ಚಿಗುರು ೧ - ಪರಿಚಯದ ಹೊಸ ಹೆಜ್ಜೆ - ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಸಾರಾಂಶ

ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಗುಂಪು ಚಟುವಟಿಕೆಯಿಂದಾಗಿ ಬೇರೆ ಬೇರೆ ತರಗತಿಯ ಕಿಶೋರಿಯರ ನಡುವೆ ಹೆಚ್ಚಿನ ಹಂಚಿಕೆಯಾಗುತ್ತದೆ.

ಫೆಸಿಲಿಟೇಟರ್‌ - ಅಪರ್ಣ

ಕೊ-ಫೆಸಿಲಿಟೇಟರ್‌ಗಳು - ಅನುಷಾ, ಕಾರ್ತಿಕ್‌, ಶ್ರೇಯಸ್‌

ಊಹೆಗಳು

ಇದು ಸರಕಾರಿ ಶಾಲೆ. ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ. ಈ ಶಾಲೆಯಲಗಲಿ ಕಂಪ್ಯೂಟರ್‌ ಲ್ಯಾಬ್‌ ಇದೆ. ಇಲ್ಲಿ ೧೦ ಕಂಪ್ಯೂಟರ್‌ ಇವೆ. ಅವುಗಳಲ್ಲಿ ಉಬುಂಟು ಇದೆ. ಶಾಲೆಯಲ್ಲಿ ಖಾಲಿ ಜಾಗಗಳಿವೆ. ಇಲ್ಲಿ ನಾವು ನಮ್ಮ ಚಟುವಟಿಕೆಗಳನ್ನು ನಡೆಸಬಹುದು. ಸರ್ಕಾರಿ ಶಾಲೆ ಆಗಿರುವುದರಿಂದ ದಾಖಲಾತಿ ಕಡಿಮೆ ಇದೆ. ಒಂದೇ ಆವರಣದಲ್ಲಿ ಪ್ರಥಮ ದರ್ಜೆ ಕಾಲೇಜು ಮತ್ತು ಪ್ರೌಢಶಾಲೆಗಳಿವೆ. ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು. ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು. ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು. ಎಲ್ಲರಿಗೂ ಕನ್ನಡ ಗೊತ್ತಿಲ್ಲ.

ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.

ಅವರಿಗೆ ನಾವು ಯಾರು ಎಂದು ಗೊತ್ತಿಲ್ಲ. ತರಗತಿ ಹೇಗಿದೆ ಎಂದು ಗೊತ್ತಿಲ್ಲ. ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)

ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.
ಪ್ರತಿ ವಾರ ೪ ಜನ ಹೋಗಲೇ ಬೇಕು.

ಅತೀ ಸರಳವಾದ, ಅವರಿಗೆ ಹೇಳಲು ಸಾಧ್ಯವಾಗಿರುವಂತಹ ಚಟುವಟಿಕೆಗಳನ್ನು ಮಾಡಲಿದ್ದೇವೆ. ಮೊದಲು ನಮ್ಮ ಪರಿಚಯದಿಂದ ಪ್ರಾರಂಭಿಸುವುದು ಉತ್ತಮ. ಗೈರು ಹಾಜರಿ ಎಷ್ಟಿದೆ ಎಂದು ಗೊತ್ತಿಲ್ಲ. ಕಿಶೋರಿಯರ ಭಾಗವಹಿಸುವಿಕೆಯ ಬಗ್ಗೆ ನಮಗೆ ಇನ್ನೂ ಸರಿಯಾದ ಯೋಚನೆ ಇಲ್ಲ.

ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.

ಅವರಿಗೆ ನಮ್ಮ ಬಗ್ಗೆ ಯಾವ ನಿರೀಕ್ಷೆಗಳಿವೆ ಎಂದು ಗೊತ್ತಿಲ್ಲ.