ರಚನಾ ಸಮಾಜ ವಿಜ್ಞಾನ 9 ಸಮಾಜ ವಿಜ್ಞಾನ ತರಗತಿಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೪:೪೫, ೧೦ ನವೆಂಬರ್ ೨೦೧೩ ರಂತೆ Hvvenkatesh (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: =9. ಸಮಾಜ ವಿಜ್ಞಾನ ತರಗತಿಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು = ಹೊಸ ಶಿಕ್ಷಣ...)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

9. ಸಮಾಜ ವಿಜ್ಞಾನ ತರಗತಿಯಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳು

ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ಮಗು ಕೇಂದ್ರಿತ ಕಲಿಕೆಗೆ ಹೆಚ್ಚಿನ ಒತ್ತು ನೀಡುತ್ತಿದ್ದು ಮಕ್ಕಳೇ ಕ್ರಿಯಾಶೀಲರಾಗಿ ತೊಡಗಿಕೊಂಡು ತಮ್ಮ ತಮ್ಮ ಅನುಭವಗಳ ಮೂಲಕ ಜ್ಞಾನ ಕಟ್ಟಿಕೊಳ್ಳುವ ರೀತಿಯಲ್ಲಿ ಶಿಕ್ಷಣ ಕ್ರಮವನ್ನು ವಿಕಾಸಗೊಳಿಸಿದ್ದು ಕಂಠಪಾಠ ಹಾಗೂ ಅಂಕ ಪ್ರಧಾನ ಕಲಿಕೆಯಿಂದ ಹೊರಬರುವಂತೆ ನೂತನ ಕಲಿಕಾ ಚಟುವಟಿಕೆಗಳನ್ನು ರೂಪಿಸಲಾಗಿದೆ.

ಅದಕ್ಕಾಗಿ ಮಕ್ಕಳು ಗುಂಪು ಚರ್ಚೆಯಲ್ಲಿ ಸಹವರ್ತಿಗಳ ಜೊತೆ ಅನುಭವ, ಸಹ ಕಲಿಕೆ ಹಾಗೂ ಚರ್ಚೆಯಲ್ಲಿ ಗುಂಪು ಗುಂಪುಗಳಾಗಿ ಮತ್ತು ವೈಯಕ್ತಿಕವಾಗಿ ಕಲಿಯುವಂತಾಗಲಿ ಎಂಬುದು ಕೂಡ ಇಂದಿನ ಶಿಕ್ಷಣದ ಮಹಾದಾಶಯವಾಗಿದೆ. ಹಾಗೆಯೇ ಕಲಿಕೆಯನ್ನು ಅನುಕೂಲಿಸುವವರು ಕಲಿಕಾ ಸಮಸ್ಯೆಗಳ ಹಿನ್ನಲೆಯಲ್ಲಿ ಅನೇಕ ಮಾರ್ಗೋಪಾಯಗಳನ್ನು ಅಳವಡಿಸಿಕೊಳ್ಳಲು ಕಲಿಕಾ ಚಟುವಟಿಕೆಗಳನ್ನು ಸಮಗ್ರವಾಗಿ ಬಳಸಿಕೊಳ್ಳಲಾಗಿದೆ. ಮಗು ಕಲಿಕೆಯ ಸಂದರ್ಭದಲ್ಲಿ ತನ್ನ ಮಾತುಗಾರಿಕೆ ಪಾಲ್ಗೊಳ್ಳುವಿಕೆ, ಪರಸ್ಪರ ವಿನಿಮಯ, ಸಂವಹನ, ಕಲಿಕಾ ಫಲಿತಾಂಶದ ದಾಖಲೀಕರಣದ ಜೊತೆಗೆ ಹಿಮ್ಮಾಹಿತಿಯನ್ನು ಒಳಗೊಂಡಂತೆ ಚಟುವಟಿಕೆಗಳನ್ನು ರೂಪಿಸಿಕೊಳ್ಳುವುದು, ಕಲಿಕೆಗೆ ಅನುಕೂಲಿಸುವವರ ಕರ್ತವ್ಯವಾಗಿದೆ.

