ಆಕೃತಿಗಳೊಂದಿಗೆ ಆಟ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ನನ್ ಗೊಂಬೆ ಕಾಣ್ತಿಲ್ಲ

ತ್ರಿಭುಜ ಕುಟುಂಬದ ಎಲ್ಲಾ ಸದಸ್ಯರು ಒಂದು ಹಬ್ಬಕ್ಕೆ ಭೇಟಿಯಾಗಿದ್ದರು. ಸಮಬಾಹುಕರು, ಅಸಮಬಾಹುಕರು, ಸಮದ್ವಿಬಾಹುಕರೆಲ್ಲರೂ ಬಂದಿದ್ದರು. ಮಕ್ಕಳೆಲ್ಲಾ ಆಟವಾಡುತ್ತಿದ್ದರು. ಊಟಕ್ಕೆ ಸಮಯವಾಯಿತು.

ಅಜ್ಜಿ ತ್ರಿಭುಜ: ಮಕ್ಕಳೇ, ಎಲ್ಲರೂ ಊಟಕ್ಕೆ ಬನ್ನಿ! ನಿಮಗೆ ಇಷ್ಟವಾದ ಸ್ವೀಟ್ ಇದೆ!

ಎಲ್ಲಾ ಮಕ್ಕಳು ಉತ್ಸಾಹದಿಂದ ಊಟ ಮಾಡಲು ಹೋದರು. ಊಟ ಮುಗಿಸಿ ಬಂದ ಮೇಲೆ

ಮಗು_ ಛೋಟು : ಏನೋ ಹುಡುಕಾಡುತ್ತಿದ್ದಳು.

ತನ್ನ ಅಮ್ಮನ ಬಳಿ ಹೋಗಿ ಕೇಳಿದಳು, ಅಮ್ಮ ನಾನು ಮನೆಯಿಂದ ತಂದಿದ್ದ ಗೊಂಬೆ ಸಿಗುತ್ತಿಲ್ಲ, ಹುಡುಕಿ ಕೊಡ್ತೀಯಾ?”

ಅಮ್ಮ: “ನಂಗೆ ಈಗ ತುಂಬಾ ಕೆಲ್ಸ ಇದೆ, ಇವಾಗ್ ಅಗಲ್ಲ. ಆವಾಗ್ಲೆ ನಾನು ಒಂದು ಮಗು ಹಿಡಿದಿದನ್ನು ನೋಡಿದೆ ಹೋಗಿ ಕೇಳು.

ಮಗು_ ಛೋಟು: ಇಲ್ಲಿ ತುಂಬಾ ಮಕ್ಳು ಇದ್ದಾರೆ ಯಾರತ್ರ ಕೇಳಲಿ ಅಮ್ಮ?

ಅಮ್ಮ: ನಂಗೆ ಅವಳ ಹೆಸರು ಗೊತ್ತಿಲ್ಲ.

ಮಗು_ ಛೋಟು: ಹೋಗ್ಲಿ ಅವಳು ಹೇಗ್ ಕಾಣ್ತಳೆ ಹೇಳಮ್ಮ , ನಾನು ಗೊಂಬೆ ಜೊತೆ ಆಟಾಡ್ಬೇಕು.

ಅಮ್ಮ: ನಾನು ಸರಿಯಾಗಿ ನೋಡಿಲ್ಲ ಛೋಟು. ಆದರೆ ಅವಳು 3 ಮೂಲೆ/ಬಿಂದುವನ್ನು 3 ಅಂಚು/ ಬಾಹುಗಳಿಂದ ಸೇರಿಸಿರುವುದನ್ನು ನೋಡಿದೆ ಹಾಗೆ ಆದರ 2 ಅಂಚು/ಬಾಹುಗಳು ಒಂದೇ ಸಮವಿರೊದನ್ನ ಗಮನಿಸಿದೆ. ಇಗಾ ನೀನು ಹೋಗಿ ಹುಡುಕೊ.

ಮಗು_ಛೋಟು : ಏಗಪ್ಪಾ ಹುಡುಕ್ಲಿ? ಈ ತರ ಇರೊರ್ನ ನಾನು ನೋಡೇ ಇಲ್ಲಾ.

