ಭಾರತದ ಮಣ್ಣುಗಳು
ಸಮಾಜ ವಿಜ್ಞಾನದ ತತ್ವಶಾಸ್ತ್ರ |
ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ
ಪರಿಕಲ್ಪನಾ ನಕ್ಷೆ
<mm>Flash</mm>
ಮತ್ತಷ್ಟು ಮಾಹಿತಿ
- ೧೦ ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕದಲ್ಲಿ ಭಾರತದ ಮಣ್ಣುಗಳ ಬಗ್ಗೆ ಸಂಕ್ಷೀಪ್ತವಾಗಿ ವಿವರಿಸಲಾಗಿದೆ.
- ಮಣ್ಣು ನಮ್ಮ ರಾಷ್ಟ್ರೀಯ ಪ್ರಮುಖ ಸಂಪತ್ತಾಗಿದ್ದು ,ಇದರ ಸೂಕ್ತ ಬಳಕೆ ಮತ್ತು ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.
- ಮಣ್ಣಿನ ಫಲವತ್ತತೆಯನ್ನು ಕಾಪಾಡಲು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳಬೇಕಾಗಿದೆ .
- ಕಾಡು ಕೃಷಿ ಇತ್ತೀಚೆಗೆ ಹೆಚ್ಚು ಪ್ರಚಲಿತದಲ್ಲಿದ್ದು,ಅದನ್ನು ನಾವು ಅಳವಡಿಸಿಕೊಳ್ಳಬೇಕಾಗಿದೆ.
- ಕೇರಳದಲ್ಲಿ ಪ್ಲಾಸ್ಟಿಕ್ ಸಂಪೂರ್ಣವಾಗಿ ನಿಷೇಧಿಸಿದೆ.ಆ ಮಾದರಿ ನಾವು ಅಳವಡಿಸಿಕೊಳ್ಳಬೇಕಾಗಿದೆ.
- ಭಾರತ ಪ್ರಪಂಚದಲ್ಲಿ ೭ನೇ ಪ್ರಮುಖ ರಾಷ್ಟ್ರವಾಗಿದ್ದು,ಪ್ರಪಂಚದ ಒಟ್ಟು ಭೂ ಕ್ಷೇತ್ರದಲ್ಲಿ ೨.೪ ರಷ್ಟು ಮಾತ್ರ ಭೂಮಿಯನ್ನು ಹೊಂದಿದೆ.
- ಜಪಾನ್ ಮಾದರಿಯ ಮೆಟ್ಟಿಲು ಕೃಷಿ ಮತ್ತು ಇಸ್ರೇಲ್ ಮಾದರಿಯ ಹನಿ ನೀರಾವರಿ ಮತ್ತು ತಂ ತು ರು ನೀರಾವರಿಯ ಬಗ್ಗೆ ಅರಿವು ಮೂ ಡಿಸಬೇಕಿದೆ.
- ಸಾವಯವ ಕೃಷಿಯಲ್ಲಿನ ಮಹತ್ವ ಮತ್ತು ಭೂ ಮಿಯ ಫಲವತ್ತತೆ ಬಗ್ಗೆ ಮನವರಿಕೆ ಮಾಡಬೇಕಿದೆ.