ಈ ಎಲ್ಲಾ ಅಂಶಗಳನ್ನು ಒಳಗೊಂಡಂತೆ 9ನೇ ತರಗತಿ ಸಮಾಜ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಕೆಲವು ಟಕಗಳ ಮೇಲೆ ಚಟುವಟಿಕೆಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬುದು ಉದಾಹರಣೆಯೊಂದಿಗೆ ಮುಂದೆ ವಿಶ್ಲೇಷಿಸಲಾಗಿದೆ. ಪಾಠದ ಹೆಸರು: ಮೊಲರು ಮತ್ತು ಮರಾಠರು

ಈ ಘಟಕಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಿಕೊಳ್ಳಬಹುದಾದ ಚಟುವಟಿಕೆಗಳು

ಆಯ್ಕೆ ಮಾಡಿಕೊಂಡ ಚಟುವಟಿಕೆ: ಕಲಿಕಾ ನಿಲ್ದಾಣ ಚಟುವಟಿಕೆ: (ಕಲಿಕಾ ನಿಲ್ದಾಣ ಚಟುವಟಿಕೆ ಎಂದರೆ, ಒಂದು ಟಕಕ್ಕೆ ಸಂಬಂಧಿಸಿದ ಅಂಶಗಳನ್ನು ವಿವರವಾಗಿ ಕಾರ್ಡ್ನಲ್ಲಿ ಬರೆದು ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಐದು ಅಥವಾ ಆರು ಕಡೆ ಇಡುವುದು. ಪ್ರತಿ ವಿಭಾಗದ ಕಡೆಯು ಬೇರೆ ಬೇರೆ ಕಲಿಕಾಂಶಗಳನ್ನು ಬರೆದಿದ್ದು, ಮಕ್ಕಳ ಗುಂಪು ಆವರ್ತಗಳಲ್ಲಿ ಚಲಿಸಬೇಕು. ಅಲ್ಲಿನ ವಿಷಯವನ್ನು ಓದಿ ತಮ್ಮ ತಮ್ಮಲ್ಲೇ ಚರ್ಚಿಸಬೇಕು. ಮುಂದಿನ ಕಾರ್ಡ್ ಬಳಿ ಚಲಿಸಬೇಕು. ಕಾರ್ಡ್ ಇರಿಸಿದ ಸ್ಥಳವೇ ಕಲಿಕಾ ನಿಲ್ದಾಣ).

ಉದಾ: ನಾಲ್ಕು ಗುಂಪು ಮಾಡಿರುವ ತರಗತಿಗೆ ಸಂಬಂಧಿಸಿದಂತೆ ಕಲಿಕಾ ನಿಲ್ದಾಣ : 1 ಬಾಬರ್ ಮತ್ತು ಮೊಲ್ ಸಾಮ್ರಾಜ್ಯದ ಸ್ಥಾಪನೆ - 1526ರಲ್ಲಿ ನಡೆದ ಮೊದಲ ಪಾಣಿಪಟ್ ಕದನ. ಯಾರು ಯಾರಿಗೆ ನಡೆಯಿತು. ರಾಜಧಾನಿ ಬಾಬರನ ಸಾಮ್ರಾಜ್ಯ ವಿಸ್ತರಣೆ ಪ್ರದೇಶಗಳು. ಕಲಿಕಾ ನಿಲ್ದಾಣ : 2 ಹುಮಾಯೂನ್, ಈತನು ಎದುರಿಸಿದ ಕಠಿಣ ಸವಾಲುಗಳು, ಹುಮಾಯೂನ್ ವಶಪಡಿಸಿಕೊಂಡ ಕೋಟಿಗಳು. ಹುಮಾಯೂನನ ಅಧಿಕಾರದ ಅವಧಿ. ಕಲಿಕಾ ನಿಲ್ದಾಣ : 3 ಸೂರ್ ಮನೆತನದ ಮತ್ತು ಶೇರ್ಷಾ. ಶೇರ್ಷಾನ ಬಾಲ್ಯದ ದಿನಗಳು, ಶೇರ್ಷಾನನೆಂದು ಹೆಸರು ಬರಲು ಕಾರಣ, ಬಾಬರ್ ಮತ್ತು ಶೇಹಷಾನ ಸಂಬಂಧ. ಹುಮಾಯಾನನಿಂದ ವಶಪಡಿಸಿಕೊಂಡ ಪ್ರದೇಶಗಳು. ಕಲಿಕಾ ನಿಲ್ದಾಣ : 4 ಶೇರ್ಷನ ಆಡಳಿತ ವ್ಯವಸ್ಥೆ - ಸೈನ್ಯದ ಸಂಖ್ಯೆ ಸೈನ್ಯದಲ್ಲಿನ ವಿವಿಧ ಅಧಿಕಾರಿಗಳು, ಕಟ್ಟಿಸಿದ ಕೋಟೆಗಳು, ಭೂಕಂದಾಯ ವ್ಯವಸ್ಥೆ ನ್ಯಾಯಾಂಗ ವ್ಯವಸ್ಥೆ, ಆಕ ವ್ಯವಸ್ಥೆ ಶೇರ್ಷನ ಕೊಡುಗೆಗಳು, ಮನನ ಮಾಡಿಕೊಂಡ ಅಂಶಗಳು. ಜ್ಞಾನ ಪುನರ್ರಚನೆಯ ಅವಕಾಶಗಳು. (ಉದಾ: ಶೇರ್ಷಾನ ಆಡಳಿತ ಮತ್ತು ಪ್ರಸ್ತುತ ಆಡಳಿತ ವ್ಯವಸ್ಥೆ ಚರ್ಚೆ).

