ಚಿಗುರು-೧೨-ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ-ಭಾಗ-೨

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೪:೫೨, ೨೪ ಜೂನ್ ೨೦೨೦ ರಂತೆ Anusha (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಸಾರಾಂಶ

ಹಿಂದಿನ ವಾರಗಳಲ್ಲಿ ಕಿಶೋರಿಯರು ಪುರುಷ ಪ್ರಧಾನತೆ ಅಂದರೆ ಏನು, ಅದು ಹೇಗೆ ಪುರುಷರಿಗೆ ಹೆಚ್ಚಿನ ಅಧಿಕಾರ ನೀಡುತ್ತದೆ ಎಂದು ಚರ್ಚಿಸಿದ್ದಾರೆ. ಪುರುಷ ಪ್ರಧಾನತೆಯನ್ನು ಮೀರುವ ಸಾಧ್ಯತೆಗಳನ್ನು ಸಿನೆಮಾದ ತುಣುಕುಗಳು ಹಾಗು ಅವರದೇ ಜೀವನದಲ್ಲಿ ಇರುವ ವ್ಯಕ್ತಿಗಳ ಮೂಲಕ ತಿಳಿದುಕೊಂಡಿದ್ದಾರೆ. ಈ ವಾರ ಅವರು ಅವರೇ ಮಾಡುವ ಪಾತ್ರಾಭಿನಯಗಳ ಮೂಲಕ ಬೇರೆ ಬೇರೆ ರೀತಿ ಪುರುಷ ಪ್ರಧಾನತೆಯನ್ನು ಮೀರುವುದು ಹೇಗೆ ಎಂದು ಚರ್ಚಿಸುತ್ತಾರೆ. ಒಂದೇ ಸಮಸ್ಯೆಯನ್ನು ಬೇರೆ ಬೇರೆ ರೀತಿಯಲ್ಲಿ ನೋಡುವುದರಿಂದ ಅದನ್ನು ಮೀರುವ ರೀತಿ ಕೂಡ ಬೇರೆಯಾಗಿರುತ್ತದೆ, ಹಾಗೆಯೇ ಪುರುಷ ಪ್ರಧಾನತೆಯನ್ನು ಕೂಡ ಬೇರೆ ಬೇರೆ ರೀತಿಯಲ್ಲಿ ಮೀರಬಹುದು ಎಂದು ತಿಳಿದುಕೊಳ್ಳುವುದು ಈ ಮಾಡ್ಯೂಲಿನ ಉದ್ದೇಶ.

