ಭಾಷೆ ಕಲಿಕೆಗಾಗಿ ತಂತ್ರೋ-ಬೋಧನ ವಿಧಾನ ಕಾರ್ಯಾಗಾರ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕಾರ್ಯಕ್ರಮದ ಮೇಲ್ನೋಟ

ಕಥೆ ಹೇಳುವಿಕೆ ಒಂದು ಬೋಧನ ವಿಧಾನವಾಗಿ ಹೊಂದಿರುವ ಪರಿಣಾಮಕಾರಿತ್ವವನ್ನು ಡಿಜಿಟಲ್ ಮಾಧ್ಯಮವು ನೀಡುವ ಹೊಸ ಸಾಧ್ಯತೆಗಳ ಜೊತೆಗೆ ಬಳಸಿಕೊಳ್ಳುವುದರ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯನ್ನು ಉತ್ತೇಜಿಸುವ ಪ್ರಮುಖ ಉದ್ದೇಶದೊಂದಿಗೆ ರಾಜ್ಯ ಶೈಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (DSERT) 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಎಂಬ ಶಿಕ್ಷಕರ ವೃತ್ತಿಪರ ಅಭಿವೃದ್ಧಿ (TPD) ಕಾರ್ಯಕ್ರಮವನ್ನು ಶಿಕ್ಷಕರ ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯ (CTE) ಹಾಗು ಐಟಿ ಫಾರ್ ಚೇಂಜ್ (ITfC) ಸಹಯೋಗದೊಂದಿಗೆ 2023-24 ಶೈಕ್ಷಣಿಕ ವರ್ಷದಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಿತು.

ಭಾಷಾ ಬೋಧನ-ಕಲಿಕೆಯ ಪ್ರಕ್ರಿಯೆಯನ್ನು, ಹಾಗು ಅದರ ಪರಿಣಾಮವಾಗಿ, ಮಕ್ಕಳ ಶೈಕ್ಷಣಿಕ ಫಲಿತಾಂಶಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಮೊದಲನೇ ವರ್ಷದ ಕಾರ್ಯ ಚಟುವಟಿಕೆಗಳು ಸಂಪನ್ಮೂಲ ತಯಾರಿಕೆಯ ಮೇಲೆ ಕೇದ್ರಿತವಾಗಿದ್ದು, ಎರಡು ಹಂತಗಳಲ್ಲಿ ಕಾರ್ಯಾಗಾರಗಳನ್ನು ನಡೆಸಲಾಯಿತು.

2024-25 ವರ್ಷದಲ್ಲಿ ಕಾರ್ಯಕ್ರಮವು ತಂತ್ರೋ-ಬೋಧನ ವಿಧಾನ ಕಾರ್ಯಾಗಾರಗಳು ಮತ್ತು ಶಾಲಾ ಮಟ್ಟದ ಬೆಂಬಲದ ಮೂಲಕ ತರಗತಿ ಮಟ್ಟದ ಅನುಷ್ಠಾನವನ್ನು ಸಕ್ರಿಯಗೊಳಿಸುವ ಗುರಿಯನ್ನು ಹೊಂದಿದೆ. ಇದರೊಂದಿಗೆ, ಕಥೆ ಆಧಾರಿತ ಬೊಧನ ವಿಧಾನಗಳ ಪರಿಣಾಮಕಾರಿತ್ವ, ಶಿಕ್ಷಕರ ಯಶಸ್ಸುಗಳು ಮತ್ತು ಸವಾಲುಗಳ ಹಾಗು ಸುಧಾರಣೆ ಮತ್ತು ಮರುವಿನ್ಯಾಸ ಅಗತ್ಯವಿರುವ ಅಂಶಗಳನ್ನು ಅರ್ಥಮಾಡಿಕೊಳ್ಳುವ ಸಲುವಾಗಿ ಕಾರ್ಯಕ್ರಮದ ಅನುಷ್ಠಾನವನ್ನು ಅಧ್ಯಯನ ಮಾಡಲಾಗುವುದು..

