ಕಿಶೋರಿ ಕ್ಲಬ್‌

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕಿಶೋರಿ ಕ್ಲಬ್‌ - ಅರಿವಿಲ್ಲದ ಅನಾರೋಗ್ಯಕರ ವರ್ತನೆಯಿಂದ ಆರೋಗ್ಯಕರ ಪರಿವರ್ತನೆಯೆಡೆಗೆ

ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಲ ಪರಿಸರದ ಹಾಗೂ ಸಮಾಜದ ಓರೆಕೋರೆಗಳ ಪರಿಚಯವಾದರೆ ಮುಂದೆ ಅವರು ತಂತಮ್ಮ ಜೀವನಗಳಲ್ಲಿ ತಮ್ಮ ಆಕಾಂಕ್ಷೆಯ ವಿಷಯಗಳಲ್ಲಿ ಸಾಧನೆ ಮಾಡಲು ಅನುವಾಗುತ್ತದೆ ಎಂಬುದು ನಮ್ಮ ನಂಬಿಕೆ.

ಕಳೆದ ಮೂರು ವರ್ಷಗಳಿಂದ ಹದಿಹರೆಯದ ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸುವ ಉದ್ದೇಶವನ್ನು ಹೊಂದಿರುವ “ಹೊಸ ಹೆಜ್ಜೆ ಹೊಸ ದಿಶೆ” ಯೋಜನೆಯನ್ನು ಐ.ಟಿ.ಫಾರ್ ಚೇಂಜ್ ಸಂಸ್ಥೆಯು ವಿನ್ಯಾಸಗೊಳಿಸಿ ಕಾರ್ಯಗತಗೊಳಿಸುತ್ತಿದೆ. ಈ ಯೋಜನೆಯಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿ ಕಿಶೋರಿ ಕ್ಲಬ್‌ಗಳನ್ನು ಹದಿಹರೆಯದ ಹೆಣ್ಣುಮಕ್ಕಳ ವೇದಿಕೆಗಳಾಗಿ ನಿರ್ಮಿಸಿ, ಅವುಗಳ ಮುಖಾಂತರ ಅವರ ಜೀವನಕ್ಕೆ ಪೂರಕವಾಗುವ ಅಂಶಗಳ ಪರಿಚಯ ಹಾಗು ಸಶಕ್ತ ಭವಿಷ್ಯವನ್ನು ರೂಪಿಸಿಕೊಳ್ಳುವೆಡೆಗೆ ಉಪಯುಕ್ತ ತರಬೇತಿಗಳನ್ನು ನೀಡುವ ಉದ್ದೇಶವಿದೆ.

ಹಲವು ವರ್ಷಗಳ ಹಿಂದೆ ಇದ್ದಂತಹ ಹದಿಹರೆಯದ ಹೆಣ್ಣುಮಕ್ಕಳಿಗಾಗಿಯೇ ಸಮಗ್ರ ಶಿಕ್ಷಣ ಕರ್ನಾಟಕ ಇವರು ರೂಪಿಸಿದ “ಕಿಶೋರಿ” ಕಾರ್ಯಕ್ರಮದ ರೀತಿಯಲ್ಲಿಯೇ ಈ ಕ್ಲಬ್‌ಗಳನ್ನು ರೂಪಿಸಲಾಗಿದೆ. ಈ ಕ್ಲಬ್‌ಗಳ ಭಾಗವಾಗಿ, ಜೀವನ ಕೌಶಲ್ಯಗಳು, ವೃತ್ತಿ ಮಾರ್ಗದರ್ಶನ, ಆನ್‌ಲೈನ್‌ ಜಾಲತಾಣಗಳ ಜವಾಬ್ದಾರಿಯುತ ಬಳಕೆ, ಆರೋಗ್ಯ ಮತ್ತು ನೈರ್ಮಲ್ಯ, ಆಕಾಂಕ್ಷೆಗಳ ನಿರ್ಮಾಣ ಮತ್ತು ಅವರ ಲಿಂಗತ್ವದ ಗುರುತನ್ನು ಬಲಪಡಿಸುವುದು ಸೇರಿದಂತೆ ಹದಿಹರೆಯದವರಿಗೆ ಸಂಬಂಧಿಸಿದ ಕಲಿಕಾ ಘಟಕಗಳನ್ನು ತರಗತಿಗಳಲ್ಲಿ ಬಳಸುವಂತೆ ಡಿಜಿಟಲ್ ತಂತ್ರಜ್ಞಾನಗಳನ್ನು ಒಳಗೊಂಡ ವೈವಿಧ್ಯಮಯವಾದ ಪಠ್ಯಕ್ರಮವನ್ನು ಸಿದ್ಧಪಡಿಸಲಾಗಿದೆ.

