ವೃತ್ತಿಪರ ಕಲಿಕಾ ಸಮುದಾಯ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೬:೦೧, ೬ ಅಕ್ಟೋಬರ್ ೨೦೧೭ ರಂತೆ Anand (ಚರ್ಚೆ | ಕಾಣಿಕೆಗಳು) ಇವರಿಂದ
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search


ಪ್ರತಿಯೊಂದು ವೃತ್ತಿಯಲ್ಲಿ ಕಲಿಯಲು ಮತ್ತು ಅನುಭವ ಹಂಚಿಕೆ ಮಾಡಿಕೊಳ್ಳಲು ತನ್ನದೇ ಆದ ವೃತ್ತಿಪರ ಸಮುದಾಯಗಳು ಇರುತ್ತವೆ . ವೈದ್ಯರು, ವಕೀಲರು, ಐಎಎಸ್ ಅಧಿಕಾರಿಗಳಿಗೆ ಇದ್ದ ಹಾಗೆ, ಈ ಸಮುದಾಯಗಳು ಸಹ ವೃತ್ತಿಪರರ (ಸಮಕಾಲೀನರ) ಜೊತೆ ನಿರಂತರ ಪರಸ್ಪರ ಸಂವಹನ ಮಾಡುವ ಒಂದು ವಿಧಾನವಾಗಿದೆ ಮತ್ತು ಕಾಲೇಜು ಅಥವಾ ವಿಶ್ವವಿದ್ಯಾನಿಲಯವನ್ನು ಮೀರಿ ಕಲಿಕೆಯ ಅವಕಾಶ ಕ್ರಮಗಳನ್ನು ಒದಗಿಸುತ್ತದೆ, ನಾವು ಹಿಂದೆ ಸಾಮಾಜಿಕ ರಚನೆಯ ಬಗ್ಗೆ ಒಬ್ಬರಿಂದ ಒಬ್ಬರು ಹೇಗೆ ಕಲಿತಿದ್ದೇವೆ ಮತ್ತು ಪರಿಕಲ್ಪನಾತ್ಮಕ ಕಲಿಕೆ ಹೇಗೆ ಆಗುತ್ತದೆಯೋ ಹಾಗೆಯೇ ಸಂದರ್ಭೋಚಿತ ಕಲಿಕೆಯ ಅರ್ಥ ಕೂಡ ಅಷ್ಟೇ ಮುಖ್ಯ ವಾಗುತ್ತದೆ.
ಶಿಕ್ಷಕರು, ತಮ್ಮ ಅನುಭವ, ಅಭ್ಯಾಸಗಳು, ಒಳನೋಟ ಮತ್ತು ಕಲಿಕೆಗಳನ್ನು ಹಂಚಿಕೊಳ್ಳಲು, ತಮ್ಮ ಗೆಳೆಯರೊಂದಿಗೆ ನಿರಂತರವಾಗಿ ಸಂಪರ್ಕ ಹೊಂದುವ ಅಗತ್ಯ ತುಂಬಾ ಇದೆ. ಸಹವರ್ತಿಗಳೊಂದಿಗೆ ಸಂಪರ್ಕವನ್ನು ಹೊಂದುವ ಹಾಗೂ ಅವರ ಜೊತೆಯಲ್ಲಿ ಮಾರ್ಗದರ್ಶಕರ ಬೆಂಬಲದ ಕೂಡ ಅಗತ್ಯವಿದೆ. ಭಾರತದಲ್ಲಿರುವ ದೊಡ್ಡ ಶಾಲಾ ವ್ಯವಸ್ಥೆಯಲ್ಲಿ ಇದು ಬಹಳ ಮುಖ್ಯವಾಗಿದೆ. ನಾವು ಶಿಕ್ಷಕರಾಗಿ ತಮ್ಮ ಅಭ್ಯಾಸ ಸಾಮಾನ್ಯವಾಗಿ ಪ್ರತ್ಯೇಕಿಸುವುದನ್ನು ಕಾಣುತ್ತೇವೆ ಮತ್ತು ಅವರು ತಮ್ಮ ಅನುಭವಗಳನ್ನು ಹಂಚಿಕೊಳ್ಳುವ, ಪುನಃ ವಿಮರ್ಶಿಸುವ ಮತ್ತು ತಾವು ಅರ್ಥ ಮಾಡಿಕೊಂಡಿರುವುದನ್ನು ಹಂಚಿಕೆ ಮಾಡುವ ಅಥವಾ ತಮ್ಮ ನಿರ್ದಿಷ್ಟ ಸವಾಲುಗಳಿಗೆ ಪರಿಹಾರಗಳನ್ನು ಪಡೆಯಲು ಯಾವುದೇ ಅವಕಾಶಗಳು ಅವರಿಗೆ ಇಲ್ಲ. ಸಾಂಪ್ರದಾಯಿಕ ಸೇವ-ನಿರತ ತರಬೇತಿಯಲ್ಲಿ ಶಿಕ್ಷಕರು ತರಬೇತಿಯ ಆ ಸಮಯದಲ್ಲಿ ಮಾತ್ರ ಕಲಿಕೆ ಆಗುತ್ತದೆ, ತರಬೇತಿಯ ನಂತರ ಅವರಿಗೆ ಪರಸ್ಪರ ಕಲಿಯಲು ಸೀಮಿತ ಅವಕಾಶಗಳು ಇರುತ್ತವೆ. ತರಬೇತಿಯ ನಂತರ ಅವರ ಕಲಿಕೆ ವಿಸ್ತಾರ ಪಡೆಯಲು ಅವರಿಗೆ ತಮ್ಮ ತರಬೇತುದಾರರ ಜೊತೆ ಪರಸ್ಪರ ಸಂಪರ್ಕದಲ್ಲಿರಲು ಯಾವುದೇ ರೀತಿಯ ಔಪಚಾರಿಕ, ಸಂಘಟಿತ ವಿಧಾನಗಳು ಇಲ್ಲ. ಆದ್ದರಿಂದ ಕ್ಷೇತ್ರದಲ್ಲಿನ (ಶಾಲೆಯಲ್ಲಿನ) ಸಮಸ್ಯೆಗಳನ್ನು ಪರಿಹರಿಸಲು ಕಷ್ಟ ಮತ್ತು ಶಿಕ್ಷಕರು ಪರಸ್ಪರ ತಮ್ಮ ಅನುಭವ, ವಿಚಾರಗಳನ್ನು ಮತ್ತು ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ. ಶಿಕ್ಷಕರು ಪರಸ್ಪರ ಕ್ಲಸ್ಟರ್, (ವಲಯ) ಅಥವಾ ಜಿಲ್ಲಾ ಮಟ್ಟದಲ್ಲಿ ಬಹಳ ಸೀಮಿತ ಮತ್ತು ಭೌತಿಕ ಸಭೆಗಳು ಸಾಮಾನ್ಯವಾಗಿ ಸೇರುತ್ತಾರೆ, ತರಬೇತಿ ಮತ್ತು ಕಾರ್ಯಾಗಾರಗಳ ನಂತರ ಅವರು ಒಂದೆಡೆ ಸೇರುವುದು ಕಷ್ಟ, ಇದರಿಂದ ಈ ಅಗತ್ಯಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ.
ವೃತ್ತಿಪರ ಸಮುದಾಯಗಳು ಮತ್ತು ಸಂಘಗಳು ದೀರ್ಘಕಾಲದಿಂದ ನಡೆದಿವೆ, ಐಸಿಟಿಯು ಸರಳವಾಗಿ ಪ್ರವೇಶ ಪಡೆದು ಪರಸ್ಪರ ಸಂವಹನ ಮಾಡಲು ಅವಕಾಶ ಮಾಡುತ್ತದೆ. ಆನ್ ಲೈನ್ ಸಮುದಾಯಗಳು ಸಾಮಾನ್ಯವಾಗಿ ಭೌತಿಕ ಸಮಯ ಮತ್ತು ಸಭೆಗಳ ನಿರ್ಬಂಧಗಳನ್ನು ಮೀರಿ ಪರಸ್ಪರ ಮುಂದುವರೆಯಲು ಒಂದು ಉತ್ತಮ ವಿಧಾನವಾಗಿದೆ. ಆನ್ ಲೈನ್ ಸಮುದಾಯಗಳ ಮೂಲಕ ವೇದಿಕೆಗಳು ಅಥವಾ ಚರ್ಚಾ ಗುಂಪುಗಳು ಮೇಲಿಂಗ್ ಮಾಡಬಹುದು ಮತ್ತು ನಿಮ್ಮ ಫೋನ್ ಅಥವಾ ಕಂಪ್ಯೂಟರ್ ಮೂಲಕ ಈ ಸೌಲಭ್ಯಗಳನ್ನು ಪಡೆಯಬಹುದು.
ಶಿಕ್ಷಕರ ಶಿಕ್ಷಣಕ್ಕಾಗಿ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು (NCF­TE, 2010) ಕೆಳಗಿನ ಪ್ರಮುಖ ಭಾಗಗಳೊಂದಿಗೆ ಶಿಕ್ಷಕ ಶಿಕ್ಷಣದ ಮಾದರಿಯ ಚೌಕಟ್ಟಿನಲ್ಲಿ ಹೇಳಿದ ಅಂಶಗಳು.

  1. ಬೋಧನೆ ಮತ್ತು ಕಲಿಕೆಯಲ್ಲಿ ತಂತ್ರಜ್ಞಾನವನ್ನು ಸಂಯೋಜನೆಗೊಳಿಸುವುದು.
  2. ಸಹಯೋಗದ ಜಾಲಗಳ ಮೂಲಕ ಕಲಿಕೆ ಮತ್ತು ಅನುಭವ ಹಂಚಿಕೆ ಮಾಡುವುದು.
