ಸಿರಿಯನಿನ್ನೇನ ಬಣ್ಣಿಪೆನು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೬:೦೩, ೨೭ ಆಗಸ್ಟ್ ೨೦೨೦ ರಂತೆ Kishor (ಚರ್ಚೆ | ಕಾಣಿಕೆಗಳು) ಇವರಿಂದ (removed Category:ಪ್ರಥಮ ಭಾಷೆ using HotCat)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಪರಿಕಲ್ಪನಾ ನಕ್ಷೆ

ಹಿನ್ನೆಲೆ/ಸಂದರ್ಭ

ಕಲಿಕೋದ್ದೇಶಗಳು

ಕವಿ ಪರಿಚಯ

ವಿಕಿಪೀಡಿಯಾದಲ್ಲಿನ ರತ್ನಾಕರವರ್ಣಿಯ ಪರಿಚಯ

ಶಿಕ್ಷಕರಿಗೆ ಟಿಪ್ಪಣಿ

ಸಾಂಗತ್ಯ : ಅಚ್ಚಕನ್ನಡ ಛಂದಸ್ಸಿನ ಚರಿತ್ರೆಯಲ್ಲಿ ಸು. 14-15ನೆಯ ಶತಮಾನಗಳಲ್ಲಿ ರೂಪಗೊಂಡ ಮಟ್ಟು ಇದು. (ನೋಡಿ- ಸಾಂಗತ್ಯ) ಅಲ್ಲಿಂದೀಚೆಗೆ ಕನ್ನಡಕವಿಗಳು ಈ ಛಂದಸ್ಸಿನಲ್ಲಿ ವಿಪುಲವಾಗಿ ಕೃತಿರಚನೆ ಮಾಡಿದ್ದಾರೆ. ರತ್ನಾಕರ ವರ್ಣಿ. ನಂಜುಂಡಕವಿ ಮೊದಲಾದವರು ರಚಿಸಿರುವ ಪ್ರಸಿದ್ಧ ಕಾವ್ಯಗಳು ಈ ಛಂದಸ್ಸಿನಲ್ಲಿಯೇ ಇವೆ. ಇದರ ಬೆಳೆವಣಿಗೆಯಲ್ಲಿ ಎರಡು ಮುಖ್ಯವಾದ ಘಟ್ಟಗಳಿವೆ. ಸು. 1410ರಲ್ಲಿದ್ದ ದೇಪರಾಜನ ಸೊಬಗಿನ ಸೋನೆ ಮತ್ತು ಈಚೆಗೆ ಸೊಬಗಿನ ಸೋನೆ ಎಂಬ ಮಾತಿನ ಜೊತೆಗೆ ಸೇರಿಕೊಂಡು ಬಂದಿರುವ ತತ್ತ್ವದ ಸೊಬಗಿನ ಸೋನೆ, ಮದನ ಮೋಹಿನೀ ಕಥೆ, ಸೊಬಗಿನ ಸೋನೆ ವರ್ಣ-ಇಂಥ ಕೆಲವು ಕೃತಿಗಳಲ್ಲಿ ತೋರುವ ಲಕ್ಷಣ ಒಂದು ರೀತಿಯಾಗಿಯೂ ರತ್ನಾಕರವರ್ಣಿಯ ಭರತೇಶ ವೈಭವ, ಹೊನ್ನಮ್ಮನ ಹದಿಬದೆಯಧರ್ಮ ಇಂಥ ಕೃತಿಗಳಲ್ಲಿ ತೋರುವ ಲಕ್ಷಣ ಇನ್ನೊಂದು ರೀತಿಯಾಗಿಯೂ ಇದೆ. ಸೊಬಗಿನ ಸೋನೆಯ ಧಾಟಿನ ಛಂದಸ್ಸನ್ನು ಸಾಮಾನ್ಯವಾಗಿ ಸಾಂಗತ್ಯವೆಂದೇ ತಿಳಿಯಲಾಗಿದೆ. ಆದರೆ ಅದನ್ನು ಸೊಬಗಿನ ಸೋನೆಯ ಛಂದಸ್ಸು (ವರ್ಣ) ಎಂದು ಬೇರೆಯಾಗಿಟ್ಟುಕೊಳ್ಳುವುದೇ ಸೂಕ್ತ. ಹಿಂದೆಯೇ ಇದನ್ನು ಸೊಬಗಿನ ಸೋನೆಯ ವರ್ಣ ಎಂದು ಪ್ರತ್ಯೇಕವಾಗಿ ಕರೆದಿರುವುದುಂಟು. ಮುಂದೆ ಇದರಲ್ಲಿ ಮಾರ್ಪಾಟು ತಲೆದೋರಿ ಸ್ಪಷ್ಟರೂಪಕ್ಕೆ ಬಂದು ಸಾಂಗತ್ಯವಾಗಿರಬಹುದೆಂದೂ ಊಹಿಸಬಹುದು.

