ಪಾನೀಯ ಬೆಳೆ ಮತ್ತು ತೋಟಗಾರಿಕೆ ಬೆಳೆ ಅಥವಾ ಪುಷ್ಪ ಬೆಳೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೦೬:೦೪, ೨ ಆಗಸ್ಟ್ ೨೦೧೪ ರಂತೆ Harischandra (ಚರ್ಚೆ | ಕಾಣಿಕೆಗಳು) ಇವರಿಂದ (→‎ಪ್ರಶ್ನೆಗಳು)
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search


ಚಟುವಟಿಕೆ - ಗುಂಪು ಚಟುವಟಿಕೆ

ಅಂದಾಜು ಸಮಯ

40 ನಿಮಿಷ

ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು

  1. ಪೆನ್
  2. ಪೇಪರ್
  3. ಲೈಬ್ರೇರಿ ಪುಸ್ತಕ
  4. ಇಂಟರ್ನೆಟ್ ಬಳಕೆ

ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ

  1. ಪುಷ್ಪ ಕೃಷಿ, ಹೂವಿನ ಕೃಷಿಯಲ್ಲಿ ಹೆಚ್ಚು ವಿಶ್ವಾಸ ಮೂಡಿಸುವುದು.
  2. ವಿದ್ಯಾರ್ಥಿಗಳಲ್ಲಿ ಮೊದಲಿನ ದಿನವೇ ಕೆಲವು ಲಭ್ಯವಿರುವ ವಿವಿಧ ಜಾತಿಯ ಹೂಗಳನ್ನು ತರಲು ಹೇಳುವುದು.
  3. ಈ ಅಧ್ಯಾಯ ಮಾಡುವಾಗ ಪುಷ್ಪ ಕೃಷಿಯು ಮಹಿಳೆಯರಿಗೆ ಸ್ವ ಉದ್ಯೋಗ ಮಾಡಲು ಸಹಾಯ ಎಂದು ತಿಳಿಸಬಹುದು.
  4. ಅತೀ ಕಡಿಮೆ ಕೃಷಿ ಭೂಮಿ ಹೊಂದಿರುವವರು ಕೂಡ ಪುಷ್ಪ ಕೃಷಿಯ ಮೂಲಕ ಹಣ ಸಂಪಾದನೆ ಮಾಡಬಹುದು ಎಂದು ತಿಳಿಸಬೇಕು.
  5. ಕಡಿಮೆ ಭೂಮಿ ಹೊದಿರುವವರು ತರಕಾರಿ ಕೃಷಿಯ ಮೂಲಕ ಸಂಪಾದನೆ ಮಾಡಬಹುದು ಎಂದು ತಿಳಿಸಬೇಕು.

ಬಹುಮಾಧ್ಯಮ ಸಂಪನ್ಮೂಲಗಳ

  1. ಪೇಪರ್ ಲೇಖನಗಳು
  2. ಇಂಟರ್ನೆಟ್

ಪ್ರಸಕ್ತ ಸ್ಥಳೀಯ ಸಂಪರ್ಕಗಳು

ರೈತರನ್ನು ಕರೆದು ತರಗತಿಯಲ್ಲಿ ಮಾಹಿತಿಯನ್ನು ಕೊಡುವುದು.

ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು

  1. ಚಹಾ ಕೃಷಿ ಮಾಡುವ ರೀತಿ,ಚೀನಾದ ಚಹಾ ಕೃಷಿ,ಸಂಸ್ಕರಣೆ ಮತ್ತು ವರ್ಗೀಕರಣ,ಮೂಲದ ಕುರಿತಾದ ಪುರಾಣಗಳು,ಬೇರೆ ಬೇರೆ ದೇಶದಲ್ಲಿ ಚಹಾ ಕೃಷಿ ಇತ್ಯಾದಿ ಮಾಹಿತಿ ಇದೆ
  2. tea cultivation in india
  3. tea cultivation in india
  4. coffee cultivation in india
  5. mango farming in india
  6. grapes farming in india
  7. floriculture in india
  8. floriculture in india
  9. Image:Munnar_Top_station.jpg

ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)