- ಶಿಕ್ಷಕರು ಆವರ್ತದಲ್ಲಿ ಮಕ್ಕಳು ಚಲಿಸುವಂತೆ ನೋಡಿಕೊಳ್ಳುವುದು. - ಮಕ್ಕಳ ಚರ್ಚೆ ಪಠ್ಯಕ್ಕೆ ಪೂರಕವಾಗಿರುವಂತೆ ಎಚ್ಚರವಹಿಸುವುದು. - ಟಕಕ್ಕೆ ಸಂಬಂಧಿಸಿದಂತೆ ಶಿಕ್ಷಕರು ಮನನಮಾಡಿಕೊಳ್ಳಬೇಕಾದ ಹಾಗೂ ಜ್ಞಾನ ಪುನರ್ರಚನಾ ಅಂಶಗಳ ಕಡೆ ಮಕ್ಕಳ ಗಮನವನ್ನು ಸೆಳೆಯುವಂತೆ ಪ್ರೇರೇಪಿಸಬೇಕು. - ಆವರ್ತದ ಚಲನೆ ಮುಕ್ತಾಯವಾದ ನಂತರ ಪ್ರತಿ ಗುಂಪಿನಿಂದ ತರಗತಿಯಲ್ಲಿ ಒಂದೊಂದು ಕಲಿಕಾ ನಿಲ್ದಾಣದ ಬಗೆಗಿನ ಜ್ಞಾನವನ್ನು ಹಂಚಿಕೊಳ್ಳಲು ಪ್ರತಿ ತಂಡದ ಕನಿಷ್ಠ ಒಬ್ಬರಿಗಾದರೂ ಅವಕಾಶ ಕಲ್ಪಿಸಬೇಕು. - ಟಕದ ಒಟ್ಟಾರೆ ಆಶಯವನ್ನು ಶಿಕ್ಷಕರು ಕಡೆಯಲ್ಲಿ ಸಮನ್ವಯಗೊಳಿಸಬೇಕು. - ಟಕಕ್ಕೆ ಸಂಬಂಧಿಸಿದ ಮನೆಗೆಲಸದ ಚಟುವಟಿಕೆಗಳನ್ನು ನೀಡುವುದು. ಉದಾ: ಟಿಪ್ಪಣಿ ಬರವಣಿಗೆ. ಉದಾ: ಷೇರ್ಷನ ಆಡಳಿತ ನಕ್ಷೆ ರಚನೆ ಮತ್ತು ಗುರುತಿಸುವಿಕೆ. - ಪ್ರಬಂಧ ರಚನೆ; ಉದಾ: ಬಾಬರ್ ಭಾರತಕ್ಕೆ ಬಂದಾಗಿನ ಇಲ್ಲಿನ ಪರಿಸ್ಥಿತಿ.

