ಐಸಿಟಿ ವಿದ್ಯಾರ್ಥಿ ಪಠ್ಯ/ದತ್ತಾಂಶದ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

English

ಐಸಿಟಿ ವಿದ್ಯಾರ್ಥಿ ಪಠ್ಯ
ಐಸಿಟಿಯ ಸ್ವರೂಪಗಳೇನು ದತ್ತಾಂಶದ ಪ್ರಾತಿನಿಧ್ಯ ಮತ್ತು ಪ್ರಕ್ರಿಯೆ ಗ್ರಾಫಿಕ್ಸ್‌ನೊಂದಿಗೆ_ಸಂವಹನ

ಈ ಘಟಕವು ಏನು?

ದತ್ತಾಂಶ ಏನು ಎಂದು ಯಾರಾದರೂ ನಿಮ್ಮನ್ನು ಕೇಳಿದರೆ, ನಿಮ್ಮ ಉತ್ತರ ಏನಾಗಿರುತ್ತದೆ? ಕೆಳಗಿನ ವಾಕ್ಯಗಳನ್ನು ಓದಿ ಮತ್ತು ನೀವು ಒಪ್ಪಿದರೆ, ಗುರುತು ಹಾಕಿ. ನೀವು ದತ್ತಾಂಶವನ್ನು ಸಂಗ್ರಹಿಸುವ ಇತರ ವಿಷಯಗಳಿದ್ದರೆ ಸೇರಿಸಿ.

Emojione 1F4DD.svg
  1. ನೀವು ನೋಡಿದಾಗ ದತ್ತಾಂಶವನ್ನು ಸಂಗ್ರಹಿಸಬಹುದು.
  2. ನೀವು ಓದುವಾಗ ದತ್ತಾಂಶವನ್ನು ಸಂಗ್ರಹಿಸಬಹುದು.
  3. ನೀವು ಟಿವಿ ನೋಡುವಾಗ ದತ್ತಾಂಶವನ್ನು ಸಂಗ್ರಹಿಸುತ್ತೀರಿ.
  4. ನೀವು ಅಡಿಗೆ ಮಾಡುವಾಗ ಅಥವಾ ನೀವು ತಿನ್ನುವಾಗ ದತ್ತಾಂಶವನ್ನು ಸಂಗ್ರಹಿಸಬಹುದು..
  5. ನೀವು ಆಟ ಆಡುವಾಗ ದತ್ತಾಂಶವನ್ನು ಸಂಗ್ರಹಿಸಬಹುದು
  6. ______________________ ದತ್ತಾಂಶವನ್ನು ಸಂಗ್ರಹಿಸಬಹುದು
  7. ______________________ ದತ್ತಾಂಶವನ್ನು ಸಂಗ್ರಹಿಸಬಹುದು
  8. ______________________ ದತ್ತಾಂಶವನ್ನು ಸಂಗ್ರಹಿಸಬಹುದು

ಪರಿಸರದಿಂದ ಸಂಗ್ರಹಿಸಿದ ದತ್ತಾಂಶ, ವಿಶ್ಲೇಷಣೆ ಮತ್ತು ಅರ್ಥಮಾಡಿಕೊಳ್ಳುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು ಬದುಕಲು ಮುಖ್ಯವಾಗುತ್ತದೆ. ಕಾಡುಗಳಲ್ಲಿ ಅಲೆದಾಡುತ್ತಾ ಬೇಟೆಯಾಡುವ ಮಾನವರನ್ನು ಊಹಿಸಿ - ಅವರು ತೋಳವನ್ನು ನೋಡಿದರೆ, ಅವರು ದತ್ತಾಂಶವನ್ನು ಪ್ರಕ್ರಿಯೆಗೊಳಿಸಬೇಕು ಮತ್ತು ರಕ್ಷಣೆಗಾಗಿ ಓಡಬೇಕು. ಆದ್ದರಿಂದ, ದತ್ತಾಂಶವನ್ನು ಒಟ್ಟುಗೂಡಿಸಿ ನಿರ್ಧಾರ ತೆಗೆದುಕೊಳ್ಳುವುದು, ಅದನ್ನು ಬಳಸುವುದು ಮನುಷ್ಯರಿಗೆ ಹೊಸದೇನಲ್ಲ.

