"ಚಿಗುರು ೪ - ಆಡಿಯೊ ರೆಕಾರ್ಡಿಂಗ್ ಬೇಸಿಕ್ಸ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
೧೩೧ ನೇ ಸಾಲು: ೧೩೧ ನೇ ಸಾಲು:
 
= ಔಟ್‌ಪುಟ್‌ಗಳು =
 
= ಔಟ್‌ಪುಟ್‌ಗಳು =
 
ಕಿಶೋರಿಯರು ಮಾಡಿರುವ ಆಡಿಯೋ ಕಡತಗಳು.
 
ಕಿಶೋರಿಯರು ಮಾಡಿರುವ ಆಡಿಯೋ ಕಡತಗಳು.
 +
 +
[[ವರ್ಗ:ಹೊಸ ಹೆಜ್ಜೆ ಹೊಸ ದಿಶೆ]]

೧೨:೨೧, ೩ ಅಕ್ಟೋಬರ್ ೨೦೧೯ ನಂತೆ ಪರಿಷ್ಕರಣೆ

ಸಾರಾಂಶ

ತಂತ್ರಜ್ಞಾನದ ಬಗ್ಗೆ ತಿಳಿದುಕೊಳ್ಳುವುದರಿಂದ ಕಿಶೋರಿಯರಲ್ಲಿ ಬೇರೆ ಬೇರೆ ಸಾಧ್ಯತೆಗಳ ಬಗ್ಗೆ ತಿಳಿದುಕೊಳ್ಳಲು ಅವಕಾಶ ನೀಡುತ್ತದೆ. ಆಡಿಯೋ ರೆಕಾರ್ಡಿಂಗ್‌ ಬಳಕೆ ಮಾಡುವುದರಿಂದ ಕಿಶೋರಿಯರಿಗೆ ನಾವೂ ತಂತ್ರಜ್ಞಾನಗಳನ್ನು ಬಳಕೆ ಮಾಡಬಹುದು ಎನ್ನುವ ಆತ್ಮವಿಶ್ವಾಸ ಮೂಡುತ್ತದೆ.

ಫೆಸಿಲಿಟೇಟರ್‌ - ಶ್ರೇಯಸ್

ಕೊ-ಫೆಸಿಲಿಟೇಟರ್‌ಗಳು - ಅನುಷಾ, ಅಪರ್ಣ, ಕಾರ್ತಿಕ್.

ಊಹೆಗಳು

1. ಮಂಗಳವಾರ ರಜಾ ಇರುವುದರಿಂದ ಜಾಸ್ತಿ ಗೈರುಹಾಜರಿ ಇರಬಹುದು.

2. ಎಲ್ಲರಿಗೂ ನಾವು ಬರುತ್ತೇವೆ ಎಂದು ಗೊತ್ತಿರುತ್ತದೆ.

3. ಹೋದ ವಾರದ ಮಾಡ್ಯೂಲ್‌ನಿಂದಾಗಿ ಕಿಶೋರಿಯರು ಕೆಲವು ನಿಶ್ಚಿತ ವಿಷಯಗಳ ಬಗ್ಗೆಯೇ ಮಾತನಾಡುತ್ತಾರೆ ಎಂದು ಯೋಚಿಸುತ್ತಿರಬಹುದು.

4. ಈ ವಾರವು ಕೂಡ ಅದೇ ರೀತಿಯ ಚರ್ಚೆ ಮಾಡುತ್ತೇವೆ ಎಂದು ಅಂದುಕೊಡಿರಬಹುದು.

5. ಎಲ್ಲರೂ ಆಡಿಯೋ ರೆಕಾರ್ಡರ್‌ ಬಳಕೆ ಮಾಡಿರದೆ ಇರಬಹುದು.

6. ಆಡಿಯೋ ರೆಕಾರ್ಡರ್‌ ಬಗ್ಗೆ ತಿಳಿದುಕೊಳ್ಳುವುದರಿಂದ ಏನು ಪ್ರಯೋಜನ ಅಂತ ಅಂದುಕೊಳ್ಳುತ್ತಿರಬಹುದು.

7. ಆಡಿಯೋ ರೆಕಾರ್ಡರ್‌ನಲ್ಲಿ ರೆಕಾರ್ಡ್‌ ಮಾಡಲು ಹೇಳಿದಾಗ ನಗುವುದು, ಒಬ್ಬರನ್ನು ಇನ್ನೊಬ್ಬರು ಬಯ್ಯೋದು ಆಗಬಹುದು.

8. ಆಡಿಯೋ ರೆಕಾರ್ಡರ್‌ನ ಬಳಸಲು ಭಯ ಇರಬಹುದು.

9. ತಂತ್ರಜ್ಞಾನದ ಬಗ್ಗೆ ಹೇಳಿಕೊಡುವುದರಿಂದ ಉತ್ಸಾಹ ಜಾಸ್ತಿ ಆಗಬಹುದು.    

10. ಕಿಶೋರಿಯರಲ್ಲಿ, ಮೊಬೈಲ್‌ ಬಳಸದೇ ಇರುವವರಿಂದ ಹಿಡಿದು, ಟಿಕ್‌ - ಟಾಕ್‌ ಬಳಸುವವರ ವರೆಗೂ ಇದ್ದಾರೆ.

11.  ಎರಡು ರೆಕಾರ್ಡರ್‌ ಇರುವುದರಿಂದ ಪ್ರತಿ ರೆಕಾರ್ಡರ್‌ಗೆ ೨ ಗುಂಪುಗಳಂತೆ ಮಾಡಲಾಗಿದೆ

12. ಮೊದಲನೆಯ ಡಿ.ಎಸ್.ಟಿ ಅಲ್ಲಿ ಮಿಸ್‌ ಆದ ಕಿಶೋರಿಯರು ನಮ್ಮ ಫೋಟೋ ತೆಗೀರಿ ಅಂತ ಕೇಳಬಹುದು.

ಉದ್ದೇಶ

ಆಡಿಯೊ ರೆಕಾರ್ಡಿಂಗ್‌ಗೆ ಪರಿಚಯಿಸುವುದು.

ಪ್ರಕ್ರಿಯೆ

ಮೊದಲೇ  ಯೋಚಿಸಿದಂತೆ ೪ ಗುಂಪುಗಳನ್ನು ಮಾಡಿಕೊಂಡಿರುತ್ತೇವೆ.  ಸುಮಾರು ೫ ನಿಮಿಷಗಳು

2 ರೆಕಾರ್ಡರ್‌ಗಳನ್ನು ಗಂಪುಗಳ ಕೈಗೆ ಕೊಡುತ್ತೇವೆ.

ಗುಂಪುಗಳಲ್ಲಿ ನಾವು ಅಂದುಕೊಂಡಿರುವ ಪ್ರಶ್ನೆಗಳನ್ನು ಪರಸ್ಪರವಾಗಿ ಕೇಳಲು ಹೇಳುವುದು.

ಕೇಳುವ ಪ್ರಶ್ನೆಗಳು ಈ ಕೆಳಗಿನಂತಿವೆ.                 ಸುಮಾರು ೧೦ ನಿಮಿಷಗಳು

1. ನೀವು ನಮ್ಮ ದೇಶದ ರಾಣಿಯಾದರೆ ಏನು ಮಾಡುತ್ತಿರ?

2.  ನೀವು ಚಿಕ್ಕವರಿದ್ದಾಗ ನಿಮ್ಮ ಜೊತೆ ಆಟ ಆಡುತ್ತಿದ್ದ ೫ ಜನರ ಹೆಸರು ಹೇಳಿ.

3. ನಿಮ್ಮ ಬೆಸ್ಟ್‌ ಫ್ರೆಂಡ್‌ಗೆ ಏನು ಬೇಕಾದರು ಉಡುಗೊರೆ  ಕೊಡಬಹುದು ಅಂದರೆ ಏನೇನು ಕೊಡುತ್ತಿರಾ?

4. ನಿಮ್ಮ ಶಾಲೆಯಲ್ಲಿ, ನೀವು ನಿಂತು ವಿಶೇಷ ಅಡಿಗೆ ಮಾಡಿಸಬಹುದು ಅಂದರೆ ಎನು ಮಾಡಿಸುತ್ತಿರ?

5. ನೀವು ಏನು ಕನಸು ಕಂಡರು ನನಸಾಗುತ್ತದೆ ಅಂದರೆ ಆ ಕನಸಲ್ಲಿ ಏನು ಇರುತ್ತದೆ?

6. ನೀವು ಹುಟ್ಟಿದಾಗಲೇ ನಿಮಗೆ ಒಂದು ವಿಶೇಷ ಶಕ್ತಿ ಇರುತ್ತದೆ. ಅಂದರೆ, ಅದು ಯಾವ ಥರಹದ ಶಕ್ತಿ ಆಗಿರಬೇಕು ಅಂದುಕೊಳುತ್ತಿರ?

