ವಾಣಿಜ್ಯ ಬೆಳೆಗಳು
ಚಟುವಟಿಕೆ - ಯೋಜನೆ-ವಾಣಿಜ್ಯ ಬೆಳೆಯಮಾಹಿತಿ ಸಂಗ್ರಹಣೆ
ಅಂದಾಜು ಸಮಯ
1 ವಾರ
- ಶಿಕ್ಷಕರು ವಿದ್ಯಾರ್ಥಿಗಳಿಗೆ ಯೋಜನೆ ಕೊಡುವ ಮೊದಲು ತೋಟಗಾರಿಕಾ ಬೆಳೆಯ ಬಗ್ಗೆ ಸಂಕ್ಷಿಪ್ತ ಮಾಹಿತಿಯನ್ನು ಕೊಡುವುದು.
- ಮಾಹಿತಿಯನ್ನು ಸಂಗ್ರಹಣೆ ಮಾಡಲು ರೈತರ ಸಹಾಯ ಪಡೆಯುವ ಬಗ್ಗೆ ಮಾಹಿತಿ ಕೊಡುವುದು.
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೇಪರ್
- ಪೆನ್
- ಮೊಬೈಲ್
- ಹಿರಿಯರ ಸಹಾಯ
- ಲೈಬ್ರೇರಿ
- ಹಳೆಯ ಪೇಪರ್ ಲೇಖನಗಳು
- ಇಂಟರ್ ನೆಟ್
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಇಂಟರ್ನೆಟ್ ನಿಂದ ಹೇಗೆ ಮಾಹಿತಿಯನ್ನು ಪಡೆಯುವುದು ಎಂದು ತಿಳಿಸ ಬೇಕು.
- ಮಾಹಿತಿಯಲ್ಲಿ ಬೆಳೆಯುವ ಕ್ರಮಗಳು, ನೀರಾವರಿ ಪದ್ದತಿ, ಹಾಕುವ ರಸಗೊಬ್ಬರ, ಇಳುವರಿಯ ರೀತಿ, ಬೆಳೆಗಳಿಗೆ ಬರುವ ರೋಗಗಳು, ಇತ್ಯಾದಿ ಮಾಹಿತಿಯನ್ನು ತರುವಂತೆ ತಿಳಿಸುವುದು.
ಬಹುಮಾಧ್ಯಮ ಸಂಪನ್ಮೂಲಗಳ
- ಇಂಟರ್ ನೆಟ್ ಮಾಹಿತಿಯನ್ನು ಬಳಸಿಕೊಳ್ಳುವುದು
- ಪೇಪರ್ ಮಾಹಿತಿ ಪಡೆಯುವುದು
- ಕೃಷಿಗೆ ಸಂಬಂದಿಸಿದ ವಾರ್ತಾ ಪತ್ರಿಕೆಯನ್ನು ಉಪಯೋಗಿಸುವುದು.ಉದಾ: ರಬ್ಬರ್ ವಾರ್ತೆ, ಕೃಷಿ ವಿಜಯ, ಕೃಷಿ ವಾರ್ತೆ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಸ್ಥಳೀಯ ಕಬ್ಬು, ಅಡಿಕೆ, ರಬ್ಬರ್, ಇತ್ಯಾದಿ ಬೆಳೆಗಳ ರೈತರ ನ್ನು ಕೇಳಿ ಮಾಹಿತಿ ಪಡೆಯಬಹುದು.
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ಹೊಗೆಸೊಪ್ಪು ಬಗ್ಗೆ ಮಾಹಿತಿ ಇದೆ
- ಹೋಗೆ ಸೊಪ್ಪು ಬೆಳೆಯುವ ರೀತಿ ಬಗ್ಗೆ ಚಿತ್ರಗಳು
- ಕಬ್ಬು ಬೆಳೆಯುವ ರೀತಿ, ಅದರ ಉತ್ಪನ್ನದ ಬಗ್ಗೆ ಚಿತ್ರವಿದೆ
- ಕಬ್ಬು ಬಗ್ಗೆ ಸಮಗ್ರ ಮಾಹಿತಿ ಇದೆ
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ವಿದ್ಯಾರ್ಥಿಯು ಯೋಜನೆ ಬಗ್ಗೆ ತನ್ನ ಊರಿನಲ್ಲಿ ಹಿರಿಯರನ್ನು ಕೇಳಿ ಮಾಹಿತಿ ಸಂಗ್ರಹಿಸುತ್ತಾನೆ.
