"ಚಿಗುರು ೩ - ಪರಿಚಯದ ಹೊಸ ಹೆಜ್ಜೆ ಭಾಗ ೩" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೬೫ ನೇ ಸಾಲು: ೬೫ ನೇ ಸಾಲು:
  
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]
 +
[[ವರ್ಗ:ಕರ್ನಾಟಕ ಪಬ್ಲಿಕ್‌ ಶಾಲೆ, ಬಸವನಗುಡಿ]]

೦೬:೨೯, ೪ ಮೇ ೨೦೨೦ ನಂತೆ ಪರಿಷ್ಕರಣೆ

ಸಾರಾಂಶ

ಹಿಂದಿನ ವಾರಗಳ್ಲಿ ಕಿಶೊರಿಯರಿಗೆ ಹೊಸ ಹೆಜ್ಜೆ ಹೊಸ ದಿಶೆ ತಂಡದ ಪರಿಚಯ ಆಗಿದೆ. ಆದರೆ ಅವರ ಜೊತೆ ತಂತ್ರಜ್ಙಾನದ de-mystication ಬಗ್ಗೆ ಮಾತನಾಡಲು ಆಗಿಲ್ಲ. ಈ ವಾರ ಆಡಿಯೋ ರೆಕಾರ್ಡರ್‌ನಲ್ಲಿ ಕಿಶೋರಿಯರು ಹಾಡಿದ ಹಾಡುಗಳನ್ನು ರೆಕಾರ್ಡ್‌ ಮಾಡಿ ಅವರ ಎದುರಿಗೇ ಅವುಗಳನ್ನು ಅವರ ಚಿತ್ರಗಳ ಜೊತೆಗೆ ಜೋಡಿಸಿ ಮಾಡಿದ ವೀಡಿಯೋವನ್ನು ತೋರಿಸುವುದರಿಂದ ತಂತ್ರಜ್ಙಾನದ ಸುತ್ತಲಿರುವ ಕ್ಲಿಷ್ಟತೆಯನ್ನು ಹೋಗಲಾಡಿಸಬಹುದು.

ಮುಖ್ಯ ಫೆಸಿಲಿಟೇಟರ್: ಕಾರ್ತಿಕ್‌

ಕೊ-ಫೆಸಿಲಿಟೇಟರ್‌ಗಳು: ಅನುಷಾ, ಶ್ರೇಯಸ್

ಊಹೆಗಳು

  1. ಇದು ಸರಕಾರಿ ಶಾಲೆ.
  2. ಇಲ್ಲಿ ಎರಡು ತರಗತಿಗಳು (ಆಂಗ್ಲ ಹಾಗು ಕನ್ನಡ ಮಾಧ್ಯಮ) ಒಟ್ಟಿಗೆ ಇರುತ್ತವೆ.
  3. ಗೈರು ಹಾಜಾರಾಗುವವರ ಸಂಖ್ಯೆ ಜಾಸ್ತಿ ಇದೆ.
  4. ಒಟ್ಟು ಸಮಯ ೫೦ ನಿಮಿಷಗಳು. ಹೆಚ್ಚು ಸಮಯ ತೆಗೆದುಕೊಳ್ಳಬಹುದು.
  5. ಕಿಶೋರಿಯರು ೯ನೇ ತರಗತಿಯಲ್ಲಿರುವುದರಿಂದ ಅವರಲ್ಲಿ ಬಲವಾದ ಗೆಳೆತನಗಳು ಬೆಳೆದಿರಬಹುದು.
  6. ಇಂಗ್ಲಿಷ್‌ ಮತ್ತು ಕನ್ನಡ ಮಾಧ್ಯಮದ ನಡುವೆ ಮೇಲರಿಮೆ ಮತ್ತು ಕೀಳರಿಮೆ ಇರಬಹುದು. ಹಾಗೂ ಅವರಿಗೆ ಪರಿಚಯ ಇಲ್ಲದೆ ಇರಬಹುದು.
  7. ಕೆಲವು ಕಿಶೋರಿಯರು ದೂರದಿಂದ ಬರುತ್ತಾರೆ. ಶಾಲೆಯ ನಂತರ ತಡವಾದರೆ ಅವರಿಗೆ ಕಷ್ಟ ಆಗಬಹುದು.
  8. ಎಲ್ಲರಿಗೂ ಕನ್ನಡ ಗೊತ್ತಿಲ್ಲ.
  9. ಉರ್ದು ಭಾಷೆಯಲ್ಲಿ ಮಾತನಾಡುವ ಕಿಶೋರಿಯರು ಹೆಚ್ಚಿದ್ದಾರೆ.
  10. ಹದಿಹರೆಯದ ಪುಳಕಗಳ ಕಡೆ ವಾಲಿದ್ದಾರೆ (ಗೋಡೆಗಳ ಮೇಲಿನ ಪ್ರೇಮ ಚಿಹ್ನೆಗಳು ಆಧಾರ)
  11. ಕಿಶೋರಿಯರ ಸಂಖ್ಯೆ ಜಾಸ್ತಿ ಇರುವುದು ಒಂದು ಸವಾಲು.
  12. ಕನ್ನಡ ಮಾಧ್ಯಮದ ಕಿಶೋರಿಯರು ಮೂಲೆಗುಂಪಾಗದಂತೆ ನೋಡಿಕೊಳ್ಳಬೇಕು.

