ನೈಸರ್ಗಿಕ ಸಂಪನ್ಮೂಲಗಳು

From ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
Jump to navigation Jump to search

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಷಯ}} ಅನ್ನು ಟೈಪ್ ಮಾಡಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

೧ ಭೋಧನೆಯ ರೂಪರೇಶಗಳು

೧.೧ ಪರಿಕಲ್ಪನೆ

 • ನವೀಕರಣಗೊಳ್ಳುವ ನೈಸರ್ಗಿಕ ಸಂಪನ್ಮೂಲಗಳು
 • ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳು
 • ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ
 • ಪಳೆಯುಳಿಕೆ ಇಂಧನಗಳು - ಪೆಟ್ರೋಲಿಯಂ , ಕಲ್ಲಿದ್ದಲು , ನೈಸರ್ಗಿಕ ಅನಿಲಗಳು
 • ಅಳಿವಿನ ಅಂಚಿನಲ್ಲಿರುವ ಪ್ರಬೇಧಗಳು
 • ನೀರು - ನೀರಿನ ಸಂರಕ್ಷಣಾ ವಿಧಾನಗಳು
 • ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ ಮತ್ತು ಅವನತಿ
 • ಸಂರಕ್ಷಣೆ ವಿಧಾನಗಳು ಮತ್ತು ಸಂರಕ್ಷಣೆ ಕಾಯ್ದೆಗಳು
 • ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳು

೧.೨ ಕಲಿಕೆಯ ಉದ್ದೇಶಗಳು

 1. ನೈಸರ್ಗಿಕ ಸಂಪನ್ಮೂಲಗಳ ಅರ್ಥ ಹಾಗೂ ಅವುಗಳ ವೈವಿಧ್ಯತೆಗಳನ್ನು ಅರಿಯುವರು .
 2. ವಿವಿಧ ನೈಸರ್ಗಿಕ ಸಂಪನ್ಮೂಲಗಳನ್ನು ನವೀಕರಣಗೊಳ್ಳುವ ಮತ್ತು ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳಾಗಿ ವಿಂಗಡಿಸುವರು.
 3. ಸಿಹಿ ನೀರಿನ ಲಭ್ಯತೆ ಮತ್ತು ನೀರಿನ ಸಂರಕ್ಷಣಾ ವಿಧಾನಗಳ ಚಟುವಟಿಕೆಗಳ ಮೂಲಕ ಸ್ವತಃ ಮನಗಾಣುವರು
 4. ಪಳೆಯುಳಿಕೆ ಇಂಧನಗಳ ರೂಪುಗೊಳ್ಳುವಿಕೆ ಹಾಗೂ ಪ್ರಸ್ತುತ ಅವುಗಳ ಸ್ಥಿತಿಗತಿಗಳನ್ನು ತಿಳಿಯುವರು .
 5. ವಿವಿಧ ಅಳಿವಿನಂಚಿನಲ್ಲಿರುವ ಪ್ರಬೇಧಗಳನ್ನು ಪಟ್ಟಿ ಮಾಡುವರು ಮತ್ತು ಅವುಗಳ ಸಂರಕ್ಷಣೆಯ ವಿಧಾನಗಳನ್ನು ತಿಳಿಯುವರು
 6. ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವ ಅಗತ್ಯಗಳನ್ನು ಮನಗಾಣುವರು
 7. ನವೀಕರಣಗೊಳ್ಳದ ನೈಸರ್ಗಿಕ ಸಂಪನ್ಮೂಲಗಳ ಮೇಲಿನ ಒತ್ತಡ ಮತ್ತು ಅವನತಿಗಳ ಕಾರಣಗಳನ್ನು ನೀಡುವರು .
 8. ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಇರುವ ವಿಧಾನಗಳು ಮತ್ತು ಕಾಯ್ದೆಗಳ ಅರಿವು ಮೂಡುವುದು .
 9. ನೈಸರ್ಗಿಕ ಸಂಪನ್ಮೂಲಗಳ ವಿವೇಚನಾಯುಕ್ತ ಬಳಕೆ ಮತ್ತು ನಿರ್ವಹಣೆಯ ಕೌಶಲ್ಯವನ್ನು ಬೆಳೆಸಿಕೊಳ್ಳುವರು
 10. ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳ ಪಟ್ಟಿ ಮಾಡುವರು