  3. ನಿರಂತರ ಕಲಿಕಾ ಮಾದರಿಗಳಿಗೆ ಕಲಿಕೆಯ ವಿವಿಧ ಮಾರ್ಗಗಳನ್ನು ಮತ್ತು ಮುಕ್ತ ಅವಕಾಶವನ್ನು ನೀಡುವುದು. ಸಹವರ್ತಿಗಳ ಕಲಿಕೆ ಶಿಕ್ಷಕರ ವೃತ್ತಿಪರ ಅಭಿವೃದ್ಧಿಗೆ ಒಂದು ಪ್ರಮುಖ ಅಂಶವಾಗಿದೆ ಎಂದು ಪರಿಗಣಿಸಲಾಗಿದೆ.

ಶಿಕ್ಷಕ ಸಮುದಾಯವು ಮೇಲಿಂಗ್ ವೇದಿಕೆಗಳ ಮೂಲಕ ಪರಸ್ಪರ ಸಂವಹನ ಮಾಡಲು ಭೌತಿಕ ಸಮುದಾಯಗಳು ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತವೆ ಮತ್ತು ಕಾರ್ಯಾಗಾರಗಳ ನಂತರವೂ ಕಲಿಕೆಯನ್ನು ಹಂಚಿಕೊಳ್ಳಲು ಒಂದು ಉತ್ತಮ ವಿಧಾನವಾಗಿದೆ. ವಿಷಯ ಶಿಕ್ಷಕರ ವೇದಿಕೆಯಲ್ಲಿ ಶಿಕ್ಷಕರು ತಮ್ಮ ಅನುಭವಗಳನ್ನು, ಸಂಪನ್ಮೂಲಗಳನ್ನು ಹಂಚಿಕೊಳ್ಳುವ, ವಿಷಯಗಳ ಸ್ಪಷ್ಟೀಕರಣ, ಪ್ರಶ್ನೆ ಪತ್ರಿಕೆಗಳು, ಚಟುವಟಿಕೆಗಳನ್ನು ಹಂಚಿಕೊಳ್ಳುವರು ಮತ್ತು CCE ಯ ಬಗ್ಗೆ ಆಲೋಚನೆಗಳು, ಕಲ್ಪನೆಗಳು ಮತ್ತು ಶಾಲಾ ಆಡಳಿತದಲ್ಲಿ ಬರುವ ಸಮಸ್ಯೆಗಳನ್ನು ಹಾಗೂ ಸಾಮಾನ್ಯ ಮಾಹಿತಿಗಳನ್ನು ಪರಸ್ಪರರಲ್ಲಿ ಹಂಚಿಕೊಳ್ಳಬಹುದಾಗಿದೆ.

ಶಿಕ್ಷಕರ ಸಹವರ್ತಿ ಕಲಿಕೆಯ ಮೂಲಕ ನಿರಂತರವಾದ ವೃತ್ತಿಪರ ಬೆಳವಣಿಗೆಯಲ್ಲಿ ವೃತ್ತಿಪರ ಕಲಿಕಾ ಸಮುದಾಯಗಳು ಇತ್ತೀಚೆಗಿನ ವಿಧಾನಗಳಾಗಿವೆ. ಇದು ಇಲಾಖೆಯ ಸುಸ್ಥಿರ ವಿಧಾನವಾಗಬಹುದಾಗಿದೆ. ರಾಜ್ಯಮಟ್ಟದ ಇಮೇಲ್ ಗುಂಪಿನ ಮೂಲಕ ಚರ್ಚಿಸಲು ಹಾಗು ಸಂಪನ್ಮೂಲ ಹಂಚಿಕೊಳ್ಳಲು ಎಲ್ಲಾ ಶಿಕ್ಷಕರನ್ನು ಒಂದುಗೂಡಿಸಬಹುದು.ವೃತ್ತಿಪರ ಕಲಿಕಾ ಸಮುದಾಯಗಳನ್ನು ವಿವಿಧ ಹಂತಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ರಚಿಸಬಹುದು. ನೀವು ನಿಮ್ಮ ಶಾಲೆಯಲ್ಲಿ ನಿಮ್ಮ ಸಹವರ್ತಿಗಳನ್ನೊಳಗೊಂಡ ಸಮುದಾಯವನ್ನು ರಚಿಸಬಹುದು. ನಿಮ್ಮ ಶಾಲೆಯ ವೃತ್ತಿಪರ ಕಲಿಕಾ ಸಮುದಾಯವು ಶಾಲಾಭಿವೃದ್ದಿಯ ಗುರಿಯನ್ನು ಹೊಂದಿರುತ್ತದೆ. ಇದೇ ರೀತಿ ನಿಮ್ಮ ಜಿಲ್ಲೆ ಅಥವಾ ತಾಲೂಕಿನ ವಿಷಯ ಶಿಕ್ಷಕರ ಗುಂಪನ್ನು ಸಹ ನೀವು ರಚಿಸಬಹುದು.