7. ಶಾಲೆಯಿಂದ  ವಾಪಸ್‌ ಹೋಗುತ್ತಾ ೫೦೦ ರೂಪಾಯಿ ಸಿಕ್ಕಿತು ಅಂದ್ರೆ ಅದರಲ್ಲಿ  ಏನೇನು ತೆಗೆದುಕೊಳ್ಳುತ್ತಿರ?

8. ನೀವು ೩ ಜನ ಸ್ನೇಹಿತರ ಜೊತೆ ೩ ದಿನ ಎಲ್ಲಿಗೆ ಬೇಕಾದ್ರು ಹೋಗ್ಬೋದು ಅಂದ್ರೆ, ಆ ಸ್ನೇಹಿತರು ಯಾರು? ಮತ್ತೆ ಎಲ್ಲಿಗೆ ಹೋಗುತ್ತೀರ?

9. ನಿಮ್ಮ ಮುಂದೆ ದೇವರು ಪ್ರತ್ಯಕ್ಷ ನಾಗಿ, ಏನು ಬೇಕಾದರು ವರವನ್ನು ಕೊಟರೆ ನೀವು ಏನೇನು ಕೇಳುವಿರಿ?

10. ಮಾಲ್‌ನಲ್ಲಿ ನೀವು ಏನು ತಗೆದುಕೊಂಡರು ಉಚಿತ ಅಂದರೆ ಏನೆನು ತಗೆದುಕೊಳ್ಳುತ್ತಿರ?

11. ನಿಮ್ಮ ನೆಚ್ಚಿನ ಚಲನಚಿತ್ರದಲ್ಲಿ ನಾಯಕಿಯ ಬದಲು ನೀವೇ ನಾಯಕಿ ಆಗುವ ಅವಕಾಶ ಸಿಕ್ಕರೆ, ಅದು ಯಾವ ಚಲನಚೆತ್ರ? ಮತ್ತು ಯಾಕೆ?

12. ನಿಮಗೆ ಏನು ಬೇಕಿದ್ದರು ನಿಷೇದಿಸುವ ಶಕ್ತಿ ಇದೆ ಅಂದರೆ, ಏನೇನು ನಿಷೇದ ಮಾಡುವಿರಿ?

13. ಪ್ರಳಯ ಬಂದು ಎಲ್ಲಾ ನಾಶವಾಗಿದೆ ಎಂದರೆ, ನೀವು ಯಾವ ಜಾಗವನ್ನು ಉಳಿಸಲು ಇಷ್ಟ ಪಡೆಯುವಿರಿ? ಯಾಕೆ?

14. ನೀವು ಮಾಯ ಆಗಿ ಯಾರನ್ನು ಬೇಕಾದರು ಹೆದರಿಸಬಹುದು ಅಂದರೆ, ಯಾರನ್ನು ಹೆದರಿಸುವಿರಿ? ಎಕೆ?

15. ನೀವು ಯಾವ ಕಾಡು ಪ್ರಾಣಿಯನ್ನು ಬೇಕಿದ್ದರೂ ವಶಪಡಿಸಿಕೊಳ್ಳಬಹುದು ಅಂದರೆ ಅದು ಯಾವ ಪ್ರಾಣಿ? ಯಾಕೆ?

16. ನಿಮ್ಮ ನೆಚ್ಚಿನ ಆಟದ ಯಾವುದಾದರೂ ನಿಯಮವನ್ನು ಬದಲಾಯಿಸಬಹುದು ಅಂದರೆ ಅದು ಯಾವ ಆಟ? ಯಾವ ನಿಯಮ?

17. ನಿಮ್ಮ ನೆಚ್ಚಿನ ಹಾಡಿಗೆ ನೀವೇ ಹಿನ್ನಲೆ ಗಾಯಕಿಯಾದರೆ, ಅದು ಯಾವ ಹಾಡು? ಯಾವ ಚಲನಚಿತ್ರ?

18. ಪ್ರಪಂಚದಲ್ಲೇ ಏಲ್ಲರಿಗಿಂತ  ಬುಧ್ಧಿವಂತೆ ಅಥವಾ  ಏಲ್ಲಾರಿಗಿಂತ ಶ್ರೀಮಂತೆ ಅಗ್ಬೋದು ಅಂದರೆ ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತೀರ? ಯಾಕೆ?