ಉದ್ದೇಶ

ಮಾಹಿತಿ ತಂತ್ರಜ್ಞಾನದ ಸುತ್ತಲು ಇರುವ ಕ್ಲಿಷ್ಟಕರ ಚತ್ರಣವನ್ನು ಹೋಗಲಾಡಿಸುವುದು ಹಾಗು ನಮ್ಮ ಪರಿಚಯವನ್ನು ಉತ್ಸಾಹದಾಯಯಕವಾಗಿ ಮಾಡಿಕೊಳ್ಳುವುದು

ಪ್ರಕ್ರಿಯೆ

ಕಿಶೋರಿಯರೊಂದಿಗೆ ಕುಶಲೋಪರಿಯ ಮೂಲಕ ನಮ್ಮ ಮಾತುಕಥೆಯನ್ನು ಶುರು ಮಾಡುವುದು.

ಕಟ್ಟುಪಾಡುಗಳನ್ನು ಇದಾದ ನಂತರ ನಾವೇ ನೆನಪಿಸುವುದು. (೧೦ ನಿಮಿಷ)

ಆಡಿಯೋ ರೆಕಾರ್ಡಿಂಗ್‌ ಮಾಡಲು ಗುಂಪುಗಳನ್ನು ಮಾಡಿಕೊಳ್ಳುವುದು.         

ಇದೇ ಸಮಯದಲ್ಲಿ ಇನ್ನೊಬ್ಬ ಫೆಸಿಲಿಟೇಟರ್‌ ಇನ್ನೊಂದು ಕೊಠಡಿಯಲ್ಲಿ ರೆಕಾರ್ಡಿಂಗ್‌ಗೆ ಸಿಧ್ಧತೆ ಮಾಡಿಕೊಳ್ಳುತ್ತಿರುವುದು.  (೧೦ ನಿಮಿಷ)

ಗುಂಪುಗಳನ್ನು ಮಾಡಿಕೊಂಡ ನಂತರ ಒಂದೊಂದೇ ಗುಂಪನ್ನು ಇನ್ನೊಂದು ಕೊಠಡಿಗೆ ಕಳುಹಿಸುವುದು. ಅಲ್ಲಿ ಅವರಿಗೆ ಒಂದು ಅಕ್ಷರವನ್ನು ಕೊಟ್ಟು ಆ ಅಕ್ಷರದಿಂದ ಪ್ರಾರಂಭವಾಗುವ ಹಾಡನ್ನು ಹಾಡಲು ಹೇಳುವುದು. ಈ ಹಾಡನ್ನು ರೆಕಾರ್ಡ್ ಮಾಡಿಕೊಳ್ಳುವುದು.  

ಇದೇ ಸಮಯದಲ್ಕಿ ಒಬ್ಬ ಫೆಸಿಲಿಟೇಟರ್‌ ಕಿಶೋರಿಯರ ಗುಂಪು ಚಿತ್ರಗಳನ್ನು ತೆಗೆಯಬೇಕು.

