ಸುರುಳಿ ಕಾಂತ ಪ್ರಯೋಗ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೨:೧೬, ೧೩ ಆಗಸ್ಟ್ ೨೦೧೫ ರಂತೆ Ashok (ಚರ್ಚೆ | ಕಾಣಿಕೆಗಳು) ಇವರಿಂದ (→‎ವಿಧಾನ: (ಚಟುವಟಿಕೆ ನಡೆಸುವುದು ಹೇಗೆ))
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಚಟುವಟಿಕೆ - ಚಟುವಟಿಕೆಯ ಹೆಸರು

ಸುರುಳಿ ಕಾಂತ ಪ್ರಯೋಗ

ಅಂದಾಜು ಸಮಯ

40 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

/home/ubuntu/Desktop/coil expt

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

ಬಹುಮಾಧ್ಯಮ ಸಂಪನ್ಮೂಲಗಳ

file:///opt/PhET/sims/htl/faradays-law/latest/faradays-law_en.html

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

Faradays law.png

ದಂಡಕಾಂತವನ್ನು ತೆಗೆದುಕೊಂಡು ತಾಮ್ರದ ತಂತಿಯ ಸುರುಳಿಯ ಒಳಗೆ ತೂರಿಸಿದಾಗ ಏನಾಗುವುದು ಎಂಬುದನ್ನು ಗ್ಯಾಲವನೋಮೀಟರ್ & ಬಲ್ಬ್‌ನಲ್ಲಿ ವೀಕ್ಷಿಸುವುದು.
ದಂಡಕಾಂತವನ್ನು ಹೊರತೆಗೆದಾಗ ಗ್ಯಾಲ್ವನೋ ಮೀಟರ್‌ನ್ನು ವೀಕ್ಷಿಸುವುದು.
ಸತತವಾಗಿ ಅಯಸ್ಕಾಂತವನ್ನು ಒಳಕ್ಕೂ. ಹೊರಕ್ಕೂ ತೆಗೆದಾಗ ಏನಾಗುವುದು ಎಂಬುದನ್ನು ಸೂಕ್ಷ್ಮವಾಗಿ ಗ್ಯಾಲ್ವನೋ ಮೀಟರ್‌ನಲ್ಲಿ ವೀಕ್ಷಿಸುವುದು.
ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿ ಗ್ಯಾಲ್ವನೋ ಮೀಟರನ್ನು ಗಮನಿಸುವುದು.
ಅಯಸ್ಕಾಂತವನ್ನು ಸ್ಥಿರವಾಗಿರಿಸಿ ಗ್ಯಾಲವನೋಮೀಟರನ್ನು & ಬಲ್ಬ್‌ನ್ನು ವೀಕ್ಷಿಸುವುದು. ಪ್ರಯೋಗವನ್ನು ಪುನರಾವರ್ತಿಸುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಅಯಸ್ಕಾಂತ ಸುರುಳಿಯಲ್ಲಿ ಚಲಿಸಿದಾಗ ಗ್ಯಾಲ್ವನೋಮೀಟರ್‌ನ ಮುಳ್ಳು ದಿಕ್ಪಲ್ಲಟಗೊಳ್ಳಲು ಕಾರಣವೇನು?
  2. ಅಯಸ್ಕಾಂತವನ್ನು ಒಳಕ್ಕೂ-ಹೊರಕ್ಕೂ ತೆಗೆದಾಗ ಮುಳ್ಳು ಬೇರೆ-ಬೇರೆ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು?
  3. ಸುರುಳಿಗಳ ಸಂಖ್ಯೆ ಹೆಚ್ಚು-ಕಡಿಮೆ ಮಾಡಿದಾಗ ಗ್ಯಾಲ್ವನೋ ಮೀಟರ್‌ನ ಮುಳ್ಳು ಯಾವ ರೀತಿಯ ದಿಕ್ಪಲ್ಲಟವನ್ನು ತೋರಿಸಿತು?
  4. ಅಯಸ್ಕಾಂತ ವನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋಮೀಟರ್ ನ ಕಾಂತೀಯ ಸೂಜಿಯು ಯಾವ ರೀತಿಯ ದಿಕ್ಪಲ್ಲಟ ಹೊಂದಿತು?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಬ್ಯಾಟರಿ ಇಲ್ಲದೆ ವಿದ್ಯುತ್ ಪ್ರವಹಿಸಲು ಕಾರಣವೇನು?
  2. ಸುರುಳಿಯ ಸುತ್ತುಗಳ ಸಂಖ್ಯೆ ಹೆಚ್ಚು ಮಾಡಿದಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ಹೆಚ್ಚಿನ ದಿಕ್ಪಲ್ಲಟ ಹೊಂದಲು ಕಾರಣವೇನು?
  3. ಅಯಸ್ಕಾಂತ & ಸುರುಳಿಯನ್ನು ಸ್ಥಿರವಾಗಿಟ್ಟಾಗ ಗ್ಯಾಲ್ವನೋ ಮೀಟರ್ ನಲ್ಲಿ ಕಾಂತೀಯ ಸೂಜಿಯು ದಿಕ್ಪಲ್ಲಟ ಹೊಂದದಿರಲು ಕಾರಣವೇನು?

ಪ್ರಶ್ನೆಗಳು

  1. ಗ್ಯಾಲ್ವನೋಮೀಟರ್‌ನ ಕಾಂತೀಯ ಸೂಜಿಯು ವಿರುದ್ಧ ದಿಕ್ಕಿನಲ್ಲಿ ದಿಕ್ಪಲ್ಲಟಗೊಳ್ಳಲು ಕಾರಣವೇನು?
  2. ಕಾಂತೀಯ ಸೂಜಿಯು ಕಡಿಮೆ ವೇಗದಿಂದ ಯಾವ ಸಂಧರ್ಭದಲ್ಲಿ ಚಲಿಸುತ್ತದೆ?
  3. ಮಂಡಲದಲ್ಲಿ ಉಂಟಾಗುವ ಪ್ರೇರಿತ ವಿದ್ಯುತ್ ಚಾಲಕ ಬಲವು ಯಾವ ಅಂಶಗಳನ್ನು ಅವಲಂಬಿಸಿರುತ್ತದೆ.

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ವಿಷಯ ಪುಟದ ಲಿಂಕ್