ಚಿಗುರು ೪ - ನನ್ನ ಸವಾಲು, ನಮ್ಮ ಸವಾಲೇ- ಭಾಗ ೧

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
The printable version is no longer supported and may have rendering errors. Please update your browser bookmarks and please use the default browser print function instead.

ಸಾರಾಂಶ

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು.  ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ ಅವರ ಮನೆ, ಶಾಲೆಗೆ ಬರುವ ದಾರಿ, ಮತ್ತು ಶಾಲೆಯಲ್ಲಿ ಅವರಿಗೆ ಇರುವ ಕಾಳಜಿ / ಸಮಸ್ಯೆಗಳನ್ನು ಪಟ್ಟಿ ಮಾಡುತ್ತಾರೆ. ಕಿಶೋರಿಯರು ಅವರ ಗೆಳತಿಯರ ಜೊತೆಗೇ ಮಾತನಾಡಿ ಇವುಗಳನ್ನು ಪಟ್ಟಿ ಮಾಡುವುದರಿಂದ ಅವರಿಗೆ ಮೈ ಚಳಿ  ಬಿಟ್ಟು ಮಾತನಾಡಲು ಸಾಧ್ಯವಾಗುತ್ತದೆ.

ಊಹೆಗಳು

  1. ಎಲ್ಲರಿಗೂ ಬರೆಯಲು ಬರದಿರಬಹುದು.
  2. ಕಿಶೊರಿಯರಲ್ಲಿ ತುಂಬಾ ಜನ (ಸುಮಾರು೨೦) ಗೈರುಹಾಜರಿಯಾಗಿರುತ್ತಾರೆ.
  3. ಹಿಂದು ಹಾಗು ಮುಸ್ಲಿಮ್ ಕಿಶೋರಿಯರ ಮಧ್ಯೆ ಗೋಡೆಯಿದೆ.
  4. ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಕಿಶೋರಿಯರ ಮಧ್ಯೆ ಗೋಡೆಯಿದೆ.
  5. ನಮ್ಮ ಕಟ್ಟುಪಾಡುಗಳನ್ನು ಇನ್ನೂ ಸರಿಯಾಗಿ ಪಾಲಿಸುತ್ತಿಲ್ಲ .
  6. ಒಬ್ಬ ಕಿಶೋರಿಯನ್ನು ಕಂಡರೆ ಯಾರಿಗೂ ಆಗಲ್ಲ - ಜಗಳಗಂಟಿ (ಹೆಚ್ಚಿನ ಪರಿಚಯದೊಂದಿಗೆ ಕಾರಣಗಳನ್ನು ತಿಳಿಯಬಹುದೇನೊ).
  7. ಬೇಸಿಕ್ ಲಿಟರಸಿ ಕಲಿಸುವ ಅಗತ್ಯವಿದೆ .
  8. ಕೆಲವು ಕಿಶೋರಿಯರು ಒಟ್ಟು ಸೇರಿದಾಗ ಗಲಾಟೆಮಾಡುತ್ತಾರೆ ಅದರಿಂದ ನಮ್ಮ ಸೆಷನ್ ಗೆ ತೊಂದರೆಯಾಗುತ್ತದೆ.
  9. ಸಾಮಾನ್ಯವಾಗಿ ೭೦ ನಿಮಿಷಗಳ ತರಗತಿ ಇದ್ದರೂ ನಮಗೆ ಇಲ್ಲಿ ೫೦ ನಿಮಿಷಗಳು ಮಾತ್ರ ಸಿಗುತ್ತವೆ.
  10. ನಮಗೆ ಸರಿಯಾಗಿ ಪ್ರತಿಕ್ರಿಯೆ ಬರದೆ ಇರಬಹುದು. ಹೀಗಾಗಿ ಉದಾಹರಣೆಗಳನ್ನು ಪೂರ್ವತಯಾರಿ ಮಾಡಿಕೊಂಡು ಹೋಗಿರುವುದು ಒಳ್ಳೆಯದು.
  11. ಗಂಭೀರವಾದ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಯಿರುವುದರಿಂದ ಕಿಶೋರಿಯರು ನಿರುತ್ಸಾಹಿಗಳಾಗಿರಬಹುದು.

ಉದ್ದೇಶಗಳು

• ನಮ್ಮ ಕಾರ್ಯಕ್ರಮದ ಮೂಲಕ ಕಿಶೋರಿಯರು ತಮ್ಮ ದನಿಯನ್ನು ತಾವೇ ಅರಿಯಬೇಕು. ಅದನ್ನು ತಮ್ಮ ಗೆಳತಿಯ ಜೊತೆ ಹಂಚಿಕೊಳ್ಳಬೇಕು.