(ಒಂದು ರೌಂಡ್ ತಿರುಗಿ ಬಂದು)

ಮಗು_ಛೋಟು : ಹೋ,ಹೋ , ಸಿಕ್ಬಿಟ್ರು, ಸಿಕ್ಬಿಟ್ರು. ಅವ್ರು ನಮ್ಮಮ್ಮ ಹೇಳಿರೊ ತರ 3 ಮೂಲೆ/ಚುಕ್ಕಿ/ಬಿಂದುವನ್ನು 3 ಅಂಚು/ ಬಾಹುಗಳಿಂದ ಸೇರಿಸಿರೊ ತರನೇ ಇದಾರೆ.

ಮಗು_ಛೋಟು: ಅಣ್ಣ ನಿನ್ನ ಅತ್ರ ನನ್ ಗೊಂಬೆ ಇದೆ ಅಂತ ನಮ್ಮಮ್ಮ ಹೇಳಿದ್ರು, ಪ್ಲೀಸ್ ನಂಗ್ ನನ್ ಗೊಂಬೆ ಕೊಡು.

ಅಸಮಬಾಹು ತ್ರಿಭುಜ: ಇನ್ನೆ ನ್ ಹೇಳಿದ್ರು ನಿಮ್ಮಮ್ಮ ನನ್ ಬಗ್ಗೆ ?

ಮಗು_ಛೋಟು : ನಿಮ್ಗೆ 3 ಅಂಚು/ಬಾಹು, 3 ಮೂಲೆ /ಬಿಂದು ಇದ್ಯಂತೆ ಮತ್ತೇ ನಿಮ್ಗೆ 2 ಬಾಹು ಒಂದೇ ಸಮವಿದ್ಯಂತೆ.

ಅಸಮಬಾಹು ತ್ರಿಭುಜ: ಓ... ನನ್ನ ಹೆಸರು ಅಸಮಬಾಹು ತ್ರಿಭುಜ, ನಂಗೆ 3 ಬಾಹು 3 ಬಿಂದುಗಳೇನೊ ಇದವೆ, ಆದರೆ ನನ್ನ 3 ಬಾಹುಗಳು ಒಂದೇ ಅಳತೆ ಇಲ್ಲ ನೋಡು. ಎಲ್ಲಾ ಬೇರೆ ಬೇರೆ ಉದ್ದವಿವೆ. ನಿಮ್ಮಮ್ಮ ಹೇಳಿರೊದು ನಾನಲ್ಲ.

ಮಗು_ಛೋಟು : ಅಯ್ಯೋ !

ಅಸಮಬಾಹು ತ್ರಿಭುಜ: ಅವಳ್ನ ಅತ್ರ ಒಂದ್ ಸಲ ಕೇಳು. ಅವ್ಳೀಗೂ 3 ಬಾಹು 3 ಬಿಂದುಗಳು ಇವೆ.

ಮಗು_ಛೋಟು : ಹ. ಕೇಳ್ತೀನಿ.

ಮಗು_ಛೋಟು : ಅಕ್ಕ ನಿಮ್ಮ ಅತ್ರ ನನ್ ಗೊಂಬೆ ಇದ್ಯಾ..

ಸಮಬಾಹು ತ್ರಿಭುಜ : ಯಾವ್ ಗೊಂಬೆ? ನಂಗ್ ಗೊತ್ತಿಲ್ಲ.

ಮಗು_ಛೋಟು : ನೀವು 3 ಬಾಹುವಿನ ಮೂಲಕ 3 ಬಿಂದುಗಳನ್ನ ಸೇರಿಸಿದ್ದಿರಾ ಮತ್ತೇ ನಿಮ್ಮ 2 ಬಾಹುಗಳು ಒಂದೇ ಸಮ ಇದವೇ.