ಕಾರ್ಯಕ್ರಮದ ಉದ್ದೇಶಗಳು :

  • ಶಿಕ್ಷಕರು ಬೋಧನ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಅಳವಡಿಕೆಯನ್ನು ಅನುಭವಿಸಲು ಮತ್ತು ಆಂತರಿಕಗೊಳಿಸಲು ಅವಕಾಶ ಮೂಡಿಸುವುದರ ಮೂಲಕ ಅವರ ತಂತ್ರಜ್ಞಾನ, ಬೋಧನ ವಿಧಾನ ಮತ್ತು ವಿಷಯ ತಿಳುವಳಿಕೆಯ ಸಂಯೋಗವನ್ನು (TPCK) ಬಲಪಡಿಸುವುದು
  • ತಮ್ಮ ತರಗತಿಯಲ್ಲಿ ಮಕ್ಕಳ ಭಾಷಾ ಕಲಿಕೆಯ ಅಗತ್ಯಗಳನ್ನು ಪರಿಹರಿಸಲು ಸಂದರ್ಭೋಚಿತವಾಗಿ ಡಿಜಿಟಲ್ ಸಂಪನ್ಮೂಲಗಳನ್ನು ಬಳಸಲು ಭಾಷಾ ಶಿಕ್ಷಕರ ಸಾಮರ್ಥ್ಯವನ್ನು ಬಲಪಡಿಸುವುದು
  • ಶಾಲೆಯಲ್ಲಿ ಕಲಿಸುವ ಭಾಷೆಗಳಲ್ಲಿ ವಿದ್ಯಾರ್ಥಿಗಳು ಸಾಮರ್ಥ್ಯವನ್ನು ಬೆಳೆಸಿಕೊಳ್ಳಲು ಭಾಷಾ ಬೋಧನೆಯಲ್ಲಿ ಬಹುಭಾಷಾ, ಸಮನ್ವಯ ಮತ್ತು ನವೀನ ಬೋಧನ ವಿಧಾನಗಳನ್ನು ಬಳಸುವಂತೆ ಶಿಕ್ಷಕರ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು
  • ಶಿಕ್ಷಕರು ಸಹೋದ್ಯೋಗಿಗಳೊಂದಿಗೆ ತಮ್ಮ ಅನುಭವಗಳು ಮತ್ತು ಕಲಿಕೆಗಳನ್ನು ಹಂಚಿಕೊಳ್ಳುವ ಮೂಲಕ ಪರಸ್ಪರ ಕಲಿಕೆ ಮತ್ತು ಮಾರ್ಗದರ್ಶನಕ್ಕೆ  ಅವಕಾಶಗಳನ್ನು ಕಲ್ಪಿಸುವಂತಹ ಕಲಿಕಾ ಸಮುದಾಯಗಳನ್ನು (CoPs) ಸ್ಥಾಪಿಸುವುದು  
  • ಕಥೆ-ಆಧಾರಿತ ಡಿಜಿಟಲ್ ಸಂಪನ್ಮೂಲಗಳನ್ನು ರಚಿಸಲು ಅಗತ್ಯವಾದ ತಾಂತ್ರಿಕ ಜ್ಞಾನವನ್ನು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒದಗಿಸುವುದು
  • ಸಾರ್ವತ್ರಿಕ ಮತ್ತು ಸುಲಭವಾಗಿ ಸಂಪನ್ಮೂಲಗಳನ್ನು ಪಡೆಯಲು ಮುಕ್ತ ಸಂಪನ್ಮೂಲ ಭಂಡಾರ (OER) ದಲ್ಲಿ ಶಿಕ್ಷಕರು ರಚಿಸಿದ ಎಲ್ಲಾ ಸಂಪನ್ಮೂಲಗಳನ್ನು ಲಭ್ಯವಾಗುವಂತೆ ಮಾಡುವುದು

ತಂತ್ರೋ-ಬೋಧನ ವಿಧಾನ ಕಾರ್ಯಗಾರದ ಉದ್ದೇಶಗಳು

  • ಆಡಿಯೋ ಕಥೆಗಳು ಭಾಷಾ ಬೋಧನಾ ವಿಧಾನ ಬೆಂಬಲಿಸುವ ವಿಧಾನಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅನುಭವ ಪಡೆಯಲು ಶಿಕ್ಷಕರಿಗೆ ಸಹಾಯ ಮಾಡುವುದು
  • ಭಾಷಾ ಬೋಧನೆಯಲ್ಲಿ ಬಹುಭಾಷಾ, ಸಮನ್ವಯ ಮತ್ತು ನವೀನ ಬೋಧನಾ ತಂತ್ರಗಳನ್ನು ಹೇಗೆ ಬಳಸಬಕೆಂದು ಅರ್ಥಮಾಡಿಕೊಳ್ಳುವುದು
  • ಮೊಬೈಲ್ ಆಧಾರಿತ ಆಡಿಯೋ ಕಥೆಗಳನ್ನು ಬಳಸಿ ಮಾಡಬಹುದಾದ ವಿವಿಧ ರೀತಿಯ ತರಗತಿ ಚಟುವಟಿಕೆಗಳನ್ನು ಚರ್ಚಿಸುವುದು
  • ಮಕ್ಕಳಲ್ಲಿ ಆಲಿಸುವ ಮತ್ತು ಮಾತನಾಡುವ ಕೌಶಲ್ಯವನ್ನು ಬೆಳೆಸಲು ಕಥಾ ಬೋಧನಾ ವಿದಾನ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಅನ್ವೇಷಿಸುವುದು

