"ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶದ ಪರಿಕಲ್ಪನೆಯ ನಕ್ಷೆ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧ ನೇ ಸಾಲು: ೧ ನೇ ಸಾಲು:
{{Navigate|Prev= ದತ್ತಾಂಶವನ್ನು ಹೆಚ್ಚು ಅರ್ಥವತ್ತಾಗಿ ಜೋಡಿಸುವುದು|Curr=ದತ್ತಾಂಶದ ಪರಿಕಲ್ಪನೆಯ ನಕ್ಷೆ|Next=ಪಠ್ಯ ದಸ್ತಾವೇಜನ್ನು ಮಾಡುವುದು}}
+
{{Navigate|Prev=ದತ್ತಾಂಶವನ್ನು ಹೆಚ್ಚು ಅರ್ಥವತ್ತಾಗಿ ಜೋಡಿಸುವುದು|Curr=ದತ್ತಾಂಶದ ಪರಿಕಲ್ಪನೆಯ ನಕ್ಷೆ|Next=ಪಠ್ಯ ದಸ್ತಾವೇಜನ್ನು ಮಾಡುವುದು}}
  
 
<div class="noprint" style="float:right; border:1px solid blue;width:300px;background-color:#F5F5F5;padding:2px;">
 
<div class="noprint" style="float:right; border:1px solid blue;width:300px;background-color:#F5F5F5;padding:2px;">

೧೧:೧೭, ೨೬ ನವೆಂಬರ್ ೨೦೧೮ ನಂತೆ ಪರಿಷ್ಕರಣೆ

ಐಸಿಟಿ ವಿದ್ಯಾರ್ಥಿ ಪಠ್ಯ
ದತ್ತಾಂಶವನ್ನು ಹೆಚ್ಚು ಅರ್ಥವತ್ತಾಗಿ ಜೋಡಿಸುವುದು ದತ್ತಾಂಶದ ಪರಿಕಲ್ಪನೆಯ ನಕ್ಷೆ ಪಠ್ಯ ದಸ್ತಾವೇಜನ್ನು ಮಾಡುವುದು

Making a concept map of data studied

In this activity, you will express your understanding and analysis of the data you have studied in the form of a concept map.

ಉದ್ದೇಶಗಳು

  1. ಪರಿಕಲ್ಪನಾ ನಕ್ಷೆಯು ಅಭಿವ್ಯಕ್ತಿಯ ರೀತಿ ಎನ್ನುವುದನ್ನು ಅರ್ಥೈಸುವುದು.
  2. ವಿವಿಧ ದತ್ತಾಂಶಗಳ ಒಳಗೆ ಅರ್ಥಪೂರ್ಣವಾಗಿ ಸಂಪರ್ಕಿತಗೊಳ್ಳುವುದನ್ನು ಬಳಸುವುದು ಇತ್ಯಾದಿ.

ಮುಂಚೆಯೇ ಇರಬೇಕಾದ ಕೌಶಲಗಳು

  1. ದತ್ತಾಂಶವು ಬೇರೆ ಬೇರೆ ರೀತಿಯಲ್ಲಿರುತ್ತದೆ ಎಂದು ಅರ್ಥೈಸುವುದು.
  2. ಹಲವು ರೀತಿಯ ದತ್ತಾಂಶಗಳನ್ನು ಒದುವುದನ್ನು ಹೊಂದಿಸಿಕೊಳ್ಳುವುದು.
  3. ದತ್ತಾಂಶವನ್ನು ಜೋಡಿಸುವುದು ಹಾಗು ಸೃಷ್ಟಿಸುವುದು.
  4. ಕಡತಗಳು ಹಾಗು ಕಡತಕೋಶಗಳ ಜೊತೆ ಕೆಲಸ ಮಾಡುವುದು.
  5. ಕೀಲಿಮಣೆಯನ್ನು ಬಳಸುವ ಅಭ್ಯಾಸವಿರುವುದು.

