ಅಡಾಸಿಟಿ ಕಲಿಯಿರಿ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಪರಿಚಯ

ಅಡಾಸಿಟಿ ಎಂಬುದು, ಸ್ವತಂತ್ರ ಮತ್ತು ಮುಕ್ತ ಅನ್ವಯಕವಾಗಿದ್ದು , ಧ್ವನಿ ಮುದ್ರಣ ಮತ್ತು ಧ್ಚನಿ ಸಂಕಲನಕ್ಕೆ ಬಳಸುವ ಆಡಿಯೋ ಎಡಿಟರ್ ಆಗಿದೆ. ಇದನ್ನು ವಿಂಡೋಸ್, ಮ್ಯಾಕ್ ಮತ್ತು ಗ್ನೂ/ಲಿನಕ್ಸ್ ನಂತಹ ಆಪರೇಟಿಂಗ್ ಸಿಸ್ಟಂನಲ್ಲಿ ಬಳಸಬಹುದಾಗಿದೆ. ಇದರ ಮೈಲ್ಮೈ ನೋಟವು ವಿವಿಧ ಭಾಷೆಗಳಲ್ಲಿ ಲಭ್ಯವಿದೆ.

ಮೂಲ ಮಾಹಿತಿ

ಐ.ಸಿ.ಟಿ ಸಾಮರ್ಥ್ಯ ಇದು ಸಾರ್ವತ್ರಿಕ ಧ್ವನಿ ಸಂಕಲನ ಪರಿಕರವಾಗಿದ್ದು ಧ್ವನಿ ಸಂಪನ್ಮೂಲ ರಚನೆಗೆ ಬಳಸಬಹುದಾಗಿದೆ.
ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಸ್ವಂತ ಧ್ವನಿ ಮುದ್ರಣ ಮಾಡಲು ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಮಾಡಲು ಅಥವಾ ಮಿಶ್ರಣ ಮಾಡಲು ಈ ಅನ್ವಯಕವನ್ನು ಬಳಸಲಾಗುತ್ತಿದೆ.
ಆವೃತ್ತಿ Audacity 2.1.2
ಸಂರಚನೆ ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿದ್ದು, ಯಾವುದೇ ಸಂರಚನೆಯ ಅಗತ್ಯತೆ ಇರುವುದಿಲ್ಲ.
ಇತರೇ ಸಮಾನ ಅನ್ವಯಕಗಳು Ocenaudio ಇದು ಸಹ ಅಡಾಸಿಟಿ ಮಾದರಿಯಲ್ಲೇ ಧ್ವನಿ ಸಂಕಲನ ಮಾಡಲು ಮತ್ತು ಮುದ್ರಣ ಮಾಡಲು ಬಳಸುವ ಅನ್ವಯಕವಾಗಿದೆ. ಇದು ಕೆಲವು ಪ್ರಮುಖ ಲಕ್ಷಣಗಳನ್ನು ಹೊಂದಿದ್ದು ಹೆಚ್ಚು ಬಳಕೆದಾರದನ್ನು ಹೊಂದುತ್ತಿದೆ.

Wavosaur - Wavosaur is a free sound editor, audio editor, wav editor software for editing, processing and recording sounds, wav and mp3 files. Wavosaur has all the features to edit audio (cut, copy, paste, etc.) produce music loops, analyze, record, batch convert. Traverso DAW Traverso DAW is an audio recording and editing program which is very well suited to record a single voice, a band, an ensemble, a whole orchestra or any other source of music! Both the home and professional user will find Traverso attractive, it's clean interface is easy to learn, and enables you to work quickly and efficiently!

ಮೊಬೈಲ್ ಮತ್ತು ಟ್ಯಾಬ್ಲೆಟ್‌ನಲ್ಲಿ ಈ ಅನ್ವಯಕ FOSS Android Apps on Fdroid - Ringdroid

Google Play store - WavePad Audio Editor - Ringtone cutter

ಅಭಿವೃದ್ದಿ ಮತ್ತು ಸಮುದಾಯ ಸಹಾಯ Audacity Team

ಲಕ್ಷಣಗಳ ಮೇಲ್ನೋಟ

  1. WAV, AIFF, MP3 ಸೇರಿದಂತೆ ಇತರೆ ಎಲ್ಲಾ ಆಡಿಯೋಕಡತಗಳ ನಮೂನೆಗಳಿಗೆ ಎಕ್ಸ್‌ಪೋರ್ಟ್‌ ಮತ್ತು ಇಂಪೋರ್ಟ್‌ ಮಾಡಿಕೊಳ್ಳಬಹುದು.
  2. ಧ್ವನಿಮುದ್ರಣ ಮಾಡಿ, ಅಲ್ಲೇ ಕೇಳಬಹುದಾಗಿದೆ.
  3. ಕತ್ತರಿಸು, ಪ್ರತಿ ಮಾಡು ಹಾಗು ಅಂಟಿಸುವ ಪ್ರಕ್ರಿಯೆಗಳ ಸಂಕಲನದಲ್ಲಿ ಅನಿಯಮಿತ Undo ಬಳಸಬಹುದು.