ತಂತ್ರೋ-ಬೋಧನ ವಿಧಾನ ಕಾರ್ಯಗಾರದ ನಿರೀಕ್ಷಿತ ಫಲಿತಾಂಶಗಳು

  • ಶಿಕ್ಷಕರು ಕಥಾ-ಆಧಾರಿತ ಬೋಧನ-ವಿಧಾನವನ್ನು ಅರ್ಥಮಾಡಿಕೊಳ್ಳುತ್ತಾರೆ
  • ಶಿಕ್ಷಕರು ಭಾಷಾ ಬೋಧನೆಗೆ ಸಂಬಂಧಿಸಿದ ಅವರ ನಂಬಿಕೆಗಳು ಮತ್ತು ಅಭ್ಯಾಸಗಳನ್ನು ಪರ್ಯಾಲೋಚಿಸುವುದು.
  • ಶಿಕ್ಷಕರು ಭಾಷಾ ಕಲಿಕೆಗಾಗಿ ಆಡಿಯೊ ಕಥೆಗಳ ಸಾಮರ್ಥ್ಯವನ್ನು ಅರ್ಥಮಾಡಿಕೊಂಡು ಅನುಭವ ಪಡೆಯುತ್ತಾರೆ.
  • ಭಾಷಾ ಸ್ವಾಧೀನತೆಯನ್ನು ಬೆಂಬಲಿಸಲು ಪರಿಣಾಮಕಾರಿ ಆಲಿಸುವಿಕೆಯನ್ನು ಅಭಿವೃದ್ಧಿಪಡಿಸಲು ಶಿಕ್ಷಕರು ಬೋಧನ ತಂತ್ರಗಳನ್ನು ಅನ್ವೇಷಿಸುತ್ತಾರೆ
  • ಕಲಿಕಾ-ಬೋಧನೆಯಲ್ಲಿ ಆಡಿಯೊ ಕಥೆಗಳನ್ನು ಸಂಯೋಜಿಸಲು ಕಥಾ-ಖಜಾನೆ ಯನ್ನು ಬಳಸುವುದರ ಪರಿಚಿತತೆ ಮತ್ತು ಸೌಕರ್ಯವನ್ನು ಪಡೆದುಕೊಳ್ಳುತ್ತಾರೆ
  • ತರಗತಿಯಲ್ಲಿ ಅನುಷ್ಠಾನ ಮಾಡುವ ಯೋಜನೆಯನ್ನು ಅಭಿವೃದ್ಧಿಪಡಿಸುತ್ತಾರೆ

ಶಿಕ್ಷಕರ ಮಾಹಿತಿ

ಶಿಕ್ಷಕರ ಮಾಹಿತಿ ನಮೂನೆ - ತಂತ್ರೋ-ಬೋಧನ ವಿಧಾನ ಕಾರ್ಯಾಗಾರ - ಈ ನಮೂನೆಯು 'ಭಾಷಾ ಶಿಕ್ಷಣದಲ್ಲಿ ಡಿಜಿಟಲ್ ಕಥೆ-ಆಧಾರಿತ ಬೋಧನ ವಿಧಾನದ ಅಳವಡಿಕೆ' ಕಾರ್ಯಕ್ರಮದ ಭಾಗವಾಗಿ ನಡೆಸಲಾಗುತ್ತಿರುವ ಈ ಕಾರ್ಯಾಗಾರದಲ್ಲಿ ಭಾಗವಹಿಸುವವರ ಬಗ್ಗೆ ಮೂಲಭೂತ ಮಾಹಿತಿಯನ್ನು ಸಂಗ್ರಹಿಸುವುದು.

ಕಾರ್ಯಕ್ರಮದ ಕಾರ್ಯಸೂಚಿ

ಅಧಿವೇಶನದ ಹೆಸರು/ ಚಟುವಟಿಕೆಗಳು ವಿವರಣೆ/ವಿಷಯಗಳು ಸಮಯ ಸಂಪನ್ಮೂಲಗಳು ಆವಲೋಕನಗಳು/ಪ್ರತಿಕ್ರಿಯೆಗಳು
ದಿನ 1 ಪೀಠಿಕೆ, ಕಾರ್ಯಕ್ರಮದ (KLEAP)ಕಿರುನೋಟ/ ಮೇಲ್ನೋಟ ಮತ್ತು ನಿರೀಕ್ಷೆಗಳನ್ನು ಹೊಂದಿಸುವುದು (TP ಕಾರ್ಯಾಗಾರ) ಕಾರ್ಯಕ್ರಮದ ಬಗ್ಗೆ ಸಂಕ್ಷೀಪವಾಗಿ ಮಾಹಿತಿ ಒದಗಿಸುವುದು.