ಕಿಶೋರಿ ಕ್ಲಬ್‌ಗಳ ವಿವರಗಳು ಇಂತಿವೆ,

  • ರಾಜ್ಯದ ಆಯ್ದ ಜಿಲ್ಲೆಗಳಲ್ಲಿ ಪ್ರತೀ ಜಿಲ್ಲೆಯಲ್ಲಿ 60 ಪ್ರೌಢಶಾಲೆಗಳಲ್ಲಿ “ಕಿಶೋರಿ ಕ್ಲಬ್‌”ಗಳನ್ನು ಆರಂಭಿಸುವುದು. 8ನೇ ತರಗತಿಯಿಂದ 10ನೇ ತರಗತಿಯ ಹೆಣ್ಣುಮಕ್ಕಳು ಇದರಲ್ಲಿ ಭಾಗವಹಿಸಿ ತಮ್ಮ ಸಶಕ್ತತೆಗೆ ಇಂಬು ಕೊಡುವ ವೇದಿಕೆಯನ್ನು ಶಿಕ್ಷಕರ ಸಹಭಾಗಿತ್ವದಲ್ಲಿ ರಚಿಸಬೇಕೆಂಬ ಮಹದಾಶಯ ಇದರ ಹಿಂದಿದೆ.  
  • ಶಾಲೆಯಲ್ಲಿ ಕಿಶೋರಿಯರಿಗೆ ಪ್ರತಿದಿನವೂ ಲಭ್ಯವಿರುವ ಮಹಿಳಾ ಶಿಕ್ಷಕರೇ ಈ ಕ್ಲಬ್‌ಗಳ ನೇತೃತ್ವ ವಹಿಸಿ ನಡೆಸುವುದು. ಈ ನಿಟ್ಟಿನಲ್ಲಿ ಕಿಶೋರಾವಸ್ಥೆಯ ಅನೇಕ ಮಜಲುಗಳು ಮತ್ತು ಅದರೊಟ್ಟಿಗೆ ಬರುವ ಅನೇಕ ಸಂಕಷ್ಟಗಳ ಬಗ್ಗೆ ತಿಳಿಸುವ ಕಾರ್ಯಾಗಾರಗಳು ಶಿಕ್ಷಕರಿಗೆ ಬೆಂಬಲ ನೀಡಲಿವೆ.
  • ಶಾಲೆಯಲ್ಲಿ ಪ್ರತೀ 15 ದಿನಗಳಿಗೊಮ್ಮೆ ಕಿಶೋರಿ ಕ್ಲಬ್‌ ಸಭೆಗಳನ್ನು ನಡೆಸುವುದು. ಶಿಕ್ಷಕರೇ ಈ ಸೆಶನ್‌ಗಳನ್ನು ನಡೆಸುವುದರಿಂದ ಪ್ರತೀ ಶಾಲೆಯೂ ಶೈಕ್ಷಣಿಕ ವರ್ಷದ ಮೊದಲಿನಿಂದಲೇ ಕಿಶೋರಿ ಕ್ಲಬ್‌ಗಳಿಗೆ 40 ರಿಂದ 60 ನಿಮಿಷಗಳ ಅವಧಿಯನ್ನು ಯೋಜಿಸಬಹುದಾಗಿದೆ. ಇದನ್ನು ಶಾಲಾ ಮುಖ್ಯಸ್ಥರು ಹಾಗು ಕಾರ್ಯಾಗಾರಗಳಲ್ಲಿ ಪಾಲ್ಗೊಳ್ಳುವ ಆಸಕ್ತ ಶಿಕ್ಷಕರೊಡನೆ ಚರ್ಚಿಸಿ ತೀರ್ಮಾನಿಸಲಾಗುವುದು.
