ಪಾರ್ಶ್ವ ಕೋನಗಳು
ಬದಲಾವಣೆ ೨೦:೪೪, ೯ ಸೆಪ್ಟೆಂಬರ್ ೨೦೨೦ ರಂತೆ Girija (ಚರ್ಚೆ | ಕಾಣಿಕೆಗಳು) ಇವರಿಂದ (→ವಿಧಾನ/ಬೆಳವಣಿಗೆಯ ಪ್ರಶ್ನೆಗಳುಗೆ)
ಪಾರ್ಶ್ವ ಕೋನಗಳು ಸಾಮಾನ್ಯ ಶೃಂಗ ಮತ್ತು ಸಾಮಾನ್ಯ ಬಾಹುವನ್ನು ಹೊಂದಿರುವ ಎರಡು ಕೋನಗಳಾಗಿವೆ. ಕೋನದ ಶೃಂಗವು ಕೋನಗಳ ಬಾಹುಗಳನ್ನು ರೂಪಿಸುವ ಕಿರಣಗಳ ಅಂತ್ಯ ಬಿಂದುವಾಗಿದೆ.
ಉದ್ದೇಶಗಳು
ಮಕ್ಕಳನ್ನು ಪಾರ್ಶ್ವ ಕೋನಗಳ ಪರಿಕಲ್ಪನೆಗೆ ಪರಿಚಯಿಸಿ
ಅಂದಾಜು ಸಮಯ
೨೦ ನಿಮಿಷಗಳು
ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ
ಬಿಂದು, ರೇಖೆಗಳು, ಕೋನಗಳ ಪೂರ್ವ ಜ್ಞಾನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
- ಡಿಜಿಟಲ್ ಅಲ್ಲದ: ವರ್ಕ್ಶೀಟ್ ಮತ್ತು ಪೆನ್ಸಿಲ್.
- ಜಿಯೋಜಿಬ್ರಾ ಕಡತ :"ಪಾರ್ಶ್ವ ಕೋನಗಳು"
Download this geogebra file from this link.
ವಿಧಾನ/ಬೆಳವಣಿಗೆಯ ಪ್ರಶ್ನೆಗಳು:
- ಪೂರ್ವ ಕರ ನಿರತ ಚಟುವಟಿಕೆ ( ಆಯ್ಕೆಗೆ ಬಿಟ್ಟದ್ದು (ಐಚ್ಛಿಕ) - ಮಕ್ಕಳು ಪತ್ರಿಕೆಯ ತುಂಡುಕಾಗದಗಳಲ್ಲಿ ಕೋನಗಳನ್ನು ರೂಪಿಸಬಹುದು ಮತ್ತು ಅವುಗಳನ್ನು ಒಟ್ಟಿಗೆ ಇರಿಸಿ ಮತ್ತು ಉಂಟಾದ ಕೋನದ ರೂಪವನ್ನು ಗಮನಿಸಿ).
- ಕೋನಗಳ ಅಳತೆಯನ್ನು ಬದಲಾಯಿಸಿ - ಕೋನ 1 ಮತ್ತು ಕೋನ 2 ರ ಜಾರುಕವನ್ನು ಬಳಸಿ
- ಎರಡು ಕೋನಗಳು ಒಂದಕ್ಕೊಂದು ಪಕ್ಕದಲ್ಲಿದ್ದರೆ, ಏನು ರೂಪುಗೊಳ್ಳುತ್ತದೆ
- ಕೋನಗಳನ್ನು ಪರಸ್ಪರ ಪಕ್ಕದಲ್ಲಿ ಇರಿಸಲು ಜಾರುಕವನ್ನು ಬಳಸಿ
- ಎರಡು ಕೋನಗಳಿಂದಾಗಿ ರೂಪುಗೊಳ್ಳುವ ಕೋನ ಯಾವುದು?
- ಎರಡನ್ನು ಪರಸ್ಪರ ಇರಿಸಿದಾಗ ರೂಪುಗೊಂಡ ಕೋನದ ಅಳತೆ ಏನು?
- ಎರಡು ಕೋನಗಳನ್ನು ಪಕ್ಕದಲ್ಲಿ ಮಾಡಲು ಬೇರೆ ಯಾವುದದರೊ ಮಾರ್ಗವಿದೆಯೇ?
- ಎರಡು ಕೋನಗಳ ಮೌಲ್ಯಗಳನ್ನು ಮತ್ತು ಅವುಗಳ ಮೊತ್ತವನ್ನು ವರ್ಕ್‌ಶೀಟ್‌ನಲ್ಲಿ ಪಟ್ಟಿ ಮಾಡಿ
ಕ್ರಮ
ಸಂಖ್ಯೆ |
ಕೋನ ABC | ಕೋನ DEF | ಕೋನ ABC + ಕೋನ DEF | ಕೋನ O | ಕೋನ O ಗಿಂತ ಎರಡು ಕೋನಗಳ ಮೊತ್ತವು ದೊಡ್ಡದಾಗಿದೆಯೇ? |
---|---|---|---|---|---|
ಮೌಲ್ಯ ನಿರ್ಣಯ ಪ್ರಶ್ನೆಗಳು
ಪಾರ್ಶ್ವ ಕೋನಗಳೇಂದರೇನು?