ಸಂಪನ್ಮೂಲ ರಚನೆ ಮತ್ತು ಸಂಪಾದನೆ ಕಾರ್ಯಾಗಾರಗಳಲ್ಲಿ ಮಾಡಿದ ಕೆಲಸದ ಸಂಕ್ಷಿಪ್ತ ವಾಗಿ ಹೇಳುವುದು. ಈ ಕಾರ್ಯಾಗಾರದ ಉದ್ದೇಶಗಳು ಮತ್ತು ಕಾರ್ಯಸೂಚಿಯನ್ನು ತಿಳಿಸುವುದು.

10:೦೦ to 11:15 KLEAP ಕಾರ್ಯಕ್ರಮದ ಮೇಲ್ನೋಟ - ಪ್ರಸ್ತುತಿ ಸ್ಲೈಡ್‌ಗಳು
ವಿರಾಮ + ವಾಟ್ಸಾಪ್ ಗುಂಪು ಸೇರುವುದು 11:15 to 11:30 QR ಕೋಡ್ ಪ್ರತಿ QR ಕೋಡ್ ಅನ್ನು ಸ್ಕ್ಯಾನ್ ಮಾಡಿ, ಅವರ ಹೆಸರು, ಶಾಲೆ, ಅವರು ಕಲಿಸುವ ಶ್ರೇಣಿಗಳನ್ನು ಹಂಚಿಕೊಳ್ಳಲು ಶಿಕ್ಷಕರನ್ನು ಕೇಳಿ
ಚಿಂತನ ಮಂಥನ: ಭಾಷಾ ಬೋಧನ-ಕಲಿಕೆ ೧. ಭಾಷೆ ಕಲಿಕೆಯ ಉದ್ದೇಶಗಳೇನು?

೨. ಭಾಷೆ ಬೋಧನೆ ಕಲಿಕೆಯಲ್ಲಿ ನೀವು ಎದುರಿಸುತ್ತಿರುವ ಸವಾಲುಗಳೇನು?

೩. ಸಾಮಾಜಿಕ ಮತ್ತು ಶೈಕ್ಷಣಿಕ ಭಾಷಾ ಕೌಶಲ್ಯಗಳು - ಮೂಲಭೂತ ಪರಸ್ಪರ ಸಂವಹನ ಕೌಶಲ್ಯಗಳು (BICS), ಬೌದ್ಧಿಕ ಶೈಕ್ಷಣಿಕ ಭಾಷಾ ಕೌಶಲ್ಯಗಳು (CALP).

೪. ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ನ್ಯೂನತೆಗಳಿಗೆ ಕಾರಣವಾಗುತ್ತಿರುವ ಮಿಥ್ಯಗಳು.

೫. ಭಾಷೆ ಕಲಿಕೆಯ ಎರಡು ಮುಖ್ಯ ತತ್ವಗಳು

11:30 to 12:15 ಚಿಂತನ ಮಂಥನ: ಭಾಷಾ ಬೋಧನ-ಕಲಿಕೆ - ಪ್ರಸ್ತುತಿ ಸ್ಲೈಡ್‌ಗಳು
ಕಥೆ-ಆಧಾರಿತ ಬೋಧನ ವಿಧಾನ ಆಡಿಯೋ ಕಥೆ-ಆಧಾರಿತ ಬೋಧನ ವಿಧಾನ ಮತ್ತು ಸಂಪನ್ಮೂಲಗಳ ಬಳಕೆಯ ಸಂಭವನೀಯ ಪ್ರಯೋಜನಗಳ ಕುರಿತು ಚರ್ಚೆ 12:15 to 1 ಕಥೆ-ಆಧಾರಿತ ಬೋಧನ ವಿಧಾನ - ಪ್ರಸ್ತುತಿ ಸ್ಲೈಡ್‌ಗಳು ಕಥೆ ಹೇಳುವುದನ್ನು ತರಗತಿಯಲ್ಲಿ ಏಕೆ ಬಳಸಬೇಕು?
ಊಟದ ವಿರಾಮ 1 to 1:45
ಆಂಟೆನಾಪಾಡ್ ಅಪ್ಲಿಕೇಶನ್ ಇನ್ಸ್ಟಾಲೇಷನ್ ಆಂಟೆನಾಪಾಡ್ ಅಪ್ಲಿಕೇಶನ್ ಅಂತರ ಸಂಪರ್ಕ ಸಾಧನವನ್ನು ಪರಿಚಯಿಸುವುದು ಮತ್ತು ಶಿಕ್ಷಕರ ಮೊಬೈಲ್ ಪೋನ್ ಗೆ ಇನ್ಸ್ಟಾಲೇಷನ್ ಮಾಡಿಸಿ ಪ್ರಾಯೋಗಿಕವಾಗಿ ಅಭ್ಯಾಸ ಮಾಡಿಸುವುದು. 1:45 to 2:30 https://kathe-khajane.teacher-network.in/help
ಡೆಮೊ 1: 'ತರಗತಿಯಲ್ಲಿ ಆಡಿಯೊ ಸಂಪನ್ಮೂಲಗಳ ಬಳಕೆ' ತಲ್ಲೀನಗೊಳಿಸುವ ಡೆಮೊ ಸೆಷನ್, ವಿದ್ಯಾರ್ಥಿಗಳಂತೆ ಭಾಗವಹಿಸಲು ಶಿಕ್ಷಕರನ್ನು ಕೇಳಿ.