ಶಿಕ್ಷಕರಿಗೆ ಟಿಪ್ಪಣಿ

ನೈಸರ್ಗಿಕ ಸಂಪನ್ಮೂಲಗಳೆಲ್ಲವೂ ನಮ್ಮ ಉಳಿವಿಕೆಗೆ ಅತ್ಯವಶ್ಯಕ, ಮಿಕ್ಕವು ನಮ್ಮ ಬಯಕೆ ಪೂರೈಸಲು ಇರುವ ಸಾಧನಗಳು..ಪರಿಸರದಲ್ಲಿ ಮಾನವರಿಂದ ಸ್ಥಾನಪಲ್ಲಟಕ್ಕೆ ಈಡಾಗದೇ ಇರುವಾಗ ಅವು ಪ್ರಾಕೃತಿಕ ರೂಪದಲ್ಲಿ ಇರುತ್ತವೆ.ಅವುಗಳ ಉಪಯೋಗಗಳಿಗೆ ಅನುಗುಣವಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ವಿವಿಧ ರೀತಿಯಲ್ಲಿ ವಿಂಗಡಿಸಬಹುದು.
ವರ್ಗೀಕರಣ

ದೊರೆಯುವ ಮೂಲದ ಆಧಾರದ ಮೇಲೆ, ಸಂಪನ್ಮೂಲಗಳನ್ನು ಹೀಗೆ ವಿಂಗಡಿಸಬಹುದು :

ಜೈವಿಕ: ಜೀವಗೋಳದಿಂದ ಪಡೆದಿರುವಂತಹವುಗಳು ಜೈವಿಕ ಸಂಪನ್ಮೂಲಗಳು. ಅರಣ್ಯಗಳು ಮತ್ತು ಅರಣ್ಯೋತ್ಪನ್ನಗಳು, ಪ್ರಾಣಿಗಳು, ಪಕ್ಷಿಗಳು ಮತ್ತು ಅವುಗಳ ಉತ್ಪನ್ನಗಳು, ಮೀನು ಮತ್ತು ಇತರ ಸಮುದ್ರ ಜೀವಿಗಳು ಪ್ರಮುಖ ಉದಾಹರಣೆಗಳು. ಕೊಳೆತ ಜೈವಿಕ ವಸ್ತುಗಳಿಂದ ಮೈದಾಳುವ ಕಾರಣ ಕಲ್ಲಿದ್ದಲು ಮತ್ತು ಪೆಟ್ರೋಲಿಯಂನಂತಹ ವಸ್ತುಗಳು ಸಹ ಈ ವಿಭಾಗಕ್ಕೆ ಸೇರುತ್ತವೆ.
ಅಜೈವಿಕ :ಅಜೈವಿಕ ಸಂಪನ್ಮೂಲಗಳು ನಿರ್ಜೀವ ವಸ್ತುಗಳಿಂದ ನಿರ್ಮಾಣವಾದವುಗಳು . .ಮಣ್ಣು , ನೀರು, ಗಾಳಿ ಮತ್ತು ಚಿನ್ನ, ಕಬ್ಬಿಣ, ತಾಮ್ರ, ಬೆಳ್ಳಿ ಮುಂತಾದ ಖನಿಜಗಳು ಮೊದಲಾದವು ಅಜೈವಿಕ ಸಂಪನ್ಮೂಲಗಳಿಗೆ ಉದಾಹರಣೆ.

