ಚಿಗುರು ೬- ನನ್ನ ಸವಾಲು, ನಮ್ಮ ಸವಾಲೇ- ಭಾಗ - ೩

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ಸಾರಾಂಶ

ಹದಿಹರೆಯದ ಸವಾಲುಗಳು ಕಿಶೋರಿಯರಲ್ಲಿ ಹಲವಾರು ಗೊಂದಲ, ಆತಂಕಗಳನ್ನು ಮೂಡಿಸಿರಬಹುದು. ಹಿಂದಿನ ತರಗತಿಗಳಲ್ಲಿ ಕಿಶೋರಿಯರು, ಗೆಳತಿಯರ ಜೊತೆಗಿನ ಪರಸ್ಪರ ಮಾತುಕತೆಯ ಮೂಲಕ, ಹಾಗೂ ಅವುಗಳನ್ನು ಚುಕ್ಕಿಗಳ ರೂಪದಲ್ಲಿ ಚಿತ್ರಿಸುವುದರ ಮೂಲಕ ಅವರ ಸವಾಲು ಮತ್ತು ಕಾಳಜಿಗಳ ಬಗ್ಗೆ ತಿಳಿದುಕೊಂಡಿದ್ದಾರೆ. ಈ ವಾರ ಅವರು ಉಳಿದ ಹಾಗೂ ತಮ್ಮ ಗುಂಪಿನಲ್ಲಿ ಬರೆದ ಅಂಶಗಳನ್ನು ಗುಂಪಿನಲ್ಲಿ ಓದುವುದರ ಮೂಲಕ, ತರಗತಿಯಲ್ಲಿರುವ ಕಿಶೋರಿಯರು ಏನೇನು ಬರೆದಿದ್ದಾರೆ ಎಂದು ತಿಳಿದುಕೊಳ್ಳುತ್ತಾರೆ. ಒಟ್ಟು ಸಮಯ ೫0 ನಿಮಿಷಗಳು.

ಊಹೆಗಳು

• ಕಿಶೋರಿಯರಲ್ಲಿ ತುಂಬಾ ಜನ (ಸುಮಾರು೨೦) ಗೈರುಹಾಜರಿಯಾಗಿರುತ್ತಾರೆ.

• ಹಿಂದು ಹಾಗು ಮುಸ್ಲಿಮ್ ಕಿಶೋರಿಯರ ಮಧ್ಯೆ ಗೋಡೆಯಿದೆ.

• ಇಂಗ್ಲಿಷ್ ಮಾಧ್ಯಮ ಮತ್ತು ಕನ್ನಡ ಮಾಧ್ಯಮದ ಕಿಶೋರಿಯರ ಮಧ್ಯೆ ಗೋಡೆಯಿದೆ.

• ನಮ್ಮ ಕಟ್ಟುಪಾಡುಗಳನ್ನು ಇನ್ನೂ ಸರಿಯಾಗಿ ಪಾಲಿಸುತ್ತಿಲ್ಲ .

• ಬೇಸಿಕ್ ಲಿಟರಸಿ ಕಲಿಸುವ ಅಗತ್ಯವಿದೆ .

• ಕೆಲವು ಕಿಶೋರಿಯರು ಒಟ್ಟು ಸೇರಿದಾಗ ಗಲಾಟೆಮಾಡುತ್ತಾರೆ ಅದರಿಂದ ನಮ್ಮ ಸೆಷನ್ ಗೆ ತೊಂದರೆಯಾಗುತ್ತದೆ.

• ಹಿಂದಿನ ಸೆಷನ್ನಲ್ಲಿ ಅವರು ಹೇಳಿರುವ ಅಂಶಗಳಲ್ಲಿ ಹಲವಾರು ಸಾಮಾನ್ಯ ಅಂಶಗಳಿವೆ.

• ನಮ್ಮ ಸೆಷನ್ ಸಫಲವಾಗಲು ಚೆನ್ನಗಿ ಮಾತನಾಡುವ ಕಿಶೋರಿಯಿಲ್ಲ ಹಾಗೂ ಇಲ್ಲಿ ಭಯವಿಲ್ಲದೆ ಮಾತನಾಡುವ ಕಿಶೋರಿಯರು ಸ್ಪಂದಿಸುತ್ತಾರೆಂದು ಆಶಿಸುತ್ತೇವೆ.