ಪೂರ್ವ ಆಲಿಸುವಿಕೆ, TPR, ಆಲಿಸುವ ಸಮಯದಲ್ಲಿ ಮತ್ತು ಆಲಿಸಿದ ನಂತರದ ಚಟುವಟಿಕೆಗಳನ್ನು ಚರ್ಚಿಸುವುದು. ಚಟುವಟಿಕೆಗಳ ಕುರಿತು ಚರ್ಚೆ - ಅವಲೋಕನಗಳು, ಪ್ರತಿಕ್ರಿಯೆ ಹಾಗೂ ಆಡಿಯೊ-ಸ್ಟೋರಿಗಳನ್ನು ಬಳಸುವ ಇತರ ವಿಧಾನಗಳ ಚಿಂತನ-ಮಂತನ

2:30 to 3:15 ಕಸದ ರಾಶಿ - ಧ್ವನಿ ಕಥೆಯ ಚಟುವಟಿಕೆ ಪುಟ ಸಿಟ್ಟಿನ ಅಕ್ಕು - ಧ್ವನಿ ಕಥೆಯ ಚಟುವಟಿಕೆ ಪುಟ
ಡೆಮೊವನ್ನು ಪ್ರತಿಫಲಿಸುವುದು ಮತ್ತು ಚಟುವಟಿಕೆಗಳ ರಚನೆಯ ಮಾದರಿಯನ್ನು ಪರಿಚಯಿಸುವುದು 1. ಚಟುವಟಿಕೆಗಳನ್ನು ರಚಿಸಲು ವಿನ್ಯಾಸ ಒದಗಿಸುವುದು (ಪೂರ್ವ-ಆಲಿಸುವಿಕೆ, ಆಲಿಸುವ-ಸಮಯದಲ್ಲಿ, ಆಲಿಸಿದ ನಂತರ).