ಸಮಬಾಹು ತ್ರಿಭುಜ : ಹು, ಇವೆ. ಆದ್ರೆ ನನ್ನ ಹೆಸರು ಸಮಬಾಹು ತ್ರಿಭುಜ ಅಂತ. ನನ್ನಲ್ಲಿ ಬರೀ 2 ಬಾಹು ಮಾತ್ರ ಅಲ್ಲ 3 ಬಾಹುಗಳೂ ಒಂದೇ ಸಮ ಇವೆ. ನೋಡು ಎಲ್ಲಾ ಒಂದೇ ಉದ್ದವಿದೆ. ಆದ್ರೆ ನನ್ನ ಅತ್ರ ನಿನ್ ಗೊಂಬೆ ಇಲ್ಲ.

ಮಗು_ಛೋಟು : ಆಗದ್ರೆ ನನ್ ಗೊಂಬೆ ಏಲ್ಲಿದೆ ?

ಸಮಬಾಹು ತ್ರಿಭುಜ : ನೋಡು ಅವ್ನ ಅತ್ರನೂ 2 ಬಾಹುಗಳು ಸಮವಿದೆ. ಅವ್ನ ಹೆಸರು ಸಮದ್ವಿಬಾಹು ತ್ರಿಭುಜ.

ಮಗು_ಛೋಟು : ಆಯ್ತು ಕೇಳ್ತಿನಿ.

ಮಗು_ಛೋಟು : ಏನಣ್ಣ ಸಮದ್ವಿಬಾಹು ತ್ರಿಭುಜ, ನಿನ್ ಅತ್ರ ನನ್ ಗೊಂಬೆ ಇದ್ಯಾ?

ಸಮದ್ವಿಬಾಹು ತ್ರಿಭುಜ : ಹು ಇದೆ. ನಾನ್ ಇಷ್ಟೋತನ್ಕ ಅದ್ರಲ್ಲೆ ಆಟ ಆಡ್ತಿದ್ದೆ. ತಗೋ ಇಲ್ಲಿದೆ ನೋಡು ನಿನ್ ಗೊಂಬೆ.

ಮಗು_ಛೋಟು : ಓಹೋ, ಓಹೋ. ನನ್ ಗೊಂಬೆ ಸಿಕ್ತು. ನಾನು ಆಟ ಆಡೋಕೆ ಹೋಗ್ತಿನಿ. ಟಟಾ, ಬಾಯ್ ಬಾಯ್.

ಮಾರ್ಕೆಟ್ ನಲ್ಲಿ ಮಿಸ್ ಆದ ಆಯತ

ಮಗು ಆಯತ: ಅಯ್ಯೋ ಏಲ್ಲಿದಿನಿ ನಾನು! ನಮ್ಮಮ್ಮ ಏಲ್ಲಿ ಹೋದ್ರು ? (ಸಪ್ಪೆ ಮೋರೆ ಹಾಕಿ ಆಳುತ್ತಾ ನಿಂತ ಹುಡುಗಿ/ಹುಡುಗ).

ಮಗು_ಅಸಮಬಾಹು_ತ್ರಿಭುಜ: ಬಂದು ಆಳುತ್ತಿರುವ ಹುಡುಗಿ/ಹುಡುಗನನ್ನು ಹೋಯ್ ಯಾಕ್ ಆಳ್ತಿದ್ಯಾ? ನಿಮ್ಮಮ್ಮ ನೀನ್ ಕೆಳಿದ್ನಾ ಕೊಡುಸ್ಲಿಲ್ವಾ?

ಮಗು ಆಯತ: ಹೇ ಅಲ್ಲಾ ನಮ್ಮಮ್ಮ ಕಾಣುಸ್ತಿಲ್ಲಾ, (ಹೂಃಹೂಹೂ…….)

ಮಗು_ಅಸಮಬಾಹು_ತ್ರಿಭುಜ: ಹೌದಾ! ನಿಮ್ಮಮ್ಮ ನೋಡೊಕೆ ಹೇಗಿದ್ರು ?

ಮಗು ಆಯತ: ನಮ್ಮಮ್ಮ ನಿಮ್ಮನೆ ಬಾಗಿಲ್ ತರ ಇದ್ರು.

ಮಗು_ಅಸಮಬಾಹು_ತ್ರಿಭುಜ: ಏನು? ಉದ್ದೂಕ್ಕೆ, ಅಗ್ಲೂಕ್ಕೆ ಇದರಾ?

