ಚಿಗುರು ೨ - ಪರಿಚಯದ ಹೊಸ ಹೆಜ್ಜೆ ಭಾಗ ೨

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಾರಾಂಶ

ಈ ಮಾಡ್ಯೂಲ್‌ ಕಿಶೋರಿಯರು ಹಾಗು ಫೆಸಿಲಿಟೇಟರ್‌ಗಳನ್ನು ಪರಸ್ಪರ ಪರಿಚಯಿಸಿಕೊಳ್ಳಲು ರೂಪಿಸಲಾಗಿದೆ. ತಮಾಷೆಯ ಚಟುವಟಿಕೆಗಳ ಮೂಲಕ ಪರಿಚಯ ಮಾಡಿಕೊಳ್ಳುವುದರಿಂದ ನಾವು ಶಾಲೆಯ ಬೇರೆ ತರಗತಿಗಳಂತೆ ಅಲ್ಲ ಎನ್ನುವ ಭಾವನೆ ಮೂಡುತ್ತದೆ. ಆಡಿಯೋ ಮಾಧ್ಯಮಗಳ ಮೂಲಕ ಚಟುವಟಿಕೆಯನ್ನು ಮಾಡುವುದರಿಂದ ಕಿಶೋರಿಯರು ಉತ್ಸುಕರಾಗಿ ಭಾಗವಹಿಸುವಂತೆ ಮಾಡಬಹುದು.

ಊಹೆಗಳು

1. ಇದು ಸರಕಾರಿ ಶಾಲೆ.

2. ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ.

3. ಗೈರು ಹಾಜಾರಾಗುವವರ ಸಂಖ್ಯೆ ಜಾಸ್ತಿ ಇದೆ.

4. ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು.

5. ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು.

6. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು.

7. ಕಿಶೋರಿಯರು ಮೂಲೆಗುಂಪಾದ ವರ್ಗಗಳಿಂದ ಬಂದಿರಬಹುದು.

8. ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು.

9. ಎಲ್ಲರಿಗೂ ಕನ್ನಡ ಗೊತ್ತಿಲ್ಲ.

10. ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.

11. ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)

12. ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.

13. ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.

ಉದ್ದೇಶ

1. ನಮ್ಮ ಕಾರ್ಯಕ್ರಮ ಶಾಲೆಯಲ್ಲಿ ನಡೆಯುವ ಬೇರೆ ಕಾರ್ಯಕ್ರಮಗಳಂತಲ್ಲ ಎನ್ನುವ ಕಡೆ ಕಿಶೊರಿಯರು ಯೋಚಿಸುವಂತೆ ಮಾಡುವುದು.

2. ‘ಆಹಾರ ಅಂದರೆ ಏನು?’ ಎನ್ನು ಪ್ರಶ್ನೆಯ ಮೂಲಕ ಕಿಶೊರಿಯರು ಮಾತನಾಡುವಂತೆ ಮಾಡುವುದು.

ಪ್ರಕ್ರಿಯೆ

ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು. ಕಟ್ಟುಪಾಡುಗಳನ್ನು ನೆನಪಿಸುವುದು. (೧೫ ನಿಮಿಷ)

ಆಹಾರದ ಬಗ್ಗೆ ಮಾಡಿರುವ vox-populiಯನ್ನು ಕೇಳಿಸುವುದು. vox-populiಯನ್ನು ಈ ಕೆಳಗಿನ ಲಿಂಕ್‌ನಲ್ಲಿ ಕೇಳಬಹುದು. (೫ ನಿಮಿಷ)

Link for Vox populi

ಆಡಿಯೋವನ್ನು ಕೇಳಿಸಿದ ನಂತರ 'ಊಟ ಅಂದರೆ ನಿಮಗೆ ಏನು?’ ಎಂದು ಕಿಶೋರಿಯರನ್ನು ಕೇಳುವುದು. ಕಿಶೋರಿಯರು ಅವರ ಅಭಿಪ್ರಾಯಗಳನ್ನು ಹಾಳೆಗಳಲ್ಲಿ ಬರೆಯುತ್ತಾರೆ. (೧೦ ನಿಮಿಷ)

ಬರೆದಾದ ನಂತರ ಒಬ್ಬರಾದ ನಂತರ ಒಬ್ಬರು ಅದನ್ನು ಎಲ್ಲರ ಮುಂದೆ ಓದುತ್ತಾರೆ. (೧೦ ನಿಮಿಷ)

ಇದರ ನಂತರ ನಮ್ಮ ಕಾರ್ಯಕ್ರಮದಲ್ಲಿ ಈ  ತರಹದ ಚಟುವಟಿಕೆಗಳನ್ನು ಮಾಡುತ್ತ ಹಲವಾರು ತರಹದ ವಿಷಯಗಳನ್ನು ಕಲಿಯುತ್ತ ಹೋಗೋಣ ಎಂದು ತರಗತಿಯನ್ನು ಮುಗಿಸುವುದು.(೫ ನಿಮಿಷ)    

ಬೇಕಾದ ಸಂಪನ್ಮೂಲಗಳು

◦ ವಾಕ್ಸ್‌ ಪಾಪುಲಿ ಇರುವ ಕಂಪ್ಯೂಟರ್‌

◦ ಸ್ಪೀಕರ್‌

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೩

▪ ಒಬ್ಬ ಮುಖ್ಯ ಫೆಸಿಲಿಟೇಟರ್‌, ೨ ಸಹಾಯಕ ಫೆಸಿಲಿಟೇಟರ್‌ಗಳು

ಒಟ್ಟು ಸಮಯ

೪೫ ನಿಮಿಷಗಳು

ಇನ್‌ಪುಟ್‌ಗಳು

• ವಾಕ್ಸ್‌ ಪಾಪುಲಿ

ಔಟ್‌ಪುಟ್‌ಗಳು

• ಕಿಶೋರಿಯರು ಹೇಳಿದ ವಿಷಯಗಳ ಪಟ್ಟಿ