2. KOER ಚಟುವಟಿಕೆ ಪುಟದ ಮಾದರಿಯನ್ನು ವಿವರಿಸಿ

3:15 to 3:45
  1. ಆಲಿಸುವಿಕೆಗಾಗಿ ಸಂಪೂರ್ಣ ದೈಹಿಕ ಪ್ರತಿಕ್ರಿಯೆ (TPR) ಚಟುವಟಿಕೆಗಳು
  2. ಪೂರ್ವ ಆಲಿಸುವಿಕೆ ಚಟುವಟಿಕೆಗಳು
  3. ಆಲಿಸುವ ಸಮಯದ ಚಟುವಟಿಕೆಗಳು
  4. ಆಲಿಸಿದ ನಂತರದ ಚಟುವಟಿಕೆಗಳು
ದಿನದ ಚಟುವಟಿಕೆಗಳ ಕ್ರೋಢೀಕರಿಸಿ ಮುಕ್ತಾಯಗೊಳಿಸುವಿಕೆ ಗುಂಪುಗಳನ್ನು ರಚಿಸಿ ಮತ್ತು ಪ್ರತಿ ಗುಂಪಿಗೆ ಕಥೆಗಳನ್ನು ನಿಯೋಜಿಸಿ. ಮರುದಿನ ಬರುವ ಮೊದಲು ಆಂಟೆನಾಪಾಡ್ ಮತ್ತು ಹಂಚಿಕೆಯ ಕಥೆಗಳನ್ನು ಅನ್ವೇಷಿಸಲು ಶಿಕ್ಷಕರನ್ನು ಕೇಳಿ 3:45 to 4 ಆಂಟೆನಾಪಾಡ್‌ನಲ್ಲಿ ಆಡಿಯೊ ಕಥೆಗಳು ಕನಿಷ್ಠ 5 ಕಥೆಗಳನ್ನು ಆಲಿಸಿ
ದಿನ 2 ದಿನ ಪ್ರಾರಂಭದ ನುಡಿ ಹಿಂದಿನ ದಿನದ ಚರ್ಚಿಸಿದ ಅಂಶಗಳನ್ನು ಕುರಿತು ಸಾರಾಂಶವನ್ನು ಹೇಳಲು ಶಿಕ್ಷಕರನ್ನು ಕೇಳುವುದು (೨-೩) ಮತ್ತು ದಿನದ ಕಾರ್ಯಸೂಚಿಯನ್ನು ತಿಳಿಸುವುದು 10:00 to 10:15
ಗುಂಪು ಚಟುವಟಿಕೆ 5 ಶಿಕ್ಷಕರ ಗುಂಪುಗಳನ್ನು ಮಾಡಿ. ಎಲ್ಲಾ ಶಿಕ್ಷಕರಿಗೆ ನಿಯೋಜಿದ ಒಂದು ಕಥೆಗೆ (ಪೂರ್ವ-ಆಲಿಸುವಿಕೆ, ಆಲಿಸುವಿಕೆ ಸಮಯದಲ್ಲಿ, ಆಲಿಸುವಿಕೆ-ನಂತರ) ಕನಿಷ್ಠ 1 ಚಟುವಟಿಕೆಯನ್ನು ಸಿದ್ಧಪಡಿಸಲು ಗುಂಪುಗಳನ್ನು ಕೇಳಿ 10:15 to 10:45 KOER ಪುಟದ ಚಟುವಟಿಕೆ ವಿನ್ಯಾಸದ ಮಾದರಿ ಕೈಪಿಡಿಯನ್ನು ಶಿಕ್ಷಕರಿಗೆ ನೀಡಲಾಗುವುದು
ಗುಂಪು ಚರ್ಚೆ ನಿಯೋಜಿದ ಕಥೆಗೆ ಚಟುವಟಿಕೆಗಳನ್ನ ಸೃಜಿಸುವ ಕುರಿತು ಸಮಗ್ರ ಚರ್ಚೆಯನ್ನು ಮಾಡುವುದು ಮತ್ತು ಹಾಗೆಯೇ ಚಟುವಟಿಕೆಗಳನ್ನು ರಚಿಸುವಾಗ ಎದುರಿಸುವ ಸವಾಲುಗಳನ್ನು ಚರ್ಚಿಸುವುದು.

ಪರಿಣಾಮಕಾರಿ ಆಡಿಯೋ ಕಥೆ ಆಧಾರಿತ ಚಟುವಟಿಕೆಗಳನ್ನು ರಚಿಸಲು ಮಾರ್ಗಸೂಚಿಗಳನ್ನು ಹಂಚಿಕೊಳ್ಳುವುದು.

10:45 to 11:45 ಪರಿಣಾಮಕಾರಿ ಆಡಿಯೋ ಕಥೆ ಆಧಾರಿತ ಚಟುವಟಿಕೆಗಳನ್ನು ರಚಿಸಲು ಸಲಹೆಗಳು RAP ಚೌಕಟ್ಟು (ಪರಿಶೀಲನಾಪಟ್ಟಿ) ಆಧರಿಸಿದ ಮಾರ್ಗಸೂಚಿ
ಗುಂಪು ಚಟುವಟಿಕೆ 3 ಶಿಕ್ಷಕರ ಗುಂಪುಗಳನ್ನು ಮಾಡಿ, ಪ್ರತಿ ಗುಂಪಿಗೆ ೨ ವಿಭಿನ್ನ ಕಥೆಗಳನ್ನು ನಿಯೋಜಿಸಿ ಪ್ರತಿ ಕಥೆಗೆ ಚಟುವಟಿಕೆಗಳನ್ನು ರಚಿಸುವುದು. ಸುಗಮಗಾರರು ಗುಂಪುಗಳನ್ನು ಬೆಂಬಲಿಸುತ್ತಾರೆ. 12 to 1 KOER ಪುಟದ ಚಟುವಟಿಕೆ ವಿನ್ಯಾಸದ ಮಾದರಿಯ ಕೈಪಿಡಿ
ಊಟದ ವಿರಾಮ
ಸಮಗ್ರ ಚರ್ಚೆ 1 ಅಥವಾ 2 ಗುಂಪುಗಳು ಪ್ರಸ್ತುತಪಡಿಸಿ ಶಾಲೆಯ ಸಂದರ್ಭವನ್ನು ಪರಿಗಣಿಸಿ ಚರ್ಚಿಸುವುದು. ಕೆಲವು ಉದಾಹರಣೆಗಳನ್ನು ನೀಡುವುದು.