• ಕಿಶೋರಿಯರ ಸವಾಲುಗಳ ಬಗ್ಗೆ ಮಾತನಾಡುವುದು.

ಪ್ರಕ್ರಿಯೆ

ಹಿಂದಿನ ವಾರದ ಚರ್ಚೆಗಳನ್ನು ಮತ್ತೆ ಜ್ಞಾಪಿಸುವುದು. ಹಾಗೂ ನಮ್ಮ ಪರಿಚಯವನ್ನು ಇನ್ನೊಮ್ಮೆ ಮಾಡಿಕೊಳ್ಳುವುದು. ಕಟ್ಟುಪಾಡುಗಳನ್ನು ನಾವೇ ನೆನಪಿಸುವುದು. (೧೦ ನಿಮಿಷ)

ಕಿಶೋರಿಯರಿಗೆ ಇಬ್ಬರ ಗುಂಪುಗಳನ್ನು ಮಾಡಿಕೊಳ್ಳಲು ಹೇಳುವುದು. ಕಿಶೋರಿಯರು ಅವರ ಸ್ನೇಹಿತೆಯ ಜೊತೆಗೆ ಗುಂಪು ಮಾಡಿಕೊಂಡರೆ ಅವರು ಮೈ ಚಳಿ ಬಿಟ್ಟು ಮಾತನಾಡಲು ಸುಲಭವಾಗುತ್ತದೆ. (೫ ನಿಮಿಷ)

ಕಿಶೋರಿಯರಿಗೆ ಅವರ ಸಮಸ್ಯೆ/ಕಾಳಜಿಗಳ ಬಗ್ಗೆ ಪರಸ್ಪರ ಮಾತನಾಡಿಕೊಳ್ಳಲು ಹೇಳುತ್ತೇವೆ. ಅವರ ಸ್ನೇಹಿತೆಯರ ಜೊತೆಯೇ ಮಾತನಾಡಿಕೊಳ್ಳುವುದರಿಂದ ಕಿಶೋರಿಯರು ಯಾವುದೇ ಮುಜುಗರವಿಲ್ಲದೇ ಮಾತನಾಡಿಕೊಳ್ಳಬಹುದು.

ಫೆಸಿಲಿಟೇಟರ್‌ಗಳು ಯಾವುದಾದರೂ ಜೋಡಿಗೆ ಅರ್ಥ ಆಗಿಲ್ಲ ಅಂದರೆ ಏನಾದರೂ ಸರಳವಾದ ಉದಾಹರಣೆಯನ್ನು ಕೊಡಬಹುದು. ಉದಾಹರಣೆಗೆ ಹೋಮ್‌ವರ್ಕ್‌ ತುಂಬಾ ಜಾಸ್ತಿ ಇರುತ್ತೆ.

ಕಿಶೋರಿಯರಿಗೆ ಎ-೪ ಹಾಳೆಗಳನ್ನು ಕೊಟ್ಟು ಅವರು ಚರ್ಚಿಸಿದ ವಿಷಯಗಳನ್ನು ಅದರಲ್ಲಿ ಬರೆಯಲು ಹೇಳುವುದು.

ಎಲ್ಲರೂ ಬರೆದಾದ ನಂತರ ಮುಂದಿನ ವಾರ ಮಾತುಕತೆಯನ್ನು ಮುಂದುವರೆಸೋಣ ಎಂದು ಹೇಳಿ ಮಾತುಕತೆಯನ್ನು ಮುಗಿಸುವುದು. (೩೫ ನಿಮಿಷಗಳು)

ಬೇಕಾಗಿರುವ ಸಂಪನ್ಮೂಲಗಳು

• ಎ-೪ ಹಾಳೆಗಳು

• ಸ್ಕೆಚ್‌ ಪೆನ್‌ - ೪ ಸೆಟ್‌ಗಳು

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು ೪

ಮುಖ್ಯವಾಗಿ ಒಬ್ಬರು ಹಾಗೂ ಸಹಾಯಕ್ಕಾಗಿ ೩ ಫೆಸಿಲಿಟೇಟರ್‌ಗಳು

ಒಟ್ಟು ಸಮಯ

೫೦ ನುಮಿಷಗಳು

ಇನ್‌ಪುಟ್‌ಗಳು

ಔಟ್‌ಪುಟ್‌ಗಳು

• ಕಿಶೋರಿಯರು ಪಟ್ಟಿ ಮಾಡಿದ ಸಮಸ್ಯೆಗಳು