ಉದಾ: ಪಾಠದ ಹೆಸರು : ಕರ್ನಾಟಕದ ಜಲಸಂಪನ್ಮೂಲಗಳು (ಭೂಗೋಳ) ಚಟುವಟಿಕೆಗಳು (ಹೋಮ್ ಗ್ರೂಪ್ - ಎಕ್ಸ್ಫರ್ಟ್ ಗ್ರೂಪ್) ಅಥವಾ (ನಮ್ಮ ಗುಂಪು - ಪರಿಣತ ಗುಂಪು) (ಟಕವಾರು ಅವಧಿಗೆ ಅನುಗುಣವಾಗಿ ತರಗತಿಯಲ್ಲಿನ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಐದು-ಆರು ಗುಂಪು ರಚಿಸುವುದು. ಇದು ನಮ್ಮ ಗುಂಪು ಎನ್ನಿಸಿಕೊಳ್ಳುತ್ತದೆ. ನಂತರ ಈ ಗುಂಪಿನ ಪ್ರತಿಯೊಬ್ಬ ಸದಸ್ಯರಿಗೂ ಒಂದೊಂದು ಸಂಖ್ಯೆ ನೀಡಿ ಈ ಸಂಖ್ಯೆಗೆ ಅನುಗುಣವಾಗಿ ಒಂದೇ ತರಹದ ನಂಬರ್ ಬರುವ (ಉದಾ: 1-1, 2-2,

- ಇದಾದನಂತರ ಎಲ್ಲಾ ಮಕ್ಕಳು ತಮ್ಮ ಮೂಲ ಗುಂಪುಗಳಿಗೆ ಮರಳುವುದು. ತಮ್ಮ ಈ ಮೂಲ ಗುಂಪಿನಲ್ಲಿ ತಾವು ಕಲಿತು ಬಂದ ವಿಷಯವನ್ನು ಸಮಗ್ರವಾಗಿ ಒಬ್ಬೊಬ್ಬರಾಗಿ ಹಂಚಿಕೊಳ್ಳುವರು). ಉದಾ: ಮೊದಲ ಹಂತದಲ್ಲಿ `ಆರು' ಗುಂಪುಗಳ ರಚನೆ. ಇದು ನಮ್ಮ ಗುಂಪು, ಎನ್ನಿಸಿಕೊಂಡಿದೆ. ಮೂಲಗುಂಪು ಪರಿಣತ ಗುಂಪು. ಮೂಲ ಗುಂಪಿನ ಒಬ್ಬೊಬ್ಬರು ಈ ಪರಿಣತ ಗುಂಪಿನಲ್ಲಿ ಇರುತ್ತಾರೆ. ಕಲಿಕಾಂಶಗಳ ಹಂಚಿಕೆ ಪರಿಣತ ಗುಂಪು : 1 ಕರ್ನಾಟಕದಲ್ಲಿ ಪೂರ್ವಾಭಿಮುಖವಾಗಿ ಹರಿಯುವ ನದಿಗಳು. ಪರಿಣತ ಗುಂಪು: 2 ಕರ್ನಾಟಕದಲ್ಲಿ ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು. ಪರಿಣತ ಗುಂಪು: 3 ಕರ್ನಾಟಕದಲ್ಲಿ ನೀರಾವರಿ ವ್ಯವಸ್ಥೆ ಪರಿಣತ ಗುಂಪು: 4 ಕರ್ನಾಟಕದ ಜಲವಿದ್ಯುತ್ ಯೋಜನೆಗಳು ಪರಿಣತ ಗುಂಪು: 5 ಜಲ ವಿವಾದಗಳು ಪರಿಣತ ಗುಂಪು: 6 ನದಿ ಮತ್ತು ಜಲ ಸಾಮರಸ್ಯ. ಆರು ಪರಿಣತ ಗುಂಪುಗಳು ತಮ ತಮಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಶಿಕ್ಷಕರ ಮಾರ್ಗದರ್ಶನದಲ್ಲಿ ಕೂಲಂಕುಶವಾಗಿ ಕಲಿಯುತ್ತಾರೆ. ನಂತರ ಈ ಆರು ಪರಿಣತ ಗುಂಪಿನ ಸದಸ್ಯರು (ಮಕ್ಕಳು) ತಮ್ಮ ಮೂಲ ಗುಂಪಿಗೆ ಮರಳಿ, ತಾವು ಪರಿಣತಿ ಗುಂಪಿನಲ್ಲಿ ಕಲಿತ ಕಲಿಕಾಂಶಗಳನ್ನು ಮತ್ತೆ ಮನನ ಮಾಡಿಕೊಳ್ಳುವರು.