19. ನಿಮ್ಮ ಹೆಸರು ದಿನಪತ್ರಿಕೆಯಲ್ಲಿ ಬಂದಿದೆ ಅಂತ ಅಂದುಕೊಳೋಣ, ಅದು ಯಾವ ವಿಷಯಕ್ಕೆ ಬಂದರೆ ಚೆಂದ ಎಂದು ನಿಮಗೆ ಅನಿಸುತ್ತದೆ ? ಯಾಕೆ?

20. ನೀವು ಯಾವುದಾದರು ಪ್ರಾಣಿ ಜೊತೆಯಲ್ಲಿ ಮಾತಾಡಬಹುದು ಅಂದರೆ ಅದು ಯಾವುದು? ಯಾಕೆ?

21. ಬಿಗ್‌ ಬಾಸ್‌ಗೆ ನೀವು ಆಯ್ಕೆ ಆಗಿದ್ದೀರ ಅಂತ ಅಂದ್ಕೊಳ್ಳೋಣ, ನಿಮ್ಮ ಜೊತೆ ಯಾರು ಯಾರು ಇರಬೇಕು ಅಂತ ನಿಮಗೆ ಆಸೆ ಇದೆ?

22. ೨೪ ಗಂಟೆ ಹಗಲು ಅಥವಾ ೨೪ ಗಂಟೆ ರಾತ್ರಿ, ಇದರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ನೀವು ಯಾವುದನ್ನು ಆಯ್ಕೆ ಮಾಡಿಕೊಳ್ಳುವಿರಿ? ಯಾಕೆ?

23. ನಿಮ್ಮ ಜೀವನದ ಅತೀ ಸಿಹಿ ಸಮಯಕ್ಕೆ ನೀವು ತಿರುಗಿ ಹೋಗುವ ಅವಕಾಶ ಸಿಕ್ಕರೆ, ಯಾವ ಸಮಯಕ್ಕೆ ಹೋಗುವಿರಿ? ಯಾಕೆ?

24. ನೀವು ಇಲ್ಲಿಯ ತನಕ ಯಾವ ಸಿನೆಮಾ ನೋಡಿದಾಗ ಅತೀ ಹೆಚ್ಚು ಕಣ್ಣೀರಿಟ್ಟಿದ್ದೀರಿ? ಯಾಕೆ?

25. ನೀವು ನಿಮಗಿಷ್ಟವಾದ ಯಾವುದಾದರೂ ದೊಡ್ಡ ವಸ್ತುವನ್ನು ಚಿಕ್ಕದಾಗಿ ಮಾಡಿ ಬ್ಯಾಗಿನಲ್ಲಿ ಹಾಕಿಕೊಳ್ಳಬಹುದು ಹಾಗೂ ಆಮೇಲೆ ಬೇಕಾದ ಹಾಗೆ ದೊಡ್ಡದಾಗಿ ಮಾಡಿಕೊಳ್ಳಬಹುದು ಅಂದರೆ, ಯಾವ ಯಾವ ವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುವಿರಿ? ಯಾಕೆ?

26. ನಿಮಗೆ ಶಿವನ ಹಾಗೆ ಮೂರನೇ ಕಣ್ಣಿದ್ದರೆ ಅದನ್ನು ಯಾವುದಕ್ಕೆ ತೆಗೆಯುವಿರಿ? ಯಾಕೆ?

ಮಾಡಿರುವ ರೆಕಾರ್ಡಿಂಗ್‌ಗಳನ್ನು ಕಿಶೋರಿಯರಿಗೆ ಕೇಳಿಸಿ ಅವರಿಂದ ಅಭಿಪ್ರಾಯಗಳನ್ನು ಕೇಳುವುದು.

ಅಭಿಪ್ರಾಯಗಳನ್ನು ತೆಗೆದುಕೊಂಡು ರೆಕಾರ್ಡಿಂಗ್‌ಗಳು ಏಕೆ ಹೀಗೆ ಕೇಳಿಸುತ್ತಿವೆ ಎಂದು, ತಂತ್ರಜ್ಙಾನದ ಪದಗಳಾದ ಲೆವಲ್ಸ್‌, ಪೀಕ್‌, ಹಿನ್ನಲೆ, ಥಂಬ್‌ ರೂಲ್ಸ್‌ಗಳನ್ನು ಚಿತ್ರ ಬಿಡಿಸಿ ಪರಿಚಯಿಸುವುದು.