ಮಗು ಆಯತ:ಹೌದು, ಅದ್ರೂ ಜೋತೆ ೪ ಬಾಹು ೪ ಮೂಲೆಗಳಿದಾವೆ.

ಮಗು_ಅಸಮಬಾಹು_ತ್ರಿಭುಜ:ಮೂಲೆ ನಾ?ಹಾಗಂದ್ರೆ ? .

ಮಗು ಆಯತ:ನಿಂಗ್ ಗೊತ್ತಿಲ್ವ ಹಾಗಂದ್ರೆ?

ಮಗು_ಅಸಮಬಾಹು_ತ್ರಿಭುಜ: ಅದ್ಕೆ ತಾನೆ ಕೇಳಿದ್ದು.

ಮಗು ಆಯತ:ಬಾಗಿಲುನಲ್ಲಿರ್ವ ಅಂಚುಗಳು ಕೂಡಿರುವ ಜಾಗ ನೋಡಿದ್ಯಾ?

ಮಗು_ಅಸಮಬಾಹು_ತ್ರಿಭುಜ:ಹೂ …..

ಮಗು ಆಯತ:ಆದೇ ಮೂಲೆ.

ಮಗು_ಅಸಮಬಾಹು_ತ್ರಿಭುಜ:ಹೇ ನಾವು ಅದ್ನ ಚುಕ್ಕಿ/ ಬಿಂದು ಅಂತೀವಿ.

ಮಗು ಆಯತ:ಆಯ್ತ್ ಆಯ್ತ್. ಈಗ ನಮ್ಮಮ್ಮ ನ ಹುಡ್ಕಿ ಕೊಡು……..

ಮಗು_ಅಸಮಬಾಹು_ತ್ರಿಭುಜ: ಸರಿ ಇರು ಬಂದೆ. (ಒಂದು ರೌಂಡ್ ಹೋಗಿ ಬಂದು).

ಹೇ ಹೇ ಹೇ … ನಿಮ್ಮಮ್ಮ ಸಿಕ್ಕಿಬಿಟ್ರು .

ಮಗು ಆಯತ:ಏಲ್ಲಿ? ಏಲ್ಲಿ?

ಮಗು_ಅಸಮಬಾಹು_ತ್ರಿಭುಜ:ಈಗೋ ಇಲ್ಲಿ ?

ಮಗು_ಆಯತ : ಇವ್ರ್ ಅಲ್ಲ.

ಮಗು_ಅಸಮಬಾಹು_ತ್ರಿಭುಜ: ಹೇ ನೀನೆ ಹೇಳಿದ್ದು ತಾನೆ. ನಿಮ್ಮಮ್ಮ ೪ ಬಾಹು ಮತ್ತು ೪ ಬಿಂದು ಗಳ್ನ ಸೇರಿಸ್ಕೊಂಡಿರ್ತಾರೆ ಅಂತ.

ಮಗು_ಆಯತ : ಅದ್ರು ಜೊತೆ, ನಿಮ್ಮನೆ ಬಾಗಿಲ್ ತರ ಇರ್ತಾರೆ ಅಂತನೂ ಹೇಳಿದ್ದೆ ಅಲ್ವ ?

ಮಗು_ಅಸಮಬಾಹು_ತ್ರಿಭುಜ: ಹೌದು .

ಮಗು_ಆಯತ : ಆದ್ರೆ, ಇವ್ರು ನೀನ್ ಬಳಸುವ ಕರ್ಚೀಫ್ ತರ ಇದರೆ.

ಮಗು_ಅಸಮಬಾಹು_ತ್ರಿಭುಜ:ಯಾಕೆ?

ಮಗು_ಆಯತ : ನೀನೆ ಸರಿಯಾಗಿ ನೋಡು.

ಚೌಕ : ನಾನ್ ಹೇಳ್ದೇ ನಂಗ್ ಮಕ್ಳಿಲ್ಲ ಅಂತ ಆದ್ರೆ ,ಇವ್ನ್ ಕೇಳ್ಲಿಲ್ಲ , ಸುಮ್ನೆ ಎಳ್ಕೋಂಡು ಬಂದ.