ಸೂಚನೆ: ಶಿಕ್ಷಕರು ಕಲಿಕಾಂಶಗಳನ್ನು ಮೊದಲೇ ಪಟ್ಟಿ ಮಾಡಿಕೊಳ್ಳುವುದು. - ಚರ್ಚೆಯ ಸಂದರ್ಭದಲ್ಲಿ ಪ್ರತಿ ಗುಂಪಿಗೂ ಶಿಕ್ಷಕರು ಚಲಿಸುತ್ತಾ ಸಲಹೆ ಸೂಚನೆ ನೀಡಬೇಕು. - ಟಕದಲ್ಲಿ ಮನನ ಮಾಡಿಕೊಳ್ಳುವ ಹಾಗೂ ಜ್ಞಾನ ಪುನರ್ರಚನೆಗೆ ಪೂರಕವಾಗಿರುವ ಅಂಶಗಳಿಗೆ ಹೆಚ್ಚು ಒತ್ತು ನೀಡುವುದು. ಉದಾ: ಕಾವೇರಿ ನದಿ ನೀರಿನ ಹಂಚಿಕೆ. ಹನಿ ನೀರು ಅಮೂಲ್ಯ. ಕಡ್ಡಾಯವಾಗಿ ಶಿಕ್ಷಕರು ಕಡೆಯಲ್ಲಿ ಟಕಕ್ಕೆ ಸಂಬಂಧಿಸಿದಂತೆ ಸಮನ್ವಯತೆಯ ಮಾತುಗಳನ್ನಾಡುವುದು ಬೋಧನೋಪಕರಣಗಳ ಬಳಕೆ ಅಗತ್ಯ. ಉದಾ: - ಕರ್ನಾಟಕದ ನದಿಗಳ ಭೂಪಟ - ಕರ್ನಾಟಕದ ಜಲವಿದ್ಯುತ್ ಕೇಂದ್ರಗಳ ಭೂಪಟ. - ಜಲಪಾತಗಳನ್ನು ತೋರಿಸುವ ಭೂಪಟ. (ಜೋಗ್, ಹೊಗೇನಕಲ್ಲು) - ನದಿ ಯೋಜನೆಗಳ ಭೂಪಟ. - ಕಡ್ಡಾಯವಾಗಿ ಮನೆಗೆಲಸಕ್ಕೆ ಸಂಬಂಧಿಸಿದ ಚಟುವಟಿಕೆ ನೀಡುವುದು. ಉದಾ : - ವಿವಿದೋದ್ದೇಶ ನದಿ ಯೋಜನೆಗಳ ಬಗ್ಗೆ ಮಾಹಿತಿ ಸಂಗ್ರಹ (ಕೃಷ್ಣರಾಜಸಾಗರ) - ನಿಮ್ಮೂರಿನ ಸುತ್ತಮುತ್ತಲಿನ ಜಲಪಾತ, ಝರಿ, ಕೆರೆ, ಹಳ್ಳ, ನದಿ, ಸರೋವರಗಳ ಹೆಸರುಗಳನ್ನು ಸಂಗ್ರಹಿಸಿ ಅವುಗಳ ಉಪಯೋಗಗಳನ್ನು ಬರೆಯಿರಿ. - ಕರ್ನಾಟಕದ ರೇಖಾ ನಕ್ಷೆಯಲ್ಲಿ ಆಲಮಟ್ಟಿ ಯೋಜನೆ ತುಂಗಭದ್ರಾ ಯೋಜನೆ, ಉದಕಮಂಡಲ, ಪಶ್ಚಿಮ ಟ್ಟಗಳು, ಜೋಗ್, ಶ್ರೀರಂಗಪಟ್ಟಣ, ಶಿವನ ಸಮುದ್ರ ಪ್ರದೇಶಗಳನ್ನು ಗುರುತಿಸಿರಿ. ಇದೇ ರೀತಿಯಾಗಿ ಉಳಿದ ಚಟುವಟಿಕೆಗಳನ್ನು ತರಗತಿಯಲ್ಲಿ ಬಳಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.