ವಾಟ್ಸಪ್ ಗುಂಪಿನಲ್ಲಿ ರಚಿಸಿದ ಚಟುವಟಿಕೆಗಳನ್ನು ಹಂಚಿಕೊಳುವುದು. ಶಿಕ್ಷಕರು ಹಂಚಿಕೊಂಡ ಚಟುವಟಿಕೆಗಳಿಗೆ ಪ್ರತಿಕ್ರಿಯಿಸುವುದು.

2 to 3
ತರಗತಿಯಲ್ಲಿ ತಂತ್ರಜ್ಞಾನ ಸಂಯೋಜನೆ ಶಾಲೆಯಲ್ಲಿ ಲಭ್ಯವಿರುವ ತಂತ್ರಜ್ಞಾನ ಉಪಕರಣಗಳು ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆ ಗಳನ್ನ ಕುರಿತು ಸಲಹೆಗಳು 3 to 4
ದಿನ 3 ದಿನ ಪ್ರಾರಂಭದ ನುಡಿ ಮತ್ತು ದಿನದ ಕಾರ್ಯಸೂಚಿ ತಿಳಿಸುವುದು ಹಿಂದಿನ ದಿನದ ಚರ್ಚಿಸಿದ ಅಂಶಗಳನ್ನು ಕುರಿತು ಸಾರಾಂಶವನ್ನು ಹೇಳಲು ಶಿಕ್ಷಕರನ್ನು ಕೇಳುವುದು (೨-೩) ಮತ್ತು ದಿನದ ಕಾರ್ಯಸೂಚಿಯನ್ನು ಶಿಕ್ಷಕರಿಗೆ ತಿಳಿಸುವುದು 10 to 10:15
ಗುಂಪು ಚಟುವಟಿಕೆ ಕಥೆಗಳಿಗೆ ಚಟುವಟಿಕೆಗಳನ್ನು ರಚಿಸುವಲ್ಲಿ ಶಿಕ್ಷಕರು ಗುಂಪುಗಳಲ್ಲಿ ಚರ್ಚಿಸುವುದನ್ನು ಮಾಡುವುದನ್ನು ಮುಂದುವರಿಸುವುದು 10:15 to 11:45
ತರಗತಿಯಲ್ಲಿ ಅನುಷ್ಠಾನದ ಕ್ರಿಯಾ ಯೋಜನೆ ಮುಂದಿನ 2 ತಿಂಗಳುಗಳಲ್ಲಿ ಶಿಕ್ಷಕರು ತಮ್ಮ ತರಗತಿಗಳಲ್ಲಿ ಏನನ್ನು ಕಾರ್ಯಗತಗೊಳಿಸಬಹುದು ಎಂಬುದರ ಕುರಿತು ತಾವೇ ಒಂದು ಯೋಜನೆಯನ್ನು ಮಾಡುತ್ತಾರೆ. ಆಯ್ಕೆಮಾಡಿದ ಕಥೆಗಳು, ತಾತ್ಕಾಲಿಕ ವೇಳಾಪಟ್ಟಿ, ಆವರ್ತನೆ, ಸಂಬಂಧಿಸಿದ ತರಗತಿ, ಸಂಬಂಧಿತ ಚಟುವಟಿಕೆಗಳನ್ನು ಯೋಜಿಸುವುದು.

ಶಿಕ್ಷಕರು ಮಾಡಿದ ಯೋಜನೆಗಳ ಕುರಿತು ಚರ್ಚಿಸುವುದು ಹಾಗೆಯೇ ಅವುಗಳ ಕಾರ್ಯಸಾಧ್ಯತೆ, ಅವರು ನಿರೀಕ್ಷಿಸುವ ಸವಾಲುಗಳು ಮತ್ತು ಅವುಗಳನ್ನು ಹೇಗೆ ಪರಿಹರಿಸಬಹುದೆಂದು ಚರ್ಚಿಸುವುದು.