ನಂಗೆ ೪ ಬಾಹು, ೪ ಮೂಲೆ ಇದವೆ. ಆದರೆ ಏಲ್ಲಾ ಸಮವಾಗಿವೆ. ಅವ್ರ್ಅಮ್ಮತರ ಬರಿ ಎದುರು-ಬದರು ಇರೊ ೨,೨ ಬಾಹುಗಳು ಮಾತ್ರ ಸಮವಿರಲ್ಲ. (ನಾನ್ ಹೋಗ್ತಿನಿ, ನನ್ ಸಮಯವೆಲ್ಲಾ ಆಳಾಯ್ತು.…)

ಮಗು_ಆಯತ : ನಮ್ಮಮ್ಮ ಏಲ್ಲಿ ? ನಮ್ಮಮ್ಮ ನನ್ ತರ ಇರ್ತಾರೆ, ಯಾರದ್ರು ನೋಡಿದ್ರೆ ಹೇಳಿ?

ಮಗು_ಸಮದ್ವಿಬಾಹು ತ್ರಿಭುಜ : ಏನಮ್ಮ ನಿಮ್ಮ ಅಮ್ಮ ಇವ್ರ ನೋಡು.(ತ್ರಾಪಿಜ್ಯ/ ಗಾಳಿಪಟ(ವಜ್ರಾಕೃತಿ) ವನ್ನು ತೋರಿಸುತ್ತಾ)

ಮಗು_ಆಯತ : ಅಯ್ಯೋ! ಇಲ್ಲ.

ತ್ರಾಪಿಜ್ಯ/ಗಾಳಿಪಟ: ನಾನು ೪ ಬಾಹು, ೪ ಬಿಂದುಗಳನ್ನ ಸೇರಿಸಿಕೊಂಡಿದ್ರೂ ನಾನು ಸ್ವಲ್ಪ, ಸೊಟ್ಟ-ಪಟ್ಟ ಇದೀನಿ.

ಮಗು_ಆಯತ : ಹು. ಗಾಳಿಪಟ ತರ.

ಗಾಳಿಪಟ: ಹೌದು ನನ್ನ ಹೆಸರು ಗಾಳಿಪಟ.

ಮಗು_ಆಯತ : ಅಮ್ಮ, ಏಲ್ಲಿದ್ಯಾ?

ಪಂಚಭುಜ ಕೃತಿ: ಹೇ ಹುಡುಗಿ, ನಿಮ್ಮಮ್ಮ ಇಲ್ಲವ್ರೆ ನೋಡು.

ಮಗು_ಆಯತ : ಅಮ್ಮ !(ಅಮ್ಮ ಮಗಳು ಅಪ್ಪಿಕೊಳ್ಳುತ್ತಾರೆ).

ಅಮ್ಮ: ಮಾರ್ಕೆಟ್ ನಲ್ಲಿ ನನ್ನಿಂದೆನೇ ಬರ್ಬೇಕು ತಾನೆ.

ಮಗು_ಆಯತ : ಸಾರೀ ಅಮ್ಮ.

ಅಮ್ಮ: ಓಕೆ ಬಾ.

ಮಗು_ಆಯತ : ನಿನ್ನ ಬಗ್ಗೆ ಇವ್ರಿಗೆಲ್ಲ ಹೇಳಮ್ಮ.

ಅಮ್ಮ : ನನ್ ಹೆಸರು ಆಯತ. ನಾನು ೪ ಬಾಹು, ೪ ಚುಕ್ಕಿ/ಬಿಂದು ಗಳ್ನ ಒಂದಿರ್ತೀನಿ.

ಮಗು_ಆಯತ : ಆದ್ರೆ, ನೀನ್ ಹೆಳ್ದಂಗೆ ಅವಾಗ್ಲೇ ಯಾರೋ ೪ ಬಾಹು ೪ ಬಿಂದು ಗಳ್ನ ಹೊಂದಿರೊ ಆಂಟೀ ಬಂದಿದ್ರು, ಆದ್ರೇ ಸ್ವಲ್ಪ ನೋಡುಕೆ ನಿಮ್ಮತರನೇ ಇದ್ರು, ಆದ್ರೇ ನೀವಗಿರ್ಲಿಲ್ಲ.