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
'==ಉಪಯುಕ್ತ ವೆಬ್ ಸೈಟ್ ಗಳು==
- ಭಾರತದ ಮಣ್ಣುಗಳ ಬಗ್ಗೆ ಇರುವ ಒಂದು ಉಪಯುಕ್ತ ವೆಬ್ ಸೈಟಿಗಾಗಿ ಇಲ್ಲಿ ಕ್ಲಿಕ್ ಮಾಡಿ
- ಮೆಕ್ಕಲು ಮಣ್ಣು ನೋಡಲು ಇಲ್ಲಿ ಕ್ಲಿಕ್ ಮಾಡಿ
- ಕಪ್ಪು ಮಣ್ಣು ನೋಡಲು ಇಲ್ಲಿ ಕ್ಲಿಕ್ ಮಾಡಿ
- ಕೆಂಪು ಮಣ್ಣು ನೋಡಲು ಇಲ್ಲಿ ಕ್ಲಿಕ್ ಮಾಡಿ
- ಜಂಬಿಟಿಗೆ ಮಣ್ಣು ನೋಡಲು ಇಲ್ಲಿ ಕ್ಲಿಕ್ ಮಾಡಿ
- ಪರ್ವತ ಮಣ್ಣು ನೋಡಲು ಇಲ್ಲಿ ಕ್ಲಿಕ್ ಮಾಡಿ
- ಮರು ಭೂಮಿ ಮಣ್ಣು ನೋಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧ ಪುಸ್ತಕಗಳು
ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೧೦ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಭಾರತದ ಮಣ್ಣುಗಳು ಎಂಬ ಘಟಕದಲ್ಲಿ ಭಾರತದ ಮಣ್ಣುಗಳ ಮಹತ್ವ , ವಿಧಗಳು,ಮಣ್ಣಿನ ಸವೆತ ಹಾಗು ಅದರ ಸಂರಕ್ಷಣೆಯ ಬಗ್ಗೆ ಪರಿಚಯಿಸಲಾಗಿದೆ. ಅಲ್ಲದೆ ಈ ಕೆಳಗಿನ ಪುಸ್ತಗಳಲ್ಲಿ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನಿಡಲಾಗಿದೆ.
- ಭೂಗೋಳ ಸಂಗಾತಿ, ಸಂಪುಟ ೩ [ಡಿ,ಎಸ್.ಆರ್.ಟಿ.ಸಿ.] ಅಧ್ಯಾಯ 1.4 ಮಣ್ಣು ಸಂಪನ್ಮೂಲಗಳು ಪುಟ ಸಂಖ್ಯೆ: 13-28
- ಪ್ರಾಕೃತಿಕ ಭೂಗೋಳಶಾಸ್ತ್ರ [ಪಿ. ಮಲ್ಲಪ್ಪ] ಅಧ್ಯಾಯ 12. ಮಣ್ಣು. ಪುಟ ಸಂಖ್ಯೆ: 125-131
- NCERT ಪಠ್ಯಪುಸ್ತಕ ೮ ನೇ ತರಗತಿ Land,Soil, Water,Natural Vegetation and Wildlife Resources
- NCERT ಪಠ್ಯಪುಸ್ತಕ ೧೦ ನೇ ತರಗತಿ Lesson 1 Resources and Development – Land Resources
- ಏಕಲವ್ಯ ಪಠ್ಯ ಪುಸ್ತಕಗಳು
- ಭಾರತದ ಪ್ರಾಕೃತಿಕ ಭೂಗೋಳಶಾಸ್ತ್ರ. _ ಡಾ|| ರಂಗನಾಥ
ಬೋಧನೆಯ ರೂಪರೇಶಗಳು
ಪರಿಕಲ್ಪನೆ #1
- ಮಣ್ಣಿನ ಉಗಮ
- ಮಣ್ಣಿನ ವಿಧಗಳು
ಕಲಿಕೆಯ ಉದ್ದೇಶಗಳು
- ಮಣ್ಣು ಹೇಗೆ ಉಗಮವಾಗಿದೆ ಎಂಬುದನ್ನು ತಿಳಿಸಬೇಕಾಗಿದೆ
- ತಮ್ಮ ಸುತ್ತಮುತ್ತಲಿನ ಮಣ್ಣಿನ ಮನವರಿಕೆ ಮಾಡಿಸಬೇಕಾಗಿದೆ