ಈ ಘಟಕ ಹೇಗೆ ಭಿನ್ನವಾಗಿರಬಹುದು ಎಂಬುದನ್ನು ನೀವು ಊಹಿಸಬಹುದೇ? ಹೌದು - ನೀವು ಸರಿಯಾಗಿ ಊಹಿಸಿದ್ದೀರಿ! ನಾವು ದತ್ತಾಂಶವನ್ನು ಒಟ್ಟುಗೂಡಿಸುವ ಮತ್ತು ದತ್ತಾಂಶವನ್ನು ಪ್ರತಿನಿಧಿಸುವ ರೀತಿಯಲ್ಲಿ ಡಿಜಿಟಲ್ ತಂತ್ರಜ್ಞಾನಗಳು ಬದಲಾಗಿವೆ. ನಿಮ್ಮ ಸ್ನೇಹಿತರಲ್ಲಿ, ಗುಂಪುಗಳಲ್ಲಿ, ನಿಮಗೆ ದತ್ತಾಂಶವೆಂದು ಹೇಳಿದಾಗ ಮನಸ್ಸಿನಲ್ಲಿ ಬರುವ ಎಲ್ಲಾ ಪದಗಳ ಬಗ್ಗೆ ಚರ್ಚಿಸಿ. ಕೆಳಗಿನವುಗಳನ್ನು ನೋಡಿ ಮತ್ತು ಕೆಳಗಿನವುಗಳು ದತ್ತಾಂಶ ಅಥವಾ ಇಲ್ಲವೇ ಎಂಬುದನ್ನು ಗುರುತಿಸಿ.

ಚಿತ್ರ:Mass Balance Change over India from GRACE.ogv
Double rainbow, Graz, Austria
Magic Square 2015.jpeg
ಚಿತ್ರ:Rain and thunder (01).ogg


A 3D projection animation
Sachin_Tendulkar_cricket_centuries_against_countries.JPG Anandam by Dasari Venkataramana cover.jpg

ಆಶ್ಚರ್ಯವಾಯಿತೆ? ಮೇಲಿನ ಎಲ್ಲಾ ಮಾಹಿತಿಗಳು ದತ್ತಾಂಶಗಳೆ. ಎಲ್ಲವನ್ನೂ ದತ್ತಾಂಶದಲ್ಲಿ ಪರಿವರ್ತಿಸುವ ಮೂಲಕ ಕಂಪ್ಯೂಟರ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನಾವು ನೋಡಿದ್ದೇವೆ. ನಾವು ಚಿತ್ರವನ್ನು ನೋಡುತ್ತೇವೆಯೋ ಅಥವಾ ಹಾಡನ್ನು ಕೇಳುತ್ತೇವೆಯೋ ಅಥವಾ ಲೆಕ್ಕಾಚಾರಗಳನ್ನು ನಿರ್ವಹಿಸುತ್ತೇವೆಯೋ, ನಾವು ದತ್ತಾಂಶದೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇವೆ. ಇಂದಿನ ಪ್ರಪಂಚದಲ್ಲಿ ಮಾಹಿತಿಯು ಹೆಚ್ಚು ಮುಖ್ಯವಾಗುತ್ತಿದೆ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳಲು ನಾವು ದತ್ತಾಂಶವನ್ನು ಅರ್ಥಮಾಡಿಕೊಳ್ಳುವ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಬೇಕು.

ಉದ್ದೇಶಗಳು

  1. ವಿವಿಧ ಸ್ವರೂಪಗಳಲ್ಲಿ ದತ್ತಾಂಶವನ್ನು ಹೇಗೆ ಓದುವುದು ಮತ್ತು ವಿಶ್ಲೇಷಿಸುವುದು ಎಂಬುದರ ಕುರಿತು ಅರ್ಥೈಸುವುದು.
  2. ದತ್ತಾಂಶವನ್ನು ಸಂಘಟಿಸುವುದು, ವಿಶ್ಲೇಷಣೆ ಮತ್ತು ಪ್ರಾತಿನಿಧ್ಯಕ್ಕೆ ಅರ್ಥೈಸುವ ವಿಧಾನಗಳು
  3. ವಿವಿಧ ಉಪಕರಣಗಳೊಂದಿಗೆ ಪಠ್ಯ, ಚಿತ್ರ ಮತ್ತು ಸಂಖ್ಯಾ ಸ್ವರೂಪಗಳಲ್ಲಿ ದತ್ತಾಂಶವನ್ನು ಸಂಸ್ಕರಿಸುವುದು ಮತ್ತು ಪ್ರತಿನಿಧಿಸುವುದು.
  4. ದತ್ತಾಂಶ ದೃಶ್ಯೀಕರಣದ ಶಕ್ತಿಯನ್ನು ಅರ್ಥೈಸುವಿಕೆ.

ಈ ಘಟಕವನ್ನು ಹೇಗೆ ಆಯೋಜಿಸಲಾಗಿದೆ

ಹಿಂದಿನ ಘಟಕದಂತೆ, ಕ್ರಮವಾಗಿ 6,7 ಮತ್ತು 8 ತರಗತಿಗಳಿಗೆ ಮೂರು ಹಂತದ ಚಟುವಟಿಕೆಗಳಿವೆ. ಇದು ನೀವು ವಿವಿಧ ಐಸಿಟಿ ಅನ್ವಯಗಳೊಂದಿಗೆ ಸಂವಹನ ನಡೆಸುವ ಮೊದಲ ಘಟಕವಾಗಿದೆ ಮತ್ತು ಮೂಲಭೂತ ಡಿಜಿಟಲ್ ಸಾಕ್ಷರತೆಗೆ ಪರಿಚಯಗೊಳ್ಳಲಿದೆ. ಈ ಘಟಕದಲ್ಲಿ, ನೀವು ತಿಳಿಯುವ ಮೊದಲ ವಿಷಯವೆಂದರೆ ಸ್ಥಳೀಯ ಭಾಷೆಯಲ್ಲಿ ಟೈಪ್ ಮಾಡುವುದು.