ಅಮ್ಮ : ಓಕೆ, ನಂಗೆ ಎದುರು ಇರೂ ಬಾಹು/ಭುಜಗಳು ಒಂದೇ ಸಮ ಇರ್ತವೆ. ಇಗೋ ನೋಡು ಇ ತರ. ಈ ಎರಡು ಬಾಹು ಒಂದು ಅಳತೆ ಮತ್ತು ಈ ಎರಡು ಬಾಹು ಮತ್ತೊಂದು ಅಳತೆ.(ಚಿತ್ರ ತೋರಿಸುತ್ತಾ) . ಅದ್ರೇ ಆ ಆಂಟೀಗೆ ಏಲ್ಲಾ ೪ ಬಾಹುಗಳು ಸಮವಾಗಿ ಇರ್ತಾವೆ. ಇಲ್ನೋಡು ಈ ತರ (ಚಿತ್ರ ತೋರಿಸುತ್ತಾ).

ಮಗು_ಆಯತ : ಸರಿ ಅಮ್ಮ. ನಿನ್ನ ಕರ್ಕೊಂಡು ಬಂದ ಆಂಕಲ್ ಯಾರು ?

ಪಂಚಭುಜ: ನಾವು ನಿಮ್ಮ ಕಡೆಯಾವ್ರೆ. ನನ್ ಹೆಸ್ರು ಪಂಚಭುಜೇಶ್ವರ ಅಂತ , ಯಾಕ್ ಗೊತ್ತ ನಾನು ೫ ಬಾಹು ಮತ್ತು ೫ ಬಿಂದುಗಳ್ನ ಸೇರಿಸಿಕೊಂಡಿರ್ತೀನಿ. ಇಲ್ನೋಡು ಈ ತರ(ಚಿತ್ರ ತೋರಿಸುತ್ತಾ).

(ಏಲ್ಲರೂ ಒಟ್ಟಿಗೆ ನಿಂತು ನಾವೆಲ್ಲ ಒಂದೇ ಬಳಗದವರು, ನಮ್ಮನ್ನ ಮುಚ್ಚಿದ(closed) ಆಕೃತಿಗಳು ಎನ್ನುತ್ತಾರೆ ಮತ್ತು ನಮಗೆ ಚೂಪಾದ ಬಾಹು/ ನೇರ ಬಾಹು/ ನೇರ ಅಂಚು ಮತ್ತು ಬಿಂದುಗಳನ್ನ ಸೇರಿಸಿಕೊಂಡು ಮೂಲೆಗಳನ್ನ ಒಳಗೊಂಡಿರೊದಕ್ಕೆ ನಮ್ಮದು ಬಹುಭುಜಾಕೃತಿ ಬಳಗ. )

ವೃತ್ತ: ಹೇ ನಾನು ಮುಚ್ಚಿದ ಆಕೃತಿನೇ? ನಂದು ನಿಮ್ಮ ಬಹುಭುಜಾಕೃತಿ ಬಳಗನೇ ತಾನೇ?

(ಏಲ್ಲರೂ ನಗುತ್ತಾ ..ನಿಂಗೆ ನೇರ ಬಾಹುವಿಲ್ಲ/ ಅಂಚಿಲ್ಲ, ಮೂಲೆಯಿಲ್ಲ ನೀನು ನಮ್ಮ ಬಳಗ ಅಲ್ಲ….ಅದ್ರೇ ನೀನು ನಮ್ಮ ಮುಚ್ಚಿದ ಆಕೃತಿಯಲ್ಲಿರುವ ಗೆಳಯ )

ಏಲ್ಲರೂ ಅಪ್ಪಿಕೊಂಡು ನಾವೆಲ್ಲಾ, ಮುಚ್ಚಿದ ಆಕೃತಿಗಳು.

ತೆರದ ಆಕೃತಿ : ನಾನು?

ಏಲ್ಲರೂ: ನಿಂದು ತೆರೆದ ಆಕೃತಿ ಬಳಗ. ಯಾಕಂದ್ರೆ? ನಿನ್ನ ಎಲ್ಲಾ ಬಾಹುಗಳು ಕೂಡಿಲ್ಲ.