ಸೊಬಗಿನ ಸೋನೆಯ ಛಂದಸ್ಸಿನ ಸಾಮಾನ್ಯಲಕ್ಷಣ :

ಎರಡು ಸಮಾರ್ಥಗಳನ್ನುಳ್ಳ 4 ಪಾದಗಳು. ಪೂರ್ವಾರ್ಧದ 1, 2ನೆಯ ಪಾದಗಳಲ್ಲಿ ಕ್ರಮವಾಗಿ 4 ಮತ್ತು 3 ವಿಷ್ಣು ಗಣಗಳು ; ಉತ್ತರಾರ್ಧದಲ್ಲಿಯೂ ಹೀಗೆಯೇ. ವಿಷ್ಣುಗಳಿಗೆ ಪರ್ಯಾಯವಾಗಿ ಬ್ರಹ್ಮವೋ ರುದ್ರವೋ ಬರಬಹುದು.

ನಿದರ್ಶನಕ್ಕೆ ಪೂರ್ವಾರ್ಧ : ಎಲೆ ಪ್ರಿಯೆ | ಕೇಳು ತೊ | ಳದ ಮುತ್ತು | ಕರತಳಾ

ಮಳಕವೀ | ಕಥೆ ಸೊಬ | ಗಿನ ಸೋನೆ ||

(ಸೊಬಗಿನ ಸೋನೆ, 1-21)

ಸಾಂಗತ್ಯಛಂದಸ್ಸಿನ ಸಾಮಾನ್ಯ ಲಕ್ಷಣ :

ಎರಡು ಸಮಾರ್ಧಗಳನ್ನುಳ್ಳ 4 ಪಾದಗಳು : ಪೂರ್ವಾರ್ಧದ 1, 2ನೆಯ ಪಾದಗಳಲ್ಲಿ ಕ್ರಮವಾಗಿ 4 ವಿ. ಮತ್ತು 2ವಿ + 1 ಬ್ರ ; ಉತ್ತರಾರ್ಧದಲ್ಲಿಯೂ ಹೀಗೆಯೇ. ಆದರೆ ವಿಷ್ಣು ಮತ್ತು ಬ್ರಹ್ಮಗಳ ಸ್ಥಾನದಲ್ಲಿ ಪರ್ಯಾಯಗಣಗಳು ಬರಬಹುದು. ನಿದರ್ಶನಕ್ಕೆ ಪೂರ್ವಾರ್ಧ :

ಪರಮ ಪ | ರಂಜ್ಯೋತಿ | ಕೋಟಿ ಚಂ | ದ್ರಾದಿತ್ಯ

ಕಿರಣ ಸು | ಜ್ಞಾನ ಪ್ರ | ಕಾಶ ||

(ಭರತೇಶವೈಭವ).