• ಸಾಮಾನ್ಯವಾಗಿ ೭೦ ನಿಮಿಷಗಳ ತರಗತಿ ಇದ್ದರೂ ನಮಗೆ ಇಲ್ಲಿ ೫೦ ನಿಮಿಷಗಳು ಮಾತ್ರ ಸಿಗುತ್ತವೆ.

ಉದ್ದೇಶ

ಮನೆ, ಮನೆಯಿಂದ ಶಾಲೆಗೆ ಹೋಗುವ ದಾರಿ ಮತ್ತು ಶಾಲೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳು ಮತ್ತು ಕಾಳಜಿಗಳು ನನ್ನೊಬ್ಬಳದೇ ಅಲ್ಲ, ನಮ್ಮೆಲ್ಲರದ್ದೂ ಎಂದು ಅರಿವು ಮೂಡಿಸುವುದು

ಪ್ರಕ್ರಿಯೆ

ಕಿಶೋರಿಯರಿಗೆ ಶುಭ ಮಧ್ಯಾಹ್ನ ಎನ್ನುವ ಮೂಲಕ ನಮ್ಮ ಮಾತುಕಥೆಯನ್ನು ಆರಂಭಿಸುತ್ತೇವೆ.

ನಾವೆಲ್ಲರೂ ಪಾಲಿಸುವ ಕಟ್ಟುಪಾಡುಗಳನ್ನು ನೆನಪು ಮಾಡಿಕೊಳ್ಳುತ್ತೇವೆ. ಕಳೆದ ಭೇಟಿಯಲ್ಲಿ ನಾವು ಚರ್ಚಿಸಿದ ವಿಷಯದ ಮರುಕಳಿಕೆ. (೧೦ ನಿಮಿಷ)

ಕಳೆದ ವಾರದಲ್ಲಿ ನಾವು ತಯಾರಿಸಿದ ಚಾರ್ಟ್‌ಶೀಟ್‌ಗಳನ್ನು ಕಪ್ಪು ಹಲಗೆಯ ಮೇಲೆ ಅಂಟಿಸುವುದು ಹಾಗು ಆಯಾ ಗುಂಪಿಗೆ ಸಂಬಂಧಿಸಿದ ಉತ್ತರಗಳನ್ನು ಅದಲು ಬದಲಾಗಿ ಅಂಟಿಸುವುದು (A4 ಹಾಳೆ). ನಂತರ ಕಿಶೋರಿಯರು ಒಬ್ಬೊಬ್ಬರಾಗಿ ಬಂದು ಅವುಗಳನ್ನು ಓದುತ್ತಾರೆ.

ಕಿಶೋರಿಯರ ಮಧ್ಯೆ ಹಲವರಿಗೆ ಕನ್ನಡ ಓದುವುದು ಬರದ ಕಾರಣ ಅವರನ್ನು ಬೇರೆ ಬೇರೆ ಗುಂಪುಗಳಾಗಿ ಮಾಡಬಹುದು. ಇದಕ್ಕೆ ಹೆಚ್ಚಿನ ಸಮಯ ಬೇಕಾಗಬಹುದು ಆದರೆ ಅವರಲ್ಲಿ ಎಲ್ಲರೂ ಇದನ್ನು ಓದುವುದು ಮುಖ್ಯವಾದ್ದರಿಂದ ಇದಕ್ಕೆ ನಾವು ಸಮಯ ಕೊಡಬೇಕಾಗುತ್ತದೆ. (೪೦ ನಿಮಿಷ)

ಬೇಕಾಗಿರುವ ಸಂಪನ್ಮೂಲಗಳು

• ಕಿಶೋರಿಯರು ಮಾಡಿರುವ ಸುರುಳಿಗಳ ಚಾರ್ಟ್‌

• ಗುಂಪು ಚರ್ಚೆಯಲ್ಲಿ ನಾವು ಬರೆದಿರುವ ಹಾಳೆಗಳು

• Double sided tape

• ಕತ್ತರಿ

ಒಟ್ಟು ಬೇಕಿರುವ ಫೆಸಿಲಿಟೇಟರ್‌ಗಳು - ೪

ಒಟ್ಟು ಸಮಯ

೫೦ ನಿಮಿಷಗಳು

ಇನ್‌ಪುಟ್‌ಗಳು

• ಸುರುಳಿ ಬರೆದ ಚಾರ್ಟ್‌ಗಳು

ಔಟ್‌ಪುಟ್‌ಗಳು