ನೈಸರ್ಗಿಕ ಸಂಪನ್ಮೂಲಗಳನ್ನು ಅವುಗಳಿಗಿರುವ ನವೀಕರಣ ಸಾಮರ್ಥ್ಯದ ಆಧಾರದ ಮೇಲೆ, ಈ ಕೆಳಗಿನಂತೆ ವಿಭಾಗಿಸಬಹುದು: ನವೀಕರಣ ಗೊಳ್ಳುವ ಸಂಪನ್ಮೂಲಗಳು- ಸುಲಭವಾಗಿ ಪುನಃ ತುಂಬಬಹುದಾದ ಅಥವಾ ಪುನರುತ್ಪತ್ತಿ ಮಾಡಬಹುದಾದವುಗಳು ಯಾವುವೋ ಅವುಗಳೆಲ್ಲ ಮರುಪೂರಣಗೊಳ್ಳುವ ಸಂಪನ್ಮೂಲಗಳು. ಸೂರ್ಯನ ಬೆಳಕು, ಗಾಳಿ, ವಾಯು ಇತ್ಯಾದಿಗಳು ಸತತವಾಗಿ ಲಭ್ಯವಿರುತ್ತವೆ ಮತ್ತು ಅವುಗಳ ಪ್ರಮಾಣ ಮಾನವನ ಬಳಕೆಯಿಂದ ಧಕ್ಕೆಗೊಳಗಾಗುವುದಿಲ್ಲ. ಮಾನವನ ಬಳಕೆಯಿಂದ ಅನೇಕ ಸಂಪನ್ಮೂಲಗಳು ಖಾಲಿಯಾಗಬಹುದು, ಆದರೆ ಅದರ ಮರುಪೂರಣ ಸಾಧ್ಯ, ಹಾಗಾಗಿ ಇದರ ಹರಿವು ನಿರಂತರ ಇದ್ದೇ ಇರುತ್ತದೆ. ಕೆಲವೊಂದು, ಕೃಷಿ ಬೆಳೆಯಂತಹವುಗಳಿಗೆ ಮರಿಪೂರಣಗೊಳ್ಳಲು ಸ್ವಲ್ಪ ಸಮಯ ಸಾಕು, ನೀರು ಸ್ವಲ್ಪಮಟ್ಟಿಗೆ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ, ಅರಣ್ಯಕ್ಕೆ ಇನ್ನಷ್ಟು ಹೆಚ್ಚು ಸಮಯ ಬೇಕಾಗುತ್ತದೆ. ನವೀಕರಣ ಗೊಳ್ಳದ ಸಂಪನ್ಮೂಲಗಳು- - ಅನೇಕಾನೇಕ ವರ್ಷಗಳಿಂದ ಭೂ ಗರ್ಭದೊಳಗೆ ನಡೆದಿರುವ ಪ್ರಕ್ರಿಯೆಯಿಂದ ರೂಪುಗೊಂಡಿರುವ ಈ ಸಂಪನ್ಮೂಲವನ್ನು ಒಮ್ಮೆ ಹೊರತೆಗೆದರೆ ಅದರ ಮರುಪೂರಣ ಮಾಡುವುದು ಅಸಾಧ್ಯ.ಖನಿಜಗಳು ಮತ್ತು ಪಳೆಯುಳಿಕೆಗಳು ಈ ವರ್ಗಕ್ಕೆ ಸೇರುತ್ತವೆ. ಅವುಗಳು ರಚನೆಯಾಗುವುದು ತುಂಬಾ ನಿಧಾನ. ಒಮ್ಮೆ ಅವುಗಳು ಖಾಲಿಯಾದ ನಂತರ ಅವುಗಳ ಮರುಪೂರಣ ಅಸಾಧ್ಯ.ಲೋಹದಂಥ ಖನಿಜಗಳಿಗೆ ಪರಿವರ್ತನಾ ಬಳಕೆಯ ಸಾಧ್ಯತೆಯಿಂದಾಗಿ ಅವುಗಳನ್ನು ಮತ್ತೆ ಮತ್ತೆ ಉಪಯೋಗಿಸಲು ಸಾಧ್ಯವಿದೆ. ಆದರೆ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳ ಮರುಬಳಕೆ ಅಸಾಧ್ಯ.

ಚಟುವಟಿಕೆ ಸಂಖ್ಯೆ

ಟೆಂಪ್ಲೇಟು:ವಿಷಯ

 1. ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
 2. ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
 3. ಬಹುಮಾಧ್ಯಮ ಸಂಪನ್ಮೂಲಗಳು
 4. ಅಂತರ್ಜಾಲದ ಸಹವರ್ತನೆಗಳು
 5. ಮೌಲ್ಯ ನಿರ್ಣಯ
 6. ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