ಚಿಂತನೆಯನ್ನು ಕಲಿಸುವ ಕುರಿತು ಶಿಕ್ಷಕರಿಗೆ ಅಭ್ಯಾಸಕ್ರಮ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

"ಚಿಂತನೆಯನ್ನು ಕಲಿಸುವುದು" ಇತ್ತಚೆಗೆ ಶಿಕ್ಷಣದ ಒಂದು ಪ್ರಮುಖ ಗುರಿಯಾಗಿದೆ. ಬೋಧನೆಯ ಈ ಅಂಶವನ್ನು ಎನ್.ಇ.ಪಿ (NEP)ಯಲ್ಲಿ ಒತ್ತಿಹೇಳಲಾಗಿದೆ ಮತ್ತು ಭಾರತದಲ್ಲಿನ ಅನೇಕ ಹೊಸ ವಿಶ್ವವಿದ್ಯಾಲಯಗಳು ತಮ್ಮ ವಿದ್ಯಾರ್ಥಿಗಳಿಗೆ ವಿಮರ್ಶಾತ್ಮಕ ಚಿಂತನೆಯ ಅಂಶಗಳನ್ನು ಕಡ್ಡಾಯವಾಗಿ ಕಲಿಸುತ್ತವೆ. ಆದರೆ ಚಿಂತನೆಯನ್ನು ಕಲಿಸುವುದು ಎಂದರೇನು?

ಈ ಕಿರು ಅಭ್ಯಾಸಕ್ರಮದಲ್ಲಿ, ಚಿಂತನೆಯನ್ನು ಕಲಿಸುವ ಕೆಲವು ಪ್ರಾಯೋಗಿಕ ವಿಧಾನಗಳನ್ನು ನಾವು ಅನ್ವೇಷಿಸುತ್ತೇವೆ. ಮೊದಲಿಗೆ ಚಿಂತನೆಯ ಸ್ವರೂಪ, ವಿಭಿನ್ನ ರೀತಿಯ ಚಿಂತನೆಗಳು, ಚಿಂತನೆ ಮತ್ತು ಭಾಷೆಯ ನಡುವಿನ ಸಂಬಂಧ ಮತ್ತು ಇತರ ಸಂಬಂಧಿತ ವಿಷಯಗಳನ್ನು ಅರ್ಥಮಾಡಿಕೊಳ್ಳುವುದರ ಮೂಲಕ ನಾವು ಪ್ರಾರಂಭಿಸುತ್ತೇವೆ. ನಾವು ವಿಭಿನ್ನ ರೀತಿಯ ಚಿಂತನೆ ಮಾಡುವುದನ್ನು ಕಲಿಸುವ ಹಲವು ವಿಧಾನಗಳನ್ನು ನೋಡುತ್ತೇವೆ. ಈ ಚರ್ಚೆಗಳಲ್ಲಿ ಸುಂದರ್ ಸರುಕ್ಕೈ ಅವರು ಬರೆದು ಹಲವು ಭಾಷೆಗಳಿಗೆ ಅನುವಾದಗೊಂಡಿರುವ 'ಮಕ್ಕಳಿಗಾಗಿ ತತ್ತ್ವಚಿಂತನೆ' ಪುಸ್ತಕವನ್ನು ಬಳಸುತ್ತೇವೆ.

ಅಭ್ಯಾಸಕ್ರಮವು ಒಂದುವರೆ ಗಂಟೆಯ ನಾಲ್ಕು ಅವಧಿಗಳಲ್ಲಿ ನಡೆಯುತ್ತದೆ  ಪ್ರತಿ ಅಧಿವೇಶನದಲ್ಲಿ ನಾವು ಚರ್ಚಿಸುವ ವಿಚಾರಗಳನ್ನು ಕಾರ್ಯಗತಗೊಳಿಸುವುದಕ್ಕೆ ಸಂಬಂಧಪಟ್ಟ ಕೆಲವು ಪ್ರಾಯೋಗಿಕ ಅಂಶಗಳನ್ನು ಕುರಿತು ಭಾಗವಹಿಸುವವರು ಒಟ್ಟಾಗಿ ಚಿಂತನೆ ಹಾಗೂ ಚರ್ಚೆ ಮಾಡಲು ಚಟುವಟಿಕೆಗಳು ಇರುತ್ತದೆ.