  1. ಮೊದಲ ಹಂತದಲ್ಲಿ, ದತ್ತಾಂಶವನ್ನು ವಿಭಿನ್ನ ಸ್ವರೂಪಗಳಲ್ಲಿ ಓದುವುದು, ದತ್ತಾಂಶವನ್ನು ಸಂಘಟಿಸುವುದು, ವಿಶ್ಲೇಷಣೆ ಮಾಡುವುದು ಮತ್ತು ಅರ್ಥ ಮಾಡುವಿಕೆ. ಪರಿಕಲ್ಪನೆ ನಕ್ಷೆ ಮತ್ತು ಪಠ್ಯ ಸಂಕಲನಕ್ಕೆ ನಿಮ್ಮ ವಿಶ್ಲೇಷಣೆಯನ್ನು ದಾಖಲಿಸುವ ವಿಧಾನವಾಗಿ ನಿಮಗೆ ಪರಿಚಯಿಸಲಾಗುವುದು.
  2. ಎರಡನೆಯ ಹಂತದಲ್ಲಿ, ದತ್ತಾಂಶ ಸಂಗ್ರಹಣೆ, ಸಂಘಟನೆ ಮತ್ತು ವಿಶ್ಲೇಷಣೆಗಾಗಿ ನೀವು ಸ್ಪ್ರೆಡ್ಶೀಟ್ ಬಳಸಲು ಕಲಿಯುವಿರಿ.
  3. ಮೂರನೇ ಹಂತದಲ್ಲಿ, ಅಂದರೆ ಮೂರನೆಯ ವರ್ಷದಲ್ಲಿ, ನಿಮ್ಮ ಆಲೋಚನೆಗಳನ್ನು ಸಂವಹಿಸಲು ಹಲವು-ಪುಟಗಳ ದಸ್ತಾವೇಜುಗಳ ತಯಾರಿಕೆಗೆ ನಿಮ್ಮನ್ನು ಪರಿಚಯಿಸಲಾಗುವುದು.

ಪ್ರತಿ ಹಂತದಲ್ಲಿ ನೀವು ಐಸಿಟಿ ಬಗ್ಗೆ ಹೊಸ ವಿಷಯಗಳನ್ನು ಅನ್ವೇಷಿಸುತ್ತೀರಿ; ನೀವು ಸಹ ನಿಮ್ಮ ಉತ್ಪನ್ನಗಳನ್ನು ರಚಿಸುತ್ತೀರಿ ಮತ್ತು ನಿಮ್ಮ ಡಿಜಿಟಲ್ ಪೋರ್ಟ್‌ಪೋಲಿಯೋವನ್ನು ರಚಿಸುತ್ತೀರಿ. ಈ ಪೋರ್ಟ್‌ಪೋಲಿಯೋ ನಿಮ್ಮ ಉತ್ಪನ್ನಗಳನ್ನು ಒಳಗೊಂಡಿರುತ್ತದೆ; ನೀವು ಕಲಿತದ್ದನ್ನು ತಿಳಿಯುವಿರಿ ಮತ್ತು ನೀವು ಕಲಿಕೆಯ ವಿಧಾನವನ್ನು ಸಹ ತಿಳಿಯುವಿರಿ. ವರ್ಷದ ಕೊನೆಯಲ್ಲಿ, ನಿಮ್ಮ ಶಿಕ್ಷಕರು ನಿಮ್ಮ ಪೋರ್ಟ್‌ಪೋಲಿಯೋವನ್ನು ಮೌಲ್ಯಮಾಪನ ಮಾಡುತ್ತಾರೆ. ನಿಮ್ಮ ಪಠ್ಯಪುಸ್ತಕದ ಉದಾಹರಣೆಗಳನ್ನು ಬಳಸಲಾಗುತ್ತದೆ ಮತ್ತು ನೀವು ಅಧ್ಯಯನ ಮಾಡಿದ ವಿವಿಧ ವಿಷಯಗಳಿಗೆ ಸಂಬಂಧಿಸಿರುತ್ತವೆ.

ಎಲ್ಲಾ ಘಟಕಗಳ ಸಂಪರ್ಕಕೊಂಡಿಗಳನ್ನು ಕೆಳಗೆ ನೀಡಲಾಗಿದೆ.

Level 1

Level 2

Level 3