ನಿಮಗೆ ಯಾವ ಸಂಪನ್ಮೂಲಗಳು ಬೇಕಿವೆ

  1. ಕೆಲಸ ಮಾಡುತ್ತಿರುವ ಪ್ರಯೋಗಾಲಯ ಹಾಗು ಪ್ರೊಜೆಕ್ಟರ್‌
  2. ಉಬುಂಟು ಹೊಂದಿರುವ ಕಂಪ್ಯೂಟರ್‌
  3. ಉಬುಂಟು ಕೈಪಿಡಿ
  4. ಟಕ್ಸ್‌ ಟೈಪಿಂಗ್‌ ಕೈಪಿಡಿ
  5. ಫ್ರೀಪ್ಲೇನ್‌ ಕೈಪಿಡಿ

ನೀವು ಯಾವ ಡಿಜಿಟಲ್‌ ಕೌಶಲ್ಯಗಳನ್ನು ಕಲಿಯುವಿರಿ

  1. ಪರಿಕಲ್ಪನಾ ನಕ್ಷೆಗೆ ಪರಿಚಯ- ನೋಡ್‌ಗಳನ್ನು ಸೃಷ್ಟಿಸುವುದು, ನೋಡ್‌ಗಳನ್ನು ಕೂಡಿಸಿ ಹಾಗು ಹೊಸ ನೋಡ್‌ಗಳನ್ನು ಸೇರಿಸುವುದು.
  2. ದತ್ತಾಂಶವನ್ನು ಹೊಂದಿಸಲು ವಿವಿಧ ಬಗೆಗಳಿವೆ.
  3. ಒಂದು ಥರದ ದತ್ತಾಂಶವನ್ನು ಇನ್ನೊಂದು ಥರಕ್ಕೆ ಬದಲಿಸುವುದು.