  • ಈ ಸಭೆಗಳಿಗೆ ಬೇಕಿರುವ ಸಂಪನ್ಮೂಲಗಳನ್ನು ಪ್ರತೀ ಜಿಲ್ಲೆಗಳ ಸ್ಥಳೀಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸಂಧರ್ಭಗಳಿಗೆ ಅನುಸಾರವಾಗಿ ಹಾಗು ಅಲ್ಲಿನ ಇತರ ಅಗತ್ಯತೆಗಳಿಗೆ ಅನುಸಾರವಾಗಿ ಶಿಕ್ಷಕರೊಟ್ಟಿಗೆ ಸೇರಿ ನಿರ್ಮಿಸಲಾಗುತ್ತದೆ ಅಥವಾ ಅವರಿಗೆ ನೀಡುವ ಕಲಿಕಾ ಕಿಟ್‌ಗಳಲ್ಲಿರುವ ಆಡಿಯೋ, ವೀಡಿಯೋ ಹಾಗು ಪಠ್ಯ ಸೇರಿದಂತೆ ವಿವಿಧ ಕಲಿಕಾ ಸಂಪನ್ಮೂಲಗಳನ್ನು ಬಳಸಬಹುದು.
  • ಕಿಶೋರಿಯರ ಸಮಸ್ಯೆಗಳು ಹಾಗು ಸವಾಲುಗಳನ್ನು ಮುಕ್ತವಾಗಿ ಚರ್ಚಿಸುವುದು. ಜೊತೆಗೆ ಅವರಿಗೆ ಬೇಕಿರುವ ವಿವಿಧ ರೀತಿಯ ಮಾಹಿತಿಗಳನ್ನು ನೀಡುವುದು. ಕಿಶೋರಿಯರಿಗೆ ನೆರವಾಗುವಂತಹ ನಿರ್ಧಾರಗಳನ್ನು ಹೇಗೆ ತೆಗೆದುಕೊಳ್ಳುವುದು ಎನ್ನುವುದನ್ನು ಯೋಜಿಸುವುದು.
  • ಕಿಶೋರಿ ಕ್ಲಬ್ ಚಟುವಟಿಕೆಗಳ ಭಾಗವಾಗಿ ಕಿಶೋರಿಯರಿಗಾಗಿ ಹಲವು ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು. ಇವುಗಳ ಮೂಲಕ ಹೆಣ್ಣುಮಕ್ಕಳಿಗೆ ಬೇಕಿರುವ ಹಲವು ರೀತಿಯ ಕೌಶಲಗಳನ್ನು ಕಲಿಸುವುದು ಉದಾಹರಣೆಗೆ ಕಂಪ್ಯೂಟರ್ ಕಲಿಕೆ, ಆಡಿಯೋ ವೀಡಿಯೋ ತಯಾರಿಸುವ ಕಲಿಕೆ ಮತ್ತು ಜೀವನ ಕೌಶಲಗಳ ಕಲಿಕೆ.
  • ಶಾಲೆಯ ನಂತರ ಅವರಿಗಿರುವ ವಿವಿಧ ವೃತ್ತಿಗಳ ಆಯ್ಕೆಗಳಿಗೆ ಅವರನ್ನು ಪರಿಚಯಿಸುವುದು.