ಪ್ರಥಮ ಗುಂಪಿನ ನಂತರ ಬರುವ ಗುಂಪುಗಳಿಗೆ ಹಿಂದಿನ ಗುಂಪಿನವರು ಕೊನೆಗೊಳಿಸಿದ ಅಕ್ಷರದಿಂದ ಪ್ರಾರಂಭವಾಗುವ ಹಾಡನ್ನು ಹಾಡಲು ಹೇಳುವುದು. ಇವುಗಳನ್ನು ಕೂಡ ರೆಕಾರ್ಡ್‌ ಮಾಡಿಕೊಳ್ಳುವುದು.                                             

ರೆಕಾರ್ಡ್‌ ಮಾಡಿದ ಆಡಿಯೋ ತುಣುಕುಗಳು ಹಾಗು ಕಿಶೋರಿಯರ ಗುಂಪು ಚಿತ್ರಗಳನ್ನು ಸೇರಿಸಿ ವೀಡಿಯೊ ಮಾಡಿ ಕಿಶೋರಿಯರಿಗೆ ತೋರಿಸುವದು.  (೨೫ ನಿಮಿಷ)

ವೀಡಿಯೋ ನೋಡಿದ ನಂತರ ನಿಮಗೆ ಏನು ಅನ್ನಿಸಿತು? ಎಂಬ ಪ್ರಶ್ನೆಯ ಮೂಲಕ ಚರ್ಚೆಯನ್ನು ಆರಂಭಿಸುವುದು.

ವಿಡಿಯೋ ಅನ್ನು ಹೇಗೆ ಮಾಡಲಾಯಿತು ಎಂದು ಕಿಶೋರಿಯರಿಗೆ ತಿಳಿಸುವುದು. ಹಾಗು ತಂತ್ರಜ್ಞಾನ ತುಂಬ ಸರಳವಾದ ವಿಚಾರ. ಮುಂದಿನ ದಿನಗಳಲ್ಲಿ ನಾವು ಅವುಗಳನ್ನು ಉಪಯೋಗಿಸಿಕೊಂಡು ಬೇರೆ ಬೇರೆ ವಿಚಾರಗಳನ್ನು ತಿಳಿದುಕೊಳ್ಳೋಣ  ಎಂದು ಹೇಳುವುದು.  (೧೦ ನಿಮಿಷ)

ದಿನದ ಚಟುವಟಿಕೆಗಳ ಬಗ್ಗೆ ಹಾಗೂ ನಾವು ಹಂಚಿಕೊಂಡ ವಿಷಯಗಳ ಬಗ್ಗೆ ಕಿಶೋರಿಯರಿಗೆ ಏನಾದರೂ ಪ್ರಶ್ನೆಗಳಿದ್ದರೆ ಅವುಗಳಿಗೆ ಉತ್ತರಿಸಿ, ಈ ದಿನದ ಚರ್ಚೆಯನ್ನು ಮುಕ್ತಾಯಗೊಳಿಸುವುದು.  (೫ ನಿಮಿಷ)

ಬೇಕಾದ ಸಂಪನ್ಮೂಲಗಳು

• ಕಂಪ್ಯೂಟರ್‌/ಲ್ಯಾಪ್‌ಟಾಪ್‌ - ೧

• ಸ್ಪೀಕರ್‌ - ೧

• ಆಡಿಯೋ ರೆಕಾರ್ಡರ್‌

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

ಒಬ್ಬ ಮುಖ್ಯ ಫೆಸಿಲಿಟೇಟರ್‌, ಇಬ್ಬರು ಸಹಾಯಕ ಫೆಸಿಲಿಟೇಟರ್‌ಗಳು

ಒಟ್ಟು ಸಮಯ

೬೦ ನಿಮಿಷ

ಇನ್‌ಪುಟ್‌ಗಳು

ಸಂಕಲನ ಮಾಡಿದ ವಿಡಿಯೋ

ಔಟ್‌ಪುಟ್‌ಗಳು