ಆಮೆ ಮತ್ತು ಮೊಲ - ಧ್ವನಿ ಕಥೆಯ ಚಟುವಟಿಕೆ ಪುಟ
Jump to navigation
Jump to search
ಈ ಚಟುವಟಿಕೆಯ ಪುಟವು ಡಿಜಿಟಲ್ ಆಡಿಯೊ ಕಥೆಗಳ ಶಕ್ತಿಯನ್ನು ಶಿಕ್ಷಣ ಸಾಧನವಾಗಿ ಬಳಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಭಾಷಾ ಕಲಿಕೆಯ ಅನುಭವಗಳನ್ನು ಉತ್ಕೃಷ್ಟಗೊಳಿಸುವ ಪ್ರಯತ್ನದ ಭಾಗವಾಗಿದೆ. ಹೆಚ್ಚಿನದನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ.
ಪೀಠಿಕೆ: ಮೊಲ ಮತ್ತು ಆಮೆ ನಡುವೆ ಓಟದ ಪಂದ್ಯದ ಹಳೆಯ ಕಥೆ ನೆನಪಿದೆಯಾ? ಇದು ಅಂತಹುದೇ ಪಂದ್ಯದ ಹೊಸ ಕಥೆ. ಪೈಪೋಟಿಯಲ್ಲ, ಸಹಯೋಗದ ಸ್ಪರ್ಧೆ ಏನಾಯಿತೆಂದು ಮೊಲ ಮತ್ತು ಆಮೆ ಕತೆ ಓದಿ ತಿಳಿಯಿರಿ.
ಉದ್ದೇಶಗಳು : ಕಥೆಯ ಮೂಲಕ ಹೊಸ ಪದಗಳ ಪರಿಚಯ, ಸರಳ ವಾಕ್ಯಗಳ ರಚನೆ ಮತ್ತು ಪರಸ್ಪರ ಸಹಾಯ ಮಾಡಬೇಕೆಂಬ ನೀತಿಯನ್ನ ತಿಳಿಸಿಕೊಡಬಹುದು. ಕಥೆಗೆ ಸಂಬಂಧಿಸಿದಂತೆ ಕೆಲವು ತರಗತಿ ಚಟುವಟಿಕೆಗಳು.
ಕಥಾ ವಸ್ತು : ಸ್ನೇಹ,ಸಹಾಯ - ಸಹಕಾರ,ಬುದ್ಧಿವಂತಿಕೆ ಮತ್ತು ಚತುರತೆ
ಗುರುತು ಪಟ್ಟಿ : ಹಿರಿಯ ಪ್ರಾಥಮಿಕ ಹಂತ, ತರಗತಿ ೪,೫,೬,೭
ಧ್ವನಿ ಕಥೆ ಲಿಂಕ್:
https://idsp-dev.teacher-network.in/backend/sites/default/files/2024-07/Aame%20Mattu%20Mola.mp3