ಅನುಸ್ಥಾಪನೆ

  1. ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
  2. ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “ ____ ” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.
  3. ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.
    1. Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
    2. ಟರ್ಮಿನಲ್ ಪುಟ ತೆರೆದ ನಂತರ ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
    3. sudo apt-get install ____

ಅನ್ವಯಕ ಬಳಕೆ

ಕಡತ ಉಳಿಸಿಕೊಳ್ಳುವುದು ಮತ್ತು ನಮೂನೆಗಳು

ಧ್ವನಿಮುದ್ರಣ ಮತ್ತು ಸಂಕಲನವನ್ನು ಪೂರ್ಣಗೊಳಿಸಿದ ನಂತರ ಇನ್ನೂ ಹೆಚ್ಚಿನ ಸಂಕಲನ ಮಾಡುವಂತಿದ್ದಲ್ಲಿ ಕಡತವನ್ನು ಪ್ರೊಜೆಕ್ಟ್‌ ಆಗಿ ಉಳಿಸಬಹುದು ಇದಕ್ಕಾಗಿ File > Save ಆಯ್ಕೆ ಮಾಡಿಕೊಳ್ಳಬೇಕು. ಪ್ರೊಜೆಕ್ಟ್ ಆಗಿ ಉಳಿಸಿದ ಕಡತವು .aup ನಮೂನೆಯಲ್ಲಿ ಉಳಿಯುತ್ತದೆ. ಮತ್ತೊಮೆ ಇದೇ ಕಡತವನ್ನು ಅಡಾಸಿಟಿ ಮೂಲಕ ತೆರೆದು ಸಂಕಲನವನ್ನು ಮುಂದುವರೆಸಬಹುದು.

ಉನ್ನತೀಕರಿಸಿದ ಲಕ್ಷಣಗಳು

  1. ನೇರವಾಗಿ ಧ್ವನಿಮುದ್ರಣ ಮಾಡಬಹುದು
  2. ಕಂಪ್ಯೂಟರ್‌ನಲ್ಲಿ ಹಿನ್ನೆಲೆಧ್ವನಿಯನ್ನು ಮುದ್ರಣ ಮಾಡಬಹುದು
  3. WAV, AIFF, FLAC, MP2, MP3 or Ogg Vorbis ನಮೂನೆಯ ಕಡತಗಳನ್ನು ಸಹ ಸಂಕಲನ ಮಾಡಬಹುದು.
  4. AC3, M4A/M4R (AAC), WMA ಇತರೇ ನಮೂನೆಗಳು ಅಡಾಸಿಟಿಯಲ್ಲಿ ಬಳಸಬಹುದು.
  5. ಧ್ವನಿಯನ್ನು ಒಟ್ಟಿಗೆ Cut, copy, splice or mix ಮಾಡಬಹುದು
  6. ಧ್ವನಿಮುದ್ರಣದ ವೇಗವನ್ನು ಹಾಗು ಏರಿಳಿತವನ್ನು ಬದಲಿಸಬಹುದಾದಂತಹ ಪರಿಣಾಮಗಳನ್ನು ಹೊಂದಿದೆ.

ಸಂಪನ್ಮೂಲ ರಚನೆಯ ಆಲೋಚನೆಗಳು

ನಮ್ಮ ಶೈಕ್ಷಣಿಕ ಅಗತ್ಯತೆಗಳಿಗೆ ಪೂರಕವಾಗಿ ಧ್ವನಿ ಸಂಪನ್ಮೂಲ ರಚಿಸಲು, ಸ್ವಂತ ಧ್ವನಿ ಮುದ್ರಣ ಮಾಡಬಹುದು ಹಾಗು ಲಭ್ಯವಿರುವ ಧ್ವನಿ ಸಂಪನ್ಮೂಲಗಳನ್ನು ಸಂಕಲನ ಅಥವಾ ಮಿಶ್ರಣ ಮಾಡುವ ಮೂಲಕ ತರಗತಿ ಕೋಣೆಗೆ ಪೂರಕವಾದ ರೀತಿಯಲ್ಲಿ ಧ್ವನಿ ಸಂಪನ್ಮೂಲಗಳನ್ನು ಬಳಸಿಕೊಳ್ಳಬಹುದು.

ಆಕರಗಳು