ಕಿಶೋರಿ ಕ್ಲಬ್‌ನ ಪಠ್ಯಕ್ರಮ ಇಂತಿದೆ

ಕ್ರ. ಸಂ. ಕಲಿಕಾ ಘಟಕಗಳ ವಿಷಯ ಪಟ್ಟಿಕೆ
1 ಹದಿಹರೆಯ ಅಥವ ಕಿಶೋರಾವಸ್ಥೆ ಎಂದರೇನು - ಈ ಹಂತದಲ್ಲಿ ಆಗುವ ದೈಹಿಕ, ಮಾನಸಿಕ ಮತ್ತು ಬೌದ್ಧಿಕ ಬದಲಾವಣೆಗಳ ಸ್ವರೂಪವೇನು ಎನ್ನುವುದರ ಬಗ್ಗೆ ಅರಿವು ಮೂಡಿಸುವುದು  
2 ಋತುಚಕ್ರ - ಏಕೆ, ಹೇಗೆ ಮತ್ತು ಇದರ ಸವಾಲುಗಳನ್ನು ನಿಭಾಯಿಸುವ ಬಗೆ ಏನು
3 ಸಂತಾನೋತ್ಪತ್ತಿ ಪ್ರಕ್ರಿಯೆ - ಹೇಗಾಗುತ್ತದೆ
4 ಗುರುತು ಮತ್ತು ಅಸ್ಮಿತೆ ಹಾಗು ಹದಿಹರೆಯ
5 ಬಾಡಿ ಇಮೇಜ್  - ದೇಹದ ಚಿತ್ರಣ ಮತ್ತು ಹದಿಹರೆಯ
6 ಪುರುಷ ಪ್ರಧಾನತೆ ಮತ್ತು ಸಮಾಜದಲ್ಲಿರುವ ಅಸಮಾನತೆಯ ಹಿಂದೆ  ಇದರ ಪಾತ್ರ
7 ಮಾಧ್ಯಮ ಮತ್ತು ಮಾರುಕಟ್ಟೆ  - ಪುರುಷ ಪ್ರಧಾನತೆಯನ್ನು ಎತ್ತಿಹಿಡಿಯುವಲ್ಲಿ ಇದರ ಕೀಲಕ ಪಾತ್ರ
8 ಸಮತೋಲನ ಆಹಾರ ಮತ್ತು ಪೌಷ್ಟಿಕತೆ
9 ಅನೀಮಿಯ/ರಕ್ತ ಹೀನತೆ
10 POCSO - ಲೈಂಗಿಕ ಹಿಂಸೆ ಮತ್ತು ಕಿರುಕುಳದ ಸ್ವರೂಪ ಹಾಗು ಅದನ್ನು ಮೀರುವುದಕ್ಕಾಗಿ ಕಿಶೋರಿಯರಿಗಿರುವ ಬೆಂಬಲಗಳೇನು
11 ಜೀವನ ಕೌಶಲ್ಯಗಳೆಂದರೇನು ಹಾಗೂ ಯಶಸ್ವಿ/ಸಬಲ ಕಿಶೋರಿಯಾಗುವೆಡೆಗೆ ಇವುಗಳ ಪಾತ್ರವೇನು
12 ಜೀವನ ಕೌಶಲ್ಯಗಳನ್ನು ಸಬಲತೆಯ ಸಾಧನವಾಗಿ ಬಳಸಿಕೊಳ್ಳುವುದು ಹೇಗೆ ಎನ್ನುವದನ್ನು ಕೇಸ್ ಸ್ಟಡೀಸ್ ಮತ್ತು ಉದಾಹರಣೆಗಳ ಮುಖಾಂತರ ಅರ್ಥ ಮಾಡಿಕೊಳ್ಳುವುದು
13 ಸ್ವಾಯತ್ತತೆಯತ್ತ ನಡೆಯಲು ಶಿಕ್ಷಣದ ಪಾತ್ರ - ಇರುವ ಆಯ್ಕೆಗಳೇನು ಎನ್ನುವುದರ ಪರಿಚಯ
14 ಸ್ವಾಯತ್ತತೆ ಮತ್ತು ಉದ್ಯೋಗಾವಕಾಶಗಳು (career guidance)
15 ಅಂತರ್ಜಾಲ - ಋಣಾತ್ಮಕ ಮತ್ತು ಧನಾತ್ಮಕ ಅಂಶಗಳು. ಸಶಕ್ತತೆಯ ಸಾಧನವಾಗಿ ಅಂತರ್ಜಾಲವನ್ನು ಬಳಸಿಕೊಳ್ಳುವ ಬಗೆ ಏನು
16 Action plan - ಶಿಕ್ಷಣ, ಕೆಲಸ ಮತ್ತು ಭವಿಷ್ಯದ ಬಗ್ಗೆ ಕಟ್ಟಿದ ಕನಸು/ಯೋಜನೆಗಳ ದಾಖಲಾತಿ