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಕರ್ನಾಟಕದ ಮಣ್ಣುಗಳನ್ನು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಚಟುವಟಿಕೆಗಳು #
- ಚಟುವಟಿಕೆ ಸಂ 1,ಭಾರತದ ಮಣ್ಣುಗಳು - ಉಗಮ
- ಚಟುವಟಿಕೆ ಸಂ 2'ಮಣ್ಣಿ ಸವೆತ
ಪರಿಕಲ್ಪನೆ #2
ಕಲಿಕೆಯ ಉದ್ದೇಶಗಳು
ಶಿಕ್ಷಕರಿಗೆ ಟಿಪ್ಪಣಿ
ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ
ಚಟುವಟಿಕೆಗಳು #
- ಚಟುವಟಿಕೆ ಸಂ 1."" ಮಣ್ಣಿನ ವಿದಗಳು""
- ಚಟುವಟಿಕೆ ಸಂ 2,ಮಣ್ಣಿನ-ಮಾಲಿನ್ಯ
ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
ಯೋಜನೆಗಳು
ಸಮುದಾಯ ಆಧಾರಿತ ಯೋಜನೆಗಳು
ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
ಹಳೆಯ ಪಠ್ಯಪುಸ್ತಕದ 'ಮಣ್ಣು ಸಂಪನ್ಮೂ ಲಗಳು ' (ನಮ್ಮ ಸಂಪನ್ಮೂ ಲಗಳು ಅಧ್ಯಾಯ) ವಿಷಯಕ್ಕೆ ಹೊಲಿಸಿದಾಗ ಈ ಅಧ್ಯಾಯದಲ್ಲಿ ವಿಷಯವನ್ನು ಸರಳೀಕರಿಸಲಾಗಿದೆ. ಜಂಬಿಟ್ಟಿಗೆ ಮಣ್ಣಿನ ಕೆಂಪು ಬಣ್ಣಕ್ಕೆ ಕಾರಣ ಹಾಗೂ ಮಣ್ಣಿನ ಸವೆತದ ಬಗೆಗಿನ ಮಾಹಿತಿ - ಅರ್ಥ, ಕಾರಣಗಳು, ಪರಿಣಾಮಗಳು , ಮಣ್ಣಿನ ಸಂರಕ್ಷಣೆ ಮತ್ತು ನಿರ್ವಹಣೆಯ ಅರ್ಥ, ವಿಧಾನಗಳನ್ನು ಚೆನ್ನಾಗಿ ನಿಡಲಾಗಿದೆ. ಅದರ ಜೊತೆಗೆ ಈ ಕೆಳಗಿನ ಅಂಶಗಳಿಗೆ ಸಂಬಂಧಿಸಿದಂತೆ ಮಾಹಿತಿಯನ್ನು ಸೇರಿಸಬೇಕಾಗಿದೆ ಅಥವಾ ಬದಲಾಯಿಸಬೇಕಾಗಿದೆ .
- ಕಪ್ಪು ಮಣ್ಣನ್ನು 'ರೇಗೂರ್ ಮಣ್ಣು' ಹಾಗೂ ಕಪ್ಪು ಮಣ್ಣಿನ ಪ್ರದೇಶವನ್ನು 'ಡೆಕ್ಕನ್ ಟ್ರಾಪ್' ಎಂದು ಕರೆಯಲು ಕಾರಣ
- ಕಪ್ಪು ಮಣ್ಣಿನ ಉತ್ಪತ್ತಿ ಹಾಗೂ ಅದರ ಬಣ್ಣಕ್ಕೆ ಕಾರಣ (೯ನೇ ತರಗತಿ ಪಠ್ಯಪುಸ್ತಕದಲ್ಲಿ ಬಸಾಲ್ಟ್ ಶಿಲೆಗಳ ಶಿಥಲೀಕರಣ ಎಂದಿದ್ದರೆ ಈ ಅಧ್ಯಾಯದಲ್ಲಿ ಅಗ್ನಿ ಶಿಲೆಗಳ ಶಿಥಲೀಕರಣದಿಂದ ಉತ್ಪತ್ತಿಯಾಗಿದೆ ಎಂದು ಹೇಳಲಾಗಿದೆ.)
- ಕಪ್ಪು ಮಣ್ಣು ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಕಾರಣ
- ಪರ್ವತದ ಮಣ್ಣು ಹೆಚ್ಚು ಕೊಳೆತ ಜೈವಿಕಾಂಶ ಹೊಂದಲು ಕಾರಣ .
