ಎರಡು ಬಾಹು ಮತ್ತು ಕೋನವನ್ನು ಹೊಂದಿರುವ ತ್ರಿಭುಜದ ರಚನೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ತ್ರಿಭುಜದ ಎರಡು ಬಾಹುಗಳು ಮತ್ತು ಕೋನವು ತಿಳಿದಿರುವಾಗ ಮತ್ತು ಕೊಟ್ಟಿರುವ ಕೋನದ ಪಾತ್ರವನ್ನು ಗುರುತಿಸಿದಾಗ, ಈ ನಿರ್ಮಾಣವು ನಿರ್ದಿಷ್ಟ ನಿಯತಾಂಕಗಳಿಗೆ ಬಾ.ಕೋ.ಬಾ ಸರ್ವಸಮತೆಯ ನಿಯಮವನ್ನು ಅನುಸರಿಸುತ್ತದೆ.

ಉದ್ದೇಶಗಳು:

  • ಎರಡು ಬಾಹು ಮತ್ತು ಕೋನಗಳನ್ನು ಒಳಗೊಂಡ ತ್ರಿಭುಜವನ್ನು ರಚಿಸಲು
  • ಕೊಟ್ಟಿರುವ ಕೋನವನ್ನು ಅರ್ಥಮಾಡಿಕೊಳ್ಳಲು ಎರಡು ಬಾಹುಗಳನ್ನು ನೀಡಿದಾಗ ಕೋನವನ್ನು ಸೇರಿಸಬೇಕು

ಅಂದಾಜು ಸಮಯ:

೨೦ ನಿಮಿಷಗಳು

ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ

ಬಿಂದು, ರೇಖೆಗಳು, ಕೋನಗಳು,ತ್ರಿಭುಜದ ಅಂಶಗಳು ಮತ್ತು ತ್ರಿಭುಜದ ಗುಣಲಕ್ಷಣಗಳ ಪೂರ್ವ ಜ್ಞಾನ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.

ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್ Download this geogebra file from this link.


ವಿಧಾನ/ಬೆಳವಣಿಗೆಯ ಪ್ರಶ್ನೆಗಳು:

  • ನಿರ್ದಿಷ್ಟ ಕೋನಗಳು ಮತ್ತು ಬಾಹುಗಳಿಗಾಗಿ, ನೀವು ಯಾವ ನಿಯತಾಂಕದೊಂದಿಗೆ ರಚನೆಯನ್ನು ಪ್ರಾರಂಭಿಸುತ್ತೀರಿ.
  • ಕೊಟ್ಟಿರುವ ಕೋನವನ್ನು ಮೊದಲು ಚಿತ್ರಿಸಿದರೆ ರಚನೆಯ ಮುಂದಿನ ಹಂತಗಳು ಯಾವುವು.
  • ಕೊಟ್ಟಿರುವ ಕೋನವನ್ನು ಸೇರಿಸದ ರೀತಿಯಲ್ಲಿ ತ್ರಿಭುಜವನ್ನು ಎಳೆದರೆ ಎಷ್ಟು ತ್ರಿಭುಜಗಳು ಸಾಧ್ಯ (- ಎರಡನೇ ಬಾಹುವನ್ನು B ಬಿಂದುವಿನಿಂದ ಕೋನದ ಭುಜದ ಉದ್ದಕ್ಕೂ ಗುರುತಿಸದಿದ್ದರೆ )
  • ನೀವು ನಿರ್ದಿಷ್ಟ ಬಾಹುಗಳೊದಿಗೆ ರಚನೆಯನ್ನು ಪ್ರಾರಂಭಿಸಿದರೆ, ಅಗತ್ಯವಿರುವ ತ್ರಿಭುಜವನ್ನು ಪೂರ್ಣಗೊಳಿಸಲು ಇತರ ಎರಡು ನಿಯತಾಂಕಗಳಲ್ಲಿ ಯಾವುದನ್ನು ತೆಗೆದುಕೊಳ್ಳಬೇಕು.

ಮೌಲ್ಯ ನಿರ್ಣಯ ಪ್ರಶ್ನೆಗಳು:

  • ಕೊಟ್ಟಿರುವ 2 ಬಾಹು ಮತ್ತು ಕೋನಕ್ಕೆ ಎಷ್ಟು ತ್ರಿಭುಜಗಳು ಸಾಧ್ಯ?
  • ತ್ರಿಭುಜವನ್ನು ರಚಿಸಲು 2 ಬಾಹು ಮತ್ತು 1 ಕೋನವನ್ನು ನೀಡಿದರೆ ನಿರ್ದಿಷ್ಟಪಡಿಸಬೇಕಾದ ಹೆಚ್ಚುವರಿ ಸ್ಥಿತಿ ಏನು?