಚಿಕೆಯಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...
ಚಿಗುರು ೨ - ಪರಿಚಯದ ಹೊಸ ಹೆಜ್ಜೆ - ಭಾಗ ೨
ಈ ಮಾಡ್ಯೂಲ್ ಕಿಶೋರಿಯರು ಹಾಗು ಫೆಸಿಲಿಟೇಟರ್ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಆಡಿಯೋ ಮಾಧ್ಯಮಗಳ ಮೂಲಕ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರು ಉತ್ಸುಕರಾಗಿ ಭಾಗವಹಿಸುವಂತೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...
ಚಿಗುರು ೩ - ಪರಿಚಯದ ಹೊಸ ಹೆಜ್ಜೆ - ಭಾಗ ೩
ಹಿಂದಿನ ವಾರಗಳ್ಲಿ ಕಿಶೊರಿಯರಿಗೆ ಹೊಸ ಹೆಜ್ಜೆ ಹೊಸ ದಿಶೆ ತಂಡದ ಪರಿಚಯ ಆಗಿದೆ. ಆದರೆ ಅವರ ಜೊತೆ ತಂತ್ರಜ್ಙಾನದ de-mystication ಬಗ್ಗೆ ಮಾತನಾಡಲು ಆಗಿಲ್ಲ. ಈ ವಾರ ಆಡಿಯೋ ರೆಕಾರ್ಡರ್ನಲ್ಲಿ ಕಿಶೋರಿಯರು ಹಾಡಿದ ಹಾಡುಗಳನ್ನು ರೆಕಾರ್ಡ್ ಮಾಡಿ ಅವರ ಎದುರಿಗೇ ಅವುಗಳನ್ನು ಅವರ ಚಿತ್ರಗಳ ಜೊತೆಗೆ ಜೋಡಿಸಿ ಮಾಡಿದ ವೀಡಿಯೋವನ್ನು ತೋರಿಸುವುದರಿಂದ ತಂತ್ರಜ್ಙಾನದ ಸುತ್ತಲಿರುವ ಕ್ಲಿಷ್ಟತೆಯನ್ನು ಹೋಗಲಾಡಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...
ಚಿತ್ರಗಳು