- ಕೆಂಪು ಮಣ್ಣು ಕಂಡುಬರುವ ಪ್ರದೇಶವನ್ನು ಸ್ಪಷ್ಟವಾಗಿ ತಿಳಿಸಬೇಕಿತ್ತು. ಕಾರಣ ಈ ಅಧ್ಯಾಯದಲ್ಲಿ ತಿಳಿಸಿದ ಬಹುತೇಕ ಪ್ರದೇಶದಲ್ಲಿ ಕಪ್ಪು ಮಣ್ಣು ಕಂಡುಬರುತ್ತದೆ.
- ಜಂಬಿಟ್ಟಿಗೆ ಮಣ್ಣನ್ನು ಲ್ಯಾಟರೈಟ್ ಮಣ್ಣು ಎಂದು ಕರೆಯಲು ಕಾರಣ
- ಜಂಬಿಟ್ಟಿಗೆ ಮಣ್ಣಿನ ಬಗ್ಗೆ ಕೊಟ್ಟಿರುವ ಮಾಹಿತಿಯಲ್ಲಿ ೨ ಮತ್ತು ೪ನೇ ವಾಕ್ಯಗಳು ಹೆಚ್ಚು ಕಡಿಮೆ ಪುನರಾವರ್ತನೆಯಾದಂತಿದೆ.
- ಮಣ್ಣಿನ ಸವೆತಕ್ಕೆ ೪ ಕಾರಣಗಳನ್ನು ಕೊಟ್ಟಿದ್ದು ಕೊನೆಗೆ ಉದಾ: ಕೊಟ್ಟಿದ್ದಾರೆ. ಆದರೆ ಆ ಉದಾ: ಯಾವ ಕಾರಣಕ್ಕೆ(ಅಂಶಕ್ಕೆ) ಎಂಬುದು ಗೊಂದಲವನ್ನುಂಟು ಮಾಡಿದೆ.
- ಅನೇಕ ಕಡೆಗಳಲ್ಲಿ ಲೇಖನ ಚಿಹ್ನೆಗಳ (. , ಇತ್ಯಾದಿ) ಕೊರತೆ ಕಂಡುಬಂದಿದೆ .
- ಅವಶ್ಯವಿರುವ ಕಡೆಗಳಲ್ಲಿ ವಾಕ್ಯಗಳ ಮಧ್ಯೆ ಇರಬೇಕಾದ ಇಲ್ಲಿ ,ಇದು, ಈ ಕಾರಣಕ್ಕಾಗಿ , ಹೀಗೆ.........ಎಂಬಂತಹ ಸಂಬಂಧ ಕಲ್ಪಿಸುವಂತಹ ಪದಗಳು ಇರಬೇಕಿತ್ತು.
- ಅಭ್ಯಾಸಗಳು: ಇದರಲ್ಲಿ III ಪ್ರಶ್ನೆ ಹೊಂದಿಸಿ ಬರೆಯಿರಿ . ಅದರಲ್ಲಿ 'ಅ' ಪಟ್ಟಿಯಲ್ಲಿ ಜಂಬಿಟ್ಟಿಗೆ ಮಣ್ಣಿಗೆ ಸಂಬಂಧಿಸಿದಂತೆ 'ಬಿ' ಪಟ್ಟಿಯಲ್ಲಿ ಎರಡು ಉತ್ತರಗಳನ್ನು ಕೊಡಲಾಗಿದೆ.
- ಅಧ್ಯಾಯದ ಕೊನೆಯಲ್ಲಿ ( ಪಠ್ಯಪುಸ್ತಕದ ಎಲ್ಲಾ ಅಧ್ಯಾಯಗಳಿಗೂ ಸಂಬಂಧಸಿದಂತೆ )ಹೆಚ್ಚು ಕಡಿಮೆ ಎಲ್ಲ ಪ್ರಶ್ನೆಗಳು ಜ್ಞಾನಾತ್ಮಕ ವಲಯಕ್ಕೆ ಸಂಬಂಧಿಸಿವೆ. ಸಿ.ಸಿ.ಇ. ಆಧಾರಿತ ಪ್ರಶ್ನೆಗಳನ್ನು ಕೊಡಬೇಕಿತ್ತು.