ಊಹೆಗಳು

  1. ಕೆಲವು ಕಿಶೋರಿಯರು ಗುಂಪಿನಲ್ಲಿ ಗಲಾಟೆ ಮಾಡಿದರೂ, ಅವರಲ್ಲಿ ಹಲವರಿಗೆ ವೈಯಕ್ತಿಕವಾಗಿ ಆತ್ಮವಿಶ್ವಾಸದ ಕೊರತೆ ಇದೆ.
  2. ಕೆಲವು ಕಿಶೋರಿಯರು ಸ್ವಪ್ರೇರಣೆಯಿಂದಲೇ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಶುರು ಮಾಡಿದ್ದಾರೆ. ಇವರ ಧ್ವನಿಯನ್ನು ಹೆಚ್ಚಿಸುತ್ತಾ ಚರ್ಚೆಯನ್ನು ಅಡ್ಡಿಪಡಿಸುವ ಧ್ವನಿಗಳನ್ನು ಮಟ್ಟ ಹಾಕಬೇಕಿದೆ.
  3. ದಿನೇ ದಿನೇ‌ ನಮ್ಮ ಹಾಗು ಅವರ ನಡುವಿನ ವಿಶ್ವಾಸದ ಮಟ್ಟ ಹೆಚ್ಚುತ್ತಿದೆ ಹಾಗಾಗಿ ಈ ಹಂತದಲ್ಲಿ ನಾವು ಸೂಕ್ಷ್ಮ ವಿಷಯಗಳನ್ನು ಚರ್ಚಿಸಬಹುದಾಗಿದೆ.
  4. ಹಿಂದಿನ ತರಗತಿಯ ಶಿಕ್ಷಕರು ಇವರನ್ನು ಬೈಯಬಹುದು, ಇದರಿಂದ ಕಿಶೋರಿಯರು ನಿರುತ್ಸಾಹರಾಗಿರಬಹುದು.
  5. ಪುರುಷ ಪ್ರಧಾನತೆ ಅಂದರೆ ಏನು ಎಂದು ಗೊತ್ತಾಗಿದೆ.
  6. Venn Diagram ಚಟುವಟಿಕೆಯ ಮೂಲಕ ಕಿಶೋರಿಯರು ಅವರ ಮೇಲೆ ಯಾರು ಯಾರಿಗೆ ಎಷ್ಟು ಅಧಿಕಾರ ಇದೆ ಎನ್ನುವುದನ್ನು ತಿಳಿದುಕೊಂಡಿದ್ದಾರೆ.
  7. ಕನ್ನಡ ಬಿಟ್ಟು ಬೇರೆ ಭಾಷೆಯ ಆಡಿಯೋ/ವಿಡಿಯೋ ತೋರಿಸಿದರೆ ಕೆಲವು ಕಿಶೋರಿಯರಿಗೆ ಅರ್ಥವಾಗುವುದಿಲ್ಲ. ಇದರಿಂದ ಅವರು ಮಾತುಕತೆಯಲ್ಲ ಭಾಗವಹಿಸಲು ಹಿಂಜರಿಯುತ್ತಿದಾರೆ.
  8. ಕಿಶೋರಿಯರು ಓದಲು ಬರೆಯಲು ಹಿಂಜರಿಯುತ್ತಾರೆ. ಆದ್ದರಿಂದ ಸ್ವಯಂ ಪ್ರೇರಿತರಾಗಿ ಅವರು  ಈ ಚಟುವಟಿಕೆಗಳಲ್ಲಿ ಭಾಗವಹಿಸುವದಿಲ್ಲ.
  9. ಹಿಂದಿನ ವಾರ ಪುರುಷ ಪ್ರಧಾನತೆಯ ಕಟ್ಟಳೆಗಳನ್ನು ಮೀರಿರುವವರ ಬಗ್ಗೆ ಕೇಳಿದಾಗ ಒಬ್ಬ ಕಿಶೋರಿಯನ್ನು ಬಿಟ್ಟು ಬೇರೆ ಯಾರೂ ಮಾತನಾಡಿಲ್ಲ.
  10. ಹಿಂದಿನ ತರಗತಿಯ ಶಿಕ್ಷಕರು ಜಾಸ್ತಿ ಸಮಯ ತೆಗೆದುಕೊಳ್ಳುತ್ತಾರೆ.
  11. ನಾವು 'ಹದಿಹರೆಯದ ವ್ಯಾಖ್ಯಾನ' ಮಾಡ್ಯೂಲ್‌ ಸಮಯದಲ್ಲಿ ಮಾಡಿರುವ ಪಾತ್ರಾಭಿನಯಗಳು ಕಿಶೋರಿಯರಿಗೆ ನೆನಪಿರಬಹುದು.

ಉದ್ದೇಶ

ಪುರುಷ ಪ್ರಧಾನತೆಯ ಕಟ್ಟಳೆಗಳನ್ನು ಮೀರುವುದು ಹೇಗೆ ಎನ್ನುವ ಚರ್ಚೆಯನ್ನು ಪ್ರಾರಂಭಿಸುವುದು.

ಪ್ರಕ್ರಿಯೆ

ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳ ಬಗ್ಗೆ ಮಾತನಾಡುವುದು.       

ಹಿಂದಿನ ವಾರಗಳಲ್ಲಿ ಚರ್ಚಿಸಿರುವ ವೀಡಿಯೋಗಳ ಬಗ್ಗೆ ನೆನಪಿಸುವುದು.  ೧೦ ನಿಮಿಷ

ಇದಾದ ನಂತರ ೫ ಜನ ವಾಲಂಟಿಯರ್‌ಗಳನ್ನು ಕರೆಯುವುದು. ಯಾರೂ ಬಂದಿಲ್ಲ ಅಂದರೆ ಮೊದಲೇ ಅಂದುಕೊಂಡಂತಹ ೫ ಹೆಸರುಗಳನ್ನು ಫೆಸಿಲಿಟೇಟರ್‌ ಕರೆಯುವುದು. ೫ ನಿಮಿಷ