11:45 to 1 ತರಗತಿಯಲ್ಲಿ ಅನುಷ್ಠಾನದ ಕ್ರಿಯಾ ಯೋಜನೆಯ ವಿನ್ಯಾಸ ಸ್ಥೂಲವಾದ ಗುರಿಯನ್ನು ಹೊಂದುವುದು
ಊಟದ ವಿರಾಮ
ಶೈಕ್ಷಣಿಕವಾಗಿ ಬೆಂಬಲಿಸುವುದು ಕ್ಲಸ್ಟರ್ (ಸಮಾಲೋಚನಾ ಸಭೆ) ಸಭೆಯಲ್ಲಿ ಏನನ್ನು ಹಂಚಿಕೊಳ್ಳಬಹುದು?

ಈ ಸಂಪನ್ಮೂಲಗಳು ಮತ್ತು ವಿಧಾನವನ್ನು ಹೆಚ್ಚಿನ ಶಿಕ್ಷಕರು ಮತ್ತು ಶಾಲೆಗಳೊಂದಿಗೆ ಹೇಗೆ ಹಂಚಿಕೊಳ್ಳಬಹುದು ಎಂಬುದನ್ನು ಚರ್ಚಿಸಲು ಭಾಗವಹಿಸುವವರನ್ನು ಕೇಳಿ. ಕಾರ್ಯಾಗಾರದಿಂದ ಯಾವ ಕಲಿಕೆಗಳನ್ನು ಕ್ಲಸ್ಟರ್ ಸಭೆಗಳಲ್ಲಿ ಹಂಚಿಕೊಳ್ಳಬಹುದು? ಯಾವ ಅವಧಿಗಳನ್ನು ತೆಗೆದುಕೊಳ್ಳಬಹುದು? RP ಶಿಕ್ಷಕರು ಮತ್ತು CRP ಗಳ ಪಾತ್ರಗಳು ಯಾವುವು? ಶಿಕ್ಷಕರಿಂದ ಇನ್ಪುಟ್ಗಳನ್ನು (inputs) ಒಟ್ಟುಗೂಡಿಸುವುದು.

2 to 3
ಪ್ರತಿಫಲನಗಳು ಮತ್ತು ಹಿಮ್ಮಾಹಿತಿ ಹಿಮ್ಮಾಹಿತಿ ನಮೂನೆಯನ್ನು ಭರ್ತಿ ಮಾಡುವುದು, ಕಾರ್ಯಾಗಾರದ ಚಟುವಟಿಕೆಗಳ ಕುರಿತು ಪ್ರತಿಫಲಗಳು ಮತ್ತು ಹಿಮ್ಮಾಹಿತಿ ಪಡೆಯುವುದು, ಮುಂದಿನ ನಡೆಯ ಬಗ್ಗೆ ಚರ್ಚೆ, ಗುಂಪು ಫೋಟೋ 3 to 4 ಹಿಮ್ಮಾಹಿತಿ ನಮೂನೆ

ಸಂಪನ್ಮೂಲಗಳು

  1. ಕಥಾ-ಖಜಾನೆ
  2. ಭಾಷಾ ಸ್ವಾಧೀನತೆ ಮತ್ತು ಕಲಿಕೆಯಲ್ಲಿ ಆಲಿಸುವ ಕೌಶಲ್ಯದ ಪ್ರಾಮುಖ್ಯತೆ
  3. ಭಾಷಾ ತರಗತಿಯಲ್ಲಿ ಆಡಿಯೋ ಕಥೆಗಳನ್ನು ಬಳಸುವುದು
  4. ಮತ್ತಷ್ಟು ವಿಧ ವಿಧದ ಕಥೆಗಳನ್ನು ಓದಲು ಮತ್ತು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಆಧರಿತ ಸಂಪನ್ಮೂಲಗಳು

Install AntennaPod, subscribing stories from Kathe Khajane


  1. ಆಂಟೆನಾಪಾಡ್ ನ ವೀಡಿಯೊ ಟ್ಯುಟೋರಿಯಲ್‌ಗಳು
  2. ತರಗತಿಗಳಲ್ಲಿ ತಂತ್ರಜ್ಞಾನ ಬಳಕೆಗೆ ಟೂಲ್-ಕಿಟ್
  3. ಸ್ಪೀಕರ್‌ಗಳು ಮತ್ತು ಪ್ರೊಜೆಕ್ಟರ್‌ಗಳನ್ನು ಖರೀದಿಸಿ

ಶಿಕ್ಷಕರ ಹಿಮ್ಮಾಹಿತಿ ನಮೂನೆ

ಕಾರ್ಯಗಾರದ ಹಿಮ್ಮಾಹಿತಿಯನ್ನು ಹಾಗು ಮುಂದಿನ ದಾರಿಯ ಬಗ್ಗೆ ಸಲಹೆಗಳನ್ನು ನೀಡಲು ಇಲ್ಲಿ ಕ್ಲಿಕ್ಕಿಸಿ.