ಪಿರಿಯಕ್ಕರ, ಗೀತಿಕೆ, ತ್ರಿಪದಿ, ಏಳೆ ಈ ಅಂಶವೃತ್ತಗಳಲ್ಲಿ ಯಾವುದಾದರೊಂದು ಮೂಲಕವಾಗಿ ಸಾಂಗತ್ಯ ಹುಟ್ಟಿರಬೇಕೆಂದು ವಿದ್ವಾಂಸರು ವಿಚಾರ ಮಾಡಿದ್ದಾರೆ. ಆದರೆ ವಾಸ್ತವವಾಗಿ ಯಾವುದೇ ಕನ್ನಡ ಛಂದಸ್ಸಿನ ಮೂಲದಿಂದ ಸಾಂಗತ್ಯದ ರೂಪಸಿದ್ದಿಯನ್ನು ತೃಪ್ತಿಕರವಾಗಿ ಸಾಧಿಸುವುದು ಕಷ್ಟ. ಜನಪ್ರಿಯವಾದ ತ್ರಿಪದಿಯ ಧಾಟಿ ಅದರ ಅವಿರ್ಭಾವದಲ್ಲಿ ಕೆಲಮಟ್ಟಿಗೆ ಪ್ರೇರಣೆ ಕೊಟ್ಟಿರಬಹುದು. ಸೊಬಗಿನ ಸೋನೆಯ ಮಟ್ಟಿನಲ್ಲಿ ಪ್ರತಿಯರ್ಧದ ಕೊನೆಗೆ ಬರುವ ವಿಷ್ಣುಗಣ ಕಾಲಕ್ರಮದಲ್ಲಿ ಆಲಾಪದ ಆವಶ್ಯಕತೆಗಾಗಿ ಬ್ರಹ್ಮಗಣವಾಗಿ ಮಾರ್ಪಟ್ಟು ಸ್ಥಿರಗೊಂಡು ಸಾಂಗತ್ಯವಾಗಿರಬಹುದೇನೋ.

ಅಚ್ಚಕನ್ನಡ ಛಂದಸ್ಸಿನ ಮಟ್ಟುಗಳಲ್ಲಿ ಈ ಮೇಲೆ ವಿವರಿಸಿದ ಪ್ರಸಿದ್ಧವೂ ಲಾಕ್ಷಣಿಕೋಕ್ತವೂ ಆದ ಕೆಲವು ಮಟ್ಟುಗಳು ಮಾತ್ರವಲ್ಲದೆ, ಜನಪದ ಸಾಹಿತ್ಯ ಹಾಗೂ ಯಕ್ಷಗಾನಾದಿಗಳಲ್ಲಿ ಇನ್ನೂ ಕೆಲವು ಮಟ್ಟುಗಳು-ತ್ಯಾಗಮಾನ, ಯಾಲಪದ ಮೊದಲಾದ ಹೆಸರಿನಲ್ಲಿ-ಕಂಡುಬರುತ್ತವೆ. ಇವುಗಳಲ್ಲಿ ಕೆಲವು ಅಂಸಗಣಗಳ ಕಟ್ಟಿನಲ್ಲಿ ನಡೆದರೆ ಇನ್ನು ಕೆಲವು ಮಾತ್ರಗಣಗಳ ಕಟ್ಟಿನಲ್ಲಿವೆ. ಈ ಬಗೆಯ ಸಾಹಿತ್ಯ ಸಂಗ್ರಹ ಸಮಗ್ರವಾಗಿ ನಡೆದು, ಅವುಗಳ ಛಂದಸ್ಸಿನ ಶಾಸ್ತ್ರೀಯ ಸಮಾಲೋಚನೆ ಇನ್ನೂ ನಡೆಯಬೇಕಾಗಿದೆ. ಎಂ.ಗೋಪಾಲಕೃಷ್ಣ ಅಡಿಗ, ಪ್ರೊ.ನಿಸಾರ್ ಅಹಮದ್, ಚೆನ್ನವೀರ ಕಣವಿ ಮೊದಲಾದವರು.

ಈ ಕಾಲದ ಪ್ರಸಿದ್ಧ ಕಾದಂಬರಿಕಾರರು: ಕುವೆಂಪು, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಐಯ್ಯಂಗಾರ್, ಅ.ನ.ಕೃ, ಯು.ಆರ್.ಅನಂತಮೂರ್ತಿ, ಡಾ.ಚಂದ್ರಶೇಖರ್ ಕಂಬಾರ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಮುಂತಾದವರು. ಈ ಕಾಲದ ಪ್ರಸಿದ್ಧ ನಾಟಕಕಾರರು: ಟಿ.ಪಿ.ಕೈಲಾಸಂ, ಶ್ರೀರಂಗ, ಕುವೆಂಪು, ಬಿ.ಎಂ.ಶ್ರೀ, ಗಿರೀಶ್ ಕಾರ್ನಾಡ್, ಬಿ. ವಿ. ಕಾರಂತ್ ಮೊದಲಾದವರು.

