TIEE ಮುಖ್ಯ ಶಿಕ್ಷಕರ ಕಾರ್ಯಾಗಾರ 2023-24
ಕಾರ್ಯಕ್ರಮ ಉದ್ದೇಶಗಳು
- ಸರ್ಕಾರಿ ಶಾಲಾ ಮಖ್ಯ ಶಿಕ್ಷಕರಲ್ಲಿ ಶಾಲಾ ನಾಯಕತ್ವದ ಪರಿಕಲ್ಪನೆ ಮತ್ತು ಪ್ರಕ್ರಿಯೆ ಕುರಿತಂತೆ ಸ್ಪಷ್ಟವಾದ ಅರ್ಥವನ್ನು ಮೂಡಿಸುವು
- ಸರ್ವತೋಮುಖ ಶಾಲಾ ಬೆಳವಣಿಗೆಗೆ ಪೂರಕವಾಗಿರುವ ಪದ್ಧತಿಗಳನ್ನು ಬಲಪಡಿಸುವಲ್ಲಿ ಮತ್ತು ಬಳಸುವಲ್ಲಿ ಮುಖ್ಯಶಿಕ್ಷಕರುಗಳಿಗೆ ಸಹಾಯ ಮಾಡುವುದು
- ಶಾಲಾ ನಾಯಕತ್ವ ಮತ್ತು ಅಭಿವೃದ್ಧಿಯನ್ನು ಬಲಪಡಿಸಲು ವಿವಿಧ ತಂತ್ರಾಂಶಗಳನ್ನು ಹಾಗು ಸಂಪನ್ಮೂಲಗಳನ್ನು ಅನ್ವೇಷಿಸುವುದರೊಂದಿಗೆ ಪಾಲುದಾರರೊಂದಿಗಿನ ಸಹಯೋಗ ಮತ್ತು ಸಂವಹನ ಬೆಳೆಸಲು ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
- ತಮ್ಮ ಸಹುದ್ಯೋಗಿ ಶಿಕ್ಷಕರು ಟಿ.ಐ.ಇ.ಇ ಕಾರ್ಯಕ್ರಮದ ಮೂಲಕ ಸಮನ್ವಯ ಶಿಕ್ಷಣದ ವಿಧಾನಗಳನ್ನು ಬಳಸುವಂತೆ ಸಹಕರಿಸಲು ಮುಖ್ಯಶಿಕ್ಷಕರಿಗೆ ಅನುಕೂಲ ಒದಗಿಸುವುದು.
- ಶಿಕ್ಷಕರ ನಿರಂತರ ವೃತ್ತಿಪರ ಅಭಿವೃದ್ಧಿಗಾಗಿ ಕಲಿಕಾ ಸಮುದಾಯವನ್ನು ನಿರ್ಮಿಸಿ ಅದರ ಮೂಲಕ ಅನುಭವಗಳು, ಆಲೋಚನೆಗಳು ಮತ್ತು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಅನುವು ಮಾಡಿಕೊಡುವುದು
ಮುಖ್ಯಶಿಕ್ಷಕರುಗಳ ಕಾರ್ಯಾಗಾರಗಳು - 2023
ಕಾರ್ಯಾಗಾರ 1: ಸೆಪ್ಟೆಂಬರ್ 2, 2023
ಕಾರ್ಯಾಗಾರದ ಉದ್ದೇಶಗಳು:
- SWOT ಚೌಕಟ್ಟಿನ ಮೂಲಕ ತಮ್ಮ ಶಾಲಾ ಸಂದರ್ಭವನ್ನು ಅನ್ವೇಷಿಸಿ, ಶಾಲೆಯ ಸಾಮರ್ಥ್ಯಗಳು, ದೌರ್ಬಲ್ಯಗಳು, ಅವಕಾಶಗಳು ಮತ್ತು ಅಪಾಯಗಳ ಸ್ಪಷ್ಟ ಅರಿವನ್ನು ಮೂಡಿಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು.
- ಟಿ.ಐ.ಇ.ಇ ಕಾರ್ಯಕ್ರಮದ ಸಮನ್ವಯ ಶಿಕ್ಷಣವನ್ನು ಬೆಂಬಲಿಸುವ ಉದ್ದೇಶವನ್ನು ಅರ್ಥ ಮಾಡಿಸುವುದು
- ಸಂಸ್ಥೆಯನ್ನು ಯಶಸ್ವಿಯಾಗಿ ಮುನ್ನಡೆಸುವ ಸಕ್ರಿಯ ಪ್ರತಿಕ್ರಿಯೆಯ ಅವಕಾಶಗಳನ್ನು ಮೌಲ್ಯಮಾಪಿಸಲು ಕಾಳಜಿ ವಲಯ ಮತ್ತು ಪ್ರಭಾವ ವಲಯದ ಚೌಕಟ್ಟನ್ನು ಬಳಸುವಲ್ಲಿ ಮುಖ್ಯ ಶಿಕ್ಷಕರಿಗೆ ಸಹಾಯ ಮಾಡುವುದು
- ತಮ್ಮ ಶಾಲೆಯಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಯಾವುದಾದರೊಂದು 'ಪ್ರಕಲ್ಪ ಶಾಲಾ ಯೋಜನೆ'ಯನ್ನು ಗುರುತಿಸುವುದು
ಕಾರ್ಯಾಗಾರದ ಕಾರ್ಯಸೂಚಿ (ಅಜೆಂಡಾ)
ಚಟುವಟಿಕೆ/ವಿಷಯ | ವಿವರಣೆ/ಪ್ರಕ್ರಿಯೆ | ಸಮಯ | ಸಂಪನ್ಮೂಲಗಳು |
ಅಧಿವೇಷನದ ಆರಂಭಿಕ ಹಂತ | ಮುಖ್ಯಶಿಕ್ಷಕರ ಪರಿಚಯಿಸುವಿಕೆ
TIEE (ಶಿಕ್ಷಣದ ಸಮತೆಗಾಗಿ ತಂತ್ರಜ್ಞಾನ ಅಳವಡಿಕೆ- ಯಾಕೆ? ಏನು ಮತ್ತು ಹೇಗೆ? SWOT ಪರಿಕಲ್ಪನೆ ಚರ್ಚೆ ಮತ್ತು ಹಂಚಿಕೊಳ್ಳುವಿಕೆ |
11.00 ರಿಂದ 12:30 ರವರೆಗೆ | ವಾಟ್ಸಾಪ್ ಕ್ಯೂ. ಆರ್. ಕೋಡ್
SWOT ನ ಕುರಿತಾದ ಟಿಪ್ಪಣಿ |
ಊಟಕ್ಕೆ ವಿರಾಮ | 12:30 ರಿಂದ 1:00 ರವರೆಗೆ | ||
ಅಧಿವೇಷನ- ನಾಯಕತ್ವ | ನಾಯಕತ್ವ ಎಂದರೇನು?
