ಕರ್ನಾಟಕ ಪಬ್ಲಿಕ್‌ ಶಾಲೆ, ಬಸವನಗುಡಿ - ಮಾಡ್ಯೂಲ್‌ಗಳು

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to: navigation, search

ಚಿಗುರು ೧ - ಪರಿಚಯದ ಹೊಸ ಹೆಜ್ಜೆ - ಭಾಗ ೧

ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಗುಂಪು ಚಟುವಟಿಕೆಯಿಂದಾಗಿ ಬೇರೆ ಬೇರೆ ತರಗತಿಯ ಕಿಶೋರಿಯರ ನಡುವೆ ಹೆಚ್ಚಿನ ಹಂಚಿಕೆಯಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೨ - ಪರಿಚಯದ ಹೊಸ ಹೆಜ್ಜೆ - ಭಾಗ ೨

ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಆಡಿಯೋ ಮಾಧ್ಯಮಗಳ ಮೂಲಕ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರು ಉತ್ಸುಕರಾಗಿ ಭಾಗವಹಿಸುವಂತೆ ಮಾಡಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೩ - ಪರಿಚಯದ ಹೊಸ ಹೆಜ್ಜೆ - ಭಾಗ ೩

ಹಿಂದಿನ ವಾರಗಳ್ಲಿ ಕಿಶೊರಿಯರಿಗೆ ಹೊಸ ಹೆಜ್ಜೆ ಹೊಸ ದಿಶೆ ತಂಡದ ಪರಿಚಯ ಆಗಿದೆ. ಆದರೆ ಅವರ ಜೊತೆ ತಂತ್ರಜ್ಙಾನದ de-mystication ಬಗ್ಗೆ ಮಾತನಾಡಲು ಆಗಿಲ್ಲ. ಈ ವಾರ ಆಡಿಯೋ ರೆಕಾರ್ಡರ್‌ನಲ್ಲಿ ಕಿಶೋರಿಯರು ಹಾಡಿದ ಹಾಡುಗಳನ್ನು ರೆಕಾರ್ಡ್‌ ಮಾಡಿ ಅವರ ಎದುರಿಗೇ ಅವುಗಳನ್ನು ಅವರ ಚಿತ್ರಗಳ ಜೊತೆಗೆ ಜೋಡಿಸಿ ಮಾಡಿದ ವೀಡಿಯೋವನ್ನು ತೋರಿಸುವುದರಿಂದ ತಂತ್ರಜ್ಙಾನದ ಸುತ್ತಲಿರುವ ಕ್ಲಿಷ್ಟತೆಯನ್ನು ಹೋಗಲಾಡಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೪ - ನನ್ನ ಸವಾಲು, ನಮ್ಮ ಸವಾಲೇ- ಭಾಗ ೧

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ ಅವರ ಮನೆ, ಶಾಲೆಗೆ ಬರುವ ದಾರಿ, ಮತ್ತು ಶಾಲೆಯಲ್ಲಿ ಅವರಿಗೆ ಇರುವ ಕಾಳಜಿ / ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾರೆ. ಕಿಶೋರಿಯರು ಅವರ ಗೆಳತಿಯರ ಜೊತೆಗೇ ಮಾತನಾಡಿ ಇವುಗಳನ್ನು ಪಟ್ಟಿ ಮಾಡುವುದರಿಂದ ಅವರಿಗೆ ಮೈ ಚಳಿ ಬಿಟ್ಟು ಮಾತನಾಡಲು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೫ - ನನ್ನ ಸವಾಲು, ನಮ್ಮ ಸವಾಲೇ- ಭಾಗ ೨

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ ಅವರ ಮನೆ, ಶಾಲೆಗೆ ಬರುವ ದಾರಿ, ಮತ್ತು ಶಾಲೆಯಲ್ಲಿ ಅವರಿಗೆ ಇರುವ ಕಾಳಜಿ / ಸಮಸ್ಯೆಗಳನ್ನು ಹಿಂದಿನ ವಾರ ಕಿಶೋರಿಯರು ಪಟ್ಟಿ ಮಾಡಿದ್ದಾರೆ. ಈ ವಾರ ಅವರು ಗುಂಪಿನಲ್ಲಿ ಅವುಗಳನ್ನು ಸುರುಳಿ ಚಟುವಟಿಕೆಯ ಮೂಲಕ ಪಟ್ಟಿ ಮಾಡುತ್ತಾರೆ. ಈ ಮೂಲಕ ಅವರು ಸಮಸ್ಯೆಗಳು ಎಲ್ಲೆಲ್ಲಿವೆ ಎಂದು ತಿಳಿದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು ೬- ನನ್ನ ಸವಾಲು, ನಮ್ಮ ಸವಾಲೇ- ಭಾಗ - ೩