ನೋಂದಣಿ ವಿವರಗಳು

  1. ಎಲ್ಲಾ ಶಾಲಾ ಶಿಕ್ಷಕರು ಮತ್ತು ತರಬೇತಿಯಲ್ಲಿರುವ ವಿದ್ಯಾರ್ಥಿ ಶಿಕ್ಷಕರು ಭಾಗವಹಿಸಬಹುದು.
  2. ನೋಂದಣಿ: ರೂ. 500/-
  3. ನೋಂದಣಿಗೆ ಕೊನೆಯ ದಿನಾಂಕ: 16 ಡಿಸೆಂಬರ್ 2021.
  4. ಅಧಿವೇಶನಗಳ ದಿನಾಂಕಗಳು - ಡಿಸೆಂಬರ್  26, 27, 28  ಮತ್ತು 29, ಸಮಯ ಸಂಜೆ 4 ರಿಂದ 5.30ಗಂಟೆಯವರೆಗೆ.
  5. ನೋಂದಣಿಯಾಗಿ ಭಾಗವಹಿಸುವವರು  “ಮಕ್ಕಳಿಗಾಗಿ  ತತ್ವಚಿಂತನೆ” ಪುಸ್ತಕದ ಪ್ರತಿಯನ್ನು ಸ್ವೀಕರಿಸುತ್ತಾರೆ, ಇದರಿಂದ ಅವರು ಅಭ್ಯಾಸಕ್ರಮ ಪ್ರಾರಂಭವಾಗುವ ಮೊದಲು ಅದನ್ನು ಓದಬಹುದು. ಈ ಪುಸ್ತಕದ ವೆಚ್ಚವನ್ನು ನೋಂದಣಿ ಶುಲ್ಕದಲ್ಲಿ ಸೇರಿಸಲಾಗಿದೆ.
  6. ಅಭ್ಯಾಸಕ್ರಮದಲ್ಲಿ ಭಾಗವಹಿಸುವುದಕ್ಕೆ ನೋಂದಾಯಿಸುವವರು ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ - https://tinyurl.com/TT-SS-KN1


ಅಭ್ಯಾಸಕ್ರಮದಲ್ಲಿ ಭಾಗವಹಿಸುವವರು 4-ದಿನದ ಅಭ್ಯಾಸ ಕ್ರಮ ಪೂರ್ಣಗೊಳಿಸಿದ ನಂತರ ಪ್ರಮಾಣಪತ್ರವನ್ನು ಸಹ ಸ್ವೀಕರಿಸುತ್ತಾರೆ.

ಅಭ್ಯಾಸಕ್ರಮದ ಅಧ್ಯಾಪಕರ ಬಗ್ಗೆ

ಸುಂದರ್ ಸರುಕ್ಕೈ:

ಬೇರ್ಫೂಟ್ ಫಿಲಾಸಫರ್ಸ್ ಉಪಕ್ರಮದ (www.barefootphilosophers.org) ಸಂಸ್ಥಾಪಕ, ಸುಂದರ್ ಸರುಕ್ಕೈ ರವರು ನೈಸರ್ಗಿಕ ಮತ್ತು ಸಾಮಾಜಿಕ ವಿಜ್ಞಾನಗಳ ತತ್ತ್ವಶಾಸ್ತ್ರ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ತತ್ವಶಾಸ್ತ್ರವನ್ನು ವಿವಿಧ ಸಮುದಾಯಗಳು ಮತ್ತು ಸ್ಥಳಗಳಿಗೆ ಸಕ್ರಿಯವಾಗಿ ಪರಿಚಯಿಸುತ್ತಿದ್ದಾರೆ ಹಾಗೂ ಮಕ್ಕಳಿಗೆ ತತ್ವಶಾಸ್ತ್ರದ ಕಾರ್ಯಾಗಾರಗಳನ್ನು ನಡೆಸುತ್ತಿದ್ದಾರೆ ಮತ್ತು ಮಾಧ್ಯಮಗಳಲ್ಲಿ ತಮ್ಮ ಬರವಣಿಗೆಯ ಮೂಲಕ ಸಾರ್ವಜನಿಕರಿಗೆ ತತ್ವಶಾಸ್ತ್ರವನ್ನು ತಿಳಿಸಿಕೊಡುತ್ತಿದ್ದಾರೆ.