ಜಿಲ್ಲಾವಾರು ಕಾರ್ಯಗಾರಗಳು

ಕಲಬುರಗಿ ಹಾಗು ಮೈಸೂರು ಜಿಲ್ಲೆಗಳಲ್ಲಿ ಈಗಾಗಲೇ ಕಾರ್ಯಗಾರಗಳು ಆರಂಭವಾಗಿದ್ದು, ಅಲ್ಲಿ ಅಳವಡಿಸಿಕೊಂಡಿರುವ ಮಾದರಿ ಕಾರ್ಯರೂಪವನ್ನು ಇಲ್ಲಿ ನೀಡಲಾಗಿದೆ.

Duration Session title and details
Day 01 Introduction - IT for Change, teachers - we ask the teachers to share their name, school and town
11.00 - Expectations - pass them flash cards and ask  them to write one expectation they have from these 3 days
Expectation clarification and share why this workshop - about Kishori club
11.45 Tea break
12.00 - 12.30 Small group activity -

1. According to them what are the issues/concerns of Kishoris from Kalaburagi district  

2. In their opinion, what can be done about them or possible solutions for those

12.30 - 1.15 Teachers present their thoughts in the plenary
1.00 -2.00 Lunch
2.00 - 2.30 How Kishori club was conceived and according to us what is it
2.30 - 3.30 Small group activity -

1. Are Kishori clubs needed in their schools?

2. What is their idea regarding a space like this - innu enadru add madbahuda, what should the curriculum be ? what are the challenges they foresee

3.30 - 3.45 Tea break
3.45 - 4.30 Teachers present in the plenary and the day will be concluded with the thought that we will co create, curriculum, content and methodologies during the next two days
Day 02
11.00 - 11.30 Checking in - and discuss solutions for challenges shared by the teachers on the previous day
11.30 - 11.45 Tea break
11.45 - 12.15 Present the curriculum we have decided and ask their views on them. What needs to be added or taken out of the curriculum. Clarify if people ask what is the rationale behind a particular topic
12.15 - 1.15 Kishori club resources -

Module 01 - Help sheet and resource presentation

After ask them whether it works for their schools, should anything be changed ? what are their ideas for the same topic

Module 02: Help sheet and resource presentation

1.15 - 2.15 Lunch break
2.15 - 3.15 Module 03

Module 04

3.15 - 3.30 Tea break
3.30 - 4.30 POCSO - good touch and bad touch - closed room discussion and gathering pointers for KC session on the same
Day 03
11.00 -11.15 Checking in - what are their thoughts/feelings about the past two days
11.15 - 11.45 Challenges they foresee in conducting maximum number of KC sessions and solutions they suggest - a heart to heart sharing
11.45 -12.00 Tea
12.00 - 1.00 Small group activity: norms for Kishori clubs - for teachers and Kishoris
1.00 -2.00 Lunch
2.00 - 3.00 Documentation template and Baseline format
3.00 - 3.30 District level teachers hub for peer sharing and learning - WhatsApp/Telegram, bi monthly online meetings, in-person sharing once in 6 months. Admin group,
3.30 - 3.45 Tea break
3.45 - 4.30 Asking them to share their opinion about the workshop and their feedback - closure with concrete next step being KC start up/inauguration