ವಿವರವಾದ ಹಂತಗಳೊಂದಿಗೆ ಚಟುವಟಿಕೆಯ ವಿವರಣೆ

ಶಿಕ್ಷಕರ ನೇತೃತ್ವದ ಚಟುವಟಿಕೆ

  1. ದತ್ತಾಂಶದ ಸಂಘಟನೆ ಮತ್ತು ವಿಧಾನವನ್ನು ವಿವರಿಸುವ ಪ್ರಕ್ರಿಯೆಯ ಮೂಲಕ ನಿಮ್ಮ ಶಿಕ್ಷಕರು ನಿಮ್ಮನ್ನು ಕರೆದೊಯ್ಯುತ್ತಾರೆ. ಇದಕ್ಕಾಗಿ ಅವರು ಪರಿಕಲ್ಪನಾ ನಕ್ಷೆಯ ಸಾಧನವನ್ನು ಬಳಸುತ್ತಾರೆ. ಪರಿಕಲ್ಪನೆ ನಕ್ಷೆಗಳನ್ನು ರಚಿಸಲು ಹಲವಾರು ಉಪಕರಣಗಳು ಲಭ್ಯವಿದೆ; ಈ ಪಠ್ಯಪುಸ್ತಕದಲ್ಲಿ ನಾವು ಫ್ರೀಪ್ಲೇನ್ ಎಂಬ ಉಪಕರಣವನ್ನು ಬಳಸುತ್ತೇವೆ.
  2. ಈಗಿರುವ ದತ್ತಾಂಶವನ್ನು ನಾವು ಬಳಸುತ್ತೇವೆ. (ಹಿಂದಿನ ಚಟುವಟಿಕೆಯಲ್ಲಿ ಬಳಸಿದ ಭಾರತ ನಕ್ಷೆಯ ಭಾಷೆಗಳನ್ನು ನಾವು ಬಳಸುತ್ತೇವೆ)
  3. ನಿಮ್ಮ ಚಿಂತನೆಯನ್ನು ಸಂಘಟಿಸಲು ಪರಿಕಲ್ಪನೆಯ ನಕ್ಷೆಯನ್ನು ನೀವು ಹೇಗೆ ಬಳಸಿಕೊಳ್ಳಬೇಕೆಂದು ನಿಮ್ಮ ಶಿಕ್ಷಕರು ನಿಮ್ಮೊಂದಿಗೆ ಚರ್ಚಿಸುತ್ತಾರೆ. ದತ್ತಾಂಶ ವಿಶ್ಲೇಷಣೆ ಪ್ರಕ್ರಿಯೆಯಿಂದ ಒಂದು ಔಟ್ ಪುಟ್ ಅನ್ನು ದಾಖಲಿಸಲು ಪರಿಕಲ್ಪನೆಯ ನಕ್ಷೆಯನ್ನು ಹೇಗೆ ಬಳಸಬಹುದು ಎಂಬುದನ್ನು ಅವರು ತೋರಿಸುತ್ತಾರೆ. ಪರಿಕಲ್ಪನೆ ನಕ್ಷೆಯನ್ನು ಸಂಪಾದಿಸಬಹುದಾದ ಪರಿಕಲ್ಪನೆ ನಕ್ಷೆ ಅಥವಾ ಇಮೇಜ್ ಆಗಿ ಬಳಸಬಹುದು.
  4. 4. ಪರಿಕಲ್ಪನೆಯ ನಕ್ಷೆಯು ದತ್ತಾಂಶದ ಬಗ್ಗೆ ಮಾಹಿತಿ, ದತ್ತಾಂಶವನ್ನು ಸಂಘಟಿಸುವ ಪ್ರಕ್ರಿಯೆ, ದತ್ತಾಂಶದ ಅಂಶಗಳು ಹೇಗೆ ಗುರುತಿಸಲ್ಪಟ್ಟಿವೆ ಮತ್ತು ನೀವು ಬೇರೆಯದನ್ನು ಕಲಿಯಬೇಕಾದ ವಿಚಾರಗಳನ್ನು ಒಳಗೊಂಡಿದೆ.
ಭಾಷೆಗಳ ಮೇಲೆ ಸೃಷ್ಟಿಸಿದ ಪರಿಕಲ್ಪನಾ ನಕ್ಷೆಯ ಚಿತ್ರ