ಅವರ ಪುಸ್ತಕ 'ಮಕ್ಕಳಿಗಾಗಿ ತತ್ತ್ವಚಿಂತನೆ' (ಫಿಲಾಸಫಿ ಫಾರ್ ಚಿಲ್ಡ್ರನ್)' ಇಂಗ್ಲಿಷ್, ಕನ್ನಡ, ತಮಿಳು ಮತ್ತು ಇತರ ಭಾಷೆಗಳಲ್ಲಿ ಪ್ರಕಟವಾಗಿದೆ. ಈ ಪುಸ್ತಕವನ್ನು ಅಭ್ಯಾಸಕ್ರಮದಲ್ಲಿ ಸಂಪನ್ಮೂಲವಾಗಿ ಬಳಸಲಾಗುತ್ತದೆ ಮತ್ತು ಶಿಕ್ಷಕರನ್ನು ತಮ್ಮ ಕೆಲಸದಲ್ಲಿ ಬೆಂಬಲಿಸಲು ಹಾಗೂ ಬೋಧನೆಯಲ್ಲಿ ಚಿಂತನೆಯನ್ನು ಸಂಯೋಜಿಸುವ ಗುರಿಯನ್ನು ಹೊಂದಿದೆ.


ಮಾಧವ ಚಿಪ್ಪಳಿ:

ಕರ್ನಾಟಕದ ಶಿವಮೊಗ್ಗ ಜಿಲ್ಲೆಯ ಚಿಪ್ಪಳಿ ಎನ್ನುವ ಗ್ರಾಮದಲ್ಲಿ ನೆಲೆಸಿ ಅಡಿಕೆಯ ವ್ಯವಸಾಯ ಮತ್ತು ವ್ಯವಹಾರದಲ್ಲಿ ತೊಡಗಿರುವ ಮಾಧವ ಮಣಿಪಾಲ ವಿಶ್ವವಿದ್ಯಾಲಯದಿಂದ ಭಾಷಾ ತತ್ತ್ವಶಾಸ್ತ್ರದಲ್ಲಿ ಪಿಎಚ್.ಡಿ ಪದವಿ ಪಡೆದಿದ್ದಾರೆ.ಹೆಗ್ಗೋಡಿನ ನೀನಾಸಮ್ ರಂಗಶಿಕ್ಷಣ ಕೇಂದ್ರದಲ್ಲಿ ಇವರು ರಂಗಭೂಮಿಯ ಇತಿಹಾಸ, ಕಲಾಮೀಮಾಂಸೆ ಮತ್ತು ತತ್ತ್ವಶಾಸ್ತ್ರಗಳ ಅಧ್ಯಾಪನ ಮಾಡುತ್ತಾರೆ. ಈ ಅಭ್ಯಾಸಕ್ರಮದಲ್ಲಿ ಬಳಸುವ ಸುಂದರ್ ಸರುಕ್ಕೈ ಅವರ "ಮಕ್ಕಳಿಗಾಗಿ ತತ್ತ್ವಚಿಂತನೆ" ಮುಂತಾದ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಕಾವ್ಯ, ತತ್ತ್ವ ಮತ್ತು ಭಾಷೆಯ ಕುರಿತ ಇವರ ಪುಸ್ತಕ "ನುಡಿಯೊಡಲು" ಪ್ರಕಟಗೊಂಡಿದೆ.

ಉಪಯುಕ್ತ ಕೊಂಡಿಗಳು

ಚಿಂತನೆಯನ್ನು ಕಲಿಸುವ ಕುರಿತು ಶಿಕ್ಷಕರಿಗೆ ಅಭ್ಯಾಸಕ್ರಮ- ಪೊಸ್ಟರ್

ಭಾಗವಹಿಸುವವರ ನೋಂದಣಿ ನಮೂನೆ