ಸುಮಾರು ೧೦ ನಿಮಿಷಗಳು

ಇದಾದ ಬಳಿಕ ನಾವು ೪ ಅಥವಾ ೫ ಕಿಶೋರಿಯರನ್ನು ಬರಲು ಹೇಳಿ ಅವರವರಿಗೆ ಹೇಳಿಕೊಟ್ಟಿರುವ ತಂತ್ರಜ್ಞಾನದ ಅಂಶಗಳಾದ ಲೆವಲ್ಸ್‌, ಪೀಕ್‌, ಹಿನ್ನಲೆ, ಥಂಬ್‌ ರೂಲ್ಸ್‌ಗಳನ್ನು ನೆನಪಿನಲ್ಲಿ ಇಟ್ಟುಕೊಂಡು ಮತ್ತೆ ರೆಕಾರ್ಡಿಂಗ್‌ ಮಾಡಲು ಹೇಳುವುದು.                             ಸುಮಾರು ೫ ನಿಮಿಷಗಳು

ಮಾಡಿರುವ ರೆಕಾರ್ಡಿಂಗ್‌ಗಳನ್ನು ಉಳಿದ ಕಿಶೋರಿಯರಿಗೆ ಕೇಳಿಸಿ ಅವರಿಂದ ಅಭಿಪ್ರಾಯಗಳನ್ನು ಕೇಳುವುದು.

ಸುಮಾರು ೫ ನಿಮಿಷಗಳು

ಇದಾದ ಬಳಿಕ ಸಾರ್ವತ್ರಿಕ ಚಿಹ್ನೆಗಳಾದ ಪ್ಲೆ, ಪೌಸ್, ರೆಕಾರ್ಡ್‌ ಹಾಗು ಸ್ಟಾಪ್ ಬಟನ್‌ಗಳ ಕಾಯಕ್ರಮಗಳ ಬಗ್ಗೆ ಚಿತ್ರಗಳನ್ನು ತೊರಿಸಿ ಅವುಗಳ ಬಗ್ಗೆ ಹೇಳುವುದು.  ಸುಮಾರು ೫ ನಿಮಿಷಗಳು

ಇದಾದ ಬಳಿಕ ಇಂದು ನಾವು ಹೇಳಿಕೊಟ್ಟಿರುವುದು ಏತಕ್ಕೆ ಅಂತ ನಿಮಗೆ ಅನಿಸುತ್ತಿರಬಹುದು, ಏಕೆಂದರೆ ನೀವು ಇನ್ನು ಮುಂದೆ ಆಡಿಯೊ ರೆಕಾರ್ಡರ್‌ಗಳನ್ನು  ಉಪಯೊಗಿಸುತ್ತೀರಿ ಎಂದು ಹೇಳಿ ತರಗತಿ ಅನ್ನು ಮುಗಿಸುವುದು. ಸುಮಾರು ೫ ನಿಮಿಷಗಳು

ಬೇಕಾದ ಸಂಪನ್ಮೂಲಗಳು

• ಆಡಿಯೋ ಸಂಕಲನ (ಎಡಿಟಿಂಗ್‌) ಸಾಫ್ಟ್‌ವೇರ್‌ (ಅಡಾಸಿಟಿ) ಇರುವ ಕಂಪ್ಯೂಟರ್‌/ಲ್ಯಾಪ್‌ಟಾಪ್‌ - ೧

• ಪ್ರೊಜೆಕ್ಟರ್‌- ೧

• ಸ್ಪೀಕರ್‌ - ೧

• ರೆಕಾರ್ಡರ್‌ - ೨     

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು

- ಒಬ್ಬ ಮುಖ್ಯ ಫೆಸಿಲಿಟೇಟರ್‌, ೩ ಫೆಸಿಲಿಟೇಟರ್‌ಗಳು ಗುಂಪುಗಳ ಜೊತೆ ಚರ್ಚೆಗೆ

ಒಟ್ಟು ಸಮಯ

೮೦ ನಿಮಿಷ    

ಇನ್‌ಪುಟ್‌ಗಳು

ಪ್ರಸ್ತುತಿ

ಔಟ್‌ಪುಟ್‌ಗಳು

ಕಿಶೋರಿಯರು ಮಾಡಿರುವ ಆಡಿಯೋ ಕಡತಗಳು.