ಚಿತ್ರ:Languages spoken in India.mm

ವಿದ್ಯಾರ್ಥಿ ಚಟುವಟಿಕೆಗಳು

  1. ಹಿಂದಿನ ವಿಭಾಗ ದಲ್ಲಿ ನೀವು ವಿವಿಧ ದತ್ತಾಂಶದ ಸಂಗ್ರಹಣೆ ಮತ್ತು ಚಟುವಟಿಕೆಗಳನ್ನು ನಿರ್ವಹಿಸುತ್ತಿದ್ದೀರಿ. ನೀವು ಸಂಗ್ರಹಿಸಿದ ಪ್ರತಿಯೊಂದು ದತ್ತಾಂಶವು, ನೀವು ಪರಿಕಲ್ಪನೆಯ ನಕ್ಷೆಯಲ್ಲಿಯೂ ಡಿಜಿಕರಣ ಮಾಡಿದ್ದೀರಿ. ಈಗ, ಪರಿಕಲ್ಪನೆಯ ನಕ್ಷೆ ಸಲಕರಣೆ ಅನ್ನು ಬಳಸಿಕೊಂಡು, ವಿವಿಧ ದತ್ತಾಂಶ ಘಟಕಗಳನ್ನು ಪ್ರತಿನಿಧಿಸುವ ಪರಿಕಲ್ಪನೆಯ ನಕ್ಷೆಯನ್ನು ರಚಿಸಿ ಮತ್ತು ಅದನ್ನು ನಿಮ್ಮ ಕಡತಕೋಶದಲ್ಲಿ ಸಂಗ್ರಹಿಸಿ. ದತ್ತಾಂಶವನ್ನು ಸಂಘಟಿಸುವ ಮತ್ತು ಪ್ರತಿನಿಧಿಸುವ ಸಂಭಾವ್ಯ ವಿಧಾನಗಳನ್ನು ಇದು ದಾಖಲಿಸುತ್ತದೆ. ಇದು ದತ್ತಾಂಶ ವಿಶ್ಲೇಷಣೆಗೆ ಪರಿಚಯವಾಗಿದೆ. ನೀವು ಇಂಗ್ಲಿಷ್ ಅಥವಾ ಕನ್ನಡ ಅಥವಾ ಯಾವುದೇ ಇತರ ಭಾಷೆಯಲ್ಲಿ ಪರಿಕಲ್ಪನೆ ನಕ್ಷೆಯ ಪಠ್ಯವನ್ನು ಟೈಪ್ ಮಾಡಬಹುದು.
  2. ಈ ಪರಿಕಲ್ಪನೆಯ ನಕ್ಷೆಯನ್ನು ರಚಿಸಿದ ನಂತರ, ಇದನ್ನು ಚಿತ್ರದಂತೆ ರಫ್ತು ಮಾಡಿ ಮತ್ತು ಅದನ್ನು ನಿಮ್ಮ ಕಡತಕೋಶದಲ್ಲಿ ಉಳಿಸಿ.
  3. ಪಠ್ಯ ದಸ್ತಾವೇಜಂತೆ ಪರಿಕಲ್ಪನೆಯ ನಕ್ಷೆಯನ್ನು ರಫ್ತು ಮಾಡಿ. ಪಠ್ಯ ದಸ್ತಾವೇಜಂತೆ ತೆರೆಯಿರಿ ಮತ್ತು ಅದನ್ನು ಫ್ರೀಪ್ಲೇನ್ ಹೇಗೆ ಫಾರ್ಮಾಟ್ ಮಾಡಲಾಗಿದೆ ಎಂಬುದನ್ನು ನೋಡಿ.
  4. ಕೈಯಲ್ಲಿ ಬಿಡಿಸಿದ ಪರಿಕಲ್ಪನೆಯ ನಕ್ಷೆಯನ್ನು ಡಿಜಿಕರಣ ಮಾಡುವ ಮತ್ತು ಪರಿಕಲ್ಪನೆಯ ನಕ್ಷೆ ರಚಿಸುವ ನಡುವಿನ ವ್ಯತ್ಯಾಸವೇನು ಎಂಬುದರ ಬಗ್ಗೆ ಒಂದು ಕಿರು ಟಿಪ್ಪಣಿ ಬರೆಯಿರಿ.
  5. ನಿಮ್ಮ ಆಲೋಚನಾ ಪ್ರಕ್ರಿಯೆಯಲ್ಲಿ ನಿಮಗೆ ಪರಿಕಲ್ಪನೆ ನಕ್ಷೆ ಹೇಗೆ ಸಹಾಯ ಮಾಡಿದೆ ಎಂಬುದರ ಬಗ್ಗೆ ಒಂದು ಕಿರು ಟಿಪ್ಪಣಿ ಬರೆಯಿರಿ. ನೀವು ಇದನ್ನು ಲಿಬ್ರೆ ಆಫೀಸ್ ರೈಟರ್ ಬಳಸಿ ಪಠ್ಯ ದಸ್ತಾವೇಜಂತೆ ಟೈಪ್ ಮಾಡಬಹುದು.

ಪೋರ್ಟ್‌ಪೋಲಿಯೋ

  1. ನಿಮ್ಮ ದತ್ತಾಂಶಗಳು - ಕೈಬರಹ ಮತ್ತು ಡಿಜಿಕರಿಸಿದ ಕಚ್ಚಾ ದತ್ತಾಂಶ
  2. ".mm" ಸ್ವರೂಪದಲ್ಲಿ ಮತ್ತು ಚಿತ್ರ ಸ್ವರೂಪಗಳಲ್ಲಿ ದತ್ತಾಂಶ ವಿಶ್ಲೇಷಣೆಗೆ ನಿಮ್ಮ ಪರಿಕಲ್ಪನೆಯ ನಕ್ಷೆ.