ಕೋಳಿ ಸಾಕಾಣೆ, ದನಕರು ಸಾಕಾಣೆ ಮನೆಗಳಿಗೆ ಭೇಟಿ
ಚಟುವಟಿಕೆ - ಹೊರ ಸಂಚಾರ- ಮನೆ ಭೇಟಿ
ಅಂದಾಜು ಸಮಯ
ಒಂದು ದಿನ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಪೆನ್
- ಪೇಪರ್
- ಮೊಬೈಲ್
- ಹೊರ ಸಂಚಾರಕ್ಕೆ ಹೋಗುವಾಗ ಇರಬೇಕಾದ ಮುಖ್ಯ ವಸ್ತುಗಳು
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಹೊರ ಸಂಚಾರಕ್ಕೆ ಹೋಗುವಾಗ ಮುಖ್ಯವಾಗಿ ಇರಲೇ ಬೇಕಾದ ವಸ್ತುಗಳನ್ನು ಇಟ್ಟುಕೊಂಡಿರುವುದು.
- ಮನೆಗಳಲ್ಲಿ ಕೇಳಲೇ ಬೇಕಾದ ಪ್ರಮುಖ ವಿಷಯಗಳ ಪ್ರಶ್ನಾವಳಿಯನ್ನು ಸಿಧ್ಧ ಮಾಡಿ ಇಟ್ಟು ಕೊಳ್ಳುವುದು.
- ಯಾವ ಮಾಹಿತಿಯನ್ನು ಪಡೆಯಬೇಕು ಎಂದು ಮೋದಲೇ ಸೂಚನೆ ಕೊಡುವುದು.
- ವೇಳಾ ಪಟ್ಟಿಯನ್ನು ಸಿಧ್ಧ ಮಾಡಿಇಟ್ಟುಕೊಳ್ಳುವುದು.
- ಹೊರಸಂಚಾರ ಹೋಗುವ ಮೊದಲು ವಿಷಯಕ್ಕೆ ಸಂಬಂದಿಸಿದಂತೆ ಸಂಕ್ಷಿಪ್ತ ಮಾಹಿತಿ ಕೊಡುವುದು ಅನುಕೂಲವಾದಿತು.
ಬಹುಮಾಧ್ಯಮ ಸಂಪನ್ಮೂಲಗಳ
- ಹಳೆಯ ಪೇಪರ್ ಲೇಖನಗಳು
- ಇಂಟರ್ ನೆಟ್ ಮಾಹಿತಿಗಳು
- ಟಿ ವಿ ಕಾರ್ಯಕ್ರಮಗಳು
ಪ್ರಸಕ್ತ ಸ್ಥಳೀಯ ಸಂಪರ್ಕಗಳು
- ಕೋಳಿ ಕೃಷಿಕರು
- ಹೈನುಗಾರಿಕೆ ಮಾಡುವ ಮನೆಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
- ಬದುಕು ಕಲಿಸಿದ ಕೋಳಿ ಸಾಕಾಣೆ - ಕೋಳಿ ಸಾಕಾಣೆಯಲ್ಲಿ ಯಶಸ್ಸು ಪಡೆದವನ ಮಾಹಿತಿ
- ಕೋಳಿ, ಮೊಲ, ಹಂದಿ, ಇತ್ಯಾದಿ ಸಾಕಾಣೆ ಬಗ್ಗೆ ಮಾಹಿತಿ ಇರುವ ಚಿತ್ರಗಳು
- ಕೋಳಿ ಬಗ್ಗೆ ಸಮಗ್ರ ಮಾಹಿತಿಗೆ ಕ್ಲಿಕ್ ಮಾಡಿ
- ದನಕರುಗಳು , ಜಾನುವಾರುಗಳ ಮಾಹಿತಿ, ಅವುಗಳಿಗೆ ಬರುವ ರೋಗಗಳು, ಸಾಕುವ ವಿಧಾನದ ಬಗ್ಗೆ ಮಾಹಿತಿ ಇದೆ
- ದನಕರುಗಳ ಚಿತ್ರವಿದೆ, ಸಾಕುವ ಚಿತ್ರವಿದೆ
- ದನದ ಬಗ್ಗೆ ಮಾಹಿತಿ ಇದೆ, ಬೇರೆ ಬೇರೆ ದೇಶದಲ್ಲಿ ಸಾಕುವ ರೀತಿಯನ್ನು ತಿಳಿಸಿದ್ದಾರೆ
- ದನದ ಚಿತ್ರವಿದೆ
- cows
- hens
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
- ಹೊರಸಂಚಾರಕ್ಕೆ ದಿನವನ್ನು ನಿಗದಿ ಮಾಡಿ ಯಾವ ಮನೆಗೆ ಹೋಗುತ್ತಿದ್ದಿರಿ ಎಂದು ಆ ಮನೆಯವರಿಗೆ ತಿಳಿಸುವುದು.
- ಕೇಳಬೇಕಾದ ಮಾಹಿತಿ, ಪಡೆಯಬೇಕಾದ ಮಾಹಿತಿ ಬಗ್ಗೆ ಪ್ರಶ್ನಾವಳಿಯನ್ನು ಸಿದ್ದ ಮಾಡಿಇಟ್ಟುಕೊಳ್ಳುವುದು.
- ವಿದ್ಯಾರ್ಥಿಗಳಿಗೆ ಸೂಚನೆಯನ್ನು ಕೊಟ್ಟು ತೆರಳುವುದು.
- ಕೋಳಿಸಾಕುವ ವಿಧಾನ , ದನ ಸಾಕುವ ವಿಧಾನದ ಬಗ್ಗೆ ವಿವರ ಕೇಳುವುದು.
- ಅದರಿಂದ ಆಗುವ ಲಾಭವನ್ನು ತಿಳಿಯುವುದು.
- ಅವುಗಳಿಗೆ ಹಾಕುವ ಆಹಾರದ ಬಗ್ಗೆ ತಿಳಿಯುವುದು.
- ತರಗತಿಗೆ ಬಂದ ಮೇಲೆ ವರದಿ ಸಿಧ್ಧಪಡಿಸುವುದು.
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
- ಇತ್ತೀಚೆಗೆ ದನಕರುಗಳಿಗೆ ರೋಗಗಳು ಜಾಸ್ತಿಯಾಗಲು ಕಾರಣವೇನಿರಬಹುದು?
- ಹಕ್ಕಿ ಜ್ವರ ಎಂದು ಕರೆಯುವ ರೋಗವು ಆಹಾರದಿಂದ ಬರುವುದು ಇರಬಹುದೇ?
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
- ಕೋಳಿ ಸಾಕಾಣೆ ಯಾವುದಕ್ಕೆ ಮಾಡುವರು?
- ಹೈನುಗಾರಿಕೆಯಿಂದ ಲಾಭಗಳಿಸಬಹುದೇ?ಹೇಗೆ?
- ಮಿಶ್ರ ಬೇಸಾಯದಲ್ಲಿ ಇನ್ನಿತರ ಯಾವ ಬೇಸಾಯಗಳಿವೆ?
- ನಿಮ್ಮ ಊರಿನಲ್ಲಿ ಮಿಶ್ರ ಬೇಸಾಯ ಯಾವ ರೀತಿ ಇದೆ?
ಪ್ರಶ್ನೆಗಳು
ಅಭ್ಯಾಸದ ಪ್ರಶ್ನೆಗಳನ್ನು ಬರೆಯುವುದು.
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