ಕೇಂದ್ರದಿಂದ ಲಂಬವು ಜ್ಯಾವನ್ನು ಅರ್ಧಿಸುತ್ತದೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಕಲಿಕೆಯ ಉದ್ದೇಶಗಳು :

ವೃತ್ತದ ಕೇಂದ್ರದಿಂದ ಜ್ಯಾಗೆ ಎಳೆದ ಲಂಬವು ಜ್ಯಾವನ್ನು ಅರ್ಧಿಸುತ್ತದೆ.

ಅಂದಾಜು ಸಮಯ:

20 ನಿಮಿಷಗಳು

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು:

ಡಿಜಿಟಲ್ ಅಲ್ಲದ: ಪೆನ್ಸಿಲ್, ಕಾಗದ, ಕೈವಾರ, ಅಳತೆಪಟ್ಟಿ

ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :

ಜ್ಯಾ, ಲಂಬ ರೇಖೆಯ ಬಗ್ಗೆ ಪೂರ್ವ ಜ್ಞಾನ

ವಿಧಾನ/ಬೆಳವಣಿಗೆಯ ಪ್ರಶ್ನೆಗಳು

ವೃತ್ತವು ಕೇಂದ್ರ 'A' ಮತ್ತು ತ್ರಿಜ್ಯ 'ತ್ರಿಜ್ಯ 1' ಮತ್ತು ಜ್ಯಾ 'BC' ಯನ್ನು ಹೊಂದಿದೆ. AD ಯು ವೃತ್ತ ಕೇಂದ್ರದಿಂದ ಜ್ಯಾ BC ಗೆ ಎಳೆಯುವ ಲಂಬವಾಗಿರಲಿ.

  • ADC ಕೋನ ಮತ್ತು ADB ಕೋನವನ್ನು ಗುರುತಿಸಿ
  • AB ಮತ್ತು AC ಸೇರಿಸಿ, ದೂರವನ್ನು ಅಳೆಯಿರಿ
  • DC ಮತ್ತು BD ದೂರವನ್ನು ಅಳೆಯಿರಿ, ನೀವು ವಿಭಿನ್ನ ಅಳತೆಗಳನ್ನು ಪಡೆಯುತ್ತೀರಾ? ಅವು ಸರ್ವಸಮವಾಗಿವೆಯೇ?
  • ವೃತ್ತದ ತ್ರಿಜ್ಯವನ್ನು ಬದಲಾಯಿಸಿದರೆ ಏನಾಗುತ್ತದೆ?

ಮೌಲ್ಯ ನಿರ್ಣಯ ಪ್ರಶ್ನೆಗಳು

ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ

  • 'O' ಕೇಂದ್ರದೊಂದಿಗೆ ವೃತ್ತ. ಕೊಟ್ಟಿರುವ ಜ್ಯಾ PQ = 12 ಸೆಂ.ಮೀ ವೃತ್ತದ ಕೇಂದ್ರದಿಂದ ಜ್ಯಾ PQ ಗೆ ಎಳೆಯುವ ಲಂಬವಾಗಿ 'OA' ಇರಲಿ. PA ಉದ್ದವನ್ನು ಕಂಡುಕೊಳ್ಳಿ?