ವಾಲಂಟಿಯರ್‌ಗಳನ್ನು ಪ್ರತ್ಯೇಕವಾಗಿ ಕರೆದು"ಮನೆಗೆ ಇಂದು ಹೆಣ್ಣು ನೋಡಲು ಹುಡುಗ ಬಂದಿದ್ದಾನೆ" ಈ ಸಂದರ್ಭವನ್ನು ಕೊಟ್ಟು ಅದನ್ನು ಕಿರುನಾಟಕದಂತೆ ಉಳಿದ ಕಿಶೋರಿಯರ ಮುಂದೆ ಮಾಡಿ ತೋರಿಸಲು ಹೇಳುವುದು. ಈ ಕೆಳಗಿನ ಪಾತ್ರಗಳ ಬಗ್ಗೆ ಅವರಿಗೆ ಹೇಳಿ ತಯಾರಿ ಮಾಡಿಕೊಳ್ಳಲು ಸಮಯವನ್ನು ನೀಡುವುದು.ಈ ಗುಂಪಿನ ಜೊತೆ ಯಾವುದೇ ಫೆಸಿಲಿಟೇಟರ್‌ ಇರುವುದಿಲ್ಲ.       

• ಕಿಶೋರಿ - ೧೫ ವರ್ಷ, ಓದೋದ್ರಲ್ಲಿ ತುಂಬ ಮುಂದು

• ಹೆಣ್ಣು ನೋಡಲು ಬಂದ ಗಂಡು - ಕಿಶೋರಿಗಿಂತ ೧೫ ವರ್ಷಕ್ಕೂ ದೊಡ್ಡವನು, ಶ್ರೀಮಂತ

• ಅಪ್ಪ - ದಿನಗೂಲಿ - ೫೦ ವರ್ಷ, ಬಿಲ್ಡಿಂಗ್‌ ಕಟ್ಟಲು ಹೋಗುತ್ತಾರೆ

• ಅಮ್ಮ - ೪೦ ವರ್ಷ, ಮನೆಗೆಲಸಕ್ಕೆ ಹೋಗುತ್ತಾರೆ

ಈ ೪ ಪಾತ್ರಗಳ ಜೊತೆ ಒಂದು blank character ಕೊಡುವುದು. ಇದಕ್ಕೆ ಕಿಶೋರಿಯರು ಅವರಿಗೆ ಬೇಕಾದ ಪಾತ್ರವನ್ನು ಕೊಡಬಹುದು. (ಉ.ದಾ. ಕಿಶೋರಿಯ ಅಣ್ಣ, ಸಂಬಂಧಿಕರು)

ಇದೇ ಸಮಯದಲ್ಲಿ ಉಳಿದ ಕಿಶೋರಿಯರಲ್ಲಿ ಇಬ್ಬರ ಗುಂಪುಗಳನ್ನು ಮಾಡುವುದು. ಪ್ರತಿ ಗುಂಪಿಗೂ ಒಂದೊಂದು ಚೀಟಿಯನ್ನು ಕೊಡುವುದು. ಪ್ರತಿ ಚೀಟಿಯಲ್ಲೂ ಈ ಕೆಳಗಿನ ಒಂದು ಪದ ಬರೆದಿರುತ್ತದೆ.

ನದಿ, ಮೊಬೈಲ್‌ ಫೋನ್‌, ಕಲ್ಲಂಗಡಿ ಹಣ್ಣು, ಗುಲಾಬಿ ಬಣ್ಣ, ಬಿರಿಯಾನಿ, ಜೀನ್ಸ್‌ ಪ್ಯಾಂಟ್‌, ಇಂಗ್ಲಿಷ್‌, ಕಬಡ್ಡಿ, ಬೈಕ್‌, ನೂರು ರೂಪಾಯಿ ನೋಟು, ಟಿ.ವಿ. ನ್ಯೂಸ್‌

ಕಿಶೋರಿಯರೆಲ್ಲರೂ ಸೇರಿ ಒಂದು ಅರ್ಥಪೂರ್ಣವಾದ ಕಥೆಯನ್ನು ಕಟ್ಟಬೇಕು. ಪ್ರತಿ ಗುಂಪು ಅವರಿಗೆ ಬಂದಿರುವ ಶಬ್ದವನ್ನು ಉಪಯೋಗಿಸಿಕೊಂಡು ಒಂದು ವಾಕ್ಯವನ್ನು ಹೇಳಬೇಕು. ಆ ವಾಕ್ಯವು ಹಿಂದಿನ ವಾಕ್ಯಗಳಿಗೆ ಪೂರಕವಾಗಿರುವಂತೆ ಇರಬೇಕು.  ೧೫ ನಿಮಿಷ

ಕಿರುನಾಟಕದ ನಂತರ ಅದರ ಆಧಾರದ ಮೇಲೆ ಪ್ರತಿ ಪಾತ್ರದ ಸಂಭಾಷಣೆ, ವರ್ತನೆ (behaviour) ಹಾಗು blank  character  ಬಗ್ಗೆ  ಕೇಳುವುದು. ೧೦ ನಿಮಿಷ

ಕಿರುನಾಟಕ ಮಾಡಿದ ಗುಂಪಿಗೆ ಈ ಪರಿಸ್ಥತಿಯನ್ನು ಪಾತ್ರಗಳನ್ನು ಬದಲಿಸದೇ ಬೇರೆ ಯಾವ ಥರ ಮಾಡಬಹುದು?     ಎಂದು ಇನ್ನೊಮ್ಮೆ ಕಿರುನಾಟಕವನ್ನು ಮಾಡಲು ಹೇಳುತ್ತೇವೆ. ಇದರಲ್ಲಿ ಅವರು blank  character ಪಾತ್ರವನ್ನು ಮಾತ್ರ ಬದಲಾಯಿಸಸಬಹುದು. ೨೦  ನಿಮಿಷ

ಎರಡನೆಯ ಕಿರುನಾಟಕದ ನಂತರ, ಕಿರುನಾಟಕಗಳ ನಡುವೆ ಇರುವ ಭಿನ್ನತೆಯನ್ನು ಪಟ್ಟಿ ಮಾಡುವುದು.

ಕಿಶೋರಿಯರನ್ನು ಇವೆರಡನ್ನು ನೋಡಿದರೆ ಏನನಿಸುತ್ತೆ ಎಂದು ಕೇಳುವುದು.        

ಕಿಶೋರಿಯರು ಹೇಳುವ ಅಂಶಗಳನ್ನು ಬರೆದುಕೊಳ್ಳುವುದು.

ಎರಡನೆಯ ಸಲವೂ ಪುರುಷ ಪ್ರಧಾನತೆಯ ಅಂಶಗಳು ಬಂದರೆ ಅವುಗಳನ್ನು ಹೇಗೆ ಮೀರಬಹುದಿತ್ತು (blank character ಬಳಸಿಕೊಂಡು, ಅಪ್ಪ -ಅಮ್ಮನ ಸಂಭಾಷಣೆ) ಎಂದು ಫೆಸಿಲಿಟೇಟರ್‌ ವಿವರಿಸಬಹುದು.

ಎಲ್ಲವನ್ನು ಒಂದೇ ಸಲ ಮೀರಕ್ಕಾಗಲ್ಲ. ಆದರೆ ಈ ಥರಹದ ಬೇರೆ ಬೇರೆ ಪ್ರಯತ್ನಗಳನ್ನು ಮಾಡಿದರೆ ಪುರುಷ ಪ್ರಧಾನತೆಯ ಕಟ್ಟಳೆಗಳನ್ನು ಮೀರಬಹುದು. ಈ ತರಹದ ಬೇರೆ ಬೇರೆ ಅಂಶಗಳನ್ನು ನಾವು ಮುಂದಿನ ವಾರಗಳಲ್ಲಿ ಮಾತನಾಡೋಣ ಎಂದು ಮಾತುಕತೆಯನ್ನು ಮುಗಿಸುವುದು. ೧೦ ನಿಮಿಷ

ಬೇಕಾದ ಸಂಪನ್ಮೂಲಗಳು

• ಶಬ್ದಗಳು ಬರೆದ ಚೀಟಿಗಳು

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

- ಒಬ್ಬ ಮುಖ್ಯ ಫೆಸಿಲಿಟೇಟರ್‌, ಇಬ್ಬರು ಸಹಾಯಕ ಫೆಸಿಲಿಟೇಟರ್‌ಗಳು

ಒಟ್ಟು ಸಮಯ

೭೦ ನಿಮಿಷ    

ಇನ್‌ಪುಟ್‌ಗಳು

• ಕಿಶೋರಿಯರು ಪ್ರದರ್ಶಿಸುವ ಕಿರುನಾಟಕ

ಔಟ್‌ಪುಟ್‌ಗಳು

• ಕಿಶೋರಿಯರು ಬರೆಯುವ ಕಥೆ