ಕಾಳಜಿ ವಲಯ ಮತ್ತು ಪ್ರಭಾವ ವಲಯ ನಾಯಕತ್ವದ ಪ್ರಕ್ರಿಯೆಗಳು |
1:00 ರಿಂದ2:00 ರವರೆಗೆ | ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಟಿಪ್ಪಣಿ |
ಸಂವಹನ ಮತ್ತು ಸಹಯೋಗ | ಧ್ವನಿಯಿಂದ ಲಿಪಿ (ವಾಯ್ಸ್ ಟು ಟೆಕ್ಸ್ಟ್ )
ಕಂಪ್ಯೂಟರ್ ನಲ್ಲಿ ಕನ್ನಡ ಟೈಪಿಂಗ್ ಕಂಪ್ಯೂಟರ್ ನಿಂದ ಫೋನ್ ಗೆ ಮತ್ತು ಫೋನ್ನಿಂದ ಕಂಪ್ಯೂಟರ್ ಗೆ ದತ್ತಾಂಶ ವರ್ಗಾವಣೆ ಇ-ಮೇಲ್ ಕಳುಹಿಸುವುದು ಮತ್ತು ಪಡೆಯುವುದು |
2:00 ರಿಂದ 3:00 ರವರೆಗೆ | |
ಅಧಿವೇಷನ- ನನ್ನ ಶಾಲೆ | ಪ್ರಕಲ್ಪ ಶಾಲಾ ಯೋಜನೆ ಸಾಧ್ಯತೆಯ ಚೌಕಟ್ಟು
ಪ್ರಕಲ್ಪ ಶಾಲಾ ಯೋಜನೆ ಪ್ರತಿಪಾದಿಸುವುದು , ಹಂಚಿಕೊಳ್ಳುವುದು ಮತ್ತು ಅಭಿಪ್ರಾಯ ವ್ಯಕ್ತಪಡಿಸುವುದು |
3:00 ರಿಂದ 3.30 ರವರೆಗೆ | ಪ್ರಕಲ್ಪ ಶಾಲಾ ಯೋಜನೆ ಸಾಧ್ಯತೆ ಕುರಿತಾದ ಸ್ಲೈಡ್ಸ್ |
ಉಪಸಂಹಾರ | ಕಾರ್ಯಕ್ರಮದ ಹಿಮ್ಮಾಹಿತಿ ಪಡೆಯುವುದು(5 ನಿಮಿಷ)
ಚರ್ಚೆ ಮತ್ತು ಮುಂದಿನ ಯೋಜನೆಗಳು |
3:30 ರಿಂದ 4:00 ರವರೆಗೆ |
ಕಾರ್ಯಾಗಾರದ ಸಂಪನ್ಮೂಲಗಳು:
1. SWOT ನ ಕುರಿತಾದ ಟಿಪ್ಪಣಿ
2. ಕಾಳಜಿ ವಲಯ ಮತ್ತು ಪ್ರಭಾವ ವಲಯ ಕುರಿತಾದ ಟಿಪ್ಪಣಿ
ಮುಂದಿನ ನಡೆ:
1. ಪಾಲುದಾರರ ಜೊತೆಗೂಡಿ ಪ್ರಕಲ್ಪ ಶಾಲಾ ಯೋಜನೆಯನ್ನು ಅನುಷ್ಠಾನಗೊಳಿಸುವುದು
೨. ಎರಡನೇ ಕಾರ್ಯಾಗಾರಕ್ಕೆ ಯೋಜನೆ
ಕಾರ್ಯಾಗಾರದ ಹಿಮ್ಮಾಹಿತಿ:
ಕಾರ್ಯಾಗಾರದ ಬಗೆಗಿನ ಅಭಿಪ್ರಾಯಗಳನ್ನು ದಾಖಲಿಸಲು ಮತ್ತು ಕಾರ್ಯಾಗಾರವನ್ನು ಮತ್ತಷ್ಟೂ ಸುಧಾರಿಸಲು ಸಲಹೆ ನೀಡಲು ಈ ಲಿಂಕನ್ನು ಕ್ಲಿಕ್ಕಿಸಿ.