ಬೇಸ್‌ಲೈನ್‌ ಸಮೀಕ್ಷೆ (ಸರ್ವೆ)

ಕಿಶೋರಿ ಕ್ಲಬ್‌ನಲ್ಲಿ ಪಾಲ್ಗೊಳ್ಳುವ ಹದಿಹರೆಯದ ಹೆಣ್ಣುಮಕ್ಕಳ ಬಗ್ಗೆ ತಿಳಿದುಕೊಳ್ಳಲು ಹಾಗು ಅದರಿಂದ ಅವರಿಗೆ ಬೇಕಿರುವ ಹಾಗೆ ವಿಷಯಗಳ ಹಂಚಿಕೆಯ ಬಗ್ಗೆ ಯೋಜನೆಗಳನ್ನು ಮಾಡಿಕೊಳ್ಳಲು ಶೈಕ್ಷಣಿಕ ವರ್ಷದ ಆರಂಭದಲ್ಲಿ ಬೇಸ್‌ಲೈನ್‌ ಸಮೀಕ್ಷೆ ನಡೆಸುವುದು ಬಹುಮುಖ್ಯ ಚಟುವಟಿಕೆಯಾಗಿರುತ್ತದೆ. ಇದರಿಂದ ಒಂದು ವರ್ಷದಲ್ಲಿ ಕಿಶೋರಿಯರಲ್ಲಾಗುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ಕೂಲಂಕುಶವಾಗಿ ನೋಡಬಹುದಾಗಿದೆ.

ಶಾಲೆಗಳಲ್ಲಿ ಬೇಸ್‌ಲೈನ್‌ಗಳನ್ನು ನಡೆಸಲು ಈ ಲಿಂಕುಗಳನ್ನು ಬಳಸಿ

ಕಲಬುರಗಿ - https://bit.ly/itfckcbl23

ಮೈಸೂರು - https://bit.ly/kcmysbl23

ಕಿಶೋರಿ ಕ್ಲಬ್‌ ಫೆಸಿಲಿಟೇಟರ್‌ ರಿಪೋರ್ಟ್‌ ಟೆಂಪ್ಲೇಟ್‌ (KCF template)

ಪ್ರತೀ ಸೆಶನ್‌ ಮುಗಿದ ಮೇಲೆ ತುಂಬಬೇಕಿರುವ ಕಿಶೋರಿ ಕ್ಲಬ್‌ ಫೆಸಿಲಿಟೇಟರ್‌ ಗೂಗಲ್‌ ಫಾರ್ಮನ್ನು ಇಲ್ಲಿ ನೋಡಬಹುದಾಗಿದೆ.

https://bit.ly/itfckcfrt23

ಶಿಕ್ಷಕಿಯರಿಗಾಗಿ ಸಂಪನ್ಮೂಲಗಳು :

ಕಿಶೋರಿ ಕ್ಲಬ್‌ ನಡೆಸಲು ಬೇಕಿರುವ ಸಂಪನ್ಮೂಲಗಳನ್ನು ಇಲ್ಲಿ ಹಂಚಿಕೊಳ್ಳಲಾಗುವುದು.

ಕಲಬುರಗಿ ಸರ್ಕಾರಿ ಶಾಲೆಗಳು (SSK)

ಕಲಬುರಗಿ ವಸತಿ ಶಾಲೆಗಳು (KREIS)

ಮೈಸೂರು ಸರ್ಕಾರಿ ಶಾಲೆಗಳು (SSK)

ಮೈಸೂರು ವಸತಿ ಶಾಲೆಗಳು (KREIS)