- ತನ್ನ ಊರಿನಲ್ಲಿರುವ ಯಾವುದಾದರೊಂದು ವಾಣಿಜ್ಯ ಬೆಳೆಯ ಬಗ್ಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವನು.
- ತಾನು ಮಾಹಿತಿ ಸಂಗ್ರಹಿಸುವ ಬೆಳೆಯನ್ನು ಯಾವ ರೀತಿ ಬೆಳೆಯುದು , ಯಾವ ಸಮಯದಲ್ಲಿ ಬೆಳೆಯುತ್ತಾರೆ.ಹೀಗೆ ಮಾಹಿತಿಯನ್ನು ಸಂಗ್ರಹಿಸುವನು.
- ಅದರ ಉಪಯೋಗವೇನು? ಅದನ್ನು ಯಾವುದ್ದೇಶಕ್ಕೆ ಬೆಳೆಯುವರು? ಎಂದು ಮಾಹಿತಿ ಸಂಗ್ರಹಿಸುವರು.
- ಆ ಬೆಳೆಗೆ ಹಾಕುವ ರಸಗೊಬ್ಬರ ಯಾವುದು? ಯಾವ ಋತುಗಳಲ್ಲಿ ಅದರ ಫಸಲು ಬರುತ್ತದೆ. ಹೀಗೆ ಸಮಗ್ರವಾದ ಮಾಹಿತಿಯನ್ನು ಸಂಗ್ರಹಿಸುವುದು.
- ತಾನು ಮಾಹಿತಿ ಸಂಗ್ರಹಿಸುವ ಸಂದರ್ಬದಲ್ಲಿ ಮೊಬೈಲ್ ಮೂಲಕ ಚಿತ್ರವನ್ನು ಪಡೆಯುವನು.
- ತಾನು ಸಂಗ್ರಹಿಸಿದ ಮಾಹಿತಿಯನ್ನು ವಿಶ್ಲೇಷಿಸಿ ವರದಿಯನ್ನು ತಯಾರು ಮಾಡುವನು .
- ಈ ಸಂದರ್ಬದಲ್ಲಿ ಇಂಟರ್ನೆಟ್ , ಲೈಬ್ರೇರಿಯನ್ನು ಬಳಸಿಕೊಳ್ಳುವನು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ರೈತನ ಮಕ್ಕಳು ರೈತರಾಗಲು ಇಷ್ಟಪಡುವುದಿಲ್ಲ ಕಾರಣವೇನಿರಬಹುದು?
- ನಿನ್ನ ಊರಿನಲ್ಲಿ ವಾಣಿಜ್ಯ ಬೆಳೆಯನ್ನು ಮಾತ್ರ ಹೆಚ್ಚು ಬೆಳೆಯಲು ಕಾರಣವೇನು?
- ದೇಶದಲ್ಲಿ ಇತ್ತೀಚೆಗೆ ವಾಣಿಜ್ಯ ಬೆಳೆಗಳಿಗೆ ಸಿಗುವ ಪ್ರೋತ್ಸಾಹ ಆಹಾರ ಬೆಳೆಗೆ ಸಿಗುತ್ತಿಲ್ಲ ಕಾರಣವೇನಿರಬಹುದು?
- ವಾಣಿಜ್ಯ ಬೆಳೆಗಳು ದೇಶದ ಆರ್ಥಿಕ ಶಕ್ತಿ ಈ ಮಾತನ್ನು ನೀವು ಒಪ್ಪುವಿರಾ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ನಿನ್ನ ಊರಿನ ವಾಣಿಜ್ಯ ಬೆಳೆಗಳನ್ನು ಪಟ್ಟಿ ಮಾಡಿರಿ.
- ಕಬ್ಬು ನ್ನು ಯಾವ ವಾತಾವರಣದಲ್ಲಿ ಬೆಳೆಯುವರು.?
- ಹೊಗೆಸೊಪ್ಪನ್ನು ಯಾವ ಉದ್ದೇಶಕ್ಕೆ ಬಳಸುತ್ತಾರೆ?
- ಕಬ್ಬು ಉಪಯೋಗವೇನು?
ಪ್ರಶ್ನೆಗಳು
ಅಭ್ಯಾಸದ ಪ್ರಶ್ನೆಗಳನ್ನು ಉತ್ತರಿಸುವುದು.
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