  1. ಶಿಕ್ಷಕರು ಪ್ರಾರಂಭದಲ್ಲಿ ಕೆಲವು ವಿದ್ಯಾರ್ಥಿಗಳ ಗುಂಪುಗಳನ್ನು ಮಾಡಿಕೊಂಡು ಅವರಿಗೆ ಗುಂಪು ಚಟುವಟಿಕೆ ಮಾಡಬೇಕಾದ ಪಠ್ಯವನ್ನು ಹಂಚಿಕೆ ಮಾಡುವುದು.
  2. ಶಿಕ್ಷಕರು ಗುಂಪು ಚಟುವಟಿಕೆಗೆ ಸಂಬಂದಿಸಿದ ಪಠ್ಯಕ್ಕೆ ವಿಡಿಯೋಗಳನ್ನು , ಚಿತ್ರಗಳನ್ನು ತೋರಿಸಿ ಸಂಕ್ಷಿಪ್ತ ಚರ್ಚೆಯನ್ನು ಮಾಡಿ , ವಿದ್ಯಾರ್ಥಿಗಳು ಸ್ವ ಕಲಿಕೆಗೆ ಅನುಕೂಲ ಮಾಡಿಕೊಡುವುದು.
  3. ನಂತರ ವಿದ್ಯಾರ್ಥಿಗಳು ಗುಂಪುಗಳಲ್ಲಿ ಕುಳಿತು ತಮಗೆ ಕೊಟ್ಟಿರುವ ಪಠ್ಯಕ್ಕೆ ಸಂಬಂದಿಸಿದಂತೆ ಲೈಬ್ರೇರಿ ಸಹಾಯದಿಂದ ಮಾಹಿತಿಯನ್ನು ಸಂಗ್ರಹಿಸುವುದು.
  4. ಶಿಕ್ಷಕರು ಪಠ್ಯಕ್ಕೆ ಸಂಬಂದಿಸಿದ ಲೈಬ್ರೇರಿಗಳನ್ನು ಮೊದಲೇ ವಿದ್ಯಾರ್ಥಿಗಳಿಗೆ ನೀಡುವುದು.
  5. ವಿದ್ಯಾರ್ಥಿಗಳು ಗುಂಪು ಚರ್ಚೆ ಮಾಡಿ ಮಾಹಿತಿ ತಿಳಿಯುವರು.
  6. ಅವಧಿಯ ಕೊನೆಗೆ ತಾವು ಸಂಗ್ರಹಿಸಿದ ಮಾಹಿತಿಯನ್ನು ತರಗತಿಯಲ್ಲಿ ಮಂಡಿಸುವರು.
  7. ಈ ಸಂದರ್ಬದಲ್ಲಿ ಶಿಕ್ಷಕರು ಪಠ್ಯಕ್ಕೆ ಸಂಬಂದಿಸಿದಂತೆ ವಿಷಯ ಚರ್ಚೆ ಮಾಡುವರು.
  8. ಶಿಕ್ಷಕರು ಅವದಿಯ ಪ್ರಾರಂಭದಲ್ಲಿಯೇ ವಿದ್ಯಾರ್ಥಿಗಳಿಗೆ ಹಂಚಿಕೆ ಮಾಡಿದ ಪಠ್ಯಕ್ಕೆ ,ಅವರು ಯಾವ ಮಾಹಿತಿಯನ್ನು ಸಂಗ್ರಹಿಸ ಬೇಕು ಎಂದು ಪ್ರಶ್ನಾವಳಿಯನ್ನು ಕೊಡುವುದು.

ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)

  1. ಹತ್ತೀ ಬೆಳೆಯುವ ಪ್ರದೇಶದಲ್ಲಿ ಪ್ರಪಂಚದಲ್ಲಿಯೇ ಮೊದಲ ಸ್ಥಾನದಲ್ಲಿದ್ದರೂ, ನಾವು ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಯಾಕಾಗಿರಬಹುದು?
  2. ತೋಟಗಾರಿಕಾ ಬೆಳೆಯು ಬೆಳೆಯುದರಿಂದ ಮಹಿಳೆಯರನ್ನು ಸ್ವಾವಲಂಬಿ ಯಾಗಿಸಬಹುದೇ?
  3. ಭಾರತದಲ್ಲಿ ರೈತರ ಸಾಲಮನ್ನ ಮುಂತಾದ ಕಾರ್ಯಕ್ರಮಗಳು ರೈತರಲ್ಲಿ ಉದಾಸಿನ ಮನೋಭಾವ ಬೆಳೆಯಲು ಕಾರಣವಾಗುತ್ತಿದೆಯೇ?

ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)

  1. ಪ್ರಮುಖ ಪಾನಿಯ ಬೆಳೆ ಯಾವುದು?
  2. ಚಹ ಬೆಳೆಯಲು ಬೇಕಾದ ವಾತಾವರಣ ಯಾವುದು?
  3. ಹೂವು ಕೃಷಿಯ ಉಪಯೋಗವೇನು?
  4. ನಿಮ್ಮ ಊರಿನ ತೋಟಗಾಟಿಕಾ ಬೆಳೆಗಳು ಯಾವುವು?

ಪ್ರಶ್ನೆಗಳು

ಪಠ್ಯಪುಸ್ತಕದ ಪ್ರಶ್ನೆಗಳನ್ನು ಕೇಳುವುದು.

ಚಟುಟವಟಿಕೆಯ ಮೂಲಪದಗಳು

ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ಭಾರತದ_ಭೂ_ಬಳಕೆ_ಹಾಗೂವ್ಯವಸಾಯ