ಹೆಚ್ಚುವರಿ ಸಂಪನ್ಮೂಲ

1 ಪದ್ಯದ ಗಮಕ ವಾಚನ

ಹಳಗನ್ನಡವನ್ನು ಬಿಡಿಸಿ ಓದುವುದು

ಪದ್ಯದ ಓದನ್ನು ಕೇಳುವರು ಆಲಿಸುವುದು
2 ಚಿತ್ರಗಳನ್ನು ಹೊಂದಿಸಿ ಮಾತನಾಡುವುದು
3 ಅರಮನೆ - ಎಂದ ತಕ್ಷಣ ನೆನಪಿಗೆ ಬರುವ ಅಂಶಗಳನ್ನು ಪರಿಲ್ಪನಾನಕ್ಷಯಲ್ಲಿ ಬರೆಯಿರಿ ಯುದ್ದ - ಅರಮನೆ ಇತ್ಯಾದಿ ವಸ್ತುಗಳ ಬಗ್ಗೆ ಚರ್ಚೆ ಮಾತನಾಡುವುದು
4 ವೀಡಿಯ ಪುಸ್ತಕವನ್ನು ನೋಡಿ ವೀಡಿಯೋ ವೀಕ್ಷಣೆ -
  1. ಭರತ ಬಾಹುಬಲಿಯ ಕಥೆ
  2. ಬಾಹುಬಲಿಯ ಸಂಕ್ಷಿಪ್ತ ಚರಿತ್ರೆ

ರಾಜನ ದರ್ಬಾರ್‌ ವೀಡಿಯೋಗಳು

ಆಲಿಸುವುದು / ಓದು
5 ಪರಿಕಲ್ಪನಾ ನಕ್ಷೆಯಲ್ಲಿ ಮಕ್ಕಳು ಸೇರಿಸುವ ಹೆಚ್ಚಿನ ವಿಷಯವನ್ನು ಸೇರಿಸಿ ಮಾತನಾಡುವುದು
6 Picture stories - ರಾಜ ಮತ್ತು ಅರಮನೆ ವಿಷಯವಾಗಿ ಗುಂಪಿನಲ್ಲಿ ಮಕ್ಕಳು , ಚಿತ್ರಾಧಾರಿತ ಕಥೆಯನ್ನು ರಚಿಸುವರು - ಬರಹ/ಅಭಿವ್ಯಕ್ತಿ
7 ಭಾಷಾ ಸಮೃದ್ಧಿ ಶಬ್ಧಕೋಶ - ಇಂಡಿಕ್‌ ಅನಾಗ್ರಾಮ್ ಬಳಸಿ ಕೇಳುವುದು / ಮಾತನಾಡುವುದು
ಪ್ರಾಸ ಪದ ವಿಶೇಷತೆ – h5p
8 ಭಾಷಾ ಸಮೃದ್ಧಿ About the poet – images, wikipedia page bio, ಕಂದಪದ್ಯದ ಬಗ್ಗೆ ವಿವರಣೆ
ರಾಜನ ಮೇಲಿನ ಜಾನಪದ ಕಥೆಯನ್ನು ಹೇಳಿರಿ
This poem has been used by Lewis Carrol
9 ಸಮನಾಂತರ ಪದ್ಯವನ್ನು ಓದಿ ಕೇಳುವುದು /ಮಾತನಾಡುವುದು/ ಓದುವುದು

ಸಾರಾಂಶ


ಪರಿಕಲ್ಪನೆ ೧

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಚಟುಟವಟಿಕೆ-೨

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಪರಿಕಲ್ಪನೆ ೨

ಚಟುಟವಟಿಕೆ-೧

  1. ವಿಧಾನ/ಪ್ರಕ್ರಿಯೆ
  2. ಸಮಯ
  3. ಸಾಮಗ್ರಿಗಳು/ಸಂಪನ್ಮೂಲಗಳು
  4. ಹಂತಗಳು
  5. ಚರ್ಚಾ ಪ್ರಶ್ನೆಗಳು

ಭಾಷಾ ವೈವಿಧ್ಯತೆಗಳು

ಶಬ್ದಕೋಶ

ವ್ಯಾಕರಣ/ಅಲಂಕಾರ/ಛಂದಸ್ಸು

ಭಾಷಾ ಚಟುವಟಿಕೆಗಳು/ ಯೋಜನೆಗಳು

ಪಠ್ಯ ಬಗ್ಗೆ ಹಿಮ್ಮಾಹಿತಿ