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಹಿಂದಿನ ತರಗತಿಗಳಲ್ಲಿ ಕಿಶೋರಿಯರು, ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ, ಹಾಗೂ ಅವುಗಳನ್ನು ಚುಕ್ಕಿಗಳ ರೂಪದಲ್ಲಿ ಚಿತ್ರಿಸುವುದರ ಮೂಲಕ ಅವರ ಸವಾಲು ಮತ್ತು ಕಾಳಜಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ವಾರ ಅವರು ಉಳಿದ ಹಾಗೂ ತಮ್ಮ ಗುಂಪಿನಲ್ಲಿ ಬರೆದ ಅಂಶಗಳನ್ನು ಗುಂಪಿನಲ್ಲಿ ಓದುವುದರ ಮೂಲಕ, ತರಗತಿಯಲ್ಲಿರುವ ಕಿಶೋರಿಯರು ಏನೇನು ಬರೆದಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಒಟ್ಟು ಸಮಯ ೫0 ನಿಮಿಷಗಳು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು -೭-ನನ್ನ ಸವಾಲು, ನಮ್ಮ ಸವಾಲೇ ಭಾಗ -೪

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ ಅವರಿಗೆ ಇರುವ ಸಮಸ್ಯೆ/ಕಾಳಜಿಗಳನ್ನು ಪಟ್ಟಿ ಮಾಡಿದ್ದಾರೆ, ಚಾರ್ಟ್‌ಗಳನ್ನು ಬಳಸಿ ಮಾಡುವ ಸುರುಳಿ ಚಟುವಟಿಕೆಗಳು ಕಿಶೋರಿಯರ ದಿನನಿತ್ಯದ ಜೀವನದಲ್ಲಿ ಎಲ್ಲಿ ಹೆಚ್ಚು ಕಾಳಜಿಗಳಿವೆ ಎಂದು ತಿಳಿದುಕೊಳ್ಳಲು ಸಹಾಯ ಮಾಡಿವೆ. ಈ ವಾರ ಅವರು ಈ ಕಾಳಜಿಗಳು ಕೇವಲ ತಮ್ಮದೊಂದೇ ಅಲ್ಲ ಆದರೆ ಎಲ್ಲರೂ ಅದೇ ತರಹದ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ತಿಳಿದುಕೊಳ್ಳುತ್ತಾರೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೮-ಹದಿಹರೆಯದ ವ್ಯಾಖ್ಯಾನ ಭಾಗ -೧

ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್‌ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಳ್ಳುತ್ತಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೯-ಹದಿಹರೆಯದ ವ್ಯಾಖ್ಯಾನ ಭಾಗ -೨

ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್‌ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿಗುರು-೧೦- ಹದಿಹರೆಯದ ವ್ಯಾಖ್ಯಾನ ಭಾಗ -೩

ಕಿಶೋರಾವಸ್ಥೆಯ ಬಗ್ಗೆ ಅರಿವು ಮೂಡಿಸುವತ್ತ ಈ ಮಾಡ್ಯೂಲ್‌ ಸಾಗುತ್ತದೆ. ಹಿಂದಿನ ತರಗತಿಗಳಲ್ಲಿ ತಮ್ಮ ಸಮಸ್ಯೆಗಳ ಬಗ್ಗೆ ಬರೆದು ನಂತರ ಅವುಗಳನ್ನು ಓದಿರುವ ಕಿಶೋರಿಯರು ಈಗ ಆ ಸಮಸ್ಯೆಗಳ ಸುತ್ತ ಹೆಣೆದ ಆಡಿಯೋ ಕಥೆಗಳನ್ನು ಕೇಳಿಸಿಕೊಂಡಿದ್ದಾರೆ. ನಂತರ ಅಲ್ಲಿರುವ ಪಾತ್ರಗಳು ಹಾಗು ಸನ್ನಿವೇಷಗಳಿಗೆ ತಮ್ಮನ್ನು ತಾವು ಹೋಲಿಸಿಕೊಂಡು ಅನಿಸಿದ ಅಂಶಗಳನ್ನು ಹೇಳುತ್ತಾರೆ. ನಂತರದಲ್ಲಿ ಈ ಸಮಸ್ಯೆಗಳು ತಮಗೆ ಏಕೆ ಬಂದಿರಬಹುದು, ಯಾವ ವಯಸ್ಸಿನಲ್ಲಿ ಇವೆಲ್ಲಾ ಬರುತ್ತವೆ, ಇದಕ್ಕೆ ಏನೆನ್ನಬಹುದು ಎಂಬ ವ್ಯಾಖ್ಯಾನಕ್ಕೆ ಕಿಶೋರಿಯರನ್ನು ತೆರೆದುಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ...

ಚಿತ್ರಗಳು

Karnataka Public School, Basavanagudi

